ದಾವೋಸ್‌ನಲ್ಲಿ ಉದ್ಯಮಿಗಳ ಸೆಳೆದ ಕರ್ನಾಟಕ: ಉದ್ಯಮಿಗಳ ಜತೆ ಸಿಎಂ ಬೊಮ್ಮಾಯಿ ನೇರ ಮಾತುಕತೆ

By Govindaraj SFirst Published May 24, 2022, 3:10 AM IST
Highlights

ಸ್ವಿಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಶೃಂಗದಲ್ಲಿ ಕರ್ನಾಟಕವು ಉದ್ಯಮಿಗಳನ್ನು ಆಕರ್ಷಿಸಿ ಹೊಸ ಹೂಡಿಕೆಗಳನ್ನು ತರುವಲ್ಲಿ ಯಶಸ್ವಿಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದು, ರಾಜ್ಯಕ್ಕೆ ಹೂಡಿಕೆ ತರುವ ನಿಟ್ಟಿನಲ್ಲಿ ಉದ್ಯಮಿಗಳೊಂದಿಗೆ ಚರ್ಚೆ ನಡೆಸಿದರು. 

ಬೆಂಗಳೂರು (ಮೇ.24): ಸ್ವಿಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಶೃಂಗದಲ್ಲಿ ಕರ್ನಾಟಕವು ಉದ್ಯಮಿಗಳನ್ನು ಆಕರ್ಷಿಸಿ ಹೊಸ ಹೂಡಿಕೆಗಳನ್ನು ತರುವಲ್ಲಿ ಯಶಸ್ವಿಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದು, ರಾಜ್ಯಕ್ಕೆ ಹೂಡಿಕೆ ತರುವ ನಿಟ್ಟಿನಲ್ಲಿ ಉದ್ಯಮಿಗಳೊಂದಿಗೆ ಚರ್ಚೆ ನಡೆಸಿದರು. ಸಮಾವೇಶದಲ್ಲಿ ಕರ್ನಾಟಕದ ಪೆವಿಲಿಯನ್‌ ರೂಪಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೆವಿಲಿಯನ್‌ಗೆ ಚಾಲನೆ ನೀಡಿದರು. ಬಳಿಕ ವಿವಿಧ ಕಂಪನಿಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿ, ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಹಾಗೂ ಕೈಗಾರಿಕಾ ಸ್ನೇಹಿ ನೀತಿಗಳ ಕುರಿತು ವಿವರಿಸಿದರು.

ಇಕೋ-ಬ್ಯಾಲೆನ್ಸಿಂಗ್‌, ಇಕೋ-ಬಜೆಟಿಂಗ್‌ ಇರಲಿ: ಪರಿಸರವನ್ನು ಉಳಿಸಲು ಸಹಾಯಕವಾಗುವಂತೆ ಪ್ರತಿ ಉದ್ಯಮಿಗಳು ತಮ್ಮ ಬ್ಯಾಲೆನ್ಸ್ ಶೀಟ್‌ನಲ್ಲಿ ಇಕೋ-ಬ್ಯಾಲೆನ್ಸಿಂಗ್‌ ಹಾಗೂ ಇಕೋ-ಬಜೆಟಿಂಗ್‌ ಅಂಶಗಳನ್ನು ಹೊಂದಿರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ. ಸಮಾವೇಶದಲ್ಲಿ ‘ಕಾನ್ಶಿಯಸ್‌ ಪ್ಲಾನೆಟ್‌’ ಸಂವಾದದಲ್ಲಿ ಪಾಲ್ಗೊಂಡ ಅವರು, ಮಣ್ಣಿನ ಸವಕಳಿ, ಜಾಗತಿಕ ಹವಾಮಾನ ಬದಲಾವಣೆ ಹಾಗೂ ಪರಿಸರ ನಾಶದ ಕುರಿತು ಮಾತನಾಡಿದರು. 

"

ಹೆಡಗೇವಾರ್‌, ಬೊಮ್ಮಾಯಿ ಮಾತ್ರವಲ್ಲ, ನಾನೂ ಹಿಂದು: ಸಿದ್ದರಾಮಯ್ಯ

ಈಶ ಫೌಂಡೇಶನ್‌ನ ಸದ್ಗುರು ಅವರೊಂದಿಗೆ ವೇದಿಕೆ ಹಂಚಿಕೊಂಡ ಅವರು, ಮಣ್ಣಿನ ಸವಕಳಿ ಹಾಗೂ ಇದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ವಿವರಿಸಿದರು. ವಿಶ್ವ ಆರ್ಥಿಕ ವೇದಿಕೆಯು ಆರ್ಥಿಕತೆಯನ್ನು ಪರಿಸರದೊಂದಿಗೆ ಬೆಸೆಯಲು ಯತ್ನಿಸುತ್ತಿದೆ. ಪರಿಸರ ಕೇಂದ್ರಿತ ಆರ್ಥಿಕಾಭಿವೃದ್ಧಿಯೇ (ಇಕೋ-ಎಕನಾಮಿಕ್‌) ಜಗತ್ತಿನ ಭವಿಷ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಉದ್ಯಮಿಗಳು ತಮ್ಮ ಬ್ಯಾಲೆನ್ಸ್ ಶೀಟ್‌ನಲ್ಲಿ ಪರಿಸರದೊಂದಿಗೆ ಸಮತೋಲನ (ಇಕೋ ಬ್ಯಾಲೆನ್ಸಿಂಗ್‌), ಪರಿಸರ ಸ್ನೇಹಿ ಆಯವ್ಯಯ (ಇಕೋ ಬಜೆಟಿಂಗ್‌) ಸಾಧಿಸುವ ಅಂಶಗಳನ್ನು ಹೊಂದಿರಬೇಕು ಎಂದು ಸಲಹೆ ನೀಡಿದರು.

Karnataka Fuel Tax: ರಾಜ್ಯದಲ್ಲೂ ಪೆಟ್ರೋಲ್‌, ಡೀಸೆಲ್‌ ತೆರಿಗೆ ಕಟ್‌?

ಮಧುಮೇಹ ಪರೀಕ್ಷೆ ಮಾಡಲು ಆಧುನಿಕ ವೈದ್ಯಕೀಯ ಉಪಕರಣಗಳು ಲಭ್ಯ ಇವೆ. ಕೋವಿಡ್‌ ಪರೀಕ್ಷೆಯನ್ನೂ ಉಪಕರಣಗಳಿಂದ ಬೇಗ ಮಾಡಬಹುದು. ಇದೇ ರೀತಿ ಮಣ್ಣಿನಲ್ಲಿ ಒಂದೇ ಒಂದು ಪರೀಕ್ಷೆ ಮಾಡಿ ಅದು ಎಷ್ಟು ನೈಟ್ರೋಜನ್‌, ಸಲ್ಫರ್‌ ಹೊಂದಿದೆ ಎಂದು ತಿಳಿಯಲು ಆಧುನಿಕ ತಂತ್ರಜ್ಞಾನಗಳು ಲಭ್ಯವಿವೆ. ಮಣ್ಣಿನ ಆರೋಗ್ಯ ತಿಳಿಯಲು ಎಷ್ಟುವ್ಯಾಪಕವಾಗಿ ಈ ತಂತ್ರಜ್ಞಾನಗಳನ್ನು ಬಳಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಇಂತಹ ತಂತ್ರಜ್ಞಾನ ಬಳಸಿ ಜಮೀನಿನ ಮಣ್ಣಿನ ಫಲವತ್ತತೆಯ ಪ್ರಮಾಣವನ್ನು ದಾಖಲಿಸಿ, ಗುರುತಿಸಿ, ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಬಹುದು. ರಾಜ್ಯ ಸರ್ಕಾರ ಜಾರಿಗೊಳಿಸಿರುವ ’ಭೂ ಚೇತನ ಯೋಜನೆ’ ಈ ಕಾರ್ಯಗಳನ್ನು ಮಾಡುತ್ತಿದೆ ಎಂದು ವಿವರಿಸಿದರು.

click me!