ಸಿಎಂ ಸಿದ್ದರಾಮಯ್ಯ ವಿಶ್ವಗುರು ಬಸವಣ್ಣರಂತೆ: ಸಚಿವ ಶಿವರಾಜ ತಂಗಡಗಿ

By Ravi Janekal  |  First Published Feb 17, 2024, 2:46 PM IST

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಮೇಲೆಯೇ ವಿಶ್ವಗುರು ಬಸವಣ್ಣರನ್ನ 'ಸಾಂಸ್ಕೃತಿಕ ನಾಯಕ' ಎಂದು ಘೋಷಿಸಲಾಯಿತು. ಹಿಂದಿನವರು ಯಾರೂ ಮಾಡಿರಲಿಲ್ಲ. ಸಿಎಂ ಸಿದ್ದರಾಮಯ್ಯನವರು ವಿಶ್ವಗುರು ಬಸವಣ್ಣರಂತೆ ಎಂದು ಸಚಿವ ಶಿವರಾಜ ತಂಗಡಗಿ ಹಾಡಿ ಹೊಗಳಿದರು.


ಕೊಪ್ಪಳ (ಫೆ.17): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಮೇಲೆಯೇ ವಿಶ್ವಗುರು ಬಸವಣ್ಣರನ್ನ 'ಸಾಂಸ್ಕೃತಿಕ ನಾಯಕ' ಎಂದು ಘೋಷಿಸಲಾಯಿತು. ಹಿಂದಿನವರು ಯಾರೂ ಮಾಡಿರಲಿಲ್ಲ. ಸಿಎಂ ಸಿದ್ದರಾಮಯ್ಯನವರು ವಿಶ್ವಗುರು ಬಸವಣ್ಣರಂತೆ ಎಂದು ಸಚಿವ ಶಿವರಾಜ ತಂಗಡಗಿ ಹಾಡಿ ಹೊಗಳಿದರು.

 ಕನಕಗಿರಿ ಉತ್ಸವ ಹಿನ್ನೆಲೆ ಉತ್ಸವ ಸಮಿತಿ ಸಭೆಯಲ್ಲಿ ಉತ್ಸವದ ಲೋಗೋ ಹಾಗೂ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಸಚಿವರು. ಅಂಬೇಡ್ಕರ್ ಹಾಗೂ ಬಸವಣ್ಣನವರ ಒಂದೇ ಸಂವಿಧಾನ ನೀಡಿದ್ದಾರೆ. ಬಸವಣ್ಣನವರನ್ನು ರಾಯಬಾರಿ ಎಂದು ಘೋಷಿಸಲು ಸ್ವಾಮೀಜಿಗಳು ಹೇಳಿದ್ದರು. ಆದರೆ ರಾಯಭಾರಿ ಅರ್ಥಕ್ಕಿಂತ ಸಾಂಸ್ಕೃತಿಕ ನಾಯಕ ಸೂಕ್ತ ಎಂದು ಘೋಷಿಸಿದರು. ನನ್ನ ಹೆಸರಿನ ತಂಗಡಗಿ ಬಸವಣ್ಣನವರ ಪತ್ನಿ ಊರು. ಹೀಗಾಗಿ ನಮಗೆ ಬಸವಣ್ಣ ಬೀಗರು ಇದ್ದಂತೆ. ಹಿಂದಿನವರು ಬೇರೆ ನಾಯಕರ ಬಗ್ಗೆ ಚಿಂತನೆ ಮಾಡಿದರು. ಆದರೆ ಕಾಂಗ್ರೆಸ್ ಬಸವಣ್ಣನವರ ಬಗ್ಗೆ ಚಿಂತನೆ ಮಾಡಿತು. ಬರುವ ದಿನಗಳಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯಿಂದ ವಚನ ಜಾತ್ರೆ ಆಚರಿಸಲಾಗುವುದು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಂಡಿದ್ದೇನೆ ಎಂದರು. 

Latest Videos

ಮುಸ್ಲಿಮರು ಹಿಂದುಳಿದ ಸಮುದಾಯದವರು ಅವರಿಗೆ ಹೆಚ್ಚು ಅನುದಾನ ಕೊಟ್ಟರೆ ತಪ್ಪೇನು: ಗೃಹ ಸಚಿವ ಪರಮೇಶ್ವರ್

click me!