
ಬೆಂಗಳೂರು (ಅ.11): ನನಗೆ ಸ್ವಲ್ಪ ವಯಸ್ಸಾಗಿದೆ ಬಿಟ್ಟರೆ, ಆದರೆ ನನಗೆ ಬದ್ಧತೆ ಮಾತ್ರ ಕಡಿಮೆ ಆಗಿಲ್ಲ. ನಾನು ಪಾಟೀಲ್ ಅವರಷ್ಟು ಸಮಾಜವಾದಿ ಪಕ್ಷದಲ್ಲಿ ಕೆಲಸ ಮಾಡಿಲ್ಲ. ಪ್ರೊಫೆಸರ್ ನಂಜುಂಡಸ್ವಾಮಿ ನನಗೆ ಸಿಗರೇಟ್ ಸೇದೋದನ್ನ ಕಲಿಸಿದ್ದಾರೆ. ಮಧ್ಯ ರಾತ್ರಿಯಲೆಲ್ಲಾ ಸಿಗರೇಟ್ ಸೇದಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾರತ ಯಾತ್ರಾ ಕೇಂದ್ರ ಮತ್ತು ಲೋಕನಾಯಕ ಜೆ.ಪಿ. ವಿಚಾರ ವೇದಿಕೆ ಸಹಯೋಗದಲ್ಲಿ ಚಿತ್ರಕಲಾ ಪರಿಷತ್ ನಲ್ಲಿ ಹಮ್ಮಿಕೊಂಡಿದ್ದ ಜಯಪ್ರಕಾಶ್ ನಾರಾಯಣ್ ಅವರ 122ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಜೆ.ಪಿ.ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ನಂತರ ಮಾತನಾಡಿದ ಅವರು, ನನಗೆ ಸ್ವಲ್ಪ ವಯಸ್ಸಾಗಿದೆ ಬಿಟ್ಟರೆ, ಆದರೆ ನನಗೆ ಬದ್ಧತೆ ಮಾತ್ರ ಕಡಿಮೆ ಆಗಿಲ್ಲ. ನಾನು ಪಾಟೀಲ್ ಅವರಷ್ಟು ಸಮಾಜವಾದಿ ಪಕ್ಷದಲ್ಲಿ ಕೆಲಸ ಮಾಡಿಲ್ಲ. ಪ್ರೊಫೆಸರ್ ನಂಜುಂಡಸ್ವಾಮಿ ಅವರ ಜೊತೆ ಸಮಯ ಕಳೆದಿದ್ದೇನೆ. ಅವರು ನಮಗೆ ಪಾಠ ಮಾಡ್ತಾ ಇರಲಿಲ್ಲ. ಆದರೆ, ಅವರ ಜೊತೆ ಸಾಕಷ್ಟು ಚರ್ಚೆ ಮಾಡ್ತಾ ಇದ್ದೆನು. ರಾಜ್ಯ, ದೇಶ, ವಿದೇಶದ ರಾಜಕೀಯ ಚರ್ಚೆ ಮಾಡುತ್ತಿದ್ದೆನು. ಅವರ ಪ್ರಭಾವ ದಿಂದ ನಾನು ಜೆಪಿ ಚಳುವಳಿಗೆ ಧುಮುಕಿದೆ ಎಂದರು.
ಬೆಂಗಳೂರು ಟೆಕ್ಕಿಗಳ ಪ್ರೈವೇಟ್ 2 ಪಬ್ಲಿಕ್ ಅಭಿಯಾನ: ಮೆಟ್ರೋ ಬೆನ್ನಲ್ಲೇ, ಬಿಎಂಟಿಸಿ ಫೀಡರ್ ಬಸ್‌ಗಳಿಗೂ ಬೆಂಬಲ!
ನನಗೂ ಬಿ.ಆರ್. ಪಾಟೀಲ್‌ಗೂ ಸಾಮ್ಯತೆಯಿದೆ: ನನಗೆ ಸಿಗರೇಟ್ ಸೇದೋದನ್ನ ಕಲಿಸಿದ್ದೆ ಪ್ರೊಫೆಸರ್ ನಂಜುಂಡಸ್ವಾಮಿ ಅವರು. ಮಧ್ಯ ರಾತ್ರಿಯಲೆಲ್ಲಾ ಸಿಗರೇಟ್ ಸೇದಿಸಿದ್ದಾರೆ. ಆಗ ಚಾರ್ ಮಿನಾರ್ ಸಿಗರೇಟ್ ಬಹಳ ಸ್ಟ್ರಾಂಗ್ ಸಿಗರೇಟ್ ಆಗಿತ್ತು. ನಂಜುಂಡಸ್ವಾಮಿ ಅರ್ಧ ಟೀ ಕೊಡಿಸೋದು, ಸಿಗರೇಟ್ ಸೇದಿಸೋದು ಮಾಡ್ತಾ ಇದ್ದರು. ಅವರಿಂದಲೇ ನಾನು ಸಿಗರೇಟ್ ಕಲಿತಿದ್ದೇನೆ. ಬಿ ಆರ್ ಪಾಟೀಲ್‌ಗೂ ನನಗೆ ಸಾಮ್ಯತೆ ಇದೆ. ನಾನು ಎರಡು ಬಾರಿ ಮುಖ್ಯಮಂತ್ರಿಯಾದೆ. ಪಾಪ ಅವ ಏನು ಆಗಲಿಲ್ಲ. ಅವನು ಮಂತ್ರಿ ಆಗಬೇಕಿತ್ತು. ಕಾರಣಾಂತರಗಳಿಂದ ಮಂತ್ರಿ ಆಗಲಿಲ್ಲ. ಮುಂದಿನ ದಿನಗಳಲ್ಲಿ ಅವನಿಗೆ ಭವಿಷ್ಯ ಇದೆ. ನಿಮ್ಮ ಸಮಯದಲ್ಲಿ ಮಂತ್ರಿ ಮಾಡಿ ಎಂದ ಸಭಿಕರು. ಮುಂದೆ ಅವನಿಗೆ ಒಳ್ಳೆಯ ಭವಿಷ್ಯ ಇದೆ ಎಂದು ಹೇಳಿದರು.
ಹಿಂದಿನ ಸರ್ಕಾರ ಆರ್ಥಿಕ ದಿವಾಳಿ ಮಾಡಿದೆ: 2013-18ರವರೆಗೆ ಯಾವ ಸಿದ್ದರಾಮಯ್ಯ ಇದ್ದನೋ ನಾನು ಈಗಲೂ ಅದೆ ಸಿದ್ದರಾಮಯ್ಯ. ಯಾವ ಸಿಎಂ ಕೊಟ್ಟ ಭರವಸೆ ಈಡೇರಿಸುವ ಕೆಲಸ ಮಾಡಿಲ್ಲ. ಆ ಪ್ರಯತ್ನ ನಾನು ಮಾಡಿದ್ದೇನೆ. ಕಳೆದ ಬಾರಿ ಸಂಪೂರ್ಣ ಪ್ರಣಾಳಿಕೆ ಭರವಸೆ ಈಡೆರಿಸಿದ್ದೆನು. ಈ ಬಾರಿ 5 ಗ್ಯಾರಂಟಿ ಪೈಕಿ ನಾಲ್ಕು ಈಡೇರಿಸಿದ್ದೇವೆ. ಡಿಸೆಂಬರ್ ನಲ್ಲಿ ನಾಲ್ಕನೆ ಗ್ಯಾರಂಟಿ ಈಡೇರಿಸುವ ಕೆಲಸ ಮಾಡ್ತೆವೆ. ಹಿಂದಿನ ಸರ್ಕಾರದಲ್ಲಿ ಆರ್ಥಿಕ ದಿವಾಳಿ ಮಾಡಿದ್ದಾರೆ. ಬೇಕಾಬಿಟ್ಟಿ ಕಾಮಗಾರಿ ಅಪ್ರೂವಲ್ ಮಾಡಿದ್ದಾರೆ. ಅದರ ಫೆಂಡಿಂಗ್ ಬಿಲ್ ಪಾವತಿಯೇ ನಮಗೆ ಹೊರೆಯಾಗಿದೆ. ಆದ್ರೂ ಅಡ್ಜೆಸ್ಟ್ ಮಾಡಿ ಹಣ ಎಲ್ಲ ಕಾರ್ಯಕ್ರಮಗಳಿಗೆ ಹೊಂದಿಸಿದ್ದೇವೆ. ಗ್ಯಾರಂಟಿ ಯೋಜನೆಗೆ 56 ಸಾವಿರ ಕೋಟಿ ವಾರ್ಷಿಕವಾಗಿ ಬೇಕು. ಎಲ್ಲ ಜಾತಿ ಮತ್ತು ಧರ್ಮದ ಜನರಿಗೆ ಕಾರ್ಯಕ್ರಮ ತಂದಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಕೋರ್ಟ್ ಕಲಾಪಕ್ಕೂ ತಟ್ಟಿದ ವಿದ್ಯುತ್ ಲೋಡ್ ಶೆಡ್ಡಿಂಗ್ ಎಫೆಕ್ಟ್: ಮೊಬೈಲ್ ಟಾರ್ಚ್‌ನಲ್ಲಿಯೇ ನಡೆದ ಕಲಾಪ
ಈ ಸಮಾರಂಭದಲ್ಲಿ ಚಿತ್ರಕಲಾ ಪರಿಷತ್ ಅಧ್ಯಕ್ಷರಾದ ಡಾ.ಬಿ.ಎಲ್.ಶಂಕರ್, ಸಮಾಜವಾದಿ ಚಿಂತಕ ನಟರಾಜ್ ಹುಳಿಯಾರ್, ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಮ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಡಾ.ಎಂ.ಪಿ.ನಾಡಗೌಡ, ಮೋಹನ ಕೊಂಡಜ್ಜಿ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ.ವಸುಂಧರಾ ಭೂಪತಿ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ