ರಾಮನ ಅಸ್ತಿತ್ವ ಪ್ರಶ್ನಿಸಿದ್ದ ಕಾಂಗ್ರೆಸ್‌ನಿಂದ ರಾಮಜಪ! ರಾಮನಗರದಲ್ಲಿ ರಾಮೋತ್ಸವಕ್ಕೆ ಚಿಂತನೆ! 

By Ravi Janekal  |  First Published Oct 13, 2023, 12:01 PM IST

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ರಾಮಜಪ ಮಾಡಲು ಶುರುಮಾಡಿರುವುದು ಹಿಂದೂ ಕಾರ್ಯಕರ್ತರಲ್ಲಿ ಅಚ್ಚರಿ ಮೂಡಿಸಿದೆ. ಹೌದು ಏಕೆಂದರೆ ರಾಮಜನ್ಮಭೂಮಿ ವಿಚಾರದಲ್ಲಿ ನಖಾಶಿಖಾಂತ ವಿರೋಧಿಸುತ್ತಲೇ ಬಂದಿದೆ. ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿತ್ತು. ಶ್ರೀರಾಮಜನ್ಮಭೂಮಿ ಶಿಲಾನ್ಯಾಸ ನಡೆದ ದಿನದಂದು ಕಪ್ಪು ಪಟ್ಟಿ ಧರಿಸಿ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಇದೀಗ ಇದೀಗ ರಾಮಜಪ ಮಾಡುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.


ರಾಮನಗರ (ಅ.13): ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ರಾಮಜಪ ಮಾಡಲು ಶುರುಮಾಡಿರುವುದು ಹಿಂದೂ ಕಾರ್ಯಕರ್ತರಲ್ಲಿ ಅಚ್ಚರಿ ಮೂಡಿಸಿದೆ.

ಹೌದು ಏಕೆಂದರೆ ರಾಮಜನ್ಮಭೂಮಿ ವಿಚಾರದಲ್ಲಿ ನಖಾಶಿಖಾಂತ ವಿರೋಧಿಸುತ್ತಲೇ ಬಂದಿದೆ. ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿತ್ತು. ಶ್ರೀರಾಮಜನ್ಮಭೂಮಿ ಶಿಲಾನ್ಯಾಸ ನಡೆದ ದಿನದಂದು ಕಪ್ಪು ಪಟ್ಟಿ ಧರಿಸಿ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಇದೀಗ ಇದೀಗ ರಾಮಜಪ ಮಾಡುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

Tap to resize

Latest Videos

  ಕನಕಪುರದ 'ಕನಕ ಉತ್ಸವ' ಮಾದರಿಯಲ್ಲಿ ರಾಮನಗದಲ್ಲಿ 'ರಾಮ ಉತ್ಸವ' ನಡೆಸಲು ಚಿಂತನೆ ನಡೆಸಿರುವ ಕಾಂಗ್ರೆಸ್. ಮುಂಬರುವ ಜನೆವರಿ ತಿಂಗಳಲ್ಲಿ ನಡೆಸಲು ಭರ್ಜರಿ ಸಿದ್ಧತೆ ನಡೆಸಿರುವ ರಾಮನಗರ ಜಿಲ್ಲಾ ಕಾಂಗ್ರೆಸ್.

ಜೈ ಮಹಿಷಾ ಘೊಷಣೆ ಕೂಗುತ್ತಾ ಮೈಸೂರಿನತ್ತ ಹೊರಟ ದಲಿತ ಸಂಘಟನೆ ಕಾರ್ಯಕರ್ತರು!

ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ನೇತೃತ್ವದಲ್ಲಿ ರಾಮೋತ್ಸವ ಕಾರ್ಯಕ್ರಮ. ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆಯೋಜನೆ ಮಾಡಲು ಪ್ಲಾನ್. ಈ ಬಗ್ಗೆ ನಿನ್ನೆ ಯುವ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿರೋ ಕಾಂಗ್ರೆಸ್ ಶಾಸಕ ಇಕ್ಬಾಲ್. ಶೀಘ್ರದಲ್ಲೇ ರಾಮೋತ್ಸವ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೇರಲು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹಿಂದೂ ಮತಗಳ ಓಲೈಕೆಗೆ ಮುಂದಾಗಿದೆಯಾ ಕಾಂಗ್ರೆಸ್? ಕಳೆದ ವಿಧಾನಸಭಾ ಚುನಾವಣೆ  ಸಮಯದಲ್ಲಿ ರಾಮಮಂದಿರ ಅಭಿವೃದ್ಧಿ ವಿಚಾರ ಪ್ರಸ್ತಾಪಿಸಿದ್ದ ಬಿಜೆಪಿ.  ಇದೀಗ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ನಿಂದಲೂ ರಾಮಜಪ ಶುರುವಾಗಿದೆ.

ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧ; ಜಿಲ್ಲಾಡಳಿತ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸುತ್ತೇವೆ: ಜ್ವಾನಪ್ರಕಾಶ ಸ್ವಾಮೀಜಿ

click me!