ಯಾರಿಗೆ ಅಭಿವೃದ್ಧಿ ಅವಶ್ಯಕತೆ ಇದ್ಯೋ ಅವರಿಗೆ ಅನುದಾನ ಕೊಡಲಾಗುತ್ತೆ. ಎಸ್ಸಿ ಎಸ್ಟಿ ಹಿಂದುಳಿದ ಕಾರಣ ಅವರಿಗೆ ಅನುದಾನ ಕೊಡ್ತೇವೆ. ಮುಸ್ಲಿಮರು ಹಿಂದುಳಿದ ಕಾರಣ ಸ್ವಲ್ಪ ಹೆಚ್ಚು ಕೊಟ್ಟರೆ ತಪ್ಪೇನು? ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಪ್ರಶ್ನಿಸಿದರು
ಮಂಗಳೂರು (ಫೆ.17): ಮಂಗಳೂರು ಮೊದಲ ಶಾಂತವಾಗಿರೋ ಜಿಲ್ಲೆಗಳಲ್ಲಿ ಒಂದಾಗಿತ್ತು. ಆದರೆ ಮೊದಲಿನ ಶಾಂತಿ ಈಗ ಇಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ ಬೇಸರ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಅಭಿಲಾಷೆ ರಾಜ್ಯದಲ್ಲಿ ಜನ ಸಮುದಾಯದ ಅಭಿವೃದ್ಧಿ, ಸಾರ್ವಜನಿಕ ಜೀವನದಲ್ಲಿ ಶಾಂತಿಯಿಂದ ಬಾಳಬೇಕು ಎಂಬುದರ ಕಡೆಗೆ ಗಮನ ಹರಿಸುತ್ತೇವೆ. ಧರ್ಮ ಜಾತಿಗಳ ಹೆಸರಲ್ಲಿ ರಾಜಕಾರಣ ಆಗಬಾರದು. ಆದರೆ ಇಲ್ಲಿ ಧರ್ಮ ರಾಜಕಾರಣ ನಡೆಯುತ್ತಿದೆ ಅದರಿಂದ ಮೊದಲಿನಂತೆ ಶಾಂತಿಯಿಂದಿಲ್ಲ. ಕಳೆದ ಚುನಾವಣೆ ಹೊತ್ತಲ್ಲಿ ನಾನು ನೂರು ಜನರನ್ನ ಸಂಪರ್ಕಿಸಿದ್ದೆ. ರಾಜಕೀಯದವರಲ್ಲದ ಅವರು ಬಹಳ ವಿಷಾಧ ವ್ಯಕ್ತಪಡಿಸಿದ್ದರು. ಮಂಗಳೂರು ಮೊದಲು ಶಾಂತಿಯಿಂದ ಇತ್ತು, ಈಗ ಇಲ್ಲ ಅಂದರು. ಇಲ್ಲಿನ ಕಲುಷಿತ ವಾತಾವರಣದಿಂದ ಮಕ್ಕಳೆಲ್ಲಾ ಈಗ ಊರು ಬಿಟ್ಟು ಬೇರೆ ಕಡೆ ಹೋಗಿದ್ದಾರೆ ಅಂದ್ರು. ಧರ್ಮ ನಂಬಿಕೆಗಳನ್ನು ಅನುಸರಿಸೋವಾಗ ಶಾಂತಿಯಿಂದ ಇರಬೇಕು. ಆದರೆ ಇಲ್ಲಿ ಇಡೀ ಸಮುದಾಯಕ್ಕೆ ವಿಷ ಬೀಜ ಬಿತ್ತುವ ಕೆಲಸ ಆಗುತ್ತಿದೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನನ್ನ ತಮ್ಮ ದೆಹಲಿಯಲ್ಲಿ ಕೂರುವ ಸಂಸದ ಅಲ್ಲ, ಅವನು ಹಳ್ಳಿಯ ಸಂಸದ: ಡಿಕೆ ಶಿವಕುಮಾರ
ಜೆರೋಸಾ ಶಾಲೆ ಪ್ರಕರಣದಲ್ಲಿ ಕೂಡ ಹೀಗೆ ಆಗಿದೆ. ಶಿಕ್ಷಕಿ ಏನು ಹೇಳಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಆ ಬಗ್ಗೆ ತನಿಖೆ ನಡೆಸುತ್ತೇವೆ. ಡಿಕೆ ಶಿವಕುಮಾರರ ಮಾತಿಗೆ ನನ್ನ ಸಹಮತವಿದೆ. ಶಿಕ್ಷಣ ಇಲಾಖೆಯಿಂದ ಹಿರಿಯ ಅಧಿಕಾರಿ ನೇಮಿಸಿ ತನಿಖೆ ಮಾಡಿಸುತ್ತೇವೆ. ಪೊಲೀಸ್ ಇಲಾಖೆ ಕಾನೂನು ರಕ್ಷಣೆ ಮಾಡೋ ಕೆಲಸ ಮಾಡಲಿದೆ. ಪ್ರತಿಭಟನೆ ಮಾಡೋದದ್ರಲ್ಲಿ ತಪ್ಪಿಲ್ಲ, ಆದರೆ ಬೇರೆ ಹಂತಕ್ಕೆ ಹೋಗಬಾರದು. ಪೊಲೀಸರು ಪರ್ಮಿಷನ್ ಕೊಟ್ಟರೆ ಪ್ರತಿಭಟನೆ ಮಾಡಲಿ. ಯಾರಿಗೆ ಅಭಿವೃದ್ಧಿ ಅವಶ್ಯಕತೆ ಇದ್ಯೋ ಅವರಿಗೆ ಅನುದಾನ ಕೊಡಲಾಗುತ್ತೆ. ಎಸ್ಸಿ ಎಸ್ಟಿ ಹಿಂದುಳಿದ ಕಾರಣ ಅವರಿಗೆ ಅನುದಾನ ಕೊಡ್ತೇವೆ. ಮುಸ್ಲಿಮರು ಹಿಂದುಳಿದ ಕಾರಣ ಸ್ವಲ್ಪ ಹೆಚ್ಚು ಕೊಟ್ಟರೆ ತಪ್ಪೇನು? ಎಂದರು.
ಶಿರಾ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲು ಕ್ರಮ: ಡಿಕೆ ಶಿವಕುಮಾರ್