ಜ.12ರಿಂದ ಕೂಡಲ ಸಂಗಮದಲ್ಲಿ ಶರಣ ಮೇಳ, ಸಿಎಂ ಚಾಲನೆ

By Kannadaprabha NewsFirst Published Jan 7, 2023, 12:30 AM IST
Highlights

ಸಚಿವ ಗೋವಿಂದ ಕಾರಜೋಳ ಅವರು ‘ಬಸವ ವಚನಾಮೃತ’ ಗ್ರಂಥ ಲೋಕಾರ್ಪಣೆಗೊಳಿಸಲಿದ್ದಾರೆ. ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಬಸವ ಧ್ವಜಾರೋಹಣ ನೆರವೇರಿಸುವರು. ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ‘ಜ್ಞಾನಾಮೃತ ಮಾತಾಜಿ’ ಗ್ರಂಥ ಬಿಡುಗಡೆಗೊಳಿಸಲಿದ್ದಾರೆ. 

ಬೆಂಗಳೂರು(ಜ.07):  ಕೂಡಲ ಸಂಗಮದಲ್ಲಿ ಜ.12 ರಿಂದ 14 ರವರೆಗೂ ಬಸವ ಧರ್ಮ ಪೀಠದಿಂದ 36ನೇ ಶರಣ ಮೇಳವನ್ನು ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಬಸವದಳದ 32ನೇ ಅಧಿವೇಶನವೂ ನಡೆಯಲಿದೆ ಎಂದು ಪೀಠದ ಉಪಾಧ್ಯಕ್ಷ ಸದ್ಗುರು ಮಹದೇಶ್ವರ ಸ್ವಾಮೀಜಿ ತಿಳಿಸಿದರು. 

ಜ.12 ರಂದು ಬೆಳಿಗ್ಗೆ 10.30ಕ್ಕೆ ರಾಷ್ಟ್ರೀಯ ಬಸವದಳದ 32ನೇ ಅಧಿವೇಶನವನ್ನು ಬಾಗಲಕೋಟೆ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ಉದ್ಘಾಟಿಸಲಿದ್ದಾರೆ. ಪಶುಸಂಗೋಪನೆ ಸಚಿವ ಪ್ರಭು ಚೌವಾಣ್‌ ಅವರು ಹೇಮರೆಡ್ಡಿ ಮಲ್ಲಮ್ಮ ಫಾಮ್‌ರ್‍ಹೌಸ್‌ ಲೋಕಾರ್ಪಣೆಗೊಳಿಸಲಿದ್ದಾರೆ. ಮಹಿಳಾಗೋಷ್ಠಿಯನ್ನು ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಉದ್ಘಾಟಿಸುವರು. ಜ.13 ರಂದು ಶರಣ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. 

ಕೂಡಲಸಂಗಮದಲ್ಲಿ ಜ.12ರಿಂದ 36ನೇ ಶರಣ ಮೇಳ ಆಯೋಜನೆ: ಮಾತೆ ಗಂಗಾದೇವಿ

ಸಚಿವ ಗೋವಿಂದ ಕಾರಜೋಳ ಅವರು ‘ಬಸವ ವಚನಾಮೃತ’ ಗ್ರಂಥ ಲೋಕಾರ್ಪಣೆಗೊಳಿಸಲಿದ್ದಾರೆ. ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಬಸವ ಧ್ವಜಾರೋಹಣ ನೆರವೇರಿಸುವರು. ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ‘ಜ್ಞಾನಾಮೃತ ಮಾತಾಜಿ’ ಗ್ರಂಥ ಬಿಡುಗಡೆಗೊಳಿಸಲಿದ್ದಾರೆ ಎಂದರು.

ತರಳಬಾಳು ಶಾಖಾಮಠ ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಹುಲಸೂರು ಗುರು ಬಸವೇಶ್ವರ ಸಂಸ್ಥಾನ ಮಠದ ಡಾ.ಶಿವಾನಂದ ಸ್ವಾಮೀಜಿ, ಸಾನಿಧ್ಯ ವಹಿಸಲಿದ್ದು ನಟ ವಿಜಯ ರಾಘವೇಂದ್ರ, ಶಾಸಕ ದೊಡ್ಡನಗೌಡ ಪಾಟೀಲ, ನಿವೃತ್ತ ಅಧಿಕಾರಿ ಎಸ್‌.ಎಂ.ಜಾಮದಾರ, ರಮಣಶ್ರೀ ಸಮೂಹದ ಅಧ್ಯಕ್ಷ ಎಸ್‌.ಷಡಕ್ಷರಿ ಮತ್ತಿತರರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.

click me!