
ವರದಿ; ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು( 28): ಸರ್ಕಾರ ನಿಗದಿಪಡಿಸಿದ್ದ ಮಾನದಂಡ ಉಲ್ಲಂಘಿಸಿ ಈ ಹಿಂದೆ ಬಿಪಿಎಲ್ (BPL) ಮತ್ತು ಅಂತ್ಯೋದಯ ಕಾರ್ಡ್(antyodaya Card) ಪಡೆದಿರುವ 20 ಸಾವಿರಕ್ಕೂ ಹೆಚ್ಚು ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರಿಗೆ ಆಹಾರ ಇಲಾಖೆ (karnataka food department) ನೋಟಿಸ್ ನೀಡಿದೆ. ಪಡಿತರ ಚೀಟಿ (Ration card) ಪಡೆಯಲು ಅನರ್ಹರಿದ್ದರೂ ಆಹಾರ ಇಲಾಖೆಗೆ ತಪ್ಪು ಮಾಹಿತಿ ನೀಡಿ ಕಾರ್ಡ್ ಪಡೆದು ಉಚಿತವಾಗಿ ಅಕ್ಕಿ,ಗೋಧಿ, ರಾಗಿ, ಸಕ್ಕರೆ ಮತ್ತು ತಾಳೆ ಎಣ್ಣೆ ಸೇರಿ ಇನ್ನಿತರ ಪದಾರ್ಥಗಳನ್ನು ಪಡೆದು ದುರುಪಯೋಗ ಪಡಿಸಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ವ್ಯವಸ್ಥೆ (ನಿಯಂತ್ರಣ) ಆದೇಶದನ್ವಯ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರಿಗೆ ಕ್ರಿಮಿನಲ್ ಕೇಸ್ ದಾಖಲಿಸಬಾರದು ಎಂದು ಶಾಸನಬದ್ಧ ಕಾರಣ ಕೇಳಿ ನೋಟಿಸ್ ನೀಡಿದೆ. ಈ ನೋಟಿಸ್ ತಲುಪಿ 7 ದಿನದೊಳಗೆ ಲಿಖಿತ ಸಮಜಾಯಿಷಿ ನೀಡದಿದ್ದರೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಇಲಾಖೆ ನೋಟಿಸ್‌ನಲ್ಲಿ ಉಲ್ಲೇಖಿಸಿದೆ.
KEA Exam Paper Leak ರಿಜಿಸ್ಟ್ರಾರ್ ರನ್ನು ಕೆವಿವಿಯಿಂದ ಕೈಬಿಡಲು ಎಬಿವಿಪಿ ಆಗ್ರಹ
ಯಾವ್ಯಾವ ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಪಡೆದಿದ್ದಾರೆ?
ಪೊಲೀಸ್, ಶಿಕ್ಷಣ, ಸಾರಿಗೆ ಇಲಾಖೆ ಸೇರಿದಂತೆ ಆಹಾರ ಇಲಾಖೆಯಲ್ಲು ಕಾರ್ಯನಿರ್ವಹಿಸುತ್ತಿರುವ ಹೆಚ್ಚಿನ ಸಂಖ್ಯೆಯ ಕಾನ್‌ಸ್ಟೇಬಲ್, ಶಿಕ್ಷಕರು, ಚಾಲಕರು ಮತ್ತು ನಿರ್ವಹಕರು ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ಗಳನ್ನು ಪಡೆದಿರುವುದು ಪತ್ತೆಯಾಗಿದೆ. ಸರ್ಕಾರಿ ಮತ್ತು ಅರೆ ಸರ್ಕಾರಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ, ಆದಾಯ ತೆರಿಗೆ ಪಾವತಿದಾರರು, ಜಿಎಸ್‌ಟಿ ಮತ್ತು ವೃತ್ತಿ ತೆರಿಗೆ ಪಾವತಿದಾರರು ಸೇರಿ ಆರ್ಥಿಕ ಸಬಲರು ಸುಳ್ಳು ದಾಖಲೆಗಳನ್ನು ನೀಡಿ ಪಡೆದಿರುವ ಕಾರ್ಡ್‌ಗಳನ್ನು ಆಯಾ ತಾಲೂಕು ಕಚೇರಿಗೆ ಹಿಂದಿರುಗಿಸಬೇಕು. ಒಂದು ವೇಳೆ ಕಾರ್ಡ್ ವಾಪಸ್ ನೀಡದಿದ್ದಲ್ಲಿ ಸರ್ಕಾರವೇ ಪತ್ತೆ ಮಾಡಲಿದೆ ಎಂದು ಚಾಟಿ ಬೀಸಿದೆ.
ಅಲ್ಲದೆ ಪಡಿತರ ಪಡೆದುಕೊಳ್ಳುತ್ತಿದ್ದ ದಿನದಿಂದ ಈವರೆಗೆ ಎಷ್ಟು ಅಹಾರ ಪದಾರ್ಥಗಳನ್ನು ಪಡೆದಿದ್ದಾರೆ ಎಂಬುದನ್ನು ಲೆಕ್ಕ ಮಾಡಿ ಕೆಜಿಗೆ 35 ರೂ.ನಂತೆ ವಸೂಲಿ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು 2019ರ ಜುಲೈನಲ್ಲಿ ಇಲಾಖೆ ಆದೇಶ ಹೊರಡಿಸಿತ್ತು. ಈ ಆದೇಶಕ್ಕೆ ಹೆದರಿ ಕೆಲವರು ವಾಪಸ್ ಕಾರ್ಡ್ ನೀಡಿದರೆ ಇನ್ನೂ ಕೆಲವರು ನೀಡಿರಲಿಲ್ಲ. ಆ ಕಾರ್ಡ್‌ಗಳನ್ನು ಇಲಾಖೆಯೇ ಪತ್ತೆ ಹಚ್ಚಿ ನೋಟಿಸ್ ನೀಡಿ ದಂಡ ವಸೂಲಿ ಕಾರ್ಯಕ್ಕೆ ಇಳಿದಿದೆ.
ಈಗಾಗಲೆ ಅಕ್ರಮವಾಗಿ ಪಡೆದಿದ್ದ ಬಿಪಿಎಲ್ ಕಾರ್ಡುದಾರರಿಗೆ ಆಹಾರ ಇಲಾಖೆ ದಂಡ ವಿಧಿಸಿದ್ದು ಅಂದಾಜು ಒಂದೂವರೆ ಕೋಟಿ ಹಣ ಸಂಗ್ರಹಿಸಿದೆ. ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ 62458 ಅಧಿಕಾರಿಗಳು ಬಿಪಿಎಲ್ ಕಾರ್ಡ್ ಗಿಟ್ಟಿಸಿಕೊಂಡಿದ್ರೆ, ಅತಿ ಹೆಚ್ಚು ಆದಾಯ ತೆರಿಗೆ ಕಟ್ಟುವ ಸುಮಾರು 85204 ಜನ ಬಿಪಿಎಲ್ ಕಾರ್ಡು ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟರೆ 1ಲಕ್ಷ ಮೇಲ್ಪಟ್ಟು ಆದಾಯ ಇರುವವರು 50060 ಜನರಲ್ಲಿ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡಿದ್ದು ಆಹಾರ ಇಲಾಖೆಯ ಅಧಿಕಾರಿಗಳಿಗೆ ಮುಜುಗರ ಎನಿಸಿದೆ.
GADAGA ಅಪ್ರಾಪ್ತೆಯ ಕಿಡ್ನಾಪ್ ಮಾಡಿ ಅತ್ಯಾಚಾರ, ಬಿಜೆಪಿ ಮುಖಂಡನ ವಿರುದ್ಧ ಆರೋಪ!
ಬೀಳುತ್ತೆ ಕ್ರಿಮಿನಲ್ ಕೇಸ್: ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯಡಿ (ಎಚ್‌ಆರ್‌ಎಂಎಸ್) ಆಯಾ ಇಲಾಖೆ ಮುಖ್ಯಸ್ಥರಿಂದ ಪ್ರತಿ ಸರ್ಕಾರಿ ನೌಕರರ, ವಿವಿಧ ನಿಗಮ-ಮಂಡಳಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ಮಾಹಿತಿಯನ್ನು ಪಡೆದು ನೌಕರರ ಆಧಾರ್ ಸಂಖ್ಯೆಯನ್ನು ಪಡಿತರ ಚೀಟಿಗೆ ಜೋಡಣೆಯಾಗಿರುವ ಆಧಾರ್‌ಗೆ ತಾಳೆ ಮಾಡಲಾಗಿತ್ತು. ಈ ವೇಳೆ 20 ಸಾವಿರಕ್ಕೂ ಹೆಚ್ಚು ಸರ್ಕಾರಿ ನೌಕರರು ಸಿಕ್ಕಿಬಿದ್ದಿದ್ದಾರೆ.
ಕೆಲವರು ಐದಾರು ವರ್ಷಗಳಿಂದ ಸರ್ಕಾರದಿಂದ ಉಚಿತವಾಗಿ ರೇಷನ್ ಪಡೆದಿದ್ದಾರೆ. ಕುಟುಂಬದಲ್ಲಿ ಓರ್ವ ಸರ್ಕಾರಿ ನೌಕರ ಇದ್ದರೆ, ಆತನ ಕುಟುಂಬದ ಎಲ್ಲ ಸದಸ್ಯರು ಪಡೆದಿರುವ ಪದಾರ್ಥಗಳನ್ನು ಲೆಕ್ಕ ಮಾಡಿ ದಂಡ ಹಾಕಲಾಗುತ್ತದೆ. ಕೆಲ ಸರ್ಕಾರಿ ನೌಕರರ ಕುಟುಂಬಗಳಲ್ಲಿ ಇಬ್ಬರು, ಮೂರು,ನಾಲ್ಕು ಐವರು ಮತ್ತು ಆರು ಮಂದಿ ಸದಸ್ಯರಿದ್ದಾರೆ. ಈ ಕುಟುಂಬಗಳು ಪಡೆದಿರುವ ರೇಷನ್‌ಗಳನ್ನು ಇಲಾಖೆ ಲೆಕ್ಕ ಹಾಕಿದೆ. ಇದರಲ್ಲಿ ಬಹುತೇಕರು ಸಾವಿರಾರು ಕೆಜಿ ರೇಷನ್ ಪಡೆದಿರುವುದು ಪತ್ತೆಯಾಗಿದ್ದು, ಈಗಾಗಲೆ ಕೆಜಿಗೆ 35 ರೂ.ನಂತೆ ದಂಡ ಕಟ್ಟಿಸಿಕೊಂಡಿದೆ. ಕಟ್ಟದೆ ತಪ್ಪಿಸಿಕೊಂಡಲ್ಲಿ ಕ್ರಿಮಿನಲ್ ಕೇಸ್ ಬೀಳಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ