ಬಸವಣ್ಣ, ಸಾಂಸ್ಕೃತಿಕ ನಾಯಕನೆಂದು ಬರೆಸುವಂತೆ ಸುತ್ತೋಲೆ: ಸಿಎಂ ಸಿದ್ದರಾಮಯ್ಯ

By Kannadaprabha News  |  First Published Feb 8, 2024, 4:18 AM IST

ಸುತ್ತೂರು ಶ್ರೀಗಳಿಗೆ ಜಾತ್ರೆಯಲ್ಲಿ ಭಾಗವಹಿಸುತ್ತೇನೆಂದು ಮಾತು ಕೊಟ್ಟಿದ್ದೆ ಮಾತಿಗೆ ತಪ್ಪಬಾರದು ಎಂಬ ದೆಹಲಿಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿ, ನೇರವಾಗಿ ಇಲ್ಲಿಗೇ ಬಂದಿದ್ದೇನೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ


ನಂಜನಗೂಡು(ಫೆ.08): ಈ ಹಿಂದೆ ನಮ್ಮ ಸರ್ಕಾರದಲ್ಲಿ ಎಲ್ಲ ಸರ್ಕಾರಿ ಕಚೇರಿಗಳಲ್ಲೂ ಸಹ ಬಸವಣ್ಣನವರ ಭಾವಚಿತ್ರವನ್ನು ಅಳವಡಿಸುವಂತೆ ಆದೇಶ ಹೊರಡಿಸಿದ್ದೆ. ಮತ್ತೆ ನಮ್ಮ ಸರ್ಕಾರದಲ್ಲಿ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸಿಸಿದ್ದು, ಎಲ್ಲಾ ಸರ್ಕಾರಿ ಕಚೇರಿಗಳ ಭಾವಚಿತ್ರಗಳಲ್ಲೂ ಸಹ ವಿಶ್ವಗುರು ಬಸವಣ್ಣ, ಸಾಂಸ್ಕೃತಿಕ ನಾಯಕನೆಂದು ಬರೆಸಿ ಅಳವಡಿಸುವಂತೆ ಸುತ್ತೋಲೆ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ನಡೆಯುತ್ತಿರುವ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ದೇಸೀ ಆಟಗಳು ಮತ್ತು ರಂಗೋಲಿ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

Latest Videos

undefined

ಬಸವಣ್ಣ ವಿಷಯದಲ್ಲಿ ರಾಜಕೀಯ ಎನ್ನುವವರು ಕ್ಷುಲ್ಲಕ ಮನಸಿನವರು: ಸಚಿವ ಎಚ್‌.ಕೆ.ಪಾಟೀಲ್‌

ಸಂವಿಧಾನ ಬದಲಾವಣೆ ಮಾಡುವ ಪ್ರಯತ್ನ:

ಕೆಲವು ಪಟ್ಟಭದ್ರ ಹಿತಾಶಕ್ತಿಗಳು ಸಂವಿಧಾನ ಬದಲಾವಣೆ ಮಾಡುವ ಪ್ರಯತ್ನ ನಿರಂತರ ನಡೆದಿದೆ. ಸಂವಿಧಾನ, ಶಿಕ್ಷಣ ದೊರತ ಕಾರಣದಿಂದಲೇ ನಾನು ಸಿಎಂ ಆಗಲು ಸಾಧ್ಯವಾಗಿದೆ. ಆದ್ದರಿಂದ ಶರಣರ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಬಸವಣ್ಣನವರ ಹೆಸರೇಳಿಕೊಂಡು ಪೂಜೆ ಮಾಡುವುದಕ್ಕೆ ಸೀಮಿತಗೊಳ್ಳಬಾರದು ಬದಲಾಗಿ ಬಸವಣ್ಣನವರ ವಚನಗಳಂತೆ ನಡೆದುಕೊಳ್ಳಬೇಕು. ಆದ್ದರಿಂದಲೇ ನಮ್ಮ ಸರ್ಕಾರದಲ್ಲಿ ಬಸವಣ್ಣನವರನ್ನು ವಿಶ್ವಗುರು, ಸಾಂಸ್ಕೃತಿಕ ನಾಯಕನೆಂದು ಘೋಷಿಸಲಾಗಿದೆ. ಈ ಕೆಲಸವನ್ನು ಹಿಂದೆ ಯಾರೂ ಕೂಡ ಮಾಡಲು ಸಾಧ್ಯವಾಗಿಲ್ಲ. ನಮ್ಮ ಸರ್ಕಾರ ಮಾಡಿ ತೋರಿಸಿದೆ ಎಂದರು.

ಮಾತಿಗೆ ತಪ್ಪಬಾರದೆಂದು ಬಂದಿದ್ದೆನೆ:

ಸುತ್ತೂರು ಶ್ರೀಗಳಿಗೆ ಜಾತ್ರೆಯಲ್ಲಿ ಭಾಗವಹಿಸುತ್ತೇನೆಂದು ಮಾತು ಕೊಟ್ಟಿದ್ದೆ ಮಾತಿಗೆ ತಪ್ಪಬಾರದು ಎಂಬ ದೆಹಲಿಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿ, ನೇರವಾಗಿ ಇಲ್ಲಿಗೇ ಬಂದಿದ್ದೇನೆ ಎಂದರು. ಭಾಷಣದ ಆರಂಭದಲ್ಲಿ ಅಲ್ಲಂ ವೀರಭದ್ರಪ್ಪರವರ ಹೆಸರು ಹೇಳುವಾಗ ನೀನು ತಲೆ ಬೋಳಿಸಿರುವುದರಿಂದ ಹೆಸರು ಬೇಗ ಹೊಳೆಯುತ್ತಿಲ್ಲ ಎಂಬ ಹಾಸ್ಯ ಚಟಾಕಿಯನ್ನು ಹಾರಿಸಿದ ಪ್ರಸಂಗ ಜರುಗಿತು.

ಕ್ಯಾಬಿನೆಟ್ ಮೀಟಿಂಗ್ ಮುಖ್ಯಾಂಶ: ಒಳ ಮೀಸಲಾತಿ, ಚನ್ನಮ್ಮನ ಕಿತ್ತೂರು, ಬಸವಣ್ಣನೇ ಸಾಂಸ್ಕೃತಿಕ ನಾಯಕ!

ಗೃಹ ಸಚಿವ ಡಾ.ಜಿ. ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಮಾತನಾಡಿದರು. ಶ್ರೀ ಶಿವರಾತ್ರೀಶ್ವರ ದೇಶೀಕೇಂದ್ರ ಸ್ವಾಮೀಜಿ, ಶ್ರೀ ಶೈಲ ಅಕ್ಕಮಹದೇವಿ ಚೈತನ್ಯ ಪೀಠದ ತಪೋರತ್ನ ಕರುಣಾದೇವಿ ಮಾತಾ ಸಾನ್ನಿಧ್ಯ ವಹಿಸಿದ್ದರು.

ಸಚಿವರಾದ ಕೆ.ಜೆ. ಜಾರ್ಜ್, ಕೆ. ವೆಂಕಟೇಶ್, ಕೆ.ಸಿ.ಸುಧಾಕರ್, ಮಾಜಿ ಸಚಿವ ಅಲ್ಲಂವೀರಭದ್ರಪ್ಪ, ಮಾಜಿ ಶಾಸಕ ಡಾ, ಯತೀಂದ್ರಸಿದ್ದರಾಮಯ್ಯ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಮುಖಂಡರಾದ ಸುನಿಲ್ ಬೋಸ್, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಚಂದ್ರಮೌಳಿ, ಡಿ.ಎಸ್. ಸದಾಶಿವಮೂರ್ತಿ ಇದ್ದರು.

click me!