ಅಮ್ಮಾ ತಾಯಿ ನಿರ್ಮಲ ಸೀತಾರಾಮನ್ ಘೋಷಿಸಿದ ಹಣ ಕೊಡಿ, 100 ಕೋಟಿ ನಮಸ್ಕಾರ ಮಾಡ್ತೀನಿ: ಸಿಎಂ ಸಿದ್ದರಾಮಯ್ಯ ಮನವಿ

By Sathish Kumar KHFirst Published Feb 21, 2024, 1:25 PM IST
Highlights

ಅಮ್ಮಾ ತಾಯಿ ನಿರ್ಮಲ ಸೀತಾರಾಮನ್ ಘೋಷಣೆ ಮಾಡಿರುವ ಹಣ ಕೊಡಿ. ನಿಮಗೆ ಕನ್ನಡಿಗರ ಪರವಾಗಿ 100 ಕೋಟಿ ನಮಸ್ಕಾರ ಮಾಡ್ತೀನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನ ಪರಿಷತ್ (ಫೆ.21): ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಮಂಡಿಸಿದ ಹಣವನ್ನು ಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮನವಿ ಮಾಡಿದರೂ ಕೊಡ್ತಿಲ್ಲ. ಅಮ್ಮಾ ತಾಯಿ ನಿರ್ಮಲ ಸೀತಾರಾಮನ್ ಘೋಷಣೆ ಮಾಡಿರುವ ಹಣ ಕೊಡಿ ಎಂದು ಎಲ್ಲರೂ ಒಟ್ಟಿಗೆ ಕೇಳೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾವು ಪ್ರಧಾನಿಯವರನ್ನ ಭೇಟಿ ಮಾಡಿದ್ದೇನೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನ ಭೇಟಿ ಮಾಡಿ ಕೇಳಿದ್ದೆವು, ಬಜೆಟ್ ನಲ್ಲಿ ಘೋಷಣೆ ಮಾಡಿದ್ದೀರಿ, ಹಣ ಕೊಡಿ ಎಂದು ಕೇಳಿದ್ದೆ, ಆದರೆ ಕೊಟ್ಟಿಲ್ಲ. ಇನ್ನು ಬಿಜೆಪಿಯವರು ಸರಿಯಾದ ಫಾರ್ಮೆಟ್ ನಲ್ಲಿ ಕೇಳಿಲ್ಲ ಅಂತಾರೆ. ಆಯ್ತು.. ಬಿಜೆಪಿಯವರ ನೇತೃತ್ವದಲ್ಲಿಯೇ ಜಣವನ್ನು ಕೇಳಲು ಹೋಗೋಣ. ಪ್ರಧಾನಿಯವರ ಬಳಿ, ಹಣಕಾಸು ಸಚಿವರ ಬಳಿ ಹೋಗೋಣ, ಯಾವ ಫಾರ್ಮೆಟ್ ನಲ್ಲಿ ಕೇಳ್ತಿರೊ ಕೇಳಿ. ಎಲ್ಲರೂ ಸೇರಿ ಅಮ್ಮಾ ತಾಯಿ ನಿರ್ಮಲ ಸೀತಾರಾಮನ್ ಘೋಷಿಸಿದ ಹಣ ಕೊಡಿ ಎಂದು ಕೇಳೋಣ. ನೀವು ಹಣವನ್ನು ಕೊಟ್ಟರೆ ನಿಮಗೆ 100 ಕೋಟಿ ನಮಸ್ಕಾರ ಮಾಡುತ್ತೇನೆ ಎಂದು ಹೇಳಿದರು.

ಖಾಸಗಿ ಶಾಲೆಗಳಲ್ಲಿ ಕುವೆಂಪು ನಾಡಗೀತೆ ಕಡ್ಡಾಯವಲ್ಲ: ಸರ್ಕಾರದ ಆದೇಶ!

15ನೇ ಹಣಕಾಸು ಯೋಜನೆಯ 11 ಸಾವಿರ ಕೋಟಿ ರೂ. ಹಣ ಹಾಗೂ ಭದ್ರ ಮೇಲ್ದಂಡೆ ಯೋಜನೆಯ 5,300 ಕೋಟಿ ರೂ. ಘೋಷಣೆ ಹಣ ಕೊಡಿಸಿ. ಆ ಹಣವನ್ನು ನೀವು ಕೊಡಿಸಿದರೆ ನಿಮಗೆ ನೂರು ಕೋಟಿ ನಮಸ್ಕಾರ ಹಾಕ್ತೀವಿ. ಬೆಂಗಳೂರಿನ ಫೆರಿಫೆರಲ್ ರಿಂಗ್ ರೋಡ್‌ ನಿರ್ಮಾಣಕ್ಕೆ 6,000 ಕೋಟಿ ರೂ. ಕೊಡಿ. ಸರಿಯಾದ ಫಾರ್ಮ್ಯಾಟ್‌ನಲ್ಲಿ ಹಣ ಕೇಳಿಲ್ಲ ಅಂತಾರಲ್ಲ, ನಿಮ್ಮ ಲೀಡರ್ ಶಿಪ್ ನಲ್ಲೇ ಹೋಗೋಣ ನಡೀರಿ. ರಾಜ್ಯದ ಅನುದಾನ ಕೊಡಿಸಿದರೆ ಕನ್ನಡಿಗರ ಪರವಾಗಿ 100 ಕೋಟಿ ನಮಸ್ಕಾರ ಹಾಕ್ತೀನಿ ಎಂದು ಬೇಡಿಕೊಂಡರು.

ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೆ ಸಿದ್ಧತೆ ಆರಂಭಿಸಿದ ಚುನಾವಣಾ ಆಯೋಗ!

ಸಿಎಂ ಸಿದ್ದರಾಮಯ್ಯ ಉತ್ತರಕ್ಕೆ ಬಿಜೆಪಿ ಸದಸ್ಯ ರವಿಕುಮಾರ್ ಗರಂ: ರಾಜ್ಯಪಾಲರ ಭಾಷಣದಲ್ಲಿ ಬರೇ ಪ್ರಧಾನಿ ಹಾಗೂ ಕೇಂದ್ರ ಸರ್ಕಾರವನ್ನ ದೂಷಣೆ ಮಾಡೋದೆ ಆಗಿದೆ. ಶೇ.90 ಪರ್ಸೆಂಟ್ ಕೇಂದ್ರ ಸರ್ಕಾರವನ್ನ ಟೀಕಿಸೋದೆ ಆಗಿದೆ. ರಾಜ್ಯಪಾಲರ ಭಾಷಣದ ಮೇಲೆ ಏನೂ ಚರ್ಚೆ ಇಲ್ಲ. ಜಾಣರ ಮನೆಯಲ್ಲಿ ಇವರು ಹೇಳಿದ್ದನ್ನೆಲ್ಲಾ ಕೇಳಿಕೊಂಡು ಕೂರೋಕೆ ಬುದ್ದುಗಳಾ..? ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಕಿಡಿಕಾರಿದರು. ನಂತರ ಮತ್ತೊಬ್ಬ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಅವರು ಕೂಡ, ಸಿಎಂ ಸಿದ್ದರಾಮಯ್ಯ ಉತ್ತರಕ್ಕೆ ಕಿಡಿಕಾರಿದರು. ನಿಮ್ಮ ನೂರು ಕೋಟಿ ನಮಸ್ಕಾರ ಬೇಕಿಲ್ಲ. ಪ್ರಧಾನಿ, ರಾಷ್ಟ್ರಪತಿಯವರ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ ಎಂದು ಹೇಳಿದರು.

click me!