ಕರ್ನಾಟಕದ ಲೋಡ್ ಶೆಡ್ಡಿಂಗ್ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಇಂಧನ ಸಚಿವ ಕೆ.ಜೆ. ಜಾರ್ಜ್, ಕತ್ತಲೆ ರಾಜ್ಯಕ್ಕೆ ಬಿಜೆಪಿ ಆಡಳಿತವೇ ಕಾರಣವೆಂದು ಹೇಳಿದ್ದಾರೆ.
ನವದೆಹಲಿ (ಅ.13): ಕರ್ನಾಟಕದಲ್ಲಿ ಮಳೆ ಅಭಾವ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ವಿದ್ಯುತ್ ಕೊರತೆ ಹೆಚ್ಚಾಗಿದೆ. ನಮಗೆ ತೊಂದರೆ ಆಗಿದ್ದು, ಕಳೆದ 4 ವರ್ಷಗಳ ಬಿಜೆಪಿ ಆಡಳಿತದಲ್ಲಿ ವಿದ್ಯುತ್ ಅನ್ನ ಹೆಚ್ಚಿಸುವ ಯಾವ ಕೆಲಸವನ್ನು ಸಹ ಮಾಡಿಲ್ಲ. ಕಳೆದ 4 ವರ್ಷ ಬಿಜೆಪಿಯವರು ನಿದ್ದೆ ಮಾಡಿರುವ ಸಲುವಾಗಿ, ಇಂದು ವಿದ್ಯುತ್ ಕೊರತೆ ಉಂಟಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಕ್ ಹೇಳಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಮಳೆ ಅಭಾವ ಇರುವುದು ಎಲ್ಲರಿಗೂ ಗೊತ್ತಿದೆ. ಈ ಸೆಪ್ಟೆಂಬರ್ ತಿಂಗಳಲ್ಲಿ ವಿದ್ಯುತ್ ಕೊರತೆ ಜಾಸ್ತಿ ಇದೆ. 16,000 ಮೆಗಾ ವ್ಯಾಟ್ ಬೇಡಿಕೆ ಇದೆ. ಆದರೆ, 1,500 ಮೆಗಾ ವ್ಯಾಟ್ ಕೊರತೆ ಇದೆ. ಕೊರತೆಯನ್ನ ನೀಗಿಸಲು ಇಂಧನ ಖರೀದಿ ಮಾಡ್ತಾ ಇದ್ದಿವಿ. ಕೊರತೆ ನೀಗಿಸಲು ಬೇರೆ ಬೇರೆ ರಾಜ್ಯಗಳ ಬಗ್ಗೆ ಮಾತನಾಡ್ತಾ ಇದ್ದೇವೆ. ನಮಗೆ ತೊಂದರೆ ಆಗಿದ್ದು ಕಳೆದ 4 ವರ್ಷಗಳ ಬಿಜೆಪಿ ಆಡಳಿತದಲ್ಲಿ ವಿದ್ಯುತ್ ಅನ್ನ ಹೆಚ್ಚಿಸುವ ಯಾವ ಕೆಲಸವನ್ನು ಸಹ ಮಾಡಿಲ್ಲ ಎಂದು ತಿಳಿಸಿದರು.
ಬರಪೀಡಿತ ತಾಲೂಕುಗಳ ಸಂಖ್ಯೆ 195ರಿಂದ 216ಕ್ಕೆ ಏರಿಕೆ: 20 ತಾಲೂಕುಗಳಲ್ಲಿ ಮಾತ್ರ ಮಳೆ
ನಮ್ಮ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಇಂಧನದ ಉತ್ಪಾದನೆಯನ್ನ ಹೆಚ್ಚು ಮಾಡಿದ್ದೆವು. ಕಳೆದ 4 ವರ್ಷ ಬಿಜೆಪಿಯವರು ನಿದ್ದೆ ಮಾಡಿರುವ ಸಲುವಾಗಿ, ಇವತ್ತು ವಿದ್ಯುತ್ ಕೊರತೆಗೆ ಕಾರಣ ಆಗಿದೆ. ಈ ಕೊರತೆ ನೀಗಿಸಲು ಹಲವು ಕ್ರಮ ಕೈಗೊಳ್ಳಲಾಗಿದೆ. ಬಿಜೆಪಿಯವರು 4 ವರ್ಷ ನಿದ್ದೆ ಮಾಡಿದ್ದಾರೆ, ಹೊರತು ಜಾರ್ಜ್ ಕಾಣೆಯಾಗಿಲ್ಲ. ನಾನು ದೆಹಲಿಗೆ ಬಂದು ಕೇಂದ್ರದ ಇಂಧನ ಸಚಿವರನ್ನ ಭೇಟಿ ಮಾಡಿದ್ದೇನೆ. ರಾಜ್ಯಕ್ಕೆ ಹೆಚ್ಚಿನ ವಿದ್ಯುತ್ ಪೂರೈಸುವಂತೆ ಮನವಿ ಮಾಡಿದ್ದೇನೆ. ಅಲ್ಲದೆ, ಇತರೆ ಕೇಂದ್ರ ಸರ್ಕಾರದ ಅಧಿಕಾರಗಳನ್ನ ಇಂಧನ ವಿಚಾರವಾಗಿಯೇ ಭೇಟಿ ಮಾಡಿದ್ದೇನೆ ಎಂದು ತಿಳಿಸಿದರು.
ನಾನು ದೆಹಲಿಗೆ ಬಂದಿದ್ದರೂ ಸಹ ಕರ್ನಾಟಕದ ವಿಚಾರವನ್ನೇ ಮಾತನಾಡುತ್ತಿದ್ದೇನೆ. ರಾಜ್ಯದ ವಿದ್ಯುತ್ ಅಭಾವಕ್ಕೆ ಬಿಜೆಪಿಯವರೇ ಇದಕ್ಕೆಲ್ಲ ಕಾರಣವಾಗಿದ್ದಾರೆ. ಅವರಿಂದಾಗಿಯೇ ಈ ಕೊರತೆ ಬಂದಿದೆ. ಒಂದು ದಿನದಲ್ಲಿ ಈ ಕೊರತೆ ನೀಗಿಸಲು ಸಾಧ್ಯವಿಲ್ಲ. ಹಾಗಾಗಿ ಕೊರತೆ ಸರಿದೂಗಿಸಲು ಎಲ್ಲಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ಸಬ್ ಸ್ಟೇಷನ್ ಗಳಲ್ಲಿ ಸೋಲಾರ್ ಎನರ್ಜಿ ಅಳವಡಿಕೆ ಕ್ರಮ ವಹಿಸಲಾಗಿದೆ. ಇದಕ್ಕೆ ಕೆಲ ಸರ್ಕಾರಿ ಭೂಮಿಗಳನ್ನ ಸಹ ಕೇಳಿದ್ದೇವೆ. ಅಲ್ಲಿ ಸೋಲಾರ್ ಪ್ಲಾಂಟ್ ಮಾಡುವುದಕ್ಕೆ, ಖಾಸಗಿಯವರಿಂದ ವಿದ್ಯುತ್ ಖರೀದಿ ಮಾಡುವ ಸಲುವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಕೇಂದ್ರದ ವರದಿ ಬಳಿಕ ಬೆಳೆ ಹಾನಿ ಪರಿಹಾರ: ಸಚಿವ ಚೆಲುವರಾಯಸ್ವಾಮಿ
ಸಕ್ಕರೆ ಕಾರ್ಖಾನೆ ಗಳ ಮಾಲೀಕರಿಗೂ ಸಹ ವಿದ್ಯುತ್ ಪೂರೈಕೆ ಮಾಡುವಂತೆ ಮನವಿ ಮಾಡುತ್ತಿದ್ದೇವೆ. ಕರೆಂಟ್ ಕಟ್ ಎಂಬುದು ಕಾಂಗ್ರೆಸ್ ಗ್ಯಾರಂಟಿ ನಾ? ಎಂದು ಬಿಜೆಪಿ ಟೀಕೆ ಮಾಡುತ್ತುದೆ. ಆದರೆ, ಅವರು 4 ವರ್ಷ ಸುಮ್ಮನೆ ಕುಳಿತು, ನಿದ್ದೆ ಮಾಡಿದ್ದು ಬಿಜೆಪಿ ಗ್ಯಾರಂಟಿ ನಾ? ನಾನೇನು ಹೋಗಿ ಬಿಜೆಪಿ ಆಫೀಸ್ ನಲ್ಲಿ ಕುಳಿತುಕೊಳ್ಳಲಾ? ಅಥವಾ ಬೊಮ್ಮಾಯಿ ಮನೆಗೆ ಹೋಗಿ ಕುಳಿತುಕೊಳ್ಳಬೇಕಾ? ನಾನಂತು ಕಾಣೆಯಾಗಿಲ್ಲ, ನಾನೇನು ಮಾಡಿದೀನಿ ಡೆಲ್ಲಿಲಿ ಅನ್ನೋದನ್ನ ಫೋಟೋ ಸಮೇತ ಹಾಕಿದೀನಿ. ಬಿಜೆಪಿಯನ್ನ ಜನ ಸಂಪೂರ್ಣ ತಿರಸ್ಕಾರ ಮಾಡಿದ್ದಾರೆ. ಅದ್ಕೆ ಅವರು ಹತಾಶೆಯಿಂದ ಮಾತಾಡ್ತಾರೆ. ಜನ ಅಥವಾ ರೈತರು ಪ್ರತಿಭಟನೆ ಮಾಡೋದಾದ್ರೆ ಬಿಜೆಪಿ ಆಫೀಸ್ ಮುಂದೆ ಹೋಗಿ ಪ್ರತಿಭಟನೆ ಮಾಡ್ಲಿ. ಇವತ್ತಿನ ಸ್ಥಿತಿಗೆ ಅವರೇ ಹೊಣೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಕಿಡಿಕಾರಿದರು.