ಸ್ವಾತಂತ್ರ್ಯ ಬಂದ ಬಳಿಕ ಕಾಂಗ್ರೆಸ್ ಸರಿಯಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೆ ಭಾರತ ಭಿಕ್ಷುಕರ ರಾಷ್ಟ್ರವಾಗುತ್ತಿರಲಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದಾರೆ.
ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಫೆ.19): ಸ್ವಾತಂತ್ರ್ಯ ಬಂದ ಬಳಿಕ ಕಾಂಗ್ರೆಸ್ ಸರಿಯಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೆ ಭಾರತ ಭಿಕ್ಷುಕರ ರಾಷ್ಟ್ರವಾಗುತ್ತಿರಲಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದಾರೆ. 32 ಬಾರಿಯೂ ಕೊಡಗಿನ ಮೇಲೆ ದಂಡೆತ್ತಿ ಬಂದಿದ್ದ ಟಿಪ್ಪುವನ್ನು ಸೋಲಿಸಿ ಹಿಮ್ಮೆಟ್ಟಿಸಿದ್ದ ಕೊಡವರು ಎಂಥ ಶೂರರು. ಅವರ ವೇಷ ಭೂಷಣ ನೋಡುವಾಗ ನಾನ್ಯಾಕೆ ಕೊಡವನಾಗಿ ಹುಟ್ಟಬಾರದಿತ್ತು ಎಂದೆನಿಸಿದೆ ಎಂದು ಕೊಡವ ಸಂಸ್ಕೃತಿಯನ್ನು ಹಾಡಿ ಹೊಗಳುವ ಮೂಲಕ ಕೊಡವ ಮತಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಕೈಹಾಕುವ ಪ್ರಯತ್ನ ಮಾಡಿದರು. ಚುನಾವಣೆ ಹೊಸ್ತಿನಲ್ಲಿರುವ ಸಂದರ್ಭದಲ್ಲಿ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲದಲ್ಲಿ ನಡೆದ ಕೊಡವ 18 ಭಾಷಿಕ ಸಮುದಾಯಗಳ ಒತ್ತೋರ್ಮೆ ಕೂಟ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ನಳೀನ್ ಕುಮಾರ್ ಕಟೀಲು ಅವರು ಕೊಡವ ಮತಗಳ ಬುಟ್ಟಿಗೆ ಕೈಹಾಕಿದರು.
undefined
ಕೊಡವ ಭಾಷಿಕ ಸಮುದಾಯಗಳ ಸಮ್ಮೇಳನದಲ್ಲಿ ಕೊಡವ ಭಾಷೆಯಲ್ಲಿ ಭಾಷಣ ಆರಂಭಿಸಿದ ಕಟೀಲ್ ಕೊಡಗಿನಲ್ಲಿ ನಿರ್ಣಾಯಕ ಓಟ್ ಬ್ಯಾಂಕ್ ಆಗಿರುವ ಕೊಡವರನ್ನ ಸೆಳೆಯಲು ಮುಂದಾದ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಅವರು ಕೊಡಗು ಕಾಶ್ಮೀರಕ್ಕಿಂತ ಶ್ರೇಷ್ಠವಾದ ಭೂಮಿ ಎಂದು ಕೊಡಗು ಮತ್ತು ಕೊಡವರನ್ನ ಕಟೀಲು ಅವರು ಹೊಗಳಿದರು. ಭಾಷಣದುದ್ದಕ್ಕೂ ಕೊಡವರ ಸಾಧನೆ ಶೌರ್ಯವನ್ನು ಹಾಡಿ ಹೊಗಳಿದ ನಳೀನ್ ಕುಮಾರ್ ಕಟೀಲ್ ಅವರು ನಿಮ್ಮ ಸಂಸ್ಕೃತಿ ನೋಡಿದರೆ ನಾನೂ ಕೊಡವನಾಗಿ ಹುಟ್ಟಬೇಕಿತ್ತು ಅಂತ ಅನ್ನಿಸುತ್ತದೆ ಎಂದರು.
ಇನ್ನು ಸಿಎಂ ಬಸವರಾಜು ಬೊಮ್ಮಾಯಿ ಅವರು 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದು ಅವರಿಗೆ ನರಕದಲ್ಲಿ ಜಾಗ ಎಂದಿದ್ದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ನಳೀನ್ಕುಮಾರ್ ಕಟೀಲು ಅವರು ನರಕದಲ್ಲಿ ಜಾಗ ಸಿಗುವುದು ಕಾಂಗ್ರೆಸ್ಸಿಗರಿಗೆ ಮಾತ್ರ. 70 ವರ್ಷಗಳ ಕಾಲ ದೇಶವನ್ನು ಅವರು ಲೂಟಿ ಮಾಡಿದಷ್ಟು ಯಾರೂ ಮಾಡಿಲ್ಲ. ಸೋನಿಯಾ ಗಾಂಧಿ ಯಾಕೆ ಬೇಲ್ ಮೇಲೆ ಇದ್ದಾರೆ? ಡಿಕೆಶಿ ಯಾಕೆ ತಿಹಾರ್ ಜೈಲಿಗೆ ಹೋಗಿ ಬಂದ್ರು ?. ಡಿ.ಕೆ ಶಿವಕುಮಾರ್ ತಿಹಾರ್ ಜೈಲಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಹೋಗಿದ್ರಾ ? ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಲೊಕಾಯುಕ್ತವನ್ನ ತೆಗೆದ್ರು, ನಾವು ಅದನ್ನು ಮತ್ತೆ ತಂದಿದ್ದೇವೆ. 40% ಅನ್ನುವ ಕಾಂಗ್ರೆಸ್‌ನವರು ದಾಖಲೆ ಕೊಡಲಿ, ನಾವು ಕೇಳ್ತಿದೀವಿ ಅಲ್ವಾ?. ಸಿದ್ದರಾಮಯ್ಯರ ಏಜೆಂಟ್ ಆಗಿರುವ ಕೆಂಪಣ್ಣ ಆರೋಪ ಮಾಡಿದ್ರು, ಕಂಪ್ಲೇಂಟ್ ಕೊಟ್ರು ಏನಾಯ್ತು?. ಕೊನೆಗೆ ಕೆಂಪಣ್ಣನೇ ಜೈಲಿಗೆ ಹೋದ್ರು, ಹೀಗೆ ಕಾಂಗ್ರೆಸ್‌ನವರು ಎಲ್ಲರೂ ಜೈಲಿಗೆ ಹೋಗ್ತಾರೆ ಎಂದು ತಿರುಗೇಟು ನೀಡಿದರು. ಸ್ವಾತಂತ್ರ್ಯ ಬಂದ ಬಳಿಕ ಕಾಂಗ್ರೆಸ್ ಸರಿಯಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೆ ಭಾರತ ಭಿಕ್ಷುಕರ ರಾಷ್ಟ್ರವಾಗುತ್ತಿರಲಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ವಿವಾದಾತ್ಮಕವಾಗಿ ಮಾತನಾಡಿದ್ದಾರೆ.
ಕಾಂಗ್ರೆಸ್ ಭಯೋತ್ಪಾದಕರ ಪಕ್ಷ: ನಳಿನ್‌ಕುಮಾರ್ ಕಟೀಲ್
ವಿರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲದಲ್ಲಿ ನಡೆಯುತ್ತಿರುವ 18 ಕೊಡವ ಭಾಷಿಕ ಸಮುದಾಯಗಳ ಒತ್ತೋರ್ಮೆ ಕೂಟ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಬೊಮ್ಮಾಯಿಯವರು ಬಜೆಟ್ ಮಂಡನೆ ಮಾಡುವ ಸಂದರ್ಭ ಕಾಂಗ್ರೆಸ್ ನವರು ಕಿವಿಗೆ ಹೂ ಇಟ್ಟುಕೊಂಡು ಬಂದಿದ್ದ ವಿಷಯಕ್ಕೆ ಪ್ರತಿಕ್ರಿಯಿಸಿ ನಳೀನ್ ಕುಮಾರ್ ಕಟೀಲು ಅವರು ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಯಾವುದೇ ಅಭಿವೃದ್ಧಿಗಳು ಆಗಿರಲಿಲ್ಲ. ಅವರು ಸರಿಯಾಗಿ ಅಭಿವೃದ್ಧಿ ಮಾಡಿದ್ದರೆ ಭಾರತ ಇಂದು ಸಾಲಗಾರರ ರಾಷ್ಟ್ರವಾಗುತ್ತಿರಲಿಲ್ಲ, ಮೋಸಗಾರರ ರಾಷ್ಟ್ರವಾಗುತ್ತಿರಲಿಲ್ಲ ಎಂದು ವಿವಾದಾತ್ಮಕವಾಗಿ ಹೇಳಿದರು.
ಕಾಂಗ್ರೆಸ್ಸಿನದು ಟಿಪ್ಪು ಸಂತಾನ: ನಳಿನ್‌ಕುಮಾರ್ ಕಟೀಲ್ ವಾಗ್ದಾಳಿ
ಆದರೆ ಬಿಜೆಪಿ ಮತ್ತು ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಆ ಎಲ್ಲಾ ಕಳಂಕಗಳನ್ನು ತೊಡೆದು ಹಾಕಿದೆ ಎಂದರು. ಇನ್ನು ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳನ್ನು ಇನ್ನು ಬಂಧಿಸದ ವಿಷಯಕ್ಕೆ ಪ್ರತಿಕ್ರಿಯಿಸಿದ ನಳೀನ್ ಕುಮಾರ್ ಕಟೀಲು ಪ್ರಕರಣವನ್ನು ಈಗಾಗಲೇ ಎನ್ಐಎ ತಂಡ ವಿಚಾರಣೆ ನಡೆಸುತ್ತಿದೆ. ತಪ್ಪಿತಸ್ಥರನ್ನು ಬಿಡುವ ಪ್ರಶ್ನೆಯೇ ಇಲ್ಲ. ಅದು ಯಾರೇ ಇದ್ದರು ಎನ್ಐಎ ಬಂಧಿಸಿ ಶಿಕ್ಷೆ ನೀಡಲಿದೆ. ಆದರೆ ಇಂತಹ ಗಲಭೆಗಳು ಕಾಂಗ್ರೆಸ್ ಸರ್ಕಾರ ಇದ್ದಾಗಲೇ ನಡೆದಿದ್ದು ಜಾಸ್ತಿ. ಅದೇ ಅವರ ಮಾನಸಿಕೆ ಎಂದು ಅವರು ಹೇಳಿದರು.