ಬೆಂಗಳೂರುನಲ್ಲಿರುವ ಬಾಂಗ್ಲಾ ಪ್ರಜೆಗಳ ಅಕ್ರಮ ವಾಸದಿಂದ ರಾಜ್ಯಕ್ಕಿದೆ ಗಂಡಾಂತರ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

By Sathish Kumar KH  |  First Published Jul 29, 2024, 4:10 PM IST

ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಾಗಿರುವ ಬಾಂಗ್ಲಾ ದೇಶದ ಪ್ರಜೆಗಳಿಂದ ರಾಜ್ಯಕ್ಕೆ ಮತ್ತು ದೇಶಕ್ಕೆ ಗಂಡಾಂತರ ಕಾದಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.


ನವದೆಹಲಿ (ಜು.29): ಬೆಂಗಳೂರಿನಲ್ಲಿ ಬಾಂಗ್ಲಾ ದೇಶದ ಪ್ರಜೆಗಳು ಅಕ್ರಮವಾಗಿ ವಾಸವಾಗಿರುವುದು ರಾಜ್ಯಕ್ಕೆ ಮತ್ತು ದೇಶಕ್ಕೆ ಅಪಾಯಕಾರಿ. ಬಾಂಗ್ಲಾ ವಲಸಿಗರು ಕೇವಲ ಬೆಂಗಳೂರು ಮಾತ್ರವಲ್ಲದೇ, ಚಿಕ್ಕಮಗಳೂರು ಕಾಫಿ ಎಸ್ಟೇಟ್ , ಮೀನುಗಾರಿಕೆ ಬಂದರಿನಲ್ಲಿ ಸಾಕಷ್ಟು ಜನ ಸೇರಿಕೊಂಡು ಸಮಾಜ ಘಾತುಕ ಶಕ್ತಿಗಳು ಚಟುವಟಿಕೆಗಳನ್ನು ಮಾಡುತ್ತಾರೆ  ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನವದೆಹಲಿಯಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಂಗ್ಲಾ ಪ್ರಜೆಗಳ ಅಕ್ರಮ ಪ್ರವೇಶದ ಮೂಲ ಸಮಸ್ಯೆ ಇರುವುದು ಬಾಂಗ್ಲಾ ಗಡಿ ಭಾಗದಲ್ಲಿ, ಪಶ್ಚಿಮ ಬಂಗಾಳ ಸರ್ಕಾರ ತನ್ನ ರಾಜಕಾರಣಕ್ಕಾಗಿ ಬಾಂಗ್ಲಾ ನುಸುಳುಕೋರರಿಗೆ ಸಂಪೂರ್ಣವಾಗಿ ಬೆಂಬಲವಾಗಿ ನಿಲ್ಲುತ್ತಿದೆ. ಅವರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುತ್ತಾರೆ. ನಕಲಿ ಐಡಿ ಕಾರ್ಡ್, ಆಧಾರ ಕಾರ್ಡ್ ಕೊಡುತ್ತಾರೆ. ಅದಾದ ಮೇಲೆ ಅವರು ಬೇರೆ ಬೇರೆ ರಾಜ್ಯಗಳಿಗೆ ಬರುತ್ತಾರೆ ಎಂದರು.

Tap to resize

Latest Videos

ಕನ್ನಡ ನಾಡಿನ ಕನ್ನಂಬಾಡಿ ಕಟ್ಟೆ, ನಮ್ಮೆಲ್ಲರ ಊಟದ ತಟ್ಟೆ; ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು ಆಕರ್ಷಣೀಯ ನಗರವಾಗಿದ್ದು, ಹೀಗಾಗಿ ಅವರು ಇಲ್ಲಿ ಕೆಲಸ ಹುಡುಕಿಕೊಂಡು ಬಂದು ಇಲ್ಲಿಯೇ ಪ್ರತ್ಯೇಕ ಕಾಲೋನಿ ಮಾಡಿಕೊಳ್ಳುವಷ್ಟು ಬೆಳೆದಿದ್ದಾರೆ. ನಾನು ಗೃಹ ಸಚಿವನಾಗಿದ್ದಾಗ ಸುಮಾರು 64 ಜನ ಬಾಂಗ್ಲಾ ಅಕ್ರಮ ವಲಸಿಗರನ್ನು ಪತ್ತೆ ಹಚ್ಷಿ ಅವರನ್ನು ಬಾಂಗ್ಲಾ ದೇಶಕ್ಕೆ ಕಳುಹಿಸುವ ಪ್ರಯತ್ನ ಮಾಡಿದ್ದೇವು. ಆದರೆ, ಪಶ್ಚಿಮ ಬಂಗಾಳ ಸರ್ಕಾರ ಸಹಕಾರ ನೀಡಲಿಲ್ಲ. ನಮ್ಮ ಪೊಲಿಸರಿಗೆ ಪಶ್ಚಿಮ ಬಂಗಾಳದ ಪೊಲಿಸರು ಸಹಕಾರ ನೀಡಲಿಲ್ಲ. ಹೀಗಾಗಿ ಪಶ್ಚಿಮ ಬಂಗಾಳದಲ್ಲಿಯೇ ಅವರು ಉಳಿದಿದ್ದಾರೆ ಎಂದು ಗೊತ್ತಾಯಿತು ಎಂದು ಹೇಳಿದರು.

ಕೆಲವು ರಾಜಕೀಯ ಪಕ್ಷಗಳು ದೇಶದ ಸುರಕ್ಷತೆ, ಭದ್ರತೆಯನ್ನು ಬಲಿಕೊಟ್ಟು ರಾಜಕೀಯ ಲಾಭಕ್ಕಾಗಿ ದೇಶದ ಹಿತಾಸಕ್ತಿ ಬಲಿ ಕೊಟ್ಟು ರಾಜಕಾರಣ ಮಾಡುತ್ತಿರುವುದು ಬಹಳ ದುರದೃಷ್ಟಕರ. ಅದೇನೇ ಇರಲಿ ಈ  ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಂಭೀರವಾಗಿ ತೆಗೆದುಕೊಳ್ಳಬೇಕು, ವಿಶೇಷವಾಗಿ ರಾಜ್ಯ ಸರ್ಕಾರ ಹೊರಗಡೆಯಿಂದ  ಯಾರೇ ಬಂದರೂ ಅವರಿಗೆ ಸೂಕ್ತ ಐಡಿ ಕಾರ್ಡ್ ಕೊಟ್ಟು ದಾಖಲೀಕರಿಸಬೇಕು. ಸುಳ್ಳು ಆಧಾರ ಹಾಗೂ ಐಡಿ ಕಾರ್ಡ್ ನೀಡಿ ನೌಕರಿ ಪಡೆಯುವವರನ್ನು ಪತ್ತೆ ಹಚ್ಚಿ ಅವರನ್ನು ಹೊರ ಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.

ಶಿರೂರು ಗುಡ್ಡ ಆಯ್ತು, ಈಗ ಹಾಸನದ ಶಿರಾಡಿ ಘಾಟ್ ರಸ್ತೆ ಕುಸಿತ; ಸಾಲುಗಟ್ಟಿ ನಿಂತ ವಾಹನಗಳು

ಗೃಹ ಸಚಿವರ ಹೇಳಿಕೆಯಿಂದ ಏನೂ ಆಗಲ್ಲ: ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗೃಹ ಸಚಿವ ಪರಮೇಶ್ವರ ಅವರು ಕ್ರಮ ತೆಗೆದುಕೊಳ್ಳುತ್ತೇನೆ ಎಂದ ತಕ್ಷಣ ಕ್ರಮ ಆಗುವುದಿಲ್ಲ. ಹಲವಾರು ವಿಚಾರದಲ್ಲಿ ಅವರ ಹೇಳಿಕೆಗೂ ಪೊಲೀಸ್ ಇಲಾಖೆ ನಡವಳಿಕೆಗೂ ಸಂಬಂಧ ಇಲ್ಲದಿರುವುದನ್ನು ನಾವು ನೋಡಿದ್ದೇವೆ. ಇದು ಬೇರೆ ಪ್ರಕರಣಗಳಂತಲ್ಲ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಲ್ಲಿ ಬಾಂಗ್ಲಾ ದೇಶದ ಕಾಲೋನಿಗಳಾಗಿವೆ ಅವುಗಳನ್ನು ಪತ್ತೆ ಹಚ್ಚಿ ಅವರನ್ನು ಹೊರಗೆ ಹಾಕುವ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಅವರು ಸರ್ಕಾರಿ ವ್ಯವಸ್ಥೆಯಲ್ಲಿ ಸೇರಿಕೊಳ್ಳದಂತೆ ನೋಡಿಕೊಳ್ಳಬೇಕು. ಗೃಹ ಸಚಿವ ಪರಮೇಶ್ವರ್ ಅವರು ಕೇವಲ ಹೇಳಿಕೆ ಕೊಡುವುದಲ್ಲ, ಅವರು ಕಾರ್ಯಾಚರಣೆಗೆ ಇಳಿಯಬೇಕು. ಇಲದಿದ್ದರೆ ದೊಡ್ಡ ಆಪತ್ತು  ಕಾದಿದೆ ಎಂದು ಹೇಳಿದರು.

click me!