ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ಫೆಬ್ರವರಿ ಅಂತ್ಯಕ್ಕೆ ಲೋಕಾರ್ಪಣೆಗೊಳ್ಳಲಿದೆ. ವಿಶ್ವದರ್ಜೆಯ ರಸ್ತೆ ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಆದರೆ ಈ ರಸ್ತೆಯಲ್ಲಿ ಬೈಕ್, ಆಟೋ ಸಂಚಾರಕ್ಕೆ ಅವಕಾಶವಿಲ್ಲ.
ಬೆಂಗಳೂರು(ಜ.06): ಬೆಂಗಳೂರು-ಮೈಸೂರು ಹೆದ್ದಾರಿಯ ಸಮೀಕ್ಷೆ ನಡೆಸಿದ ಕೇಂದ್ರ ಗೃಹ ಸಚಿವ ನಿತಿನ್ ಗಡ್ಕರಿ ಸಿಹಿ ಸುದ್ದಿ ನೀಡಿದ್ದರು. ಫೆಬ್ರವರಿ ಅಂತ್ಯದಲ್ಲಿ ಹೆದ್ದಾರಿ ಲೋಕಾರ್ಪಣೆ ಮಾಡುವುದಾಗಿ ಘೋಷಿಸಿದ್ದರು. ಇದೀಗ ಬೈಕ್ ಹಾಗೂ ಆಟೋ ಸಂಚಾರಿಗಳಿಗೆ ನಿರಾಸೆ ಎದುರಾಗಿದೆ. ಕಾರಣ ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಬೈಕ್ ಹಾಗೂ ಆಟೋಗಳಿಗೆ ಪ್ರವೇಶವಿಲ್ಲ ಅನ್ನೋ ಘೋಷಣೆ ಹೊರಬಿದ್ದಿದೆ. ಇದು ಕೇವಲ ಘೋಷಣೆಯಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI) ನಿಯಮ. ಈ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಬೈಕ್ ಹಾಗೂ ಆಟೋ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತ ತಪ್ಪಿಸಲು NHAI ಈ ಕ್ರಮ ಕೈಗೊಂಡಿದೆ. ಸರ್ವೀಸ್ ರಸ್ತೆ ನಿರ್ಮಾಣ ಆಗುವ ವರೆಗೂ ಆಟೋ ಹಾಗೂ ಬೈಕ್ ದಶಪಥ ಹೆದ್ದಾರಿಯಲ್ಲಿ ಸಂಚರಿಸಲು ಅವಕಾಶವಿದೆ. ಆದರೆ ಹೆದ್ದಾರಿ ಅಕ್ಕ ಪಕ್ಕದಲ್ಲಿ ಸರ್ವೀಸ್ ರಸ್ತೆ ನಿರ್ಮಾಣವಾದ ಬಳಿಕ ಬೈಕ್ ಹಾಗೂ ಆಟೋಗಳು ದಶಪಥ ಹೆದ್ದಾರಿ ಪ್ರವೇಶಿಸುವಂತಿಲ್ಲ.
ಬೈಕ್, ಆಟೋ ಮಾತ್ರವಲ್ಲ, ಕೃಷಿ ವಾಹನಗಳಾದ ಟ್ರಾಕ್ಟರ್ ಸೇರಿದಂತೆ ಇತರ ಕೆಲ ವಾಹನಗಳಿಗೂ ನಿರ್ಬಂಧ ವಿಧಿಸಲಾದಿದೆ. ಫೆಬ್ರವರಿ ಅಂತ್ಯಕ್ಕೆ ದಶಪಥ ಹೆದ್ದಾರಿ ಕಾರ್ಯಪೂರ್ಣಗೊಂಡು ರಸ್ತೆ ಲೋಕಾರ್ಪಣೆಗೊಳ್ಳಲಿದೆ. ಇದರ ಬೆನ್ನಲ್ಲೇ ಸರ್ವೀಸ್ ರಸ್ತೆ ಕಾರ್ಯಗಳೂ ಪೂರ್ಣಗೊಳ್ಳಲಿದೆ.
undefined
ಬೆಂಗಳೂರು-ಚೆನ್ನೈ ಹೈವೇ 2024 ಜ.26ಕ್ಕೆ ಲೋಕಾರ್ಪಣೆ: ಸಚಿವ ನಿತಿನ್ ಗಡ್ಕರಿ
ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ಎಕ್ಸ್‌ಪ್ರೆಸ್ ವೇ. ಈ ರಸ್ತೆಯನ್ನು ನಿರ್ದಿಷ್ಠ ವೇಗ, ಸುರಕ್ಷತೆ ಹಾಗೂ ಯಾವುದೇ ಅಡೆ ತಡೆ ಇಲ್ಲದೆ ಪ್ರಯಾಣಿಸಲು ನಿರ್ಮಾಣ ಮಾಡಲಾಗಿದೆ. ಹೀಗಾಗಿ ಕೇಂದ್ರದ ಎಕ್ಸ್‌ಪ್ರೆಸ್ ವೇ ನಿಯಮಗಳು ಅನ್ವಯವಾಗಲಿದೆ. ಎಕ್ಸ್‌ಪ್ರೆಸ್ ವೇ ಒಟ್ಟು ದಶಪಥಗಳನ್ನು ಹೊಂದಿದೆ. ಪ್ರಮುಖ ರಸ್ತೆ 3 ಹಾಗೂ 3 ಲೇನ್ ಹೊಂದಿದೆ. ಇನ್ನು ಎರಡು ಬದಿಯ ಸರ್ವೀಸ್ ರಸ್ತೆಯಲ್ಲಿ ಎರಡೆರಡು ಲೇನ್ ಹೊಂದಿರಲಿದೆ.
ಬೆಂಗಳೂರು ಮೈಸೂರಿ ಹೆದ್ದಾರಿ ಹಲವು ಹಳ್ಳಿ, ಗ್ರಾಮ, ಪಣ್ಣಗಳನ್ನು ಹಾದು ಹೋಗಲಿದೆ. ಇಲ್ಲಿನ ಸ್ಥಳೀಯರು ಬೈಕ್, ಆಟೋ, ಸೇರಿದಂತೆ ಇತರ ಕೃಷಿ ವಾಹನಗಳಲ್ಲಿ ಪ್ರಯಾಣ ಮಾಡುತ್ತಾರೆ. ದಿಢೀರ್ ಈ ವಾಹನಗಳು ಎಕ್ಸ್‌ಪ್ರೆಸ್ ವೇಗೆ ಪ್ರವೇಶ ಪಡೆಯುವುದರಿಂದ ನಿಗದಿತ ವೇಗದಲ್ಲಿ ಸಂಚರಿಸುವ ವಾಹನಗಳು ಅಪಘಾತಕ್ಕೀಡಲಾಗಲಿದೆ. ಇದಕ್ಕಾಗಿ ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಬೈಕ್, ಆಟೋ, ಕೃಷಿ ವಾಹನ ಸೇರಿದಂತೆ ಇತರ ವಾಹನಗಳಿಗೆ ಸಂಚರಿಸಲು ನಾಲ್ಕು ಪಥದ ಸರ್ವೀಸ್ ರಸ್ತೆ ಇರಲಿದೆ.
ಈ ನಿಯಮ ಬೆಂಗಳೂರು ಹಾಗೂ ಮೈಸೂರು ಎಕ್ಸ್‌ಪ್ರೆಸ್ ವೇಗೆ ಪರಚಯಿಸಿದ ನಿಯಮವಲ್ಲ. ಭಾರತದ ಹೆದ್ದಾರಿ ಪ್ರಾಧಿಕಾರ ಎಕ್ಸ್‌ಪ್ರೆಸ್ ವೇಗೆ ಜಾರಿತಂದಿರುವ ನಿಯಮವಾಗಿದೆ. ದೇಶದಲ್ಲಿ ನಿರ್ಮಾಣವಾಗಿರುವ ಹಲವು ಎಕ್ಸ್‌ಪ್ರೆಸ್ ವೇನಲ್ಲಿ ಇದೇ ನಿಯಮ ಜಾರಿಯಲ್ಲಿದೆ. ಇದು ಮೈಸೂರು ಬೆಂಗಳೂರು ಹೆದ್ದಾರಿಗೂ ಅನ್ವಯವಾಗಲಿದೆ.
17 ಸಾವಿರ ಕೋಟಿ ರೂ. ಮೊತ್ತದ ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ 2024ರ ವೇಳೆಗೆ ಸಿದ್ಧ: ನಿತಿನ್ ಗಡ್ಕರಿ
Assessed the Bengaluru - Mysuru National Highway work which is part of our Greenfield Corridors project with Karnataka PWD Minister Shri Ji and Mysuru MP Shri Ji. pic.twitter.com/wuN8BEax8y
— Nitin Gadkari (@nitin_gadkari)
ನಿನ್ನೆ ಹೆಲಿಕಾಪ್ಟರ್, ಬಸ್ ಮೂಲಕ ಹೆದ್ದಾರಿ ಪರಿಶೀಲನೆ
ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪರಿಶೀಲನೆಗೆ ಆಗಮಿಸಿದ್ದ ಗಡ್ಕರಿ, ಮೊದಲಿಗೆ ಹೆಲಿಕಾಪ್ಟರ್ ಮೂಲಕ, ಬಳಿಕ ರಸ್ತೆ ಮಾರ್ಗದ ಮೂಲಕ ಹೆದ್ದಾರಿ ವೀಕ್ಷಣೆ ನಡೆಸಿದ್ದರು. ಮೊದಲಿಗೆ ಹೆಲಿಕಾಪ್ಟರ್‌ನ್ನು ರಾಮನಗರ ಜಿಲ್ಲೆಯ ಜೀಗೇನಹಳ್ಳಿಯ ಮೂಲಕ ಹಾದು ಹೋಗುವ ಹೆದ್ದಾರಿ ಫ್ಲೈ ಓವರ್ ಮೇಲೆ ಸುರಕ್ಷಿತವಾಗಿ ಇಳಿಸಲಾಯಿತು.
ಗಡ್ಕರಿ, ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಅವರಿದ್ದ ಹೆಲಿಕಾಪ್ಟರ್ ಮೊದಲು ಹೆದ್ದಾರಿ ಸ್ಪರ್ಶಿಸಿದರೆ, ಹೆದ್ದಾರಿ ಇಲಾಖೆ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಇದ್ದ ಮತ್ತೊಂದು ಹೆಲಿಕ್ಯಾಪ್ಟರ್ ಐದು ನಿಮಿಷ ಅಂತರದಲ್ಲಿ ಫ್ಲೇ ಓವರ್ ಮೇಲೆ ಬಂದಿಳಿಯಿತು. ಸುಮಾರು 1 ಗಂಟೆ 10 ನಿಮಿಷಗಳ ಕಾಲ ಗಡ್ಕರಿಯವರು ಒಟ್ಟು 118 ಕಿ.ಮೀ ಉದ್ದದ ಬೆಂಗಳೂರು-ಮೈಸೂರು ಹೆದ್ದಾರಿಯ ಸಮೀಕ್ಷೆ ನಡೆಸಿದರು. ಬಳಿಕ, ಬಸ್ಸಿನಲ್ಲಿ ಪ್ರಯಾಣಿಸಿ, ವೀಕ್ಷಣೆ ಮುಂದುವರಿಸಿದರು. ಈ ವೇಳೆ, ಬೆಂಗಳೂರು-ಮೈಸೂರು ಹೆದ್ದಾರಿಯ ಪೂರ್ಣ ಚಿತ್ರಣವುಳ್ಳ ಪ್ರಾಜೆಕ್ಟ್ ಗ್ಯಾಲರಿಗೆ ಭೇಟಿ ನೀಡಿದರು. ಅಲ್ಲಿ ಹೆದ್ದಾರಿ ಯೋಜನೆಯ ರೂಪುರೇಷೆ ಹಾಗೂ ಕಾಮಗಾರಿ ಪ್ರಗತಿ ಬಗ್ಗೆ ಅಂಕಿ ಅಂಶಗಳ ಸಮೇತ ಯೋಜನಾ ನಿರ್ದೇಶಕ ಶ್ರೀಧರ್ ಮತ್ತು ಹಿರಿಯ ಅಧಿಕಾರಿಗಳು ಸಚಿವರಿಗೆ ವಿವರಿಸಿದರು.