ರಸಗೊಬ್ಬರ ತರಬೇತಿ ಪಡೆಯಲು ಸಹಕಾರ ಸಿಬ್ಬಂದಿ ದೌಡು..!

Published : May 19, 2024, 12:35 PM IST
ರಸಗೊಬ್ಬರ ತರಬೇತಿ ಪಡೆಯಲು ಸಹಕಾರ ಸಿಬ್ಬಂದಿ ದೌಡು..!

ಸಾರಾಂಶ

ಕೃಷಿಕರು ರಸಗೊಬ್ಬರ ಮಾರಾಟಗಾರರ ಜೊತೆ ಹೆಚ್ಚು ಸಂಪರ್ಕ ಹೊಂದಿರುತ್ತಾರೆ. ಆದ್ದರಿಂದ ಗೊಬ್ಬರ ವಿತರಕರು ಆಧುನಿಕ ಕೃಷಿಯ ಜ್ಞಾನ, ಮಣ್ಣಿನ ಆರೋಗ್ಯದ ಬಗ್ಗೆಯೂ ತಿಳಿವಳಿಕೆ ಹೊಂದಿರಬೇಕು. ಇದರಿಂದಾಗಿ ತರಬೇತಿ ಪಡೆದ ಮಾರಾಟಗಾರರು ವೃತ್ತಿಪರ ಕಾರ್ಯಕರ್ತರಾಗಿಯೂ ಸೇವೆ ಸಲ್ಲಿಸಲು ಸಹಾಯಕವಾಗಲಿದೆ. ಆದ್ದರಿಂದ ಕೇಂದ್ರ ಸರ್ಕಾರವು ಹೈದರಾಬಾದ್‌ನ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣೆ ಸಂಸ್ಥೆ ನೇತೃತ್ವದಲ್ಲಿ ತರಬೇತಿ ನೀಡುತ್ತಿದೆ.

ಸಿದ್ದು ಚಿಕ್ಕಬಳ್ಳೇಕೆರೆ 

ಬೆಂಗಳೂರು(ಮೇ.19): ರಸಗೊಬ್ಬರ ಮಾರಾಟಗಾರರು ಸಮಗ್ರ ಪೋಷಕಾಂಶಗಳ ನಿರ್ವಹಣೆ ಬಗ್ಗೆ ತರಬೇತಿ ಪಡೆಯುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದೆ ಹಾಗೂ ವರ್ಷಾಂತ್ಯದೊಳಗೆ ಕೋರ್ಸ್ ಪೂರ್ಣಗೊಳಿಸದಿದ್ದರೆ ಲೈಸೆನ್ಸ್‌ ಗೆ ಕುತ್ತು ಬರಲಿದೆ ಎಂದಿದೆ. ಹೀಗಾಗಿ ರಾಜ್ಯದಲ್ಲಿ ಸಹಕಾರ ಸಂಘಗಳ ಸಿಬ್ಬಂದಿ ತರಬೇತಿ ಪಡೆದುಕೊಳ್ಳಲು ಮುಗಿಬೀಳುತ್ತಿದ್ದಾರೆ.

ರಾಜ್ಯದಲ್ಲಿ 2500ಕ್ಕೂ ಅಧಿಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಎಸಿಎಸ್) ಇವೆ. ಸಂಘದ ಸಿಬ್ಬಂದಿಯೊಬ್ಬರು ಬಿಎಸ್ಸಿ ಕೃಷಿ ಅಥವಾ ಬಿಎಸ್ಪಿ ರಸಾಯನ ಶಾಸ್ತ್ರ ಅಭ್ಯಾಸ ಮಾಡದಿದ್ದರೆ 15 ದಿನಗಳ ಸಮಗ್ರ ಪೋಷಕಾಂಶಗಳ ನಿರ್ವಹಣೆಯಲ್ಲಿ ಸರ್ಟಿಫಿಕೇಟ್ ಕೋರ್ಸ್ (ಸಿಸಿಐಎನ್ಎಎಂ) ತರಬೇತಿ ಪಡೆಯುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಒಂದೊಮ್ಮೆ ಈ ತರಬೇತಿ ಪಡೆಯದಿದ್ದರೆ ಭವಿಷ್ಯದಲ್ಲಿ ರಸಗೊಬ್ಬರ ನಿರ್ವಹಣೆ ಬಗ್ಗೆ ಪ್ರಾಥಮಿಕ ಮಾರಾಟಕ್ಕೆ ನೀಡಿರುವ ಸಂಕಷ್ಟ ಉಂಟಾಗಲಿದೆ. 

ರೈತರಿಗೆ ಸಿಹಿಸುದ್ದಿ: ಮಳೆಗೂ ಮೊದಲೇ ಈ ಸಲ ಅಗತ್ಯಕ್ಕಿಂತ ಹೆಚ್ಚು ಬೀಜ ಸ್ಟಾಕ್‌!

ಲೈಸೆನ್ಸ್ ನವೀಕರಣಕ್ಕೆ ಈ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಹೆಬ್ಬಾಳದ ಜಿಕೆವಿಕೆಯಲ್ಲಿ ಸಮಗ್ರ ಪೋಷಕಾಂಶಗಳ ಕೃಷಿ ಪತ್ತಿನ ಸಹಕಾರ ಸಂಘಗಳ ಸಿಬ್ಬಂದಿಗೆ ತರಬೇತಿ ನೀಡುತ್ತಿರುವುದು.

ಮತ್ತು ದಕ್ಷಿಣ ಭಾಗದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯಗಳಿಗೆ ತರಬೇತಿ ನೀಡುವ ಉಸ್ತುವಾರಿ ವಹಿಸಲಾಗಿದ್ದು ಕಾಲಾವಕಾಶದ ಕೊರತೆಯಿಂದಾಗಿ ಆಯಾ ವಿವಿಗಳ ವ್ಯಾಪ್ತಿಯ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ (ಕೆವಿಕೆ) ತರಬೇತಿ 7 2181 ಸಿಬ್ಬಂದಿತಲಾ12,500 ರು. ಪಾವತಿಸಿತರಬೇತಿ ಗಾಗಿ ನೋಂದಣಿ ಮಾಡಿಸಿಕೊಂಡಿದ್ದು, ಒಂದು ತಂಡದಲ್ಲಿ 30 ಅಭ್ಯರ್ಥಿಗಳಂತೆ 600 ಕ್ಕೂ ಅಧಿಕ ಸಿಬ್ಬಂದಿ ತರಬೇತಿ ಪೂರ್ಣಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ತರಬೇತಿ ಏಕೆ?: 

ಕೃಷಿಕರು ರಸಗೊಬ್ಬರ ಮಾರಾಟಗಾರರ ಜೊತೆ ಹೆಚ್ಚು ಸಂಪರ್ಕ ಹೊಂದಿರುತ್ತಾರೆ. ಆದ್ದರಿಂದ ಗೊಬ್ಬರ ವಿತರಕರು ಆಧುನಿಕ ಕೃಷಿಯ ಜ್ಞಾನ, ಮಣ್ಣಿನ ಆರೋಗ್ಯದ ಬಗ್ಗೆಯೂ ತಿಳಿವಳಿಕೆ ಹೊಂದಿರಬೇಕು. ಇದರಿಂದಾಗಿ ತರಬೇತಿ ಪಡೆದ ಮಾರಾಟಗಾರರು ವೃತ್ತಿಪರ ಕಾರ್ಯಕರ್ತರಾಗಿಯೂ ಸೇವೆ ಸಲ್ಲಿಸಲು ಸಹಾಯಕವಾಗಲಿದೆ. ಆದ್ದರಿಂದ ಕೇಂದ್ರ ಸರ್ಕಾರವು ಹೈದರಾಬಾದ್‌ನ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣೆ ಸಂಸ್ಥೆ (ಮ್ಯಾನೇಜ್) ನೇತೃತ್ವದಲ್ಲಿ ತರಬೇತಿ ನೀಡುತ್ತಿದೆ.

ಒಂದು ಬಾಟಲ್ ನ್ಯಾನೊ ಯೂರಿಯಾ, ಒಂದು ಚೀಲ ಯೂರಿಯಾ ರಸಗೊಬ್ಬರಕ್ಕೆ ಸಮಾನ!

ಮತ್ತೊಂದೆಡೆ, ಖಾಸಗಿ ಮಾರಾಟಗಾರರು ಮ್ಯಾನೇಜ್‌ನಿಂದವಾರದಲ್ಲಿ ಒಂದು ದಿನದಂತೆ 48 ವಾರ ದೇಸಿ ತರಬೇತಿ ಪಡೆಯುವುದನ್ನು ಈಗಾಗಲೇ ಕಡ್ಡಾಯ ಮಾಡಲಾಗಿದೆ. ಒಂದೊಮ್ಮೆ ತರಬೇತಿ ಪಡೆಯದಿದ್ದರೆ, ಹೊಸದಾಗಿ ಪರವಾನಗಿ ನೀಡುವುದಿಲ್ಲ, ಪರವಾನಗಿ ನವೀಕರಣಕ್ಕೂ ಕುತ್ತು ಬರಲಿದೆ.

ರಸಗೊಬ್ಬರವನ್ನು ಮಾರಾಟ ಮಾಡುವ ಖಾಸಗಿಯವರು ಹೈದರಾಬಾದ್‌ನ 'ಮ್ಯಾನೇಜ್'ನಿಂದ ದೇಸಿ ತರಬೇತಿ ಪಡೆದಿದ್ದಾರೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಿಬ್ಬಂದಿಗೆ ಸಮಗ್ರ ಪೋಷಕಾಂಶಗಳ ನಿರ್ವಹಣೆಯಲ್ಲಿ ಸರ್ಟಿಫಿಕೇಟ್ ಕೋರ್ಸ್‌ ತರಬೇತಿ ನೀಡುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್ ತಿಳಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌