Indian Cast System : ಸ್ವಾಮೀಜಿಗಳಿರುವವರೆಗೆ ಜಾತಿ ಹೋಗದು: ವೇಣು

Kannadaprabha News   | Asianet News
Published : Dec 27, 2021, 07:57 AM IST
Indian Cast System :   ಸ್ವಾಮೀಜಿಗಳಿರುವವರೆಗೆ ಜಾತಿ ಹೋಗದು: ವೇಣು

ಸಾರಾಂಶ

 ಸ್ವಾಮೀಜಿಗಳಿರುವವರೆಗೆ ಜಾತಿ ಹೋಗದು: ವೇಣು  ಸರ್ಕಾರವನ್ನೇ ಅಲುಗಾಡಿಸುವ ಮಟ್ಟಕ್ಕೆ ಮಠಾಧೀಶರು ಬೆಳೆದಿದ್ದಾರೆ: ಹಿರಿಯ ಸಾಹಿತಿ  

ಹೊಸದುರ್ಗ (ಡಿ.27): ಮಕ್ಕಳಿಗೆ ಮೊಟ್ಟೆ (egg) ಕೊಟ್ಟರೆ ಸ್ವಾಮಿಗಳಿಗೇಕೆ ಸಿಟ್ಟು? ಸ್ವಾಮಿಗಳಿಗೇನೂ ಮಕ್ಕಳು ಮರಿಯೇ? ಸಿದ್ದರಾಮಯ್ಯ (Suddaramaiah)  ಅಕ್ಕಿ ಕೊಟ್ಟಾಗಲೂ ಸ್ವಾಮೀಜಿಗಳು (Swamiji) ಉರಿದು ಕೊಂಡಿದ್ದರು. ಸ್ವಾಮಿಗಳು ಇರುವವರೆಗೂ ಈ ದೇಶದಲ್ಲಿ ಜಾತಿ (Cast) ವ್ಯವಸ್ಥೆ ಹೊಗಲು ಸಾಧ್ಯವಿಲ್ಲ ಎಂದು ಚಲನಚಿತ್ರ ಸಾಹಿತಿ ಕಾದಂಬರಿಗಾರ ಬಿಎಲ್‌ ವೇಣು ಹೇಳಿದರು. ಪಟ್ಟಣದ ಗುರು ಒಪ್ಪತ್ತಿನ ಸ್ವಾಮಿ ಮಠದ ಆವರಣದಲ್ಲಿ ಅನಿಕೇತನ ವಿಚಾರ ವೇದಿಕೆ ಹೊಸ ದುರ್ಗದಿಂದ ಆಯೋಜಿಸಲಾಗಿದ್ದ ಬಾಗೂರು ನಾಗರಾಜಪ್ಪ ರಚನೆಯ ಹೊಸದುರ್ಗ ಸಿರಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಹಿಂದೆ ಎಸ್‌ಸಿ, ಎಸ್‌ಟಿಗಳಿಗೆ  (SC ST)  ಮೀಸಲಾತಿ ಕೊಟ್ಟಾಗ ಅವರನ್ನು ಕೀಳರಿಮೆಯಿಂದ ನೋಡುತ್ತಿದ್ದ ಮೇಲ್ವರ್ಗದ ಜನ ಇಂದು ಅವರೇ ಮೀಸಲಾತಿಗಾಗಿ ಬಡಿದಾಡುತ್ತಿದ್ದಾರೆ. ಇಂದು ಸರ್ಕಾರವನ್ನೇ ಅಲುಗಾಡಿಸುವ ಮಟ್ಟಕ್ಕೆ ಮಠಾಧೀಶರು ಬೆಳೆದಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ ಎಂದರು.

ಇಂದು ಜಾತಿ (Cast) ಇಲ್ಲದೆ ಮಠವಿಲ್ಲ, ಮಠವಿಲ್ಲದೆ (Mutt)  ರಾಜಕಾರಣಿಗಳಿಲ್ಲ (Politics) . ಮಠ, ಜಾತಿ ಇದ್ದರೆ ಮಾತ್ರ ಇಂದು ಸೀಟು, ಓಟು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳಗಾವಿಯ ಅಧಿವೇಶನದಲ್ಲಿ ನಮ್ಮ ಜನಪ್ರತಿನಿಧಿಗಳು ಬಡತನ, ನಿರುದ್ಯೋಗ, ಅಸ್ಪೃಶ್ಯತೆಯ ಬಗ್ಗೆ ಮಾತನಾಡಲಿಲ್ಲ. ಕೆಲಸಕ್ಕೆ ಬಾರದ ಮತಾಂತರದ ಬಗ್ಗೆ ಮಾತನಾಡಿದ್ದಾರೆ. ಮತಾಂತರ ಎನ್ನುವುದು ಈಗಿನದ್ದಲ್ಲ ಬಸವಣ್ಣ, ಬುದ್ಧ ಮಾಡಿದ್ದೂ ಮತಾಂತರವೇ ಎಂದು ಹೇಳಿದರು.

ಹಿಂದು (Hindu)  ಎಂದೂ ಒಂದು ಎನ್ನುವ ಬಿಜೆಪಿ ಹಾಗೂ ಕೆಲವು ಸಂಘಟನೆಗಳು ಹಿಂದು ಎಂದೂ ಒಂದು ಆಗಲು ಬಿಡುವುದಿಲ್ಲ. ಮತಾಂತರ ನಿಷೇಧ ಹೆಸರಿನಲ್ಲಿ ಅಮಾಯಕರ ಮೇಲೆ ದೌರ್ಜನ್ಯವಾಗುತ್ತದೆಯೇ ಹೊರತು ಯಾವುದೇ ಮತಾಂತರ (Conversion)  ತಡೆಯಲು ಸಾಧ್ಯವಿಲ್ಲ. ಈ ಹಿಂದೆ ಗೋ (Cow)  ಹತ್ಯೆ ನಿಷೇಧ ಕಾನೂನು ತಂದಾಗ ಮುಸ್ಲಿಂಮರು ಗೋವುಗಳು ಸಾಕುವುದಕ್ಕೆ ಹೆದರುವಂತಾಗಿತ್ತು. ರೈತರು (Farmers)  ಹಸುಗಳನ್ನು ಮುಸ್ಲಿಂಮರ (Muslim )  ಬಾಡಿಗೆ ಆಟೋದಲ್ಲಿ ತೆಗೆದುಕೊಂಡು ಹೋದರೂ ಅಂತವರ ಮೇಲೆ ಹಲ್ಲೆ ನಡೆಸಿದ ಸಾವಿರಾರು ಪ್ರಕರಣಗಳು ನಮ್ಮ ಮುಂದಿವೆ. ಇನ್ನು ಮುಂದೆ ಯಾವುದೇ ಕ್ರಿಶ್ಚಿಯನ್‌, ಮುಸ್ಲಿಂಮರು ಹಿಂದೂ ಮನೆÜಗಳಿಗೆ ಬಂದು ಕುಳಿತರೆ ಮತಾಂತರ ಮಾಡುತ್ತಿದ್ದಾರೆ ಎಂದು ಅವರ ಮೇಲೆ ದೌರ್ಜನ್ಯಗಳು ನಡೆಯುತ್ತವೆ ಎಂದರು.

ಹೊಸದುರ್ಗ (Hosadurga) ಸಿರಿ ಪುಸ್ತಕ ಹೊಸದುರ್ಗ ತಾಲೂಕಿನ ನೆಲ ಜಲ, ಕಲೆ, ಸಾಹಿತ್ಯ, ಪೌರಾಣಿಕ, ಸಾಂಸ್ಕೃತಿಕ, ಸಾಹಿತ್ಯಿಕ, ಸಾಮಾಜಿಕ ಅಂಶಗಳನ್ನು ಒಳಗೊಂಡ ಒಂದು ಗ್ರಂಥವಾಗಿದೆ. ಇದನ್ನು ಎಲ್ಲರೂ ಕೊಂಡು ಓದುವ ಪ್ರವೃತ್ತಿ ನಮ್ಮದಾಗಬೇಕು. ಹೊಸದುರ್ಗ ಕೇವಲ ಭೌಗೋಳಿಕವಾಗಿ ಸಂಪದ್ಬರಿತವಾಗಿಲ್ಲ. ಸಾಹಿತ್ಯಿಕವಾಗಿಯೂ ಸಂಪದ್ಭರಿತವಾಗಿದೆ. ನೂರಾರು ಸಾಹಿತಿಗಳನ್ನು ಈ ನಾಡಿಗೆ (Karnataka)  ಹೊಸದುರ್ಗ ನೀಡಿದೆ. ಚಿತ್ರದುರ್ಗದ (Chitradurga)  ವೀರ ಮದಕರ ನಾಯಕನ್ನು ನೀಡಿದ ಕೀರ್ತಿ ಹೊಸದುರ್ಗಕ್ಕೆ ಸೇರುತ್ತದೆ ಎಂದರು.

ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ (Judge)  ಎಚ್‌.ಬಿಲ್ಲಪ್ಪ ಮಾತನಾಡಿ, ಬಾಗೂರು ನಾಗರಾಜಪ್ಪ ಯಾವುದೇ ಪುಸ್ತಕಗಳನ್ನು ಬರೆಯುವಾಗಲೂ ಯಾವುದೇ ಒಂದು ವಿಚಾರಗಳ ಬಗ್ಗೆ ಆಳ ಅರಿವುಗಳ ಬಗ್ಗೆ ಚರ್ಚಿಸಿ ಬರೆಯುತ್ತಾರೆ. ಅವರ ಬರವಣಿಗೆ ವಾಸ್ತವ ಸಂಗತಿಗೆ ಹತ್ತಿರವಾಗಿರುತ್ತದೆ ಎಂದರು.

ಕಸಾಪ ತಾಲೂಕು ಮಾಜಿ ಅಧ್ಯಕ್ಷ ಪಿ.ಎಲ್‌.ಲೋಕೇಶ್ವರ್‌, ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ಎಸ್‌.ಕಲ್ಮಠ್‌, ಬನಸಂಕರಿ ಬ್ಯಾಂಕಿನ ಅಧ್ಯಕ್ಷ ಟಿ.ಮಂಜುನಾಥ್‌, ಓಂಕಾರಪ್ಪ ಮತ್ತಿತರರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ