
ಬೆಂಗಳೂರು(ಏ.27): ಗೃಹ ಇಲಾಖೆ ಆಡಳಿತದಲ್ಲಿ ಬದಲಾವಣೆಗೆ ಮುಂದಾಗಿರುವ ರಾಜ್ಯ ಸರ್ಕಾರವು ಇನ್ಸ್‌ಪೆಕ್ಟರ್‌ಗಳ ಸಾಮೂಹಿಕ ವರ್ಗಾವಣೆ ಬೆನ್ನಲ್ಲೇ ಇದೀಗ ಬೆಂಗಳೂರು ಪೊಲೀಸ್ ಆಯುಕ್ತ ಸೇರಿದಂತೆ ರಾಜ್ಯದ ವಿವಿಧ ಐಪಿಎಸ್ ಅಧಿಕಾರಿಗಳ ವರ್ಗಾವಣೆಗೆ ನಿರ್ಧರಿಸಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ತಾಲೀಮು ಆರಂಭಿಸಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿಗೆ ಸರ್ಕಾರ ಮುಂದಾಗಿದೆ. ಪ್ರಮುಖವಾಗಿ ಬೆಂಗಳೂರು ನಗರ, ಮೈಸೂರು, ಮಂಗಳೂರು ನಗರ ಪೊಲೀಸ್ ಆಯುಕ್ತರ ಅವಧಿ ಒಂದು ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಹೊಸ ಆಯುಕ್ತರ ನೇಮಕಕ್ಕೆ ಸರ್ಕಾರ ತೀರ್ಮಾನಿಸಿದೆ. ಈ ನಡುವೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹುದ್ದೆಗೇರಲು ಹಿರಿಯ ಐಪಿಎಸ್ ಅಧಿಕಾರಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈಗಾಗಲೇ ಕೆಲ ಐಪಿಎಸ್ ಅಧಿಕಾರಿಗಳು ಆಯಕಟ್ಟಿನ ಹುದ್ದೆ ಪಡೆಯಲು ತಮ್ಮ ಪರಿಚಿತ ರಾಜಕಾರಣಿಗಳ ಮುಖಾಂತರ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತಿದ್ದಾರೆ. ಕೆಲ ಅಧಿಕಾರಿಗಳು ಸರ್ಕಾರದ ಪ್ರಭಾವಿ ಮಂತ್ರಿಗಳ ಹಿಂದೆ ಬಿದ್ದಿದ್ದಾರೆ ಎನ್ನಲಾಗಿದೆ.
ಮೂರನೇ ವಯಸ್ಸಿನಲ್ಲೇ ಮದುವೆ, ಹದಿನೆಂಟರಲ್ಲಿ ಗರ್ಭಕೋಶದ ಕ್ಯಾನ್ಸರ್, ಆ ದಿಟ್ಟ ಮಹಿಳೆಯೀಗ ಪೊಲೀಸ್
ಆರು ತಿಂಗಳಿಂದ ಐಜಿಪಿ ಇಲ್ಲ:
ಪೂರ್ವ ವಲಯದಲ್ಲಿ ಕಳೆದ ಆರು ತಿಂಗಳಿಂದ ಐಜಿಪಿ ಹುದ್ದೆ ಖಾಲಿಯಿದೆ. ಪೂರ್ವ ವಲಯದ ವ್ಯಾಪ್ತಿಗೆ ಬರುವ ಶಿವಮೊಗ್ಗದಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತ ಹರ್ಷ ಕೊಲೆ ಘಟನೆ ಬಳಿಕವೂ ಐಜಿ ನೇಮಕವಾಗಿಲ್ಲ. ಇದೀಗ ಹೊಸ ಐಜಿಪಿಯನ್ನು ನೇಮಿಸಲು ತೀರ್ಮಾನಿಸಲಾಗಿದೆ. ಅಂತೆಯೇ ಮಂಗಳೂರು ಮತ್ತು ಮೈಸೂರು ನಗರ ಹಾಲಿ ಪೊಲೀಸ್ ಆಯುಕ್ತರು ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಹೊಸ ಆಯುಕ್ತರ ನೇಮಕಕ್ಕೆ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಇನ್ನು ಬೆಂಗಳೂರು ನಗರ ಒಳಗೊಂಡಂತೆ ಡಿಸಿಪಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ)ಗಳ ವರ್ಗಾವಣೆಗೂ ಸರ್ಕಾರ ತಯಾರಿ ನಡೆಸಿದೆ ಎಂದು ತಿಳಿದು ಬಂದಿದೆ.
ಸಾಮೂಹಿಕವಾಗಿ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ
ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ನಡೆದಿದ್ದು, ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 179 ಮಂದಿ ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ಸಾಮೂಹಿಕ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಶನಿವಾರ ಆದೇಶಿಸಿದೆ.
ಬೆಂಗಳೂರು ನಗರಕ್ಕೆ ವರ್ಗಾವಣೆಯಾದ ಇನ್‌ಸ್ಪೆಕ್ಟರ್‌ಗಳಿವರು:
ಜಿ.ಪಿ.ರಮೇಶ್-ಆರ್.ಟಿ.ನಗರ ಸಂಚಾರ ಪೊಲೀಸ್ ಠಾಣೆ, ಶ್ರೀಕಾಂತ್ ಎಫ್.ತೋಟಗಿ- ಕಬ್ಬನ್‌ಪಾರ್ಕ್ ಠಾಣೆ, ಚೈತನ್ಯ ಸಿ.ಜೆ- ಅಶೋಕ ನಗರ, ಸಿ.ಬಿ.ಶಿವಸ್ವಾಮಿ- ಹೈಗ್ರೌಂಡ್‌್ಸ, ಎಂ.ಶಿವಕುಮಾರ್-ಸಿಟಿ ಮಾರ್ಕೆಟ್, ಎಂ.ಆರ್.ಸತೀಶ್-ಎಸ್.ಜೆ.ಪಾರ್ಕ್, ಎಚ್.ಹರಿಯಪ್ಪ- ಕೆ.ಆರ್.ಪುರಂ ಸಂಚಾರ, ಜೆ.ಗೌತಮ್-ಸೋಲದೇವನಹಳ್ಳಿ, ಟಿ.ಬಿ.ಚಿದಾನಂದಮೂರ್ತಿ- ಬಸವನಗುಡಿ ಸಂಚಾರ, ಎಂ.ಎಲ್.ಸುಬ್ರಹ್ಮಣ್ಯಸ್ವಾಮಿ- ಬಸವನಗುಡಿ, ಸಂದೀಪ್ ಪಿ.ಕೌರಿ-ಬಾಗಲಗುಂಟೆ, ಪಿ.ಬಿ.ಕಿರಣ್- ಪುಲಿಕೇಶಿ ನಗರ, ಎಚ್.ಆರ್.ಬಾಲಕೃಷ್ಣರಾಜು- ಹಲಸೂರುಗೇಟ್ ಸಂಚಾರ, ಪಿ.ಶಿವಕುಮಾರ್-ಕೋಣನಕುಂಟೆ, ಜೆ.ಶೋಭಾ- ವಿಲ್ಸನ್ ಗಾರ್ಡನ್ ಸಂಚಾರ, ಎಚ್.ರವಿ- ಶಂಕರಪುರಂ, ಸಿ.ವಿ.ದೀಪಕ್- ಚಿಕ್ಕಪೇಟೆ ಸಂಚಾರ, ಎಂ.ಎಸ್.ಶ್ರೀನಿವಾಸ- ವೈಯಾಲಿಕಾವಲ್, ಜಿ.ಕೆ.ಮಧುಸೂದನ್- ಸದಾಶಿವನಗರ ಸಂಚಾರ.
PSI Scam ಎಸ್‌ಐ ಜೊತೆ ಎಫ್‌ಡಿಎ ಪರೀಕ್ಷೆಯಲ್ಲೂ ಅಕ್ರಮ, ಕಾಂಗ್ರೆಸ್ ಮುಖಂಡನ ಸೋದರ ಅರೆಸ್ಟ್!
ರಾವ್ ಗಣೇಶ್ ಜನಾರ್ಧನ್- ಅಶೋಕ ನಗರ ಸಂಚಾರ, ಎಂ.ಸಿ.ರವಿಕುಮಾರ್-ಶಿವಾಜಿ ನಗರ, ಎಚ್.ಸಂದೀಪ್- ಶಿವಾಜಿ ನಗರ ಸಂಚಾರ, ಎಚ್.ಎಲ್.ನಂದೀಶ್- ಕೆ.ಆರ್.ಪುರ, ಅಜಯ್ ಸಾರಥಿ- ಸಿಸಿಬಿ ಬೆಂಗಳೂರು ನಗರ, ಸಾದಿಕ್ ಪಾಷಾ-ಸಿಸಿಬಿ, ನಾಗಪ್ಪ ನಿಂಗಪ್ಪ ಅಂಬಿಗೇರ್- ಕೋರಮಂಗಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ