ಡಾ. ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ (ಲಿಡ್ಕರ್) ನಟ ಡಾಲಿ ಧನಂಜಯ ಅವರನ್ನು ಮೊಟ್ಟ ಮೊದಲ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ.
ಬೆಂಗಳೂರು (ಡಿ.06): ರಾಜ್ಯ ಸರ್ಕಾರದ ಅಧೀನದ ಉದ್ಯಮ ಡಾ. ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್)ಕ್ಕೆ ಡಾಲಿ ಧನಂಜಯ (Daaly Dhananjay) ಅವರು ಮೊಟ್ಟ ಮೊದಲ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ.
ರಾಜ್ಯದಲ್ಲಿ ಯಾವ ಸಿನಿಮಾ ಕುಟುಂಬದ ಹಿನ್ನೆಲೆ ಇಲ್ಲದೇ ಮಿಡಲ್ ಕ್ಲಾಸ್ ಫ್ಯಾಮಿಲಿಯಿಂದ ಬಂದು ಇಂದು ಕನ್ನಡದ ಟಾಪ್ ಸ್ಟಾರ್ಗಳ ಜೊತೆ ನಿಂತಿರೋ ಸ್ಟಾರ್. ಡಾಲಿಯದ್ದು ಯಾವಾಗ್ಲು ಒಂದೇ ನಿರ್ಧಾರ. ಅದು ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ ಅನ್ನೋದು. ಹೀಗಾಗಿ, ಧನಂಜಯ್ ಅವರನ್ನು ಸರ್ಕಾರ ಲಿಡ್ಕರ್‌ಗೆ ರಾಯಭಾರಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಅಂಬೇಡ್ಕರ್ ಮಹಾಪರಿ ನಿರ್ವಾಣ ದಿನದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಗೌರವ ನಮನ ಸಲ್ಲಿಸಿ, ಖ್ಯಾತ ನಟ ಡಾಲಿ ಧನಂಜಯ್ ಅವರನ್ನು ಲಿಡ್ಕರ್ ಬ್ರ್ಯಾಂಡ್ ರಾಯಭಾರಿಯಾಗಿ ಘೋಷಣೆ ಮಾಡಿದರು.
Breaking: ಐಸಿಸ್ ಬೆಂಬಲಿಗನ ಜೊತೆ ವೇದಿಕೆ ಹಂಚಿಕೊಂಡ ಸಿಎಂ, ದಾಖಲೆ ಬಿಡುಗಡೆ ಮಾಡಿದ ಯತ್ನಾಳ್!
ರಾಯಭಾರಿಯಾಗಿ ಆಯ್ಕೆಯಾದ ಬಗ್ಗೆ ಮಾತನಾಡಿದ ನಟ ಧನಂಜಯ್ 'ನಾನು ಮೊದಲ ಬಾರಿಗೆ ಒಂದು ಸಂಸ್ಥೆಗೆ ರಾಯಭಾರಿ ಆಗುತ್ತಿದ್ದೇನೆ. ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕಿ ಕೆ.ಎಂ.ಎಸ್ ವಸುಂಧರಾ ಅವರು ರಾಜ್ಯದಲ್ಲಿ ಚರ್ಮೋದ್ಯಮ ನಂಬಿಕೊಂಡು 50 ಸಾವಿರ ಕುಟುಂಬಗಳಿವೆ. ನಮ್ಮ ನಾಡಿನಲ್ಲಿ ಕಲ್ಯಾಣಮ್ಮ ಮತ್ತು ಹರಳಯ್ಯರಂತಹ ಸಾವಿರಾರು ಜನ ಕುಶಲ ಕರ್ಮಿಗಳಿದ್ದಾರೆ. ನಮ್ಮದೇ ಆದ ಬ್ರ್ಯಾಂಡ್‌ಗೆ ನಾವು ಬೆಂಬಲಿಸಬೇಕು ಎನ್ನುವ ಉದ್ದೇಶದಿಂದಲೇ ಇದನ್ನು ಒಪ್ಪಿಕೊಂಡಿದ್ದೇನೆ. ಮೇಕ್ ಇನ್ ಇಂಡಿಯಾ ಹೇಗಿದೆಯೋ ಹಾಗೆ ʻಮೇಕ್ ಇನ್ ಕರ್ನಾಟಕʼ ಆಗಬೇಕು. ಲಿಡ್ಕರ್‌ಗೆ ಬೆಂಬಲಿಸುವುದರಿಂದ ಅದನ್ನೆ ನಂಬಿಕೊಂಡ ಕುಟುಂಬಗಳಿಗೆ ಸಹಾಯವಾಗಲಿದೆ. ರಾಜ್ಯದ ಮೈಸೂರ್ ಸಿಲ್ಕ್ ಹೇಗಿದಿಯೋ ಹಾಗೆ ನಮ್ಮದೂ ಒಂದು ಬ್ರ್ಯಾಂಡ್ ಇರಬೇಕು' ಎಂದು ತಿಳಿಸಿದರು.
ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ನಾಡಿನ ಖ್ಯಾತ ನಟ ಡಾಲಿ ಧನಂಜಯ ಅವರನ್ನು ಲಿಡ್ಕರ್ ರಾಯಭಾರಿಯಾಗಿ ಆಯ್ಕೆ ಮಾಡಿದ್ದೀವಿ. ಅವರು ಉಚಿತವಾಗಿ ರಾಯಭಾರಿ ಕೆಲಸ ಮಾಡುತ್ತಿದ್ದಾರೆ. ಇವರು ಸಾಮಾಜಿಕ ಕಳಕಳಿ ಹೊಂದಿರುವ ನಟನಾಗಿದ್ದು, ಅವರನ್ನು ರಾಯಭಾರಿಯನ್ನಾಗಿ ಮಾಡಿದ್ದು ಅರ್ಥಪೂರ್ಣವಾಗಿದೆ. ಇದರಿಂದ ಚರ್ಮ ಉದ್ಯಮಕ್ಕೆ ಉತ್ತೇಜನ ಆಗುತ್ತದೆ’ ಎಂದು ತಿಳಿಸಿದರು.
'ನಾನು ನಂದಿನಿ ತಿರುಪತಿಗೆ ಬರ್ತೀನಿ..' ಎಂದ ಕೆಎಂಎಫ್, ನೋ ವೇ ಚಾನ್ಸೇ ಇಲ್ಲ ಎಂದ ತಿಮ್ಮಪ್ಪ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಟ ಧನಂಜಯ ಅವರಿಗೆ ಲಿಡ್ಕರ್ ಸಂಸ್ಥೆಯಿಂದ ವಿಶೇಷವಾಗಿ ತಯಾರಿಸಿದ್ದ ಲಿಡ್ಕರ್ ಬ್ರ್ಯಾಂಡ್ ಚಪ್ಪಲಿಯನ್ನು ಉಡುಗೊರೆಯಾಗಿ ನೀಡಿದರು. ಡಾಲಿ ಧನಂಜಯ್ ಹೊಸ ಚಪ್ಪಲಿಯನ್ನು ಧರಿಸಿ ಅಲ್ಲಿನ ಕುಶಲಕರ್ಮಿಗಳ ಜತೆ ಮಾತನಾಡಿ ಖುಷಿಪಟ್ಟರು. ಇನ್ನು ಡಾಲಿ ಧನಂಜಯ್ ಕನ್ನಡದಲ್ಲಿ ಮೊದಲ ಸಾಲಿನಲ್ಲಿ ನಿಲ್ಲೋ ನಟ, ಖಳನಟ, ಲಿರಿಕ್ಸ್ ರೈಟರ್, ಕಮ್ ಪ್ರೊಡ್ಯೂಸರ್. ಹೊಸಬರಿಗೆ ಹಾಗು ಟ್ಯಾಲೆಂಟ್ಸ್ಗಳನ್ನ ಹೆಚ್ಚಾಗಿ ಮೆಚ್ಚಿಕೊಳ್ಳೋ ಧನಂಜಯ್ ತಮ್ಮ ನಿರ್ಮಾಣ ಸಂಸ್ಥೆಯಿಂದ ಹಲವು ಕಲಾವಿಧರಿಗೆ ತಂತ್ರಜ್ನರಿಗೆ ಕೆಲಸ ಕೊಟ್ಟು ಹರಸಿ ಬೆಳೆಸಿದ್ದಾರೆ. ಈಗ ಧನಂಜಯ್ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಚರ್ಮ ಕುಶಲಕರ್ಮಿಗಳ ಕುಟುಂಬಕ್ಕೆ ಸಾತ್ ಕೊಟ್ಟಿದ್ದಾರೆ.