ನೆರವು ನೀಡಲು ಟಿಕ್‌ಟಾಕ್‌ನಲ್ಲಿ ಸಿಎಂಗೆ ಮನವಿ| ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿ| ನೆರವು ನೀಡಿ ಮಾನವೀಯತೆ ಮೆರೆದ ಸಿಎಂ
ಬೆಂಗಳೂರು(ಏ.11): ನನ್ನ ತಾಯಿಗೆ ಅನಾರೋಗ್ಯವಿದ್ದು, ಲಾಕ್‌ಡೌನ್‌ನಿಂದಾಗಿ ಔಷಧಿ, ಮಾತ್ರೆ ಎಲ್ಲಿಯೂ ಸಿಗುತ್ತಿಲ್ಲ. ಹೀಗಾಗಿ ನನ್ನ ತಾಯಿಗೆ ಔಷಧಿ ತಲುಪಿಸಿ ಎಂದು ಯುವತಿಯೊಬ್ಬಳು ಟಿಕ್‌ಟಾಕ್‌ನಲ್ಲಿ ವಿಡಿಯೋ ಮಾಡಿ ಸಿಎಂಗೆ ಮನವಿ ಮಾಡಿದ್ದಳು. ಈ ವಿಡಿಯೋ ಸುವರ್ಣ ನ್ಯೂಸ್‌ನಲ್ಲಿ ಪ್ರಸಾರವಾಗಿ, ಅದು ಮುಖ್ಯಮಂತ್ರಿಗಳ ಗಮನಕ್ಕೂ ಬಂದು ಅನಾರೋಗ್ಯಕ್ಕೊಳಗಾದ ಮಹಿಳೆಗೆ ಔಷಧಿ ಹಾಗೂ ಮಾತ್ರೆಗಳು ದೊರೆತ ಘಟನೆ ಶುಕ್ರವಾರ ನಡೆದಿದೆ.
ಜಿಲ್ಲೆಯ ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದ ಪವಿತ್ರಾ ಟಿಕ್‌ಟಾಕ್ ಮೂಲಕ ಮನವಿ ಮಾಡಿಕೊಂಡ ಯುವತಿ. ಪವಿತ್ರಾಳ ತಾಯಿ ಶೇಖವ್ವ ಅರಭಾಂವಿ ಹಲವು ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಎಲ್ಲಿಯೂ ಔಷಧ ಸಿಕ್ಕಿರಲಿಲ್ಲ. ಹೀಗಾಗಿ ಪವಿತ್ರಾ ಕೊನೆಗೆ ಟಿಕ್‌ಟಾಕ್ ಮೂಲಕ ಸಿಎಂಗೆ ಮನವಿ ಮಾಡಿದ್ದಳು.
undefined
ಬ್ರಿಟನ್ ಫುಟ್ಬಾಲ್ ದಿಗ್ಗಜ ಹಂಟರ್‌ಗೆ ಕೊರೋನಾ ಸೋಂಕು ಪತ್ತೆ
ತಕ್ಷಣ ಮುಖ್ಯಮಂತ್ರಿಗಳ ಕಚೇರಿಯಿಂದ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಫೋನ್ ಬಂದಿದೆ. ಈ ವೇಳೆ ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದಲ್ಲಿರುವ ಶೇಖವ್ವಳಿಗೆ ಮಾತ್ರೆಗಳನ್ನು ಪೂರೈಸುವಂತೆ ತಿಳಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಬೆಳಗಾವಿ ತಹಸೀಲ್ದಾರ್ ಮೂಲಕ ಶೇಖವ್ವಳಿಗೆ ಔಷಧಿ ಪೂರೈಸಿದೆ.