ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ, ಸುದೀಪ್ ಪರ ಬೊಮ್ಮಯಿ ಬ್ಯಾಟಿಂಗ್..!

By Suvarna News  |  First Published Apr 28, 2022, 6:57 PM IST

* ಹಿಂದಿ ಭಾಷೆ ವಿವಾದ
* ನಟ ಕಿಚ್ಚ ಸುದೀಪ್-ಅಜಯ್ ದೇವಗನ್ ಮಧ್ಯೆ ಸರಣಿ ಟ್ವೀಟ್
* ಕಿಚ್ಚ ಸುದೀಪ್ ಪರ ಬ್ಯಾಟಿಂಗ್ ಮಾಡಿದ ಸಿಎಂ ಬೊಮ್ಮಾಯಿ


ವರದಿ: ಗುರುರಾಜ್‌ ಹೂಗಾರ್
ಹುಬ್ಬಳ್ಳಿ, ಏ.28) :
ನಮ್ಮ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ, ಅದನ್ನು ಎಲ್ಲರೂ ಒಪ್ಪಿದ್ದಾರೆ, ಒಪ್ಪಲೇಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.  ಇಂದು(ಗುರುವಾರ) ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ನಟ ಸುದೀಪ್ ಹೇಳಿಕೆಯನ್ನು ಬೆಂಬಲಿಸಿದರು.

 ಹಿಂದಿ ಭಾಷೆ ಹೇರಿಕೆ ವಿಚಾರದಲ್ಲಿ ಸುದೀಪ್ ಹೇಳಿರೋದು ಸರಿಯಿದೆ. ಭಾಷಾವಾರು ಪ್ರಾಂತ್ಯ ರಚನೆಯಾದ ಮೇಲೆ ಆಯಾ ಪ್ರದೇಶಗಳಲ್ಲಿ ಅವರದ್ದೇ ಮಾತೃಭಾಷೆ ಇದೆ. ನಮ್ಮ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಇದ್ದಂತೆ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.

Tap to resize

Latest Videos

ಕೊವಿಡ್ ಟೆಸ್ಟ್ ಸಂಖ್ಯೆ ಹೆಚ್ಚಳ.. 
ಕೋವಿಡ್ ನಾಲ್ಕೇನೆ ಅಲೆ ಭೀತಿ ಹಿನ್ನೆಲೆಯಲ್ಲಿ ಟೆಸ್ಟ್ ಗಳನ್ನು ಮತ್ತೆ ಜಾಸ್ತಿ ಮಾಡ್ತೇವೆ. 8500 ಜೀನೋಮ್ ಟೆಸ್ಟ್ ಗಳನ್ನು ಈಗಾಗಲೇ ಮಾಡಿದ್ದೇವೆ. SARI, ಐಎಲ್ಐ ಮಾಡಿದರೆ ಟ್ರೀಟ್ ಮೆಂಟ್ ಗೆ ಅನುಕೂಲವಾಗುತ್ತೆ. ಈಗಾಗಲೇ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ ಮಾಡಿದ್ದೇವೆ. ಏನೆಲ್ಲಾ ಮುನ್ನೆಚ್ಜರಿಕೆ ಕೈಗೊಳ್ಳಬೇಕೊ ಅದನ್ನು ತೆಗೆದುಕೊಂಡಿದ್ದೇವೆ. ಆರು ವರ್ಷದಿಂದ ಹನ್ನೆರಡು ವರ್ಷದವರೆಗೆ ಲಸಿಕೆ ಕೊಡೋ ನಿರ್ಧಾರವಾಗಿದೆ ಎಂದರು. 

ಸುದೀಪ್-ಅಜಯ್ ದೇವಗನ್ ಭಾಷೆ ವಾರ್ ಮಧ್ಯೆ ಸಿಟಿ ರವಿ ಎಂಟ್ರಿ

 ದೆಹಲಿ ಭೇಟಿ ಖಚಿತ..! 
ದೆಹಲಿ ಭೇಟಿ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ, ನಾಳೆ ರಾತ್ರಿ ದೆಹಲಿಗೆ ಹೋಗುತ್ತಿದ್ದೇನೆ. ನಾಡಿದ್ದು, ಮುಖ್ಯಮಂತ್ರಿಗಳ ಹಾಗೂ ಮುಖ್ಯ ನ್ಯಾಯಮೂರ್ತಿಗಳ ಸಮಾವೇಶ ಇದೆ. ನ್ಯಾಯಾಂಗ ಇಲಾಖೆಗೆ ಸಂಬಂಧಿಸಿದ ಚರ್ಚೆಗಳು ನಡೆಯುತ್ತವೆ. ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ದೆಹಲಿಗೆ ಭೇಟಿ ಮಾಡುತ್ತಿಲ್ಲ. ಪೂರ್ವ ನಿಯೋಜಿತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ದೆಹಲಿಗೆ ಹೋಗುತ್ತಿದ್ದೇನೆ ಎಂದರು.

 ಸೂಕ್ತ ಕ್ರಮದ ಭರವಸೆ. 
ಹಾವೇರಿ ಜಿಲ್ಲೆಯಲ್ಲಿ ವೈದ್ಯನಿಂದ ಅನಗತ್ಯವಾಗಿ ಗರ್ಭಕೋಶ ಶಸ್ತ್ರಚಿಕಿತ್ಸೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಬೊಮ್ಮಾಯಿ, ಇದು 2017 ರಲ್ಲಿ ನಡೆದ ಪ್ರಕರಣವಾಗಿದೆ. ಅದರ ಬಗ್ಗೆ ಸಮಗ್ರ ಮಾಹಿತಿ ಪಡೆಯುತ್ತೇವೆ. ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸಿಟಿ ರವಿ ಪ್ರತಿಕ್ರಿಯೆ
ನಟರ ನಡುವೆ ನಡೆದ ಟ್ವೀಟ್ , ಭಾಷೆ ವಿಚಾರವಾಗಿ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ  ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. 

ಸಂಪರ್ಕ ಭಾಷೆಯಾಗಿ ಹಿಂದಿ ಬಳಸುವುದರಲ್ಲಿ ತಪ್ಪೇನಿಲ್ಲ : ಸಿ.ಟಿ ರವಿ, ಮೊದಲ ಆದ್ಯತೆ ಮಾತೃಭಾಷೆಗೆ ಆದರೂ ಸಂಪರ್ಕ ಭಾಷೆಯಾಗಿ ಹಿಂದಿ ಬಳಸುವುದರಲ್ಲಿ ತಪ್ಪೇನಿಲ್ಲ. ಇಂಗ್ಗೀಷ್ ಭಾಷೆ ಬದಲಾಗಿ ಹಿಂದಿ ಭಾಷೆಯನ್ನು ಬಳಸಿ ಅಂತಾ ಕೇಂದ್ರದ ಗೃಹ ಸಚಿವರು ಈ ಹಿಂದೆ ಹೇಳಿದ್ದರು. ಇದರಲ್ಲಿ ಯಾವುದೇ ತಪ್ಪೇನಿಲ್ಲ, ಸಂಪರ್ಕ ಭಾಷೆಯಾಗಿ ಇಂಗ್ಗಿಷ್ ಬದಲಾಗಿ ಹಿಂದಿ ಬಳಸುವುದರಲ್ಲಿ ತಪ್ಪೇನಿಲ್ಲ ಎಂದು ಸ್ಪಷ್ಟಪಡಿಸಿದರು.

ಇಂಗ್ಗೀಷ್ ಭಾಷೆ ಆಂಗ್ಲರು ಹೇರಿದ ಭಾಷೆ. ಕರ್ನಾಟಕದಲ್ಲಿ ಅಭಿಮಾನದ ಭಾಷೆ, ಮಾತೃಭಾಷೆ ಕನ್ನಡವೇ ಆಗಿದ್ದು, ದುಃಖ ಪಡಬೇಕಾಗಿಲ್ಲ. ಸಂಕೋಚವಿಲ್ಲದೆ ಮಾತೃಭಾಷೆಯನ್ನು ವಿಶ್ವಾಸದಿಂದ ಮಾತನಾಡಿ ಎಂದು ಪ್ರಧಾನಿಯವರೇ ಹೇಳಿದ್ದಾರೆ. ಆಯಾ ರಾಜ್ಯದ ಪ್ರಾದೇಶಿಕ -ಮಾತೃಭಾಷೆಗೆ ಶಿಕ್ಷಣ ನೀತಿಯಲ್ಲಿಯೂ ಒತ್ತು ನೀಡಲಾಗಿದೆ ಎಂದು ಹೇಳಿದರು.

ಅಲ್ಲದೆ ನಮಗೆ ನಮ್ಮ ಮಾತೃಭಾಷೆಯೇ ಶ್ರೇಷ್ಠವಾಗಿದ್ದು ಇನ್ನೊಂದು ಭಾಷೆಯನ್ನು ನಾವು ಅತಿಕ್ರಮಿಸುವರಲ್ಲ, ಅವರನ್ನ  ಗೌರವಿಸುತ್ತೇವೆ ಜೊತೆಗೆ ನಮ್ಮ ದೇಶದಲ್ಲಿ ಒಂದು ಭಾಷೆ ಇನ್ನೊಂದು ಭಾಷೆಯನ್ನ ಕೊಂದಿಲ್ಲ, ಕೊಲ್ಲುವುದಿಲ್ಲ. ನಾಶಮಾಡಿ ಬೆಳೆಯುವುದು ಪರಕೀಯರಿಂದ ಬಂದಿರುವ ಮನೋಭಾವನೆ ಎಂದು ಭಾಷೆ ವಿಚಾರವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

click me!