ಸಭೆಯಿಂದ ಏಳುವ ಮುನ್ನ ಎದ್ದ ಎಸ್ಪಿಗೆ ಸಿದ್ದರಾಮಯ್ಯ ವಾರ್ನಿಂಗ್ ನಾನು ಇನ್ನು ಎದ್ದೆ ಇಲ್ಲ ಆಗಲೇ ಎದ್ದು ಹೊರಟ ಎಸ್ಪಿಗೆ ಸಿಎಂ ತರಾಟೆ. ಮಾರಲ್ ಪೊಲೀಸಿಂಗ್ ಬಗ್ಗೆ ಎಚ್ಚರಿಕೆ ನೀಡಿದ ಸಿಎಂ ಸಿದ್ದರಾಮಯ್ಯ
ವರದಿ : ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಜೂ.5): ಮುಖ್ಯಮಂತ್ರಿ ಆದ ಮೇಲೆ ಮೊದಲ ಬಾರಿಗೆ ದಾವಣಗೆರೆಗೆ ಭೇಟಿ ನಿಡಿದ ಸಿಎಂ ಸಿದ್ದರಾಮಯ್ಯ ದಾವಣಗೆರೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಜೊತೆಗೆ ಪ್ರಗತಿಪರಿಶೀಲನಾ ಸಭೆ ನಡೆಸಿದರು. ಸಿದ್ದರಾಮಯ್ಯ ನವರ ಜೊತೆ ಉನ್ನತ ಶಿಕ್ಷಣ ಸಚಿವರು, ಗಣಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಸಾಥ್ ಕೊಟ್ಟರು. ಈ ವೇಳೆ ದಾವಣಗೆರೆ ಎಸ್‌ಪಿಗೆ ಖಡಕ್ ವಾರ್ನಿಂಗ್ ಕೊಟ್ಟರು. ಸಿದ್ದರಾಮಯ್ಯ ಸಭೆಯಲ್ಲಿ ಮಾತನಾಡಿದ ನಂತರ ಇನ್ನೇನು ಎದ್ದು ಹೊರಡುವುದಕ್ಕೆ ರೆಡಿ ಆದ್ರು. ಸಿ ಎಂ ಎದ್ದು ಹೊರಡಬಹುದೆಂದು ಭಾವಿಸಿ ಎಸ್ಪಿ ಅರುಣ್ ಏಳುವುದಕ್ಕೆ ಮುಂದಾದ್ರು. ನಾನು ಇನ್ನು ಚೇರ್ ನಿಂದ ಎದ್ದೆ ಇಲ್ಲ ಎ.... ಕೂತುಕೋ ಎಂದು ವಾರ್ನ್ ಮಾಡಿದರು. ಜೊತೆಗೆ ಮಾರಲ್ ಪೊಲೀಸಿಂಗ್ (ನೈತಿಕ ಪೋಲೀಸ್‌ಗಿರಿ) ಬಗ್ಗೆ ಎಚ್ಚರಿಕೆ ನೀಡಿದರು. ಕಾನೂನು ಕೈಗೆತ್ತಿಕೊಳ್ಳುವ ಮಾರಲ್ ಪೊಲೀಸಿಂಗ್ ಬಗ್ಗೆ ಎಚ್ಚರವಾಗಿರಿ. ಅದು ಮಾರಲ್ ಪೊಲೀಸಿಂಗ್ ಲ್ಲ ಇಮ್ಮಾರಲ್ ಪೊಲೀಸಿಂಗ್ ಕಾನೂನು ಸುವ್ಯವಸ್ಥೆ ಬಗ್ಗೆ ಅಲರ್ಟ್ ಇರಿ ಅದರ ಬಗ್ಗೆ ಎಚ್ಚರವಾಗಿರಬೇಕು ಎಂದು ದಾವಣಗೆರೆ ಎಸ್ಪಿಗೆ ಎಚ್ಚರಿಕೆ ಸಿದ್ದರಾಮಯ್ಯ ನೀಡಿದರು.
ಎಸ್ ಎಸ್ ಮಲ್ಲಿಕಾರ್ಜುನ ದಾವಣಗೆರೆ ಜಿಲ್ಲಾ ಉಸ್ತುವಾರಿ:
ನಾನು ಮುಖ್ಯಮಂತ್ರಿ ಆದ ಮೇಲೆ ಮೊದಲ ಬಾರಿಗೆ ಮೊದಲ ಜಿಲ್ಲೆ ದಾವಣಗೆರೆಗೆ ಬಂದಿದ್ದೇನೆ. ನಾನು ಖಾಸಗಿ ಕಾರ್ಯಕ್ರಮ ಬಂದಿರುವುದರಿಂದ ಸುದೀರ್ಘವಾಗಿ ಮೀಟಿಂಗ್ ರಿವ್ಯೂವ್ ಮಾಡೋಲ್ಲ. ಎಸ್ ಎಸ್ ಮಲ್ಲಿಕಾರ್ಜುನ ರವರೇ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗುತ್ತಾರೆ. ಅವರು ಕೆಡಿಪಿ ಮೀಟಿಂಗ್ ನಲ್ಲಿ ಸುದೀರ್ಘ ಮೀಟಿಂಗ್ ಮಾಡತಾರೆ. ಅಧಿಕಾರಿಗಳು ಜನಪ್ರತಿನಿಧಿಗಳ ಜೊತೆ ಉತ್ತಮ ಸಂಬಂಧ ಇಟ್ಟುಕೋ ಬೇಕು. ನೀವು ಜನರ ಸೇವೆ ಮಾಡಲು ನೇಮಕವಾದ ಅಧಿಕಾರಿಗಳು ನೀವು ಜನಪ್ರತಿನಿಧಿಗಳಿಗೆ ಸ್ಪಂಧಿಸುವ ಕೆಲಸ ಮಾಡಬೇಕು ಸ್ಪಂಧನೆ ವಿಳಂಭ ಆಗಬಾರದು. ಡಿಲೇ ಆದ್ರೆ ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ ಎಂದರು.
ಜನಸ್ನೇಹಿ ಆಡಳಿತ ಜಿಲ್ಲಾ ಮಟ್ಟದಲ್ಲಿ ಇರಬೇಕು. ಜನರು ಕಚೇರಿಗೆ ಬಂದಾಗ ಗೌರವಯುತವಾಗಿ ಮಾತನಾಡಿ, ಜನರ ಜೊತೆ ಸೌಜನ್ಯಯುತ ನಡವಳಿಕೆ ಇರಬೇಕು ಪ್ರಜಾಪ್ರಭುತ್ವ ದಲ್ಲಿ ಜನರೇ ಮಾಲೀಕರು. ಜನರ ಪ್ರತಿನಿಧಿಗಳು ನಾವು ನೀವು ಜನಸೇವಕರು. ಜನಪ್ರತಿನಿಧಿಗಳ ಏನು ಹೇಳತಾರೆ ಅದಕ್ಕೆ ಗೌರವ ಕೊಡುವ ಕೆಲಸ ಮಾಡಿ ಎಂದರು.
ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ 6 ಕಂಡೀಷನ್ ಹಾಕಿ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ
ಅಸಡ್ಡೆ ಉಡಾಪೆ ಮಾಡುವ ಅಧಿಕಾರಿಗಳಿಗೆ ಜಾಗ ಇಲ್ಲ:
ಜನ ಬದಲಾವಣೆ ಬಯಸಿರೋದರಿಂದ ಜನರ ಆಶೋತ್ತರಗಳಿಗೆ ಸ್ಪಂಧಿಸಿ ಅದು ನಮ್ಮ ಕರ್ತವ್ಯ ಜನರ ಆಶೋತ್ತರಗಳಿಗೆ ಸ್ಪಂದಿಸದಿದ್ದರೆ ನಿರ್ದಾಕ್ಷಿಣ್ಯ ಕ್ರಮ,ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ ಎಂದು ಸಿ ಎಂ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ. ದಾವಣಗೆರೆ ಪ್ರಗತಿಪರ ಜಿಲ್ಲೆ ಈ ಜಿಲ್ಲೆಯ ಪ್ರಗತಿಗೆ ಇನ್ನಷ್ಟು ಆಗಬೇಕು ತಹಶಿಲ್ದಾರ ಕಚೇರಿಯಲ್ಲಿ ಜನರನ್ನು ಅಲೆಸಬೇಡ ಜನರನ್ನು ಕಾಯಿಸದೇ ಲಂಚವಿಲ್ಲದೆ ಕೆಲಸ ಮಾಡಬೇಕು ಡಿಸಿಗಳು ತಹಶಿಲ್ದಾರರ ಕಚೇರಿಗೆ, ಸಿಇಓ ಗಳು ಇ ಓ ಕಚೇರಿಗಳಿಗೆ , ಆಸ್ಪತ್ರೆ ಹಾಸ್ಟಲ್ ಗಳಿಗೆ ಭೇಟಿ ನೀಡಬೇಕು ಕೆಳ ಹಂತಕ್ಕೆ ಭೇಟಿ ನೀಡದಿದ್ದರೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ವ್ಯವಸ್ಥೆ ಜಡ್ಡು ಹಿಡಿದಿದೆ ಅದು ಹೋಗಬೇಕು ಜಿಲ್ಲಾ ಮಟ್ಟದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಿ, ಪತ್ರಿಕೆ ಗಳಲ್ಲಿ ಮಾಧ್ಯಮಗಳ ಬಂದ ವರದಿಗೆ ಸ್ಪಂದಿಸಿ ಜಿಲ್ಲಾ ಮಟ್ಟದಿಂದ ಬಿಟ್ಟು ಪೀಲ್ಡ್ ಗೆ ಹೋಗಿ ಸರ್ಕಾರ ಬೇಕಾದಷ್ಟು ಸವಲತ್ತು ಕೊಟ್ಟಿದೆ ಐಷರಾಮಿ ಜೀವನ ಮಾಡಿ ಅಂತ ಸೌಲಭ್ಯ ಕೊಟ್ಟಿಲ್ಲ ನಿಮ್ಮ ಅಧಿಕಾರ ದುರುಪಯೋಗ ಆಗಬಾರದು ಅಧಿಕಾರಿಗಳು ವಂಚಸಿಬಾರದು ಎಂದು ಸಿ ಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
10ನೇ ತರಗತಿಯ ಎಲ್ಲಾ 6 ಸಬ್ಜೆಕ್ಟ್‌ನಲ್ಲಿ 35 ಪಡೆದ ಮಗ, ಜಸ್ಟ್ ಪಾಸ್‌ಗೆ ಹೆತ್ತವರ ಮುಗಿಲು
ರಾಜ್ಯದಲ್ಲಿ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಅದಕ್ಕೆ ಕೂಡಲೇ ಎನ್ ಡಿ ಆರ್ ಪ್ ನಿಯಮಾನುಸಾರ ಪರಿಹಾರ ಕೊಡಲು ಕ್ರಮ ಕೈಗೊಂಡಿದ್ದೇನೆ ಹವಮಾನ ಇಲಾಖೆ ಪ್ರಕಾರ ಜೂನ್ 9 ರಿಂದ ಮಾನಸೂನ್ ಶುರುವಾಗುತ್ತದೆ ರೈತರ ಕೃಷಿ ಚಟುವಟಿಕೆ ಬೀಜ ಗೊಬ್ಬರ ಕೀಟನಾಶಕ ಸಿಕ್ಕಿಲ್ಲ ಎಂಬ ದೂರು ಬರಬಾರದು ಕೃಷಿ ರೈತ ಸಂಪರ್ಕ ಕಚೇರಿಗಳಿಗೆ ಕೃಷಿ ಅಧಿಕಾರಿಗಳು ಭೇಟಿಕೊಡಬೇಕು ಸಕಾಲಕ್ಕೆ ಬೀಜ ಕೊಡದಿದ್ದರೆ ಕಾಲಕ್ಕೆ ಸರಿಯಾಗಿ ಬಿತ್ತನೆ ಆಗದಿದ್ದರೆ ಇಳುವರಿ ಕಡಿಮೆ ಆಗುತ್ತದೆ. ಬೀಜ ಗೊಬ್ಬರ ಕೀಟನಾಶಕ ದಾಸ್ತಾನಿಡಬೇಕು ರೈತರ ಬೇಡಿಕೆ ಆಧಾರದ ಮೇಲೆ ಕೂಡಲೆ ಒದಗಿಸಿ ಪ್ರವಾಹ ಸಾಧ್ಯತೆ ಇದ್ದರೆ ಅದಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕ ಯುದ್ದಕಾಲದಲ್ಲಿ ಶಸ್ತ್ರ ಅಭ್ಯಾಸ ಬೇಡ ಯಾವುದೇ ಅಧಿಕಾರಿ ಭ್ರಷ್ಟಚಾರದ ಆರೋಪ ಬಂದ್ರೆ ಕಠಿಣ ಕ್ರಮ ನಿರ್ಲಕ್ಷ ಮಾಡಿದ್ರು ಕ್ರಮ ಕೈಗೊಳ್ಳುತ್ತೇವೆ ಅದಕ್ಕೆ ಆಸ್ಪದ ಕೊಡದ ರೀತಿ ಕೆಲಸ ಕೊಡಬೇಕು ಎಂದು ಎಚ್ಚರಿಸಿದ್ದಾರೆ.