ನಮ್ಮದು ಜನಪರ ಬಜೆಟ್‌: ಸಿಎಂ ಬೊಮ್ಮಾಯಿ

Published : Feb 20, 2023, 05:00 AM IST
ನಮ್ಮದು ಜನಪರ ಬಜೆಟ್‌: ಸಿಎಂ ಬೊಮ್ಮಾಯಿ

ಸಾರಾಂಶ

ಜನಪರವಾದ ಹಾಗೂ ದುಡಿಯುವ ವರ್ಗದ ಕೈಬಲಪಡಿಸುವ ಬಜೆಟ್‌ ಇದಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ರೈತರಿಗಾಗಿ ಕಾರ್ಯಕ್ರಮಗಳನ್ನು ನೀಡಲಾಗಿದೆ. ಸಾಲದ ವಿಸ್ತರಣೆ, ರೈತರಿಗೆ ಪ್ರಥಮ ಬಾರಿ ಜೀವನಜ್ಯೋತಿ ಜೀವ ವಿಮೆಗೆ .10 ಕೋಟಿ ರು.ಗಳ ಕಂತನ್ನು ಸರ್ಕಾರವೇ ನೀಡಲಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

ಶಿಗ್ಗಾಂವಿ(ಫೆ.20): ಕಳೆದ ಬಾರಿಯ ಆಯವ್ಯಯ ಅನುಷ್ಠಾನಕ್ಕೆ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚಿಸಿದ್ದೇವು. ಇದರಿಂದ ಶೇ.90ರಷ್ಟುಆದೇಶಗಳನ್ನು ಹೊರಡಿಸಲಾಗಿದೆ. ಅದೇ ರೀತಿ ಈ ಬಾರಿಯೂ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಅನುಷ್ಠಾನ ಸಮಿತಿ ರಚಿಸಿ ಬಜೆಟ್‌ನ ಘೋಷಣೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಜನಪರವಾದ ಹಾಗೂ ದುಡಿಯುವ ವರ್ಗದ ಕೈಬಲಪಡಿಸುವ ಬಜೆಟ್‌ ಇದಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ರೈತರಿಗಾಗಿ ಕಾರ್ಯಕ್ರಮಗಳನ್ನು ನೀಡಲಾಗಿದೆ. ಸಾಲದ ವಿಸ್ತರಣೆ, ರೈತರಿಗೆ ಪ್ರಥಮ ಬಾರಿ ಜೀವನಜ್ಯೋತಿ ಜೀವ ವಿಮೆಗೆ .10 ಕೋಟಿ ರು.ಗಳ ಕಂತನ್ನು ಸರ್ಕಾರವೇ ನೀಡಲಿದೆ. ಯಶಸ್ವಿನಿ ಯೋಜನೆ ಮರುಪ್ರಾರಂಭ, ಬೆಲೆ ಕುಸಿತವಾದಾಗ ರೈತರಿಗೆ ಅನುಕೂಲವಾಗಲು ಆವರ್ತ ನಿಧಿ, ಸಿರಿಧಾನ್ಯಗಳ ವರ್ಷಕ್ಕಾಗಿ ಹೆಕ್ಟೇರ್‌ಗೆ .10 ಸಾವಿರ ಪ್ರೋತ್ಸಾಹಧನ ನೀಡಲಾಗಿದೆ. ಪಿಯುಸಿ, ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯ್ತಿ, ಶಾಲಾ ವಿದ್ಯಾರ್ಥಿಗಳಿಗೆ ಬಸ್‌ ವ್ಯವಸ್ಥೆ, ಹೆಣ್ಣುಮಕ್ಕಳಿಗೆ ಉಚಿತ ಬಸ್‌ಪಾಸ್‌, ಯುವಕರಿಗೆ ತರಬೇತಿ ನೀಡುವ ಕಾರ್ಯಕ್ರಮಗಳು ದೂರದೃಷ್ಟಿಯ ಕಾರ್ಯಕ್ರಮಗಳಾಗಿವೆ. ತಳಹಂತದ, ಅವಕಾಶ ವಂಚಿತರ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ ಸರ್ಕಾರದ ಕಾರ್ಯಕ್ರಮಗಳ ಮೂಲಕ ನೆರವು ನೀಡಲಾಗುತ್ತಿದೆ ಎಂದರು.

Karnataka Budget 2023: ತವರು ಜಿಲ್ಲೆಗೆ ಬಜೆಟ್‌ನಲ್ಲಿ ಸಿಎಂ ಭರಪೂರ ಕೊಡುಗೆ

ಬಳಿಕ, ಶಿವಾಜಿ ಮಹಾರಾಜರ 396ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಶಿವಾಜಿ ಮಹಾರಾಜರು ಭಾರತದ ಚರಿತ್ರೆಯನ್ನು ಬದಲಾಯಿಸಿದ ಯುಗ ಪುರುಷ. ಅವರು ನಮ್ಮ ಸಂಸ್ಕೃತಿ, ಪರಂಪರೆಯನ್ನು ಮರುಸ್ಥಾಪಿಸಿದರು ಎಂದರು.

ಭಾರತವನ್ನು ಗುಲಾಮಗಿರಿಗೆ ಒಡ್ಡುವ ಸಂದರ್ಭದಲ್ಲಿ ಪ್ರಬಲ ತಡೆ ಒಡ್ಡಿ ನಮ್ಮ ಸಂಸ್ಕೃತಿ ಉಳಿಸಿ, ಮರುಸ್ಥಾಪಿಸಿದವರು ಶಿವಾಜಿ. ಮೊಘಲರ ಆಡಳಿತದ ದಿನಗಳ ಸಂದರ್ಭದಲ್ಲಿ ದಕ್ಷಿಣ ಭಾರತವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ತೈಮೂರನ ಷಡ್ಯಂತ್ರಕ್ಕೆ ಅನೇಕ ರಾಜ್ಯಗಳು ವಶವಾಗಿದ್ದವು. ಗುರು ಕೊಂಡೋಜಿ ಹಾಗೂ ತಾಯಿ ಜೀಜಾಬಾಯಿ ಅವರ ಪಾಠದಿಂದ ಧೈರ್ಯ, ಶೌರ್ಯ, ಆತ್ಮಬಲವನ್ನು ಜೋಡಿಸಿ ಶಿವಾಜಿ ಮಹಾರಾಜರು ಗೆರಿಲ್ಲಾ ಯುದ್ಧ ಕಲೆಯಿಂದ ವಿವಿಧ ಪ್ರಾಂತ್ಯಗಳನ್ನು ವಶಪಡಿಸಿಕೊಂಡರು. ಹಿಂದೂ ಸಮಾಜದ ಮೇಲೆ ನಡೆದ ದಾಳಿಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾದರು. ಅವರು ಚರಿತ್ರೆ ಮಾತ್ರ ಬದಲಾಯಿಸಲಿಲ್ಲ, ಹೊಸ ಚರಿತ್ರೆಯನ್ನು ರಚಿಸಿದರು ಎಂದು ಶ್ಲಾಘಿಸಿದರು.

ಕನ್ನಡಿಗರಿಗೇ ಅಗ್ರಸ್ಥಾನ :

ಕರ್ನಾಟಕದಲ್ಲಿ ಎಲ್ಲ ವರ್ಗ, ಭಾಷಿಕರು ಹಾಗೂ ಸಮುದಾಯಗಳನ್ನು ಸಮನಾಗಿ ನೋಡುವ ಪರಂಪರೆ ಮೊದಲಿನಿಂದಲೂ ಬಂದಿದೆ. ಆದರೆ, ಕನ್ನಡಿಗರಿಗೆ ಅಗ್ರಸ್ಥಾನ. ಕನ್ನಡದ ಮಣ್ಣಿನಲ್ಲಿ ಇರುವವರೆಲ್ಲರೂ ಕನ್ನಡಿಗರು. ಇದು ನಮ್ಮ ಧ್ಯೇಯ. ಮರಾಠಾ ಅಭಿವೃದ್ಧಿ ನಿಗಮದಿಂದ ರೂಪಿಸಿರುವ ಕಾರ್ಯಕ್ರಮಗಳು ತಾಲೂಕಿನ ಫಲಾನುಭವಿಗಳಿಗೆ ಮುಕ್ತವಾಗಿ ಮುಟ್ಟಬೇಕು. ಇವುಗಳನ್ನು ಅರ್ಹ ಫಲಾನುಭವಿಗಳಿಗೆ ಮುಟ್ಟಿಸುವ ಕೆಲಸ ಮಾಡಬೇಕು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದ್ವೇಷ ಭಾಷಣ ತಡೆಗೆ ಕಾನೂನು ಯತ್ನ: ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ
ದ್ವೇಷ ಭಾಷಣ ಶಾಸನ ಕಾಂಗ್ರೆಸ್ ಕ್ರೂರ ಸಂಪ್ರದಾಯದ ಪ್ರತಿಬಿಂಬ: ಪ್ರಲ್ಹಾದ್ ಜೋಶಿ ಕಿಡಿ