'ಪ್ರಧಾನಿ ನರೇಂದ್ರ ಮೋದಿ ಅವರದ್ದು ಭಾರತದ ಸರ್ಕಾರದ ವಿಶೇಷ ವಿಮಾನವಿದೆ. ನೀವು ಬೇಕಿದ್ರೆ ಕರ್ನಾಟಕ ಸರ್ಕಾರದಿಂದ ವಿಶೇಷ ವಿಮಾನ ತೆಗೆದುಕೊಳ್ಳಿ'. ಸಿಎಂ, ಮಿನಿಸ್ಟರ್ ಗಳು ಐಶಾರಾಮಿ ವಿಮಾನ ಬಳಕೆ ಮಾಡಿದ ಬಳಿಕ ಮೋದಿ ವಿಮಾನದ ಬಗ್ಗೆ ಸಿಎಂ ಪ್ರಶ್ನೆ ಮಾಡಿದ್ದವರಿಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೀಗೆ ತಿರುಗೇಟು ನೀಡಿದರು.
ವಿಜಯಪುರ (ಡಿ.23) 'ಪ್ರಧಾನಿ ನರೇಂದ್ರ ಮೋದಿ ಅವರದ್ದು ಭಾರತದ ಸರ್ಕಾರದ ವಿಶೇಷ ವಿಮಾನವಿದೆ. ನೀವು ಬೇಕಿದ್ರೆ ಕರ್ನಾಟಕ ಸರ್ಕಾರದಿಂದ ವಿಶೇಷ ವಿಮಾನ ತೆಗೆದುಕೊಳ್ಳಿ'. ಸಿಎಂ, ಮಿನಿಸ್ಟರ್ ಗಳು ಐಶಾರಾಮಿ ವಿಮಾನ ಬಳಕೆ ಮಾಡಿದ ಬಳಿಕ ಮೋದಿ ವಿಮಾನದ ಬಗ್ಗೆ ಸಿಎಂ ಪ್ರಶ್ನೆ ಮಾಡಿದ್ದವರಿಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೀಗೆ ತಿರುಗೇಟು ನೀಡಿದರು.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಯೊಂದಿಗೆ ಮಾತನಾಡಿದ ಅವರು, ನಿಮಗೆ ಹೆಲಿಕಾಪ್ಟರ್ ಇಲ್ವಾ? ನಮ್ಮವರೂ ಸೇರಿ ಎಲ್ಲಾ ಮುಖ್ಯಮಂತ್ರಿಗಳೂ ಇದೇ ಮಾಡ್ತಿದ್ದಾರೆ. ಇವರ್ಯಾರು ಸಾಮಾನ್ಯ ವಿಮಾನದಲ್ಲಿ ಅಡ್ಡಾಡೋದಿಲ್ಲ. ಐಷಾರಾಮಿ ವಿಮಾನಗಳೇ ಆಗಬೇಕು. ನಿಮಗೆಲ್ಲಾ ಅಂಥಾದ್ದು ಏನು ಅರ್ಜೆಂಟ್ ಇರುತ್ತೆ? ಅರ್ಧ ಗಂಟೆಗೊಂದು ಬೆಂಗಳೂರಿನಿಂದ ದೆಹಲಿಗೆ ವಿಮಾನ ಇವೆ. ಅದರಲ್ಲೂ ಜೆ ಕ್ಲಾಸ್ ಎಂದು ಡಿಲಕ್ಸ್ ಇದೆ. ಇಷ್ಟೆಲ್ಲ ಬಿಟ್ಟು ಐಷಾರಾಮಿ ವಿಮಾನದಲ್ಲಿ ದೆಹಲಿಗೆ ಹೋಗ್ತಾರೆ. ಇವರು ಅಡ್ಡಾಡೋದು ಫೈವ್ ಸ್ಟಾರ್ ವಿಮಾನ. ಇದರಲ್ಲಿ ಒಮ್ಮೆ ಬೆಂಗಳೂರಿನಿಂದ ದೆಹಲಿಗೆ ಹೋದ್ರೆ 50ಲಕ್ಷ ಖರ್ಚು ಇರುತ್ತೆ. ವಿಶೇಷ ವಿಮಾನಗಳಿಗೆ ಸಾಕಷ್ಟು ಹಣ ಖರ್ಚಾಗುತ್ತೆ. ಯಾರಪ್ಪನ ದುಡ್ಡು ಇದು? ಜನ್ರ ದುಡ್ಡಿದು. ಜನ್ರ ದುಡ್ಡೋ? ಬೇನಾಮಿ ದುಡ್ಡೊ? ಅವರು ಅವರ ಅಕೌಂಟ್ ನಿಂದ ಕೊಡಲ್ಲ ಎಂದು ಕಿಡಿಕಾರಿದರು.
ಹಿಜಾಬ್ ನಿಷೇಧ ರದ್ದುಗೊಳಿಸಿದ್ರೆ; ಕರ್ನಾಟಕದ ಶಾಲಾ-ಕಾಲೇಜುಗಳು ಕೇಸರಿಮಯ: ಶರಣ್ ಪಂಪ್‌ವೆಲ್ ಎಚ್ಚರಿಕೆ
ಸಿದ್ರಾಮಯ್ಯಗೆ ಯತ್ನಾಳ ನೀತಿ ಪಾಠ:
ನೀವು ಸಮಾಜವಾದಿ. ನಿಮ್ಮದು ಸರಳ ಜೀವನ ಇರಬೇಕು. ಕಾಮನ್ ಆಗಿ ಹೋಗರಿ. ನಾವು ದೆಹಲಿಗೆ ಹೋದ್ರೆ 9ರಿಂದ 15 ಸಾವಿರ ಅಥವಾ 20ಸಾವಿರ ಆಗುತ್ತೆ. ನೀವಷ್ಟೇ ಅಲ್ಲ, ಈ ಹಿಂದೆ ಆದಂತಹ ಮೂರ್ನಾಲ್ಕು ಮುಖ್ಯಮಂತ್ರಿಗಳು ಇದೆ ಐಷಾರಾಮಿ ವಿಮಾನದಲ್ಲಿ ಅಡ್ಡಾಡಿ ಶೋಕಿ ಮಾಡಿದ್ದಾರೆ. ದೆಹಲಿಗೆ ಹೋದ್ರೂ ವಿಶೇಷ ವಿಮಾನ, ಹುಬ್ಬಳ್ಳಿಗೆ ಬಂದ್ರೂ ವಿಶೇಷ ವಿಮಾನ. ಎಲ್ಲಿಗೆ ಹೋದ್ರೂ ವಿಶೇಷ ವಿಮಾನ. ನೀವೆಲ್ಲ ಹುಟ್ಟುವಾಗ ವಿಮಾನದಲ್ಲೇ ಹುಟ್ಟಿದ್ರಾ? ಅದೇ ಹಳ್ಳಿ, ಅದೇ ತೊಟ್ಟಿಲಲ್ಲೇ ಹುಟ್ಟಿದಿರಿಲ್ಲೋ? ಈಗ್ಯಾಕಪ್ಪಾ ವಿಶೇಷ ವಿಮಾನ?
ಐಷಾರಾಮಿ ವಿಮಾನದಲ್ಲಿ ಸಿಎಂ ಸೇರಿ ಹಲವರ ರಾಯಲ್ ಜರ್ನಿ, ಜಮೀರ್ ಗೆ ಕಂಟಕವಾಯ್ತು ವಿಡಿಯೋ, ಬಿಜೆಪಿ ವ್ಯಂಗ್ಯ
ರೈತರಿಗೆ ಪರಿಹಾರ ಕೊಡಲು ಸರ್ಕಾರದ ಬಳಿ ದುಡ್ಡಿಲ್ಲ ಅಂತಾರೆ ಆದರೆ ಸರ್ಕಾರದ ದುಡ್ಡು ಹೀಗೆಲ್ಲ ಪೋಲು ಮಾಡ್ತಿದ್ದಾರೆ. ಸಾಮಾನ್ಯರಂತೆ ಇರಿ, ಮೊದಲು ರಾಮಕೃಷ್ಣ ಹೆಗಡೆ ಅವರೆಲ್ಲ ರೈಲಿನಲ್ಲೇ ಅಡ್ಡಾಡುತ್ತಿದ್ರು. ಅಂಬಾಸಿಡರ್ ಕಾರ್ ನಲ್ಲಿ ಅಡ್ಡಾಡುತ್ತಿದ್ರು. ಪಾಪ ಸಿದ್ರಾಮಯ್ಯನವರ ಬಳಿ ರೊಕ್ಕ(ಹಣ) ಇರಲಿಕ್ಕಿಲ್ಲ. ಅವರ ಹಿಂದೆ ಇದ್ದಾವರೆಲ್ಲಾ, ಜಮೀರ್ ಅಹಮ್ಮದ ಖಾನ್, ಬೈರತಿ ಸುರೇಶ ಇವರೆಲ್ಲಾ ದೊಡ್ಡ ಶ್ರೀಮಂತರು. ಸಿಎಂ ಅವರನ್ನು ಖುಶಿಪಡಿಸಲು ಇಂತಹ ವಿಮಾನದಲ್ಲಿ ಕರೆದುಕೊಂಡು ಹೋಗ್ತಾರೆ. ದೇಖೋ ಸರ್ ಮೇರಾ ವಿಮಾನ್ ಕೈಸಾ ಹೈ ಅಂತಾರೆ. ಯಾವುದೇ ವಿಮಾನದಲ್ಲಿ ಕುಳಿತರೂ ಕೊನೆಗೆ ನಮ್ಮ ಸಿದ್ಧೇಶ್ವರ ಸಂಸ್ಥೆಯಂತಹ ವಿಮಾನದಲ್ಲೇ ಹೋಗಬೇಕು (ಮೃತಪಟ್ಟಾಗ ಒತ್ತೊಯ್ಯುವ ವಾಹನಕ್ಕೆ ಉತ್ತರ ಕರ್ನಾಟಕದಲ್ಲಿ ವಿಮಾನ ಎನ್ನುತ್ತಾರೆ) ಎಂದರು.