ಕಬ್ಬು ಬೆಳೆಗಾರರ ಸಮಸ್ಯೆ ಚರ್ಚಿಸಲು ಕೊನೆಗೂ ಸಭೆ ಕರೆದ ಕುಮಾರಸ್ವಾಮಿ

By Web DeskFirst Published Nov 19, 2018, 3:25 PM IST
Highlights

ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ದಿಢೀರ್ ಸಭೆ ಕರೆದಿದ್ದಾರೆ. ಯಾವಾಗಾ ಸಭೆ? ಸಭೆಯಲ್ಲಿ ಯಾರೆಲ್ಲ ಇರಲಿದ್ದಾರೆ? ಇಲ್ಲಿದೆ ಡೆಟೇಲ್ಸ್.

ಬೆಂಗಳೂರು,[ನ.19]:  ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಹೇಳಿಕೆ ವಿರುದ್ಧ  ಇಂದು [ಸೋಮವಾರ] ಬೆಂಗಳೂರಿನಲ್ಲಿ ರೈತರು ದಂಗೆ ಎದ್ದು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. 

ಬೆಳಗಾವಿ ಜಿಲ್ಲೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದವರೆಲ್ಲ ರೈತರಲ್ಲ, ಅವರೆಲ್ಲ ಗೂಂಡಗಳು ಎಂದು ವಿವದಾತ್ನಕ ಹೇಳಿಕೆ ನೀಡಿದ್ದು, ಇದ್ರಿಂದ ಆಕ್ರೋಶಗೊಂಡ ವಿವಿಧ ಜಿಲ್ಲೆಗಳ ರೈತರು ಕೋಡಲೇ ಸಿಎಂ ಕ್ಷಮೆ ಕೇಳಬೇಕೆಂದು ಇಂದು ರಾಜ್ಯ ರಾಜಧಾನಿ ಬೆಂಗಳೂರಿನತ್ತ ಆಗಮಿಸಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
 
ಮತ್ತೊಂದೆಡೆ ಸಿಎಂ ಕುಮಾರಸ್ವಾಮಿ ಮಾತ್ರ ತನಗೂ ಇದಕ್ಕೂ ಸಂಬಂಧವೇ ಇಲ್ಲವೇನೋ ಎನ್ನುವ ರೀತಿಯಲ್ಲಿ ಮೊಂಡಾಟ ಮಾಡುತ್ತಿದ್ದು, ಕ್ಷಮೆ ಕೇಳಲು ಹಿಂಜರಿದಿದ್ದು, ರೈತರ ಸಮಸ್ಯೆ ಪರಿಹರಿಸಲು ಸಭೆ ಕರೆದಿದ್ದಾರೆ.

ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಚರ್ಚಿಸಲು ನವೆಂಬರ್20 ರಂದು ಮಧ್ಯಾಹ್ನ 3.00 ಗಂಟೆಗೆ ರೈತ ಮುಖಂಡರು, ಸಕ್ಕರೆ ಕಾರ್ಖಾನೆ ಮಾಲೀಕರು, ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.

ಬೆಳಗಾವಿ ಮತ್ತು ಬಾಗಲಕೋಟೆ ಎರಡು ಜಿಲ್ಲೆಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಈ ಸಭೆ ಏರ್ಪಡಿಸಲಾಗಿದೆ.

ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಚಿವರ ಉಪಸ್ಥಿತಿಯ ಅಗತ್ಯವಿರುವ ಹಿನ್ನೆಲೆಯಲ್ಲಿ ಸಭೆಯನ್ನು ಬೆಂಗಳೂರಿನಲ್ಲಿ ಏರ್ಪಡಿಸಲಾಗಿದೆ  ಈ ಸಭೆಯ ಕುರಿತು ರೈತ ಮುಖಂಡರಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಈಗಾಗಲೇ  ಸೂಚನೆ ನೀಡಲಾಗಿದೆ.

click me!