IAS vs IPS Fight: ರೋಹಿಣಿ ಸಿಂಧೂರಿ, ಡಿ.ರೂಪಾ ಜಗಳದ ಮಾಹಿತಿ ಪಡೆದ ಸಿಎಂ ಬೊಮ್ಮಾಯಿ: ನೋಟಿಸ್‌ ಜಾರಿ ಸಾಧ್ಯತೆ

By Sathish Kumar KH  |  First Published Feb 20, 2023, 11:02 AM IST

ಐಪಿಎಸ್‌ ಅಧಿಕಾರಿ ಡಿ. ರೂಪಾ ಅವರು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಜಗಳದ ಮಾಹಿತಿಯನ್ನು ಪಡೆದುಕೊಂಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮುಖ್ಯ ಕಾರ್ಯದರ್ಶಿಯಿಂದ ನೋಟಿಸ್‌ ಜಾರೊಗೊಳಿಸುವ ಸಾಧ್ಯತೆ ಕಂಡುಬರುತ್ತಿದೆ.


ಬೆಂಗಳೂರು (ಫೆ.20): ಭಾನುವಾರ ರಜಾ ದಿನದ ವೇಳೆ ಐಪಿಎಸ್‌ ಅಧಿಕಾರಿ ಡಿ. ರೂಪಾ ಅವರು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಪರಸ್ಪರ ಕಿತ್ತಾಟ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲ ಮಾಹಿತಿಯನ್ನು ಪಡೆದುಕೊಂಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮುಖ್ಯ ಕಾರ್ಯದರ್ಶಿಯಿಂದ ನೋಟಿಸ್‌ ಜಾರೊಗೊಳಿಸುವ ಸಾಧ್ಯತೆ ಕಂಡುಬರುತ್ತಿದೆ.

ಡಿ. ರೂಪಾ ಮೌದ್ಗಿಲ್‌ ಮತ್ತು ರೋಹಿಣಿ ಸಿಂಧೂರಿ ಅವರು ಪ್ರಮುಖ ಹುದ್ದೆಗಳಲ್ಲಿದ್ದು ಬೀದಿ ರಂಪಾಟದ ಮಾಡಿಕೊಂಡಿರುವ ಬಗ್ಗೆ ಸಿಎಂ ಬೊಮ್ಮಾಯಿ ಅವರು ಪೂರ್ಣ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಇಬ್ಬರು ಅಧಿಕಾರಿಗಳು ಸಾಮಾಜಿಕ ಜಾಲತಾಣದ ಮೂಲಕ ಕಿತ್ತಾಟ ನಡೆಸಿದ್ದರು. ಈ ಬಗ್ಗೆ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು, ಸರ್ಕಾರಕ್ಕೆ ಮುಜುಗರ ಉಂಟಾಗುವುದನ್ನು ತಡೆಯುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ, ಕಾನೂನು ಚೌಕಟ್ಟಿನಲ್ಲಿ ಏನು ಕ್ರ‌ಮ ಕೃಗೊಳ್ಳಬೇಕು ಅದನ್ನ ತಗೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ, ಮುಖ್ಯ ಕಾರ್ಯದರ್ಶಿ (ಸಿಎಸ್) ಮೂಲಕ ಇಬ್ಬರು ಅಧಿಕಾರಿಗಳಿಗೆ ನೋಟಿಸ್ ನೀಡುವ ಸಾಧ್ಯತೆ ಕಂಡುಬರುತ್ತಿದೆ. ಬಹಿರಂಗ ಕಿತ್ತಾಟದ ಕಾರಣ ಕೇಳಿ ನೋಟಿಸ್ ನೀಡಲಿದ್ದು, ಈ ಮೂಲಕ ಇಬ್ಬರು ಅಧಿಕಾರಿಗಳ ಬಹಿರಂಗ ಕಿತ್ತಾಟಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. 

Tap to resize

Latest Videos

IAS vs IPS Fight:ಡಿಕೆ ರವಿ, ರೋಹಿಣಿ ಸಿಂಧೂರಿ ಪ್ರೇಮ ಸಲ್ಲಾಪ ಸಿಬಿಐ ವರದಿಯಲ್ಲಿದೆ: ಮತ್ತೆ ಕೆದಕಿದ ಡಿ ರೂಪಾ

ಬಹಳ ಕೆಟ್ಟದಾಗಿ ವರ್ತಿಸಿದ್ದಾರೆ: ಐಪಿಎಸ್‌ ಮತ್ತು ಐಎಎಸ್‌ ಅಧಿಕಾರಿಗಳ ಜಗಳದ ಬಗ್ಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಸಾಮಾನ್ಯ ಜನರು ಈ ರೀತಿ ಮಾತಡಲ್ಲ. ಬಹಳ ಕೆಟ್ಟದಾಗಿ ವರ್ತನೆ ಮಾಡ್ತಿದ್ದಾರೆ. ಜನರು ಐಎಎಸ್, ಐಪಿಎಸ್ ಅಧಿಕಾರಿಗಳನ್ನು ದೇವ ಮಾನವರು ಅಂದುಕೊಂಡಿದ್ದಾರೆ. ಆದರೆ ಇವರಿಂದ ಎಲ್ಲ ಅಧಿಕಾರಿಗಳಿಗೂ ಅಪಮಾನ ಆಗಿದೆ. ಈಗಾಗಲೇ ಡಿಜಿ ಹಾಗೂ ಸಿಎಸ್ ಜೊತೆಗೂ ಮಾತಾಡಿದ್ದೇನೆ. ಇದೆಲ್ಲವೂ ಅವರ ವ್ಯೆಯಕ್ತಿವಾಗಿ ಏನೇನೋ ಮಾತಾಡ್ತಾ ಇದ್ದಾರೆ. ವರಿಂದ ನನಗೂ ತುಂಬಾ ನೋವು ಆಗಿದೆ ಎಂದು ಹೇಳಿದರು.

ಈ ಜಗಳವನ್ನು ನಿಜಕ್ಕೂ ಸಹಿಸಲಾಗಲ್ಲ: ಕಾನೂನು ಚೌಕಟ್ಟಿನೊಳಗೆ ಏನು ಕ್ರಮ ತಗೊಬೇಕೋ ಅದನ್ನು ಮುಖ್ಯಮಂತ್ರಿ ತೆಗೆದುಕೊಳ್ಳುತ್ತಾರೆ. ಇಂತಹ ಅಧಿಕಾರಿಗಳ ವರ್ತನೆಯನ್ನು ನಿಜಕ್ಕೂ ಸಹಿಸೋಕೆ ಸಾಧ್ಯ ಇಲ್ಲ. ಇವರದ್ದು ಪರ್ಸನಲ್ ಏನಾದರೂ ಇರಬಹುದು. ಆದರೆ ವ್ಯೆಯಕ್ತಿವಾಗಿ ಕಾರಣದಿಂದ ಬೀದಿ ರಂಪಾಟ ಸರಿಯಲ್ಲ. ಡಿ ರೂಪಾ ಹಾಗೂ ರೋಹಿಣಿ ಸಿಂಧೂರಿ ವಿರುದ್ದ ಸಚಿವ ಆರಗ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

IAS vs IPS Fight: ಈ ಪಿಕ್ಸ್ ಕೇವಲ ಸ್ಯಾಂಪಲ್ ಅಷ್ಟೆ: ಆಕೆ ಬಿಹೇವಿಯರ್‌ ಸರಿಯಿಲ್ಲ..! ಎಂದ ಡಿ ರೂಪಾ

ಮಾಟ ಮಂತ್ರದ ಮಡಿಕೆ: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ ಸುರ್ಜೇವಾಲ ಮಾತನಾಡಿ, IAS ಮತ್ತು IPS ಅಧಿಕಾರಗಳು ಮಾತ್ರವಲ್ಲ ಬಿಜೆಪಿಯವರೇ ಕಿತ್ತಾಡುತ್ತಿದ್ದಾರೆ. ಒಬ್ಬರಿಗೊಬ್ಬರು ಹೊಡೆದಾಟಿಕೊಳ್ಳುತ್ತಿದ್ದಾರೆ. ಸಿಎಂ ಮಂಡಿಸಿದ ಬಜೆಟ್ ಕೆಲವರಿಗೆ ಬೇಸರವಿದೆ. ಸಿಎಂ ಮೇಲೆ ಕೆಲವರು ಮುಗಿಬಿದ್ದಿದ್ದಾರೆ. ಬಿಜೆಪಿ ಮಾಟಮಂತ್ರದ ಮಡಕೆ ಒಡೆದು ಹೋಗುತ್ತದೆ ಎಂದು ಹೇಳಿದ್ದಾರೆ.

click me!