ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ 14 ಹಸ್ತಾಂತರದ ಹಿಂದೆ ಅವ್ಯವಹಾರಗಳು ನಡೆದಿರುವುದಕ್ಕೆ ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ಇ.ಡಿ. ಬಹಿರಂಗಪಡಿಸಿದೆ. ಇದೇ ವೇಳೆ, ಮುಡಾದಿಂದ ಬೇನಾಮಿ ಹಾಗೂ ಇನ್ನಿತರೆ ವ್ಯವಹಾರಗಳ ಮೂಲಕ 1095 ನಿವೇಶನಗಳನ್ನು ಆಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಇದರ ಮೌಲ್ಯ ಬರೋಬ್ಬರಿ 700 ಕೋಟಿ ರು. ಎಂದು ತನಿಖೆಯಲ್ಲಿ ಪತ್ತೆಯಾಗಿದೆ.
ನವದೆಹಲಿ(ಡಿ.04): ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳ ನಡುವೆ ಭಾರೀ ರಾಜಕೀಯ ಸಮರಕ್ಕೆ ಕಾರಣವಾಗಿದ್ದ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ನಿವೇಶನ ಹಗರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ 14 ಹಸ್ತಾಂತರದ ಹಿಂದೆ ಅವ್ಯವಹಾರಗಳು ನಡೆದಿರುವುದಕ್ಕೆ ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಬಹಿರಂಗಪಡಿಸಿದೆ. ಇದೇ ವೇಳೆ, ಮುಡಾದಿಂದ ಬೇನಾಮಿ ಹಾಗೂ ಇನ್ನಿತರೆ ವ್ಯವಹಾರಗಳ ಮೂಲಕ 1095 ನಿವೇಶನಗಳನ್ನು ಆಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಇದರ ಮೌಲ್ಯ ಬರೋಬ್ಬರಿ 700 ಕೋಟಿ ರು. ಎಂದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಹೇಳಿದೆ. ಈ ಸಂಬಂಧ ಇತ್ತೀಚೆಗೆ ಕರ್ನಾಟಕ ಲೋಕಾಯುಕ್ತ ಇಲಾಖೆಗೆ ಇ.ಡಿ. ಪತ್ರ ಬರೆದಿದೆ.
ನಾನು ಸಂವಿಧಾನ ಬಗ್ಗೆ ಮಾತಾಡಿಲ್ಲ, ಸಿಎಂ ತಿಳಿದು ಮಾತನಾಡಬೇಕಿತ್ತು: ಪೇಜಾವರ ಶ್ರೀ
ಇ.ಡಿ. ಹೇಳೋದೇನು?:
'ಪಾರ್ವತಿ ಅವರಿಗೆ ಭೂ ಹಸ್ತಾಂತರದಲ್ಲಿ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ. ಸಾಕ್ತ ತಿರುಚುವಿಕೆಯ ಪುರಾವ ಲಭಿಸಿವೆ. ಕಚೇರಿ ಕಾರ್ಯವಿಧಾನಗಳ ಉಲ್ಲಂಘನೆ ಆಗಿದೆ. ಕೆಲವು ವ್ಯಕ್ತಿಗಳ ಪರ ಲಾಬಿ ನಡೆಸಲಾಗಿದೆ ಹಾಗೂ ಪ್ರಭಾವ ಬಳಸಲಾಗಿದೆ ಮತ್ತು ಪೋರ್ಜರಿ ಸಹಿಗಳ ಸಾಕ್ಷ್ಯಗಳು ನಮ್ಮ ತನಿಖೆ ವೇಳೆ ಪತ್ತೆಯಾಗಿವೆ' ಎಂದು ಇ.ಡಿ. ತಿಳಿಸಿದೆ. ಸಿದ್ದರಾಮಯ್ಯ ಅವರ ಆಪ್ತ ಸಹಾಯಕರಲ್ಲಿ ಒಬ್ಬರಾದ ಎಸ್.ಜಿ. ದಿನೇಶ್ ಕುಮಾರ್ ಅಲಿಯಾಸ್ ಸಿ.ಟಿ, ಕುಮಾರ್ ಅವರು ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ 'ಅನಾವಶ್ಯಕ ಪ್ರಭಾವ' ಬೀರಿದ್ದರು ಎಂಬುದಕ್ಕೆ ಸಾಕ್ಷ್ಯ ಲಭಿಸಿದೆ.
ಪಾರ್ವತಿ ಹಾಗೂ ಇತರರ ಕ್ರಮ:
'ಸೈಟ್ ಹಂಚಿಕೆಯಲ್ಲಿ ಶಾಸನಬದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ 14 ಸೈಟ್ ಪಾರ್ವತಿ ಅವರಿಗೆ ಕಾನೂನುಬಾಹಿರವಾಗಿ ಹಂಚಲಾಗಿದೆ ಎಂದು ಸ್ಪಷ್ಟವಾಗಿ ಗಮನಿಸಬಹುದು' ಎಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಕಳುಹಿಸಲಾದ ಇತ್ತೀಚಿನ ಸಂವಹನದಲ್ಲಿ ಲೋಕಾಯುಕ್ತ ಇಲಾಖೆಗೆ ಇ.ಡಿ. ಮಾಹಿತಿ ನೀಡಿದೆ.
ಈ ನಡುವೆ, 'ಮುಡಾ ಕೇಸು ಬರೀಪಾರ್ವತಿ ಪ್ರಕರಣದೊಂದಿಗೆ ಅಂತ್ಯವಾಗಲಿಲ್ಲ. 700 ಕೋಟಿ ರು.ಗೂ ಅಧಿಕ ಮಾರುಕಟ್ಟೆ ಮೌಲ್ಯ ಹೊಂದಿರುವ ಒಟ್ಟು 1,095 ಸೈಟ್‌ಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ' ಎಂದು ಇ.ಡಿ. ಹೇಳಿದೆ. ಈ ಸಂಬಂಧ ತನಿಖಾ ವರದಿ ತನಗೆ ಲಭಿಸಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
'ಹೆಚ್ಚಿನ ಹಂಚಿಕೆಗಳನ್ನು ಭೂಮಿ ಕಳೆದುಕೊಳ್ಳುವವರ ಸೋಗಿನಲ್ಲಿ ಬೇನಾಮಿ ಅಥವಾ ಡಮ್ಮಿ ಹೆಸರಿನಲ್ಲಿ ಮಾಡಲಾಗಿದೆ. ಆದರೆ, ಈ ಅಕ್ರಮ ಹಂಚಿಕೆಯ ಫಲಾನು ಭವಿಗಳು ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಪ್ರಭಾವಿ ವ್ಯಕ್ತಿಗಳಾಗಿದ್ದಾರೆ' ಎಂದು ಇ.ಡಿ. ಅರೋಪಿಸಿದೆ.
'ಪಾರ್ವತಿ ಅವರಿಗೆ ಈ ಸೈಟುಗಳ ಹಂಚಿಕೆ ಮಾಡಿದಾಗ, ಅವರ ಮಗ ಯತೀಂದ್ರ ಅವರು ವರುಣ ಕ್ಷೇತ್ರದ ಶಾಸಕರಾಗಿದ್ದರು ಮತ್ತು ಆದ್ದರಿಂದ ಪದನಿಮಿತ್ತವಾಗಿ ಮುಡಾ ದುಂಡಳಿಯ ಸದಸ್ಯರಾಗಿದ್ದರು. ಈ ಅವಧಿಯಲ್ಲಿ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದರು' ಎಂದು ಅದು ಮಾಹಿತಿ ನೀಡಿದೆ.
ಇನ್ನು ಭೂಮಿಯ ಡಿ-ನೋಟಿಫಿಕೇಶನ್ ಪ್ರಕ್ರಿಯೆಯು ಯಾವುದೇ ತಾರ್ಕಿಕ ಅಥವಾ ಚರ್ಚೆ ಅಥವಾ ದಾಖಲೆಗಳ ವಿಶ್ಲೇಷಣೆ ಅನ್ನು ಆಧರಿಸಿಲ್ಲ, ಸಿದ್ದರಾಮಯ್ಯ ಅವರ ಪಿಎ ಎಸ್ ಜಿ. ದಿನೇಶ್ ಕುಮಾರ್ ಅಲಿಯಾಸ್ ಸಿ.ಟಿ. ಕುಮಾರ್ ಮುಡಾ ಕಚೇರಿಯಲ್ಲಿ 'ಅನಾವಶ್ಯಕ' ಪ್ರಭಾವ ಬೀರಿದ್ದಾರೆ ಎಂದಿರುವ ಇ.ಡಿ., ಪಾರ್ವತಿ ಅವರಿಗೆ ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ಅವರು ನಕಲಿ ಸಹಿ ಮಾಡಿ ಪ್ರಭಾವ ಬೀರಿದ್ದರು ಎಂಬುದನ್ನು ಪತ್ತೆ ಹಚ್ಚಿದೆ.
'ಪರಿಹಾರವಾಗಿ ನಿವೇಶನಗಳನ್ನು ಹಂಚಿಕೆ ಮಾಡಲು ಕಾನೂನುಬದ್ಧ ನಿಬಂಧನೆಗಳ ಉಲ್ಲಂಘನೆ ಕೇವಲ ಒಂದೇ ಕೇಸಲ್ಲಿ (ಪಾರ್ವತಿ ಪ್ರಕರಣ) ನಡೆದಿಲ್ಲ. ರಿಯಲ್ ಎಸ್ಟೇಟ್ ಉದ್ಯಮಿಗಳು, ಪ್ರಭಾವಿ ವ್ಯಕ್ತಿಗಳು ಮತ್ತು ಮುಡಾ ಅಧಿಕಾರಿಗಳ ನಡುವೆ ಆಳವಾದ ನಂಟಿದೆ. ಇದು ಮುಡಾ ಅಧಿಕಾರಿಗಳು ಈ ಎಂದಿದೆ.
ಮುಡಾದಲ್ಲಿ ನಡೆಸಿದ ಶೋಧ ಕಾರ್ಯಾಚರಣೆ ವೇಳೆ, ಹಂಚಿಕೆ ಪತ್ರಗಳನ್ನು ನೀಡಲು ಮುಡಾ ಬಳಸುವ ಹೆಚ್ಚಿನ ಭದ್ರತೆಯ ಬಾಂಡ್ ಪೇಪರ್‌ಗಳು (5000ರಲ್ಲಿ 1,946 ಪೇಪರ್‌ಗಳು) ಕಾಣೆಯಾಗಿರುವುದು ಕಂಡುಬಂದಿದೆ. ಮುಡಾ ಮಾಜಿ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಅವರ ಆಪ್ತ ಸಹಾಯಕ ಪ್ರಶಾಂತ್ ರಾಜು ಎಂಬ ವ್ಯಕ್ತಿ ಈ ಬಾಂಡ್ ಪೇಪರ್‌ಗಳನ್ನು ಹಿಂಪಡೆದಿದ್ದಾರೆ. ಅಕ್ರಮ ಹಂಚಿಕೆ ಪತ್ರಗಳನ್ನು ಜಿ.ಟಿ. ದಿನೇಶ್ ಕುಮಾರ್ ಮೂಲಕ ನೀಡಲು ಈ ಹೈ -ಸೆಕ್ಯುರಿಟಿ ಬಾಂಡ್ ಪೇಪರ್‌ಗಳನ್ನು ಬಳಸಿರುವ ಸೂಚನೆ ತನಿಖೆಯಿಂದ ಕಂಡುಬಂದಿದೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.
ಮೈಸೂರು ತಾಲೂಕಿನ ಕಸಬಾ ಹೋಬಳಿಯ ಕೆಸರೆ ಗ್ರಾಮದ ಸರ್ವೆ ನಂಬರ್464ರ 3.16 ಎಕರೆ ಜಮೀನನ್ನು ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಲು ಕೈಗೊಂಡಿರುವ ಸಂಪೂರ್ಣ ಪ್ರಕ್ರಿಯೆ ನೆಪಮಾತ್ರವಾಗಿದೆ. ಇದು ಸ್ಥಳದಲ್ಲಿನ ವಾಸ್ತವಿಕತೆಗೆ ದೂರವಾಗಿದೆ ಎಂದು ಲೋಕಾಯುಕ್ತಕ್ಕೆ ಇ.ಡಿ. ಮಾಹಿತಿ ನೀಡಿದೆ.
'ಸ್ಥಳೀಯ ಪ್ರದೇಶದ ಕಂದಾಯ ಆಡಳಿತಾಧಿಕಾರಿಗಳಾದ ಗ್ರಾಮ ಲೆಕ್ಕಿಗರು, ಸರ್ವೇಯರ್, ಕಂದಾಯ ನಿರೀಕ್ಷಕರು, ತಹಶೀಲ್ದಾರ್‌ಮತ್ತು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಸ್ತವಿಕತೆಯ ಪರಿಶೀಲನೆ ನಡೆಸಿದ್ದರು. ಆದರೆ ಸ್ಥಳದಲ್ಲಿ ಮುಡಾದಿಂದ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿರುವುದನ್ನು ನಮೂದಿಸಲು ವಿಫಲರಾಗಿದ್ದಾರೆ. ಯಾವುದೇ ಅನಧಿಕೃತ ನಿರ್ಮಾಣ ಸ್ಥಳದಲ್ಲಿ ನಡೆಯುತ್ತಿಲ್ಲ ಎಂದು ಅವರು ವರದಿ ಮಾಡಿದ್ದಾರೆ. ಆದರೆ ಇದು 'ಉಪಗ್ರಹ ಚಿತ್ರಗಳು' ಮತ್ತು ಮುಡಾದ ದಾಖಲೆಗಳು ತೋರಿಸಿದ ಸ್ಥಳೀಯ ಸಂಗತಿಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಭೂಪರಿವರ್ತನೆ ಪ್ರಕ್ರಿಯೆ ನಡೆದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ', 3, ' ಎಂಬುದನ್ನೂ ಗಮನಿಸಬೇಕು' ಎಂದು ಇ.ಡಿ. ಹೇಳಿದೆ.
ವೈಟ್ನರ್‌ನಿಂದ ಸಾಕ್ಷ್ಯ ನಾಶ:
'2014ರ ಜೂನ್ 14ರಂದು ಪಾರ್ವತಿ ಅವರು ಮುಡಾಕ್ಕೆ ಸಲ್ಲಿಸಿದ ಪರಿಹಾರ ಪತ್ರದಲ್ಲಿ ಅಧಿಕೃತ ದೃಢೀಕರಣ ಇಲ್ಲದೇ ವಾಕ್ಯವನ್ನು ಅಳಿಸಲು ವೈಟ್ನರ್ ಬಳಸಿದ್ದಾರೆ. ಇದರಿಂದ ಸಾಕ್ಷಾಧಾರಗಳ ತಿರುಚುವಿಕೆ ಸುಳಿವು ಲಭಿಸಿದೆ. ಪಾರ್ವತಿ ಅವರ ಕಡತದ ಪ್ರಕ್ರಿಯೆಯನ್ನು ಸಾಮಾನ್ಯ ಕಾರ್ಯವಿಧಾನವನ್ನು ಉಲ್ಲಂಘಿಸಿ ಮಾಡಲಾಗಿದೆ ಮತ್ತು ಆಗಿನ ಮುಡಾ ಆಯುಕ್ತರು ಸ್ವತಃ ಸೈಟ್‌ಗಳನ್ನು ಆಯ್ಕೆ ಮಾಡಿ ಹಂಚಿದ್ದಾರೆ' ಎಂದು ಇ.ಡಿ. ಆರೋಪಿಸಿದೆ.
'ನಿವೇಶನ ಹಂಚಿಕೆಯ ಪ್ರಸ್ತಾವನೆಯನ್ನು ನಿವೇಶನ ಹಂಚಿಕೆ ವಿಭಾಗವು ಮಾಡಿಲ್ಲ. ಅದನ್ನು ಮುಡಾದ ಅಂದಿನ ಆಯುಕ್ತ ಡಿ.ಬಿ. ನಟೇಶ್ ಅವರ ಸ್ವಂತ ಇಚ್ಛೆಯ ಮೇರೆಗೆ ನೇರವಾಗಿ ಕೈಗೆತ್ತಿಕೊಂಡರು. ಇದು ಅನಪೇಕ್ಷಿತ ಪಕ್ಷಪಾತವನ್ನು ಸೂಚಿಸುತ್ತದೆ' ಎಂದು ಇ.ಡಿ. ಪ್ರತಿಪಾದಿಸಿದೆ.
'ಡಿ-ನೋಟಿಫಿಕೇಶನ್, ಜಮೀನು ಖರೀದಿ ಮತ್ತು ಕೃಷಿಯೇತರ ಉದ್ದೇಶಗಳಿಗಾಗಿ ಭೂ ಪರಿವರ್ತನೆಯನ್ನು ಮುಡಾದಿಂದ ಅಭಿವೃದ್ಧಿಪಡಿಸಲಾಗುತ್ತಿರುವ ಲೇಔಟ್‌ನಲ್ಲಿ ಪ್ರಧಾನ ಭೂಮಿಯನ್ನು ಸ್ವಾಧೀನಪಡಿಸಿ ಕೊಳ್ಳಲು ಮಾಡಲಾಗಿದೆ. ನಂತರ ಅದನ್ನು ನಂತರ ಪಾರ್ವತಿಗೆ ಉಡುಗೊರೆಯಾಗಿ ನೀಡಲಾಗಿದೆ. ಪ್ರಭಾವದ ಭೂಸ್ವಾಧೀನ ಮಾಡಿಕೊಂಡು ಇದು 'ಕಾಣಿಕೆ ರೂಪದಲ್ಲಿ ಪಡೆದ ಕಳಂಕರಹಿತ ಜಮೀನು' ಎಂದು ಬಿಂಬಿಸಲಾಗಿದೆ ಎಂದು ಇಡಿ ಆರೋಪಿಸಿದೆ.
ಸರ್ವೋದಯ ಸಂಘಕ್ಕೆ 48 ಸೈಟ್ ಹಂಚಿಕೆ: ಮುಡಾ ನಿರ್ಣಯ ರದ್ದು
ಮೈಸೂರು ದಟ್ಟಗಳ್ಳಿ ಚಾಮುಂಡೇಶ್ವರಿನಗರ ಸರ್ವೋ ದಯ ಸಹಕಾರ ಸಂಘಕ್ಕೆ ನಿವೇಶನಗಳ ಹಂಚಿಕೆ ವಿಚಾರದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸಾಮಾನ್ಯ ಸಭೆ ಕೈಗೊಂಡಿದ್ದ ನಿರ್ಣಯ ನಗರಾಭಿವೃದ್ಧಿ ಇಲಾಖೆ ರದ್ದುಗೊಳಿಸಿದೆ.
ದಟ್ಟಗಳ್ಳಿಯಲ್ಲಿ ಒಟ್ಟು 17.21 ಎಕರೆ ಜಮೀನಿನಲ್ಲಿ ರಚನೆ ಆಗಿದ್ದ ರೆವಿನ್ಯೂ ನಿವೇಶನಗಳ ಸಂಬಂಧ ವ್ಯಾಜ್ಯ ನ್ಯಾಯಾಲಯದಲ್ಲಿದೆ. ಈ ನಿವೇಶನಗಳ ಮಾಲೀಕರು ಚಾಮುಂಡೇಶ್ವರಿನಗರ ಸರ್ವೋದಯ ಸಹಕಾರ 'ಸಂಘ ರಚಿಸಿಕೊಂಡಿದ್ದು, ನಿಯಮಾವಳಿಯತೆ ಬಡಾವಣೆ ಸಕ್ರಮ ಹಾಗೂ ನಿವೇಶನಗಳ ಹಂಚಿಕೆ ಕೋರಿ ಮುಡಾಕ್ಕೆ ಮನವಿ ಸಲ್ಲಿಸಿದ್ದರು. 1997ರಲ್ಲಿ ಮುಡಾ ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಸರ್ಕಾರ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿತ್ತು.
2023ರ ಮಾ.21ರಂದು ಮುಡಾ ಸಾಮಾನ್ಯ ಸಭೆಯಲ್ಲಿ ಈ ವಿಷಯ ಮತ್ತೊಮ್ಮೆ ಚರ್ಚೆಯಾಗಿ, 1997ರ ಆದೇಶ ಕಾರ್ಯಗತಗೊಳಿಸಲು ಸರ್ಕಾರದ ಗಮನಕ್ಕೆ ತಂದು ಕ್ರಮ ಜರುಗಿಸುವಂತೆ ಸಭೆ ಆಯುಕ್ತರಿಗೆ ಸೂಚನೆ ನೀಡಿತ್ತು. ಆದರೆ, ಸರ್ಕಾರದ ಅನುಮತಿ ಮುನ್ನವೇ ಮುಡಾ ಆಯುಕ್ತರಾಗಿದ್ದ ದಿನೇಶ್ ಕುಮಾರ್, ಸಂಘದ ಸದಸ್ಯರಿಗೆ 48 ನಿವೇಶನ ಮಂಜೂರು ಮಾಡಿದ್ದರು. ಈ ಬಗ್ಗೆ ಆಯುಕ್ತರು ನೀಡಿದ್ದ ಸಷ್ಟನೆ ಒಪ್ಪದೆ ಮುಡಾ ನಿರ್ಣಯ ರದ್ದು ಮಾಡಿ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಲತಾ ಆದೇಶಿಸಿದ್ದಾರೆ.
ಮಾರಾಟಕ್ಕೂ ಮುನ್ನ ಸೈಟ್ ಹಂಚಿಕೆ:
ಸೈಟ್ ಗಳನ್ನು 'ತಪ್ಪು ವಿಷಯ' ಉಲ್ಲೇಖಿಸಿ ಮತ್ತು 'ಪ್ರಭಾವ' ಆಧರಿಸಿ ಕಾನೂನುಬಾಹಿರವಾಗಿ ಡಿ-ನೋಟಿಫೈ ಮಾಡಲಾಗಿದೆ. ನಿವೇಶನಗಳಲ್ಲಿ ಮುಡಾ ಆದಾಗಲೇ ಕೆಲವು ನಿರ್ಮಾಣಗಳನ್ನು ಕೈಗೊಂಡಿದ್ದರೂ ಈ ಸೈಟುಗಳನ್ನು ಸಿಎಂ ಅವರ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಅವರು 'ಕೃಷಿ ಜಮೀನು' ಎಂದು ತೋರಿಸಿ ಖರೀದಿ ಮಾಡಿದ್ದಾರೆ. ಮಲ್ಲಿಕಾರ್ಜುನ ಸ್ವಾಮಿಗೆ ಕೃಷಿ ಜಮೀನಿನಮಾಲೀಕದೇವರಾಜು ಈ ಜಮೀನು ಮಾರಾಟ ಮಾಡುವ ಮುನ್ನವೇ ಸೈಟು ಮಂಜೂರು ಮಾಡಲಾಗಿತ್ತು ಎಂದು ಇ.ಡಿ. ತಿಳಿಸಿದೆ.
ಬೇನಾಮಿ, ಡಮ್ಮಿ ಹೆಸರಲ್ಲಿ 1095 ನಿವೇಶನ ಹಂಚಿಕೆ!
ಮುಡಾದಲ್ಲಿ ಒಟ್ಟು 1095 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಇವುಗಳ ಮಾರುಕಟ್ಟೆ # ಮೌಲ್ಯ 700 ಕೋಟಿ ರು.ಗೂ ಅಧಿಕವಾಗಿದೆ. ಭೂಮಿ ಕಳೆದುಕೊಳ್ಳುವವರ ಸೋಗಿನಲ್ಲಿ ಬೇನಾಮಿ/ಡಮ್ಮಿ ವ್ಯಕ್ತಿಗಳು ನಿವೇಶನಗಳನ್ನು ಹಂಚಿಕೆ ಮಾಡಿಸಿಕೊಂಡಿದ್ದಾರೆ. ಅವರೆಲ್ಲಾ ರಿಯಲ್ ಎಸ್ಟೇಟ್‌ನವರು, ಪ್ರಭಾವಿಗಳು ಎಂದು ಇ.ಡಿ. ಹೇಳಿದೆ.
ಹಾಸನ ಸಿದ್ದು ಸಮಾವೇಶ ಡಿಕೆಶಿ ನಿಯಂತ್ರಣಕ್ಕೆ: ರ್‍ಯಾಲಿ ಹೆಸರೇ ಬದಲು!
ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಇ.ಡಿ ಗ್ರಿಲ್
ಬೆಂಗಳೂರು: ಮುಡಾ ಹಗರಣ ಸಂಬಂಧ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಎಂ.ದೀಪಾ ಚೋಳನ್ ಅವರು ಜಾರಿ ನಿರ್ದೇಶನಾ ಲಯ (ಇ.ಡಿ) ಅಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿ ದರು. ನೋಟಿಸ್ ಹಿನ್ನೆಲೆ ದೀಪಾ ಅವರನ್ನು ಮಂಗಳವಾರ ಬೆಳಗ್ಗೆ 11 ಗಂಟೆಯಿಂದ 4 ತಾಸು ವಿಚಾರಣೆ ನಡೆಸಲಾಯಿತು.
ಇ.ಡಿ. ಹೇಳೋದೇನು?
1 ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಮುಡಾ ನಿವೇಶನ ಹಂಚುವ ಪ್ರಕ್ರಿಯೆಯಲ್ಲಿ ಶಾಸನ ಬದ್ಧ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ
2 ಸಿದ್ದರಾಮಯ್ಯ ಆಪ್ತ ಸಹಾಯಕರಲ್ಲಿ ಒಬ್ಬರಾದ ದಿನೇಶ್ ಕುಮಾರ್ ಅಲಿಯಾಸ್ ಕುಮಾರ್ ಅನಾವಶ್ಯಕ ಪ್ರಭಾವವನ್ನು ಬೀರಿದ್ದಾರೆ
3 ಪಾರ್ವತಿ ಅವರಿಗೆ ಸೈಟ್ ಸಿಕ್ಕಾಗ ಅವರ ಪುತ್ರ ಯತೀಂದ್ರ ಮುಡಾ ಮಂಡಳಿಯಲ್ಲಿದ್ದರು, ಪತಿ ಸಿದ್ದರಾಮಯ್ಯ ವಿಪಕ್ಷ ನಾಯಕ ಆಗಿದ್ದರು ಮುಡಾದಿಂದ 4 ಕೆಲವೊಂದು ನಿರ್ಮಾಣ ಕಾಮ ಗಾರಿ ನಡೆಸುತ್ತಿದ್ದ ಜಾಗವನ್ನೇ ಸಿದ್ದರಾಮಯ್ಯ ಭಾಮೈದ ಮಲ್ಲಿಕಾರ್ಜುನ ಖರೀದಿಸಿದ್ದಾರೆ.
5 ಕೃಷಿ ಜಮೀನು ಎಂದು ತೋರಿಸಿ ಆ ಜಾಗವನ್ನು ಕೊಂಡುಕೊಂಡಿದ್ದಾರೆ. ಜಮೀನು ಮಾಲೀಕ ಮಾರುವ ಮುನ್ನವೇ ಮುಡಾ ಸೈಟ್ ಪಡೆದಿದ್ದಾರೆ
6 ಪಾರ್ವತಿ ಅವರಿಗೆ ನಿವೇಶನವನ್ನು ಸಂಬಂಧಿಸಿದ ವಿಭಾಗ ಹಂಚಿಲ್ಲ. ಮುಡಾ ಆಯುಕ್ತರಾಗಿದ್ದ ನಟೇಶ್ ಅವರು ಸ್ವ ಇಚ್ಛೆಯಿಂದ ಹಂಚಿದ್ದಾರೆ
7 ಪಾರ್ವತಿ ಅವರಿಗೆ ಯಾವ ಭಾಗದ ನಿವೇಶನ ನೀಡಬೇಕು ಎಂದು ಖುದು ಮುಡಾ ಆಯುಕ್ತರೇ ಆಯ್ಕೆಯನ್ನು ಮಾಡಿ, ಹಂಚಿಕೆ ಮಾಡಿದ್ದಾರೆ.