ಕರ್ನಾಟಕಕ್ಕೆ ಮತ್ತೆ ವಕ್ಕರಿಸಿದ ನಕ್ಸಲ್ ಪಿಡುಗು; ಉಡುಪಿ- ಚಿಕ್ಕಮಗಳೂರಲ್ಲಿ ಹೈ ಅಲರ್ಟ್!

By Sathish Kumar KHFirst Published Feb 7, 2024, 3:17 PM IST
Highlights

ರಾಜ್ಯದಲ್ಲಿ ಕಳೆದ 10 ವರ್ಷಗಳ ಬಳಿಕ ಮತ್ತೆ ನಕ್ಸಲರ ಹೆಜ್ಜೆ ಗುರುತು ಕಾಣಸಿಕ್ಕಿದೆ. ನಕ್ಸಲ್ ಚಟುವಟಿಕೆ ಹಿನ್ನೆಲೆಯಲ್ಲಿ ಉಡುಪಿ-ಚಿಕ್ಕಮಗಳೂರಲ್ಲಿ ತೀವ್ರ ನಿಗಾವಹಿಲಾಗಿದೆ. 

ಚಿಕ್ಕಮಗಳೂರು (ಫೆ.07): ರಾಜ್ಯದಲ್ಲಿ ಕಳೆದ 10 ವರ್ಷಗಳ ಬಳಿಕ ಮತ್ತೆ ನಕ್ಸಲರ ಹೆಜ್ಜೆ ಗುರುತು ಕಾಣಸಿಕ್ಕಿದೆ. ನಕ್ಸಲ್ ಚಟುವಟಿಕೆ ಹಿನ್ನೆಲೆಯಲ್ಲಿ ಉಡುಪಿ-ಚಿಕ್ಕಮಗಳೂರಲ್ಲಿ ತೀವ್ರ ನಿಗಾವಹಿಲಾಗಿದೆ. ಮಲೆನಾಡು ಭಾಗದಲ್ಲಿ ಮುಂದಿನ 5 ದಿನ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. 

ಚಿಕ್ಕಮಗಳೂರು ಹಾಗೂ ಉಡುಪಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸುವಂತೆ ಎನ್.ಎನ್.ಎಫ್. ಗೆ ಸೂಚನೆ ನೀಡಲಾಗಿದೆ. ಸಾಕೇತ್ ರಾಜನ್ ಸಾವಿಗೆ ರೆಡ್ ಸಲ್ಯೂಟ್ ದಿನ ಆಚರಿಸಲು ನಕ್ಸಲರು ತಯಾರಿ ನಡೆಸಿದ್ದಾರೆ. ಕಳೆದ 19 ವರ್ಷದ ಹಿಂದೆ ಎನ್‌ಕೌಂಟರ್‌ನಲ್ಲಿ ನಕ್ಸಲ್ ನಾಯಕ ಸಾಕೇತ್ ರಾಜನ್ ಸಾವನ್ನಪ್ಪಿದ್ದನು. ಅಂದರೆ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮೆಣಸಿನಹಾಡ್ಯ ಸಮೀಪ 2005 ಫೆಬ್ರವರಿ 5ರಂದು ಬೆಳಗಿನ ಜಾವ ನಡೆದಿದ್ದ ಎನ್ಕೌಂಟರ್‌ನಲ್ಲಿ ಸಾಕೇತ್ ರಾಜನ್ ಸಾವಾಗಿದ್ದರು.

ಊಟ ಕೊಟ್ಟಿಲ್ಲಾಂತ ಅಮ್ಮನನ್ನೇ ಹೊಡೆದು ಕೊಂದ ಮಗ, ಅಪ್ಪನೇ ಹೇಳಿಕೊಟ್ಟಿದ್ದನಂತೆ!

ನಕ್ಸಲ್ ನಾಯಕ ಸಾಕೇತ್ ಸಾವಿನ ಬಳಿಕ ಮತ್ತೊಬ್ಬ ನಕ್ಸಲ್ ನಾಯಕ ವಿಕ್ರಮ್ ಗೌಡ ಸಹಚರರೊಂದಿಗೆ ತಲೆಮರೆಸಿಕೊಂಡಿದ್ದನು. ಈಗ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ವಿಕ್ರಮ್ ಗೌಡ ಓಡಾಟದ ಸುಳಿವು ಸಿಕ್ಕಿದೆ. ಆದ್ದರಿಂದ ಸ್ಥಳೀಯರು ನಕ್ಸಲರ ಓಡಾಟದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಕ್ಸಲರ ಓಡಾಟದ ಹಿನ್ನಲೆ ಎ.ಎನ್.ಎಫ್. ನಿಂದ ಕೊಂಬಿಂಗ್ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ. ಮಲೆನಾಡು-ಕರಾವಳಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲು ನಕ್ಸಲ್ ನಿಗ್ರಹ ದಳಕ್ಕೆ ಸೂಚನೆ ನೀಡಲಾಗಿದೆ. ಕಳೆದೊಂದು ತಿಂಗಳ ಹಿಂದೆ ಕೇರಳದ ಥಂಡರ್ಕೂಲ್ ನಲ್ಲಿ ನಕ್ಸಲರು-ಪೊಲೀಸರ ಮಧ್ಯೆ ಫೈರಿಂಗ್ ನಡೆದಿತ್ತು. ಈಗ ಮಲೆನಾಡಿನತ್ತ ನಕ್ಸಲರ ಓಡಾಟದ ಹಿನ್ನೆಲೆ ಕೂಂಬಿಂಗ್ ಚುರುಕು ಮಾಡಲಾಗಿದೆ. 

click me!