'ನಾನೇಕೆ ರೈತರ ಕ್ಷಮೆ ಕೇಳಲಿ, ಇವನ್ನೆಲ್ಲ ಅರಗಿಸಿಕೊಳ್ಳೊದು ಗೊತ್ತು': ಸಿಎಂ ಮೊಂಡಾಟ

By Web DeskFirst Published Nov 19, 2018, 2:31 PM IST
Highlights

ರೈತರ ಕ್ಷಮೆ ಕೇಳುವುದರಿಂದ ಗೊಂದಲ ಪರಿಹಾರವಾಗಲಿದೆ ಅನ್ನೋದು ಕಾಂಗ್ರೆಸ್ ಅಭಿಪ್ರಾಯವಾಗಿದ್ದು, ಇದ್ರಿಂದಸಿಎಂ ಕುಮಾರಸ್ವಾಮಿ ಮನವೊಲಿಕೆಗೆ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. 

ಬೆಂಗಳೂರು,[ನ.19]: ಇತ್ತ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ವಿರುದ್ಧ ರೈತರು ದಂಗೆ ಎದ್ದು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಅತ್ತ ಸಿಎಂ ಕುಮಾರಸ್ವಾಮಿ ಮಾತ್ರ ತನಗೂ ಇದಕ್ಕೂ ಸಂಬಂಧವೇ ಇಲ್ಲವೇನೋ ಎನ್ನುವ ರೀತಿಯಲ್ಲಿ ಮೊಂಡಾಟ ಮಾಡುತ್ತಿದ್ದಾರೆ. 

ವಿಧಾನಸೌಧದ ಗಾಂಧಿ‌ಪ್ರತಿಮೆ ಬಳಿ ನಡೆದ ಇಂದಿರಾಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಸಿಎಂ ಜೊತೆ ಕೂತಿದ್ದ ಸಚಿವ ಜಮೀರ್​ ಅಹ್ಮದ್​ ಖಾನ್​, ರೈತರ ಪ್ರತಿಭಟನೆ ದೊಡ್ಡದಾಗುತ್ತಿದೆ. ನಮ್ಮ ರೈತರೇ ಅಲ್ಲವೇ ಒಮ್ಮೆ ಕ್ಷಮೆ ಕೇಳಿಬಿಡಿ ಎಲ್ಲಾ ಸರಿ ಹೋಗುತ್ತೆ ಅಂತಾ ಸಿಎಂ ಕುಮಾರಸ್ವಾಮಿಗೆ ಸಲಹೆ ನೀಡಿದ್ದಾರೆ. 

'ಗಲಾಟೆ ಮಾಡುತ್ತಿರುವ ಕಬ್ಬು ಬೆಳೆಗಾರರು ರೈತರಲ್ಲ, ಅವ್ರು ಗೂಂಡಾಗಳು'

ಆದ್ರೆ, ಇದಕ್ಕೆ ಸಿಡಿಮಿಡಿಗೊಂಡ ಸಿಎಂ ಕುಮಾರಸ್ವಾಮಿ, ನಾನೇಕೆ ರೈತರ ಕ್ಷಮೆ ಕೇಳಲಿ? ಇವನ್ನೆಲ್ಲಾ ಅರಗಿಸಿಕೊಳ್ಳೋದು ನನಗೆ ಗೊತ್ತಿದೆ. ಪ್ಲೀಸ್ ನೀವು ಸಲಹೆ ಕೊಡಲು ಬರಬೇಡಿ ಎಂದು ವೇದಿಕೆ ಮೇಲೆಯೇ ಗರಂ ಆಗಿದ್ದಾರೆ.

ಸಿಎಂ ಕ್ಷಮೆ ಕೇಳದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಸಚಿವರು, ವಿನಾಕಾರಣ ಸಮಸ್ಯೆಯನ್ನು ಜಟಿಲಗೊಳಿಸುತ್ತಿರುವ ಸಿಎಂ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರೈತರ ಕ್ಷಮೆ ಕೇಳುವುದರಿಂದ ಗೊಂದಲ ಪರಿಹಾರವಾಗಲಿದೆ ಅನ್ನೋದು ಕಾಂಗ್ರೆಸ್ ಅಭಿಪ್ರಾಯವಾಗಿದ್ದು, ಇದ್ರಿಂದಸಿಎಂ ಕುಮಾರಸ್ವಾಮಿ ಮನವೊಲಿಕೆಗೆ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಆದ್ರೆ ಇದ್ಯಾವುದಕ್ಕೆ ಕ್ಯಾರೆ ಎನ್ನದ  ಕುಮಾರಸ್ವಾಮಿ ರೈತರ ಕ್ಷಮೆ ಕೇಳಲು ಕೇಳಲು ಮುಂದಾಗದೆ ಮೊಂಡಾಟ ಮಾಡುತ್ತಿದ್ದಾರೆ.

click me!