ಮೃತರ ಹೆಸರಲ್ಲಿ ಕೋಟಿ ಕೋಟಿ ಪಿಂಚಣಿ ಸಂದಾಯ

By Kannadaprabha News  |  First Published Jan 21, 2021, 8:36 AM IST

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆಯೊಂದನ್ನು ನೀಡಿದ್ದಾರೆ. ಮೃತರ ಹೆಸರಿನಲ್ಲಿ ಕೋಟಿ ಕೋಟಿ ಪಿಂಚಣಿ ಸಂದಾಯವಾಗುತ್ತಿರುವ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ. 


ಬೆಂಗಳೂರು (ಜ.21):  ಮೃತರ ಹೆಸರಿನಲ್ಲಿ ಪಿಂಚಣಿ ಹಾಗೂ ಪಡಿತರ ಪಡೆಯುತ್ತಿರುವುದನ್ನು ಒಂದು ತಿಂಗಳಲ್ಲಿ ತಡೆದು ಸೂಕ್ತ ಕ್ರಮವಹಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಡಿಸಿ, ಸಿಇಒಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ಮೃತರಿಗೆ ಪೆನ್ಷನ್‌ ಮತ್ತು ಪಡಿತರ ಹೋಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಒಂದು ತಿಂಗಳಲ್ಲಿ ಇದನ್ನು ತಡೆದು ಕ್ರಮ ವಹಿಸುವಂತೆ ಗಡುವು ವಿಧಿಸಿದರು. ಮೃತಪಟ್ಟವರ ಹೆಸರಲ್ಲೂ ವಿವಿಧ ಪಿಂಚಣಿಗಳ ದುರ್ಬಳಕೆ ಪ್ರಕರಣ ಪತ್ತೆಯಾಗಿರುವ ವಿಷಯ ತಿಳಿದು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

Tap to resize

Latest Videos

ಪಿಂಚಣಿದಾರರಿಗೆ ಸಂತಸದ ಸುದ್ದಿ..! ..

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಾಮಾಜಿಕ ಭದ್ರತಾ ಯೋಜನೆಯಡಿ ಮೃತಪಟ್ಟಫಲಾನುಭವಿಗಳಿಗೆ ಪಿಂಚಣಿ ಪಾವತಿಯಾಗುತ್ತಿದೆ ಮತ್ತು ಪಡಿತರ ವಿತರಣೆಯಾಗುತ್ತಿದೆ. ರಾಜ್ಯದಲ್ಲಿ 67 ಲಕ್ಷ ಜನರಿಗೆ ಪಿಂಚಣಿ ಹೋಗುತ್ತಿದ್ದು, ಪ್ರತಿವರ್ಷ ಏಳೂವರೆ ಸಾವಿರ ಕೋಟಿ ರು. ಖರ್ಚಾಗುತ್ತಿದೆ. 67 ಲಕ್ಷ ಜನರ ಪೈಕಿ ಶೇ.20ರಷ್ಟುಮಂದಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇದೆ. 

'ಪ್ರಧಾನಿ ನರೇಂದ್ರ ಮೋದಿ, ಬಿಎಸ್‌ವೈ ಮನೆಗೆ' ...

ಈ ಬಗ್ಗೆ ಒಂದು ತಿಂಗಳಲ್ಲಿ ಪರಿಶೀಲನೆ ನಡೆಸಿ ಮೃತರಿಗೆ ತಲುಪುತ್ತಿರುವ ಪಿಂಚಣಿ ತಡೆಯಬೇಕು ಎಂದು ನಿರ್ದೇಶನ ನೀಡಿದರು. ಮೃತರ ವ್ಯಕ್ತಿಗಳಿಗೆ ಪಾವತಿಯಾಗುತ್ತಿರುವ ಪಿಂಚಣಿ ನಿಲ್ಲಿಸಿದರೆ ಅಂದಾಜು 600 ಕೋಟಿ ರು. ಸರ್ಕಾರದ ಬೊಕ್ಕಸಕ್ಕೆ ಉಳಿತಾಯವಾಗಲಿದೆ ಎಂದು ಹೇಳಲಾಗಿದೆ.

click me!