ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಪುಟ್ಟಣಯ್ಯ ಪತ್ನಿ ಸುನಿತಾ

By Web DeskFirst Published Nov 19, 2018, 1:10 PM IST
Highlights

ದಿವಂಗತ ರೈತ ನಾಯಕ ಕೆ. ಎಸ್. ಪುಟ್ಟಣಯ್ಯರ ಪತ್ನಿ ಸುನೀತಾ ಸರ್ಕಾರದ ವಿರುದ್ಧ ಕಿಡಿ ಕಾರಿದ್ದು 'ಸಕ್ಕರೆ ಕಾರ್ಖಾನೆಗಳು ರೈತರ ಬಾಕಿ‌ ಪಾವತಿ ಮಾಡದಿರರುವುದು ಖಂಡನೀಯ, ಕೂಡಲೇ ಬಾಕಿ ಪಾವತಿಸಲಿ' ಎಂದಿದ್ದಾರೆ.

ಕಬ್ಬು ಬೆಳೆಗಾರರು ಸರ್ಕಾರದ ವಿರುದ್ಧ ನಡೆಸುತ್ತಿರುವ ಹೋರಾಟದ ಕುರಿತಾಗಿ ದಿವಂಗತ ರೈತ ನಾಯಕ ಕೆ. ಎಸ್. ಪುಟ್ಟಣಯ್ಯರ ಪತ್ನಿ ಸುನೀತಾರವರು ಪ್ರತಿಕ್ರಿಯಿಸಿದ್ದು 'ಸಕ್ಕರೆ ಕಾರ್ಖಾನೆಗಳು ರೈತರ ಬಾಕಿ‌ ಪಾವತಿ ಮಾಡದಿರರುವುದು ಖಂಡನೀಯ, ಕೂಡಲೇ ಬಾಕಿ ಪಾವತಿಸಲಿ' ಎಂದಿದ್ದಾರೆ..

ರೈತ ಮಹಿಳೆಯ ಕುರಿತಾಗಿ ಸಿಎಂ ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಸದ್ಯ ರಾಜ್ಯಾಜ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಕುರಿತಾಗಿಯೂ ಸುನೀತಾ ಪುಟ್ಟಣ್ಣಯ್ಯ ಪ್ರತಿಕ್ರಿಯಿಸಿದ್ದಾರೆ. 'ಮುಖ್ಯಮಂತ್ರಿಗಳು ರೈತ ಮಹಿಳೆ ಬಗ್ಗೆ ಅಗೌರವವಾಗಿ ಮಾತಾಡಿದ್ದಾರೆ. ಇದಕ್ಕೆ‌ ನಮ್ಮೆಲ್ಲರ ವಿರೋಧ ಇದೆ. ಒಬ್ಬ ಮಹಿಳೆಗೆ ಸಿಎಂ ಹೀಗೆ ಮಾತಾಡಿದ್ದು ತಪ್ಪು. ಚುನಾವಣೆ ವೇಳೆ ಜೊತೆ ಇದ್ದೇವೆ ಎಂದವರು ಈಗ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಮಣ್ಣಿನ‌ ಮಕ್ಕಳು ಅಂತ ಹೇಳುವವರು ಹೀಗೆ ವರ್ತಿಸುತ್ತಿದ್ದಾರೆ. ಪ್ರದಾನಿ ಹುದ್ದೆಯಲ್ಲಿದ್ದ ದೇವೇಗೌಡರು ಹೀಗೆ ಮಾತಾಡಬಾರದಿತ್ತು ಮಗನ ಪರ ಮತನಾಡಿದ್ದು ಸರಿಯಲ್ಲ. ಒಬ್ಬ ಮಹಿಳೆ ಬಗ್ಗೆ ಅವರ ಮಗ‌ ಮಾತಾಡಿದ್ದು ಅವರಿಗೆ ತಪ್ಪೆನಿಸಲಿಲ್ಲವಾ?' ಎಂದು ಪ್ರಶ್ನಿಸಿದ್ದಾರೆ. 

 'ಇದು ಕುಟುಂಬ ರಾಜಕಾರಣ. ನಾವೆಲ್ಲ ಇವತ್ತು ಪ್ರತಿಭಟನೆ ಮಾಡುತ್ತೇವೆ. ಸರಕಾರ ರೈತರ ಬೇಡಿಕೆಗಳನ್ನು ಈಡೇರಿಸಲೇಬೇಕು. ರೈತರು ಆಸ್ತಿ ಕೇಳುತ್ತಿಲ್ಲ. ತಮ್ಮ ಬದುಕಿಗೆ ಸೂಕ್ತ ಬೆಲೆ ಕೇಳ್ತಿದ್ದಾರೆ ಅಷ್ಟೇ. ಸರಕಾರ ನುಣುಚಿಕೊಳ್ಳದೇ ಜವಾಬ್ದಾರಿಯಿಂದ ರೈತರ ಸಮಸ್ಯೆಗೆ ಸ್ಪಂದಿಸಲಿ. ನಾವೆಲ್ಲ ವಿಧಾನ ಸೌಧ ಮುತ್ತಿಗೆ ಹಾಕ್ತೇವೆ. ಸರಕಾರ ಏನ್ ಮಾಡುತ್ತೋ ನೋಡೋಣ' ಎನ್ನುವ ಮೂಲಕ ಎಚ್ಚರಿಕೆ ನೀಡಿದ್ದಾರೆ' ಎಂದಿದ್ದಾರೆ

click me!