ಉತ್ತಮ ಮಳೆಯಾಗಿದ್ದು ಕಾವೇರಿ ಜಲಾಶಯ ಭರ್ತಿಯಾಗಿದೆ ಈ ಹಿನ್ನೆಲೆ ಇಂದು ಸಿಎಂ ಡಿಸಿಎಂ ಬಾಗಿನ ಅರ್ಪಿಸಿದ್ದಾರೆ. ಈ ವೇಲೆ ಕಾವೇರಿ ನಿಗಮದ ಅಧಿಕಾರಿಗಳು ಬಾಡೂಟ ಆಯೋಜಿಸುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮಂಡ್ಯ (ಜು.29):ಕಾವೇರಿ ನದಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಬಾಡೂಟ ಆಯೋಜನೆ ಮಾಡುವ ಮೂಲಕ ಕಾವೇರಿ ನಿಗಮದ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ. ಹಿಂದೂ ಸಂಪ್ರದಾಯ ಪ್ರಕಾರ ಭರ್ತಿಯಾದ ಬಳಿಕ ನದಿಗೆ ಬಾಗಿನ ಅರ್ಪಿಸುವುದು ಅದರದ್ದೇ ಆದ ಮಹತ್ವ, ಹಿನ್ನೆಲೆ ಇದೆ. ಬಾಗಿನ ಅರ್ಪಿಸುವ ವೇಳೆ ಪೂಜೆ ಕಾರ್ಯಕ್ರಮದಲ್ಲಿ ಸಿಹಿ ತಿನಿಸುಗಗಳ ನೈವೇದ್ಯ ಮಾಡಲಾಗುತ್ತೆ ಆದರೆ ಈ ಕಾವೇರಿ ನಿಗಮ ಅಧಿಕಾರಿಗಳು ಬಾಡೂಟ ಆಯೋಜಿಸುವ ಮೂಲಕ ಹಿಂದಿನಿಂದ ನಡೆದುಕೊಂಡು ಬಂದಿದ್ದ ಸಂಪ್ರದಾಯಕ್ಕೆ ಎಳ್ಳು-ನೀರು ಬಿಟ್ಟಿದ್ದಾರೆ ಆ ಮೂಲಕ ರೈತರ ಸಾರ್ವಜನಿಕ ಕೆಂಗಣ್ಣಿಗೆ ಗುರಿಯಾಗಿದ್ದಾರೆ
ಕಳೆದ ವರ್ಷ ಮಳೆ ಕೊರತೆ ಬರಗಾಲದಿಂದ ಬರಿದಾಗಿದ್ದ ಕಾವೇರಿ ಜಯಾಶಯ. ಇದರಿಂದ ರೈತರು ಅನೇಕ ಸಂಕಷ್ಟಕ್ಕೀಡಾಗಿದ್ದರು. ಬೆಳೆಗಳಿಗೆ ಬಿಡಿ, ಜನರಿಗೆ ಕುಡಿಯಲು ಸಹ ನೀರು ಸಿಗದಂತಾಗಿತ್ತು. ದೇವರ ದಯದಿಂದ ಈ ಬಾರಿ ಉತ್ತಮ ಮಳೆಯಾಗಿರುವ ಹಿನ್ನೆಲೆ ಜಲಾಶಯ ಭರ್ತಿಯಾಗಿದೆ. ರೈತರು ಸಂತಗೊಂಡಿದ್ದಾರೆ. ಹೀಗಾಗಿ ಕಾವೇರಿ ಜಲಾಶಯಕ್ಕೆ ಇಂದು(ಜು.29ರಂದು) ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ, ಶಾಸಕರೊಂದಿಗೆ ಬಾಗಿನ ಅರ್ಪಣೆ ಮಾಡಿದ್ದರು. ಕಾರ್ಯಕ್ರಮ ಮುಗಿಸಿ ಸಿಎಂ ಡಿಸಿಎಂ ಹೊರಟ ಬಳಿಕ ಇತ್ತ ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಬಂದವರಿಗೆ ಕೆಆರ್‌ಎಸ್ ನ ಖಾಸಗಿ ಹೋಟೆಲ್‌ವೊಂದರಲ್ಲಿ ಭರ್ಜರಿ ಬಾಡೂಟಕ್ಕೆ ವ್ಯವಸ್ಥೆ ಮಾಡಿಸಿದ್ದ ಕಾವೇರಿ ನಿಗಮದ ಅಧಿಕಾರಿಗಳು.
undefined
ಮುಡಾ ಹಗರಣದಲ್ಲಿ ಸಿಎಂ ಪಾತ್ರ ಏನಿದೆ? ಅವರ ತಪ್ಪೇನು? ಬಿಜೆಪಿಗೆ ಸಚಿವ ಜಮೀರ್ ಪ್ರಶ್ನೆ
ಕಾವೇರಿ ಜಲಾಶಯ ಭರ್ತಿಯಾದಾಗ ಎಷ್ಟೋ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸಿದ್ದಾರೆ. ಆದರೆ ಹಿಂದೆಂದೂ ಸಂಪ್ರದಾಯ ಮುರಿದ ಉದಾಹರಣೆಗಳಿಲ್ಲ. ಆದರೆ ಈ ಬಾರಿ ಕಾವೇರಿ ನಿಗಮದ ಅಧಿಕಾರಿಗಳು ಮೇಲಿನವರ ಸೂಚನೆ ಮೇರೆಗೂ ಅಥವಾ ತಾವೇ ಖುದ್ದಾಗಿ ಈ ರೀತಿ ಎಡವಟ್ಟು ಮಾಡಿದ್ದಾರೋ ಗೊತ್ತಿಲ್ಲ. ಬಾಗಿನ ಅರ್ಪಣೆ ಬಳಿಕ ಬಾಡೂಟ ಸೇವಿಸಿ ಹಿಂದಿನಿಂದ ನಡೆದುಕೊಂಡು ಬಂದಿದ್ದ ಸಂಪ್ರದಾಯವನ್ನು ಮುರಿದಿದ್ದಾರೆ.
ರೈತರು ಸಾರ್ವಜನಿಕರು ಆಕ್ರೋಶ:
ಬಾಗಿನ ಅರ್ಪಣೆ ಒಂದು ಮಹತ್ವದ ಇದೆ. ನಿಗಮದ ಅಧಿಕಾರಿಗಳು ಉದ್ದೇಶಪೂರ್ವಕ ಹೀಗೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಿಗಮ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸಿಎಂ ಸಿದ್ದರಾಮಯ್ಯಗೆ ಆಗ್ರಹಿಸಿದ್ದಾರೆ.