ರೈತ ಮಾಡಿದ ಆ ನಿರ್ಧಾರದಿಂದ ಇಂದು ತಿಂಗಳಿಗೆ 20 ಸಾವಿರ ರೂ ಲಾಭ. ವರ್ಷಕ್ಕೆ ಲಕ್ಷ ಲಕ್ಷ ಸಂಪಾದನೆ!

By Suvarna News  |  First Published Dec 3, 2024, 9:05 PM IST

ಉತ್ತರ ಕರ್ನಾಟಕ ಭಾಗದಲ್ಲಿ ರೈತರು ಸಾಂಪ್ರದಾಯಿಕ ಬೆಳೆಗೆ ಒತ್ತು ಕೊಟ್ಟು ಬಿತ್ತನೆ ಮಾಡಿ ಕೈ ಸುಟ್ಟು ಕೊಳ್ಳುವುದು ಸಾಮಾನ್ಯ,ಆದರೆ ಈ ಗ್ರಾಮದ ವೃದ್ಧ ರೈತನೊಬ್ಬ ಸಾಂಪ್ರದಾಯಿಕ ಬೆಳೆಗೆ ಗುಡ್ ಬೈ ಹೇಳಿ ಆಧುನಿಕತೆಗೆ ತಕ್ಕ ಹಾಗೆ ತೋಟಗಾರಿಕೆ ಬೆಳೆಯಾದ ವೀಳ್ಯದೆಲೆ ಬೆಳೆದು ತನ್ನ ಬದುಕನ್ನು ಹಸರಾಗಿಸುವ ಮೂಲಕ ಆರ್ಥಿಕವಾಗಿ ಸದೃಢವಾಗಿ ಇತರರಿಗೆ ಮಾದರಿಯಾಗಿದ್ದಾನೆ.


ಗಿರೀಶ್ ಕಮ್ಮಾರ, ಏಷ್ಯ ನೆಟ್ ಸುವರ್ಣ ನ್ಯೂಸ್, ಗದಗ
ಗದಗ (ಡಿ.3) : ಉತ್ತರ ಕರ್ನಾಟಕ ಭಾಗದಲ್ಲಿ ರೈತರು ಸಾಂಪ್ರದಾಯಿಕ ಬೆಳೆಗೆ ಒತ್ತು ಕೊಟ್ಟು ಬಿತ್ತನೆ ಮಾಡಿ ಕೈ ಸುಟ್ಟು ಕೊಳ್ಳುವುದು ಸಾಮಾನ್ಯ,ಆದರೆ ಈ ಗ್ರಾಮದ ವೃದ್ಧ ರೈತನೊಬ್ಬ ಸಾಂಪ್ರದಾಯಿಕ ಬೆಳೆಗೆ ಗುಡ್ ಬೈ ಹೇಳಿ ಆಧುನಿಕತೆಗೆ ತಕ್ಕ ಹಾಗೆ ತೋಟಗಾರಿಕೆ ಬೆಳೆಯಾದ ವೀಳ್ಯದೆಲೆ ಬೆಳೆದು ತನ್ನ ಬದುಕನ್ನು ಹಸರಾಗಿಸುವ ಮೂಲಕ ಆರ್ಥಿಕವಾಗಿ ಸದೃಢವಾಗಿ ಇತರರಿಗೆ ಮಾದರಿಯಾಗಿದ್ದಾನೆ.

ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ರೈತ ವೀರಪ್ಪ ತಲ್ಲೂರು ಎಂಬ ಹಿರಿಯ ರೈತ ತಮ್ಮ ಎರಡು ಎಕರೆ ಜಮೀನಿನ ಪೈಕಿ 1 ಎಕರೆ ಜಮೀನಲ್ಲಿ ವೀಳ್ಯದೆಲೆ ಬೆಳೆದಿದ್ದಾರೆ. ಮನರೇಗಾ ಯೋಜನೆಯಡಿ ವೀಳ್ಯದೆಲೆ ಬಳ್ಳಿ ಬೆಳೆಯುವ ಮೂಲಕ ಆರ್ಥಿಕವಾಗಿ ಸದೃಢ ಆಗುವ ಜೊತೆಗೆ ಇತರರಿಗೆ ಮಾದರಿಯಾಗಿದ್ದಾರೆ. ಎಕರೆಗೆ ಕಡಿಮೆ ಜಮೀನಿನಲ್ಲಿ 1,100 ವೀಳ್ಯದೆಲೆ (ಎಲೆ ಬಳ್ಳಿ) ಸಸಿ ಬೆಳೆಯಲಾಗಿದ್ದು, ನುಗ್ಗೆ, ಬೋರಲ, ಚೊಗಸಿ, ಗಿಡಗಳಿಗೆ ಬಳ್ಳಿ ಹಬ್ಬಿಸಿ ಸಮಗ್ರ ಕೃಷಿ ಮಾಡುವ ಮೂಲಕ ವರ್ಷಕ್ಕೆ ಅಂದಾಜು 8 ರಿಂದ 10 ಲಕ್ಷ
ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದಾರೆ..

Tap to resize

Latest Videos

ಬೆಂಬಲ ಬೆಲೆ ನಿಗದಿಪಡಿಸುವ ಕೃಷಿ ಬೆಲೆ ಆಯೋಗಕ್ಕೆ ಗ್ರಹಣ: ಅಧ್ಯಕ್ಷರಿಲ್ಲದೆ 2 ವರ್ಷ

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸೌಲಭ್ಯ ಪಡೆದು 1,100 ವೀಳ್ಯದೆಲೆ ಬಳ್ಳಿ ನಾಟಿ ಮಾಡಿದ್ದರು.. ನರೇಗಾ ಯೋಜನೆಯಿಂದ ಆರ್ಥಿಕ ಲಾಭ ಪಡೆದು 134 ಮಾನವ ದಿನಗಳ ಸೃಜಿಸಿ 42,344 ಸಾವಿರ ಕೂಲಿ ಮೊತ್ತ, ಸಾಮಾಗ್ರಿ ಮೊತ್ತ 18570 ರೂ ಪಡೆದಿದ್ದಾರೆ. ಒಟ್ಟು ನರೇಗಾ ಯೋಜನೆಯಿಂದ 57,914 ರೂ ಇವರಿಗೆ ದೊರತಿದೆ. ಈಗ ಸಮೃದ್ಧವಾಗಿ ಬೆಳೆದ ವೀಳ್ಯದೆಲೆ ಮಾರಾಟ ಮಾಡಿದ್ದು, ತಿಂಗಳಿಗೆ ಅಂದಾಜು 20 ಸಾವಿರ ರೂಪಾಯಿ ಆದಾಯ ಪಡೆಯುತ್ತಿದ್ದಾರೆ..

ಸಾವಯವ ಕೃಷಿಗೆ ಒತ್ತು ಕೊಟ್ಟ ರೈತ 

ವೀಳ್ಯದೆಲೆ ಬೆಳೆ ಬೆಳೆಯಲು ಜಮೀನು ಹದ ಮಾಡಿಕೊಂಡು 5×5 ಸ್ಕ್ವೇರ್ ಫೀಟ್ ಅಳತೆಯಲ್ಲಿ ನಾಲ್ಕು ಕಡೆಯಲ್ಲಿ ಮೊದಲು ನುಗ್ಗೆ, ಬೋರಲ, ಚೊಗಸಿ ಬೀಜ ನಾಟಿ ಮಾಡಲಾಗಿದೆ. ನಂತರ ನಾಟಿ ಮಾಡಿದ ಬೀಜದ ಪಕ್ಕದಲ್ಲೇ ವೀಳ್ಯದೆಲೆ ಬಳ್ಳಿ ನಾಟಿ ಮಾಡಿ 21 ದಿನಗಳ ಕಾಲ ದಿನ ಮೂರು ಸಾರಿ ನೀರು ಹಾಕಿ ಜೋಪಾನ ಮಾಡಿದ್ದಾರೆ. 

ಈ ರೈತ ಮಾಡಿದ ಒಂದು ನಿರ್ಧಾರದಿಂದ ಇಂದು ಓದದಿದ್ರೂ MBA ಪದವೀಧರರಿಗಿಂತ ಹೆಚ್ಚು ಹಣ ಗಳಿಸ್ತಾನೆ!

ವೀಳ್ಯದೆಲೆ ಬೆಳವಣಿಗೆಗೆ ಸಂಪೂರ್ಣವಾಗಿ ಸಗಣಿ ಗೊಬ್ಬರ ಹಾಕುವ ಮೂಲಕ ಸಮೃದ್ಧಿಯಾಗಿ ಬೆಳೆ ಬೆಳದಿದ್ದಾರೆ.. ರೋಣ ತಾಲೂಕಿನ ಯಾವುದೇ ಗ್ರಾಮದಲ್ಲಿ ಎಲೆಬಳ್ಳಿ ಬೆಳೆಯುವದಿಲ್ಲ. ರೋಣ ವ್ಯಾಪ್ತಿಯಲ್ಲಿ ಎರೆ  ಭೂಮಿ ಇರುವದರಿಂದ ಇಲ್ಲಿ ಎಲೆ ಬೆಳೆಯುವದಿಲ್ಲ. ಆದ್ರೆ ಹಳ್ಳದ ಪಕ್ಕದಲ್ಲಿರೋ ಜಮೀನು ಮರಳು ಮಿಶ್ರತವಾಗಿತೋದ್ರಿಂದ ಈ ಬಗ್ಗೆ ತೋಟಗಾರಿಕೆ ಅಧಿಕಾರಿಗಳ ಸಲಹೆ ಪಡೆದು ಎಲೆ ಬೆಳೆಯಲು ರೈತ ವೀರಪ್ಪ ಮುಂದಾಗಿದ್ರು.. ರೈತ ನಭಿಕೆ ಹುಸಿಹೋಗಿಲ್ಲ.. ನಿರೀಕ್ಷೆಯಂತೆ ಎಲೆ ಬಳ್ಳಿ ಹುಕುಸಾಗಿ ಬೆಳೆದಿದೆ‌.

click me!