Breaking: ಐಸಿಸ್‌ ಬೆಂಬಲಿಗನ ಜೊತೆ ವೇದಿಕೆ ಹಂಚಿಕೊಂಡ ಸಿಎಂ, ದಾಖಲೆ ಬಿಡುಗಡೆ ಮಾಡಿದ ಯತ್ನಾಳ್‌!

Published : Dec 06, 2023, 02:20 PM ISTUpdated : Dec 06, 2023, 02:39 PM IST
Breaking: ಐಸಿಸ್‌ ಬೆಂಬಲಿಗನ ಜೊತೆ ವೇದಿಕೆ ಹಂಚಿಕೊಂಡ ಸಿಎಂ, ದಾಖಲೆ ಬಿಡುಗಡೆ ಮಾಡಿದ ಯತ್ನಾಳ್‌!

ಸಾರಾಂಶ

ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಸಿಎಂ ಸಿದ್ಧರಾಮಯ್ಯ ಮುಸ್ಲಿಂ ಸಮಾವೇಶದಲ್ಲಿ ಐಸಿಸ್‌ ಬೆಂಬಲಿಗನೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಎಂದು ದೂರಿದ್ದರು. ಈ ಬಗ್ಗೆ ಯತ್ನಾಳ್‌ ಸೋಶಿಯಲ್‌ ಮೀಡಿಯಾದಲ್ಲಿ ದಾಖಲೆ ಬಿಡುಗಡೆ ಮಾಡಿದ್ದಾರೆ.  

ಬೆಂಗಳೂರು (ಡಿ.6): ಮುಸ್ಲಿಂ ಸಮಾವೇಶದ ವೇಳೆ ಸಿಎಂ ಸಿದ್ಧರಾಮಯ್ಯ ಐಸಿಸ್‌ ಬೆಂಬಲಿಗ ಹಾಗೂ ಭಯೋತ್ಪಾದಕರಿಗೆ ಕರುಣೆ ತೋರುವ ವ್ಯಕ್ತಯ ಜೊತೆ ವೇದಿಕೆ ಹಂಚಿಕೊಂಡಿದ್ದರು ಎಂದು ಆರೋಪಿಸಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ತಮ್ಮ ಮಾತಿಗೆ ದಾಖಲೆ ಎನ್ನುವಂತೆ ಕೆಲ ಚಿತ್ರಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಹುಬ್ಬಳ್ಳಿಯಲ್ಲಿ ಐಸಿಸ್ ಬೆಂಬಲಿಗ ಮತ್ತು ಭಯೋತ್ಪಾದಕ ಸಹಾನುಭೂತಿ ಹೊಂದಿರುವವರ ಜೊತೆ ವೇದಿಕೆ ಹಂಚಿಕೊಂಡಿದ್ದರು. ತನ್ವೀರ್ ಪೀರಾ ಭಯೋತ್ಪಾದಕರ ಪರ ಸಹಾನುಭೂತಿ ಹೊಂದಿರುವ ವ್ಯಕ್ತಿ. ಅವರು ಮಧ್ಯಪ್ರಾಚ್ಯದಾದ್ಯಂತ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಇಲ್ಲಿ ಹಂಚಿಕೊಂಡಿರುವ ಚಿತ್ರಗಳು ಭಯೋತ್ಪಾದಕ ಸಹಾನುಭೂತಿ ಮತ್ತು ರಾಡಿಕಲ್ ಇಸ್ಲಾಮಿಕ್ ಆಪರೇಟಿವ್‌ಗಳನ್ನು ಭೇಟಿಯಾದ ಮಧ್ಯಪ್ರಾಚ್ಯಕ್ಕೆ ಅವರ ಇತ್ತೀಚಿನ ಭೇಟಿಗಳಾಗಿವೆ' ಎಂದು ಯತ್ನಾಳ್‌ ಬರೆದುಕೊಂಡಿದ್ದು ಅದರ ವಿವರಗಳ ಚಿತ್ರವನ್ನು ಹಂಚಿಕೊಂಡಿದ್ದಾರೆ.

'ತನ್ವೀರ್ ಹಲವು ಬಾರಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಮುಖ್ಯಮಂತ್ರಿಗೆ ಈ ವ್ಯಕ್ತಿಯ  ಹಿನ್ನೆಲೆ ತಿಳಿದಿದೆಯೇ?. ತನ್ವೀರ್‌ನ ಎಲ್ಲಾ ವಿವರಗಳನ್ನು ನಾನು ಸೌದಿ ಮತ್ತು ಮಧ್ಯಪ್ರಾಚ್ಯಕ್ಕೆ ಬಹಿರಂಗಪಡಿಸುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿಯಲ್ಲಿ ಭಯೋತ್ಪಾದಕ ಪರ ಸಹಾನುಭೂತಿ ಮತ್ತು ಐಸಿಸ್ ಬೆಂಬಲಿಗನೊಂದಿಗೆ  ವೇದಿಕೆ ಹಂಚಿಕೊಂಡಿದ್ದಾರೆ ಎಂದು ನಾನು ಬೆಳಗ್ಗೆ ಹೇಳಿಕೆ ನೀಡಿದ್ದೆ. ನಾನು ಗುಪ್ತಚರ ಸಂಸ್ಥೆಗಳು ಹಾಗೂ ಎನ್‌ಐಎಗೆ ಒತ್ತಾಯ ಮಾಡುವುದೇನೆಂದರೆ, ತನ್ವೀರ್ ಪೀರ್‌ ಅವರ ಖಾತೆಗಳನ್ನು ಮತ್ತು ಅವರ ಇತ್ತೀಚಿನ ಮಧ್ಯಪ್ರಾಚ್ಯ ಭೇಟಿಗಳನ್ನು ತನಿಖೆ ಮಾಡುವಂತೆ ಆಗ್ರಹಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.

ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ: ಯತ್ನಾಳಗೆ ತಾಕತ್ತಿದ್ದರೆ ಬೇರೆಡೆ ಗೆಲ್ಲಲಿ, ಬಿರಾದಾರ

ಬುಧವಾರ ಬೆಳಗ್ಗೆ ಈ ಬಗ್ಗೆ ಮಾತನಾಡಿದ್ದ ಯತ್ನಾಳ್‌ ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದ್ದರು. ಹುಬ್ಬಳ್ಳಿಯಲ್ಲಿ ಮುಸ್ಲಿಂ ಸಮಾವೇಶದಲ್ಲಿ ಐಸಿಸಿ ಸಂಘಟನೆ ಸಂಪರ್ಕ ಇರುವವನು ಇದ್ದ. ಅವನು ಸಿಎಂ ಪಕ್ಕದಲ್ಲಿ ಕುಳಿತಿದ್ದ. ವೇದಿಕೆ ಮೇಲೆ ಐಸಿಸಿ ಸಂಘಟನೆ ಇರುವವನು ಇದ್ದ. ಆ ಬಗ್ಗೆ ಅವರಿಗೆ ಮಾಹಿತಿ ಇರಲಿಲ್ವಾ..? ಎಲ್ಲ‌ ಮಾಹಿತಿ ಪಡೆದೇ ನಾನು ಗಂಭೀರವಾಗಿಯೇ ಹೇಳುತ್ತಿದ್ದೇನೆ. ಹುಡುಗಾಟಿಕೆಗೆ ನಾನು ಹೇಳಿಕೆ ನೀಡುತ್ತಿಲ್ಲ. ಬೇಕಾದ್ರೆ ಮಾಹಿತಿ ತರಿಸಿಕೊಳ್ಳಲಿ ಸಿಎಂ ಕಾರ್ಯಕ್ರಮ ಇದ್ದಲ್ಲಿ, ಯಾರೆಲ್ಲಾ ವೇದಿಕೆ ಮೇಲೆ ಇರಬೇಕು ಎಂದು  ಮಾಹಿತಿ ಇರುತ್ತದೆ.  ಈ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಇರ್ತಾರೆ ಎಂದು ಮಾಹಿತಿ ಇರಲಿಲ್ವಾ..? ನಾನೇ ಇನ್ನೊಂದು ವಾರದಲ್ಲೇ ಎಲ್ಲ ಮಾಹಿತಿ ಹೇಳ್ತೀನಿ ಎಂದು ತಿಳಿಸಿದ್ದರು.

ಯತ್ನಾಳ್‌ಗೆ ರಾಷ್ಟ್ರೀಯ ನಾಯಕರು ಉತ್ತರಿಸ್ತಾರೆ: ವಿಜಯೇಂದ್ರ

ಕಾಂಗ್ರೆಸ್‌ ವಿತ್‌ ಟೆರರಿಸ್ಟ್ಸ್‌ ಎನ್ನುವ ಹ್ಯಾಶ್‌ಟ್ಯಾಗ್‌ನಲ್ಲಿ ತನ್ವೀರ್‌ ಪೀರ್‌ ಸಿಎಂ ಸಿದ್ಧರಾಮಯ್ಯ, ಸಚಿವ ಜಮೀರ್‌ ಅಹಮದ್‌ ಅವರ ಜೊತೆಗಿರುವ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತನ್ವೀರ್‌ ಪೀರ್‌ ವಿಜಯಪುರ ಮೂಲದ ಮೌಲ್ವಿಯಾಗಿದ್ದು, ಉಗ್ರರ ಪರ ಅನುಕಂಪ ಹೊಂದಿರುವ ವ್ಯಕ್ತಿ ಎಂದು ಯತ್ನಾಳ್‌ ಹೇಳಿದ್ದಾರೆ.

'ಈ ಭಯೋತ್ಪಾದಕ ಬೆಂಬಲಿಗೆ ಹಿಂದೆಯೂ ಹಲವಾರು ಬಾರಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದ. ಕೆಲವೇ ದಿನಗಳಲ್ಲಿ ತನ್ವಿರ್ ಪೀರಾ ಎಂಬ ಭಯೋತ್ಪಾದಕ ಬೆಂಬಲಿಗನ ಇನ್ನಷ್ಟು ವಿವರಗಳನ್ನು ಬಹಿರಂಗಗೊಳಿಸುತ್ತೇನೆ.  ಈತ ಮಧ್ಯಪ್ರಾಚ್ಯ ದೇಶಗಳಿಂದ ಹಣವನ್ನು ಭಾರತಕ್ಕೆ ತರುವ ಹಾಗೂ ಭಾರತದ ಚಟುವಟಿಕಗಳ ಮಾಹಿತಿಯನ್ನು ಅರಬ್ ದೇಶಗಳಿಗೆ ರವಾನಿಸುವ ಕೆಲಸ ಮಾಡುತ್ತಿದ್ದಾನೆ' ಎಂದು ಬರೆದಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: BBK 12 - ಕಿಚ್ಚ ಸುದೀಪ್‌ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ