ಭದ್ರಾ ಮೇಲ್ದಂಡೆ ಯೋಜನೆಗೆ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ: ಶಾಸಕ ಎಸ್‌.ವಿ.ರಾಮಚಂದ್ರ

Kannadaprabha News   | Asianet News
Published : Jan 19, 2022, 03:50 AM IST
ಭದ್ರಾ ಮೇಲ್ದಂಡೆ ಯೋಜನೆಗೆ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ: ಶಾಸಕ ಎಸ್‌.ವಿ.ರಾಮಚಂದ್ರ

ಸಾರಾಂಶ

ತಾಲೂಕಿನ ಮಹತ್ವದ ಮತ್ತೊಂದು ಯೋಜನೆಯಾದ 1336 ಕೋಟಿ ವೆಚ್ಚದಲ್ಲಿನ ಭದ್ರಾ ಮೇಲ್ದಂಡೆ ಯೋಜನೆಗೆ ಮುಂದಿನ ತಿಂಗಳು ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ನೆರವೇರಲಿದೆ ಎಂದು ಶಾಸಕ ಎಸ್‌.ವಿ.ರಾಮಚಂದ್ರ ಹೇಳಿದರು. 

ಜಗಳೂರು (ಜ.19): ತಾಲೂಕಿನ ಮಹತ್ವದ ಮತ್ತೊಂದು ಯೋಜನೆಯಾದ 1336 ಕೋಟಿ ವೆಚ್ಚದಲ್ಲಿನ ಭದ್ರಾ ಮೇಲ್ದಂಡೆ ಯೋಜನೆಗೆ (Upper Bhadra Project) ಮುಂದಿನ ತಿಂಗಳು ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ನೆರವೇರಲಿದೆ ಎಂದು ಶಾಸಕ ಎಸ್‌.ವಿ.ರಾಮಚಂದ್ರ (SV Ramachandra) ಹೇಳಿದರು. ತಾಲೂಕಿನ ಹುಚ್ಚವನಹಳ್ಳಿ ಗ್ರಾಮದಲ್ಲಿ ಉಜ್ವಲ ಯೋಜನಯಡಿ ಗ್ಯಾಸ್‌ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನೀರು ತುಂಬಿಸುವ ಯೋಜನೆಗೆ ಪ್ರಾಯೋಗಿಕ ಚಾಲನೆ: ಜನವರಿ 26ರಂದು ತಾಲೂಕಿನ ಮಹತ್ವದ ಯೋಜನೆ ಕೆರೆ ನೀರು ತುಂಬಿಸುವ ಯೋಜನೆಗೆ ಪ್ರಾಯೋಗಿಕ ಚಾಲನೆ ನೀಡಲಾಗುವುದು. ಇನ್ನು ಒಂದುವರೆ ವರ್ಷಗಳ ಒಳಗಾಗಿ ಬರದ ನಾಡು ಹಸಿರು ನಾಡು ಆಗಲಿದೆ. ನಾವು ಕೆಲಸ ಮಾಡಿ ಮಾತು ಕೊಡುತ್ತೇವೆ ವಿನಹ ಸುಳ್ಳು ಭರವಸೆ ನೀಡುವನ್ನಲ್ಲ. ಈ ಭಾಗದ ರೈತರು ಯಾರು ಜಮೀನು ಮಾರಬೇಡಿ ಎಂದು ಮನವಿ ಮಾಡಿದರು. ಹುಚ್ಚವನಹಳ್ಳಿ ಗ್ರಾಮಸ್ಥರಿಂದ ಶಾಸಕ ಎಸ್‌.ವಿ.ರಾಮಚಂದ್ರ, ಡಿ.ಸಿ.ಸಿ.ಬ್ಯಾಂಕ್‌ ಅಧ್ಯಕ್ಷ ವೇಣುಗೋಪಾಲ ರೆಡ್ಡಿಗೆ ಸನ್ಮಾನಿಸಲಾಯಿತು. 

ಶಾಲಾ-ಕಾಲೇಜು ಬಂದ್ ಸೇರಿದಂತೆ ಸರ್ಕಾರಕ್ಕೆ ಕೆಲ ಸಲಹೆ ಕೊಟ್ಟ ಕುಮಾರಸ್ವಾಮಿ

ಈ ಸಂದರ್ಭದಲ್ಲಿ ಡಿ.ಸಿ.ಸಿ.ಬ್ಯಾಂಕ್‌ ಅಧ್ಯಕ್ಷ ವೇಣುಗೋಪಾಲ ರೆಡ್ಡಿ, ಗ್ರಾ.ಪಂ.ಉಪಾಧ್ಯಕ್ಷರು ಅನೂಪ್‌, ಗ್ರಾಪಂ ಅಧ್ಯಕ್ಷರ ಪುತ್ರ ತಿಪ್ಪೇಸ್ವಾಮಿ,ಸದಸ್ಯ ಬೇಬಿ ನಾಗರಾಜ್‌, ವಿ.ಎಸ್‌.ಎಸ್‌.ಎನ್‌.ಅಧ್ಯಕ್ಷ ಯರ್ರಿಸ್ವಾಮಿ, ಮಾಜಿ ಎಪಿಎಂಸಿ ಅಧ್ಯಕ್ಷ ರಘುರಾಮ್‌ ರೆಡ್ಡಿ, ಸೂರ್ಯ ಗ್ಯಾಸ್‌ ಏಜೆನ್ಸಿ ಬಾಬು, ಗ್ರಾಮದ ಮುಖಂಡ ಮಾರುತೇಶ್‌, ರಾಕೇಶ್‌, ಕಮ್ಮವಾರಿ ಸಮಾಜದ ಅಧ್ಯಕ್ಷ ರಂಗನಾಥ ರೆಡ್ಡಿ, ಬಿಜೆಪಿ ಮುಖಂಡರಾದ ಕಾನನಕಟ್ಟೆತಿಪ್ಪೇಸ್ವಾಮಿ, ಕೆ.ಎಸ್‌.ಪ್ರಭುಗೌಡ್ರು, ತಾಯಿಟೋಣಿ ಅರವಿಂದ್‌ ಪಾಟೀಲ್‌, ಡಿ.ಬಿ. ಹಳ್ಳಿ ಶಿವಲಿಂಗಪ್ಪ, ಕೊರಚರಹಟ್ಟಿನಾಗರಾಜ್‌, ಹಾಲೇಹಳ್ಳಿ ಅಮರೇಂದ್ರಪ್ಪ, ಎಚ್‌.ಎಂ.ಹೊಳೆ ರೇವಣ್ಣ, ಸೇರಿದಂತೆ ಇತರರು ಇದ್ದರು.

ಅನುದಾನಕ್ಕೆ ಶಾಸಕರ ಭರವಸೆ: ಗ್ರಾಮೀಣ ಭಾಗದ ಜನರ ಸೌಲಭ್ಯಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾಕಷ್ಟುಯೋಜನೆಗಳು ನೀಡಲಾಗುತ್ತಿದೆ. ಹುಚ್ಚವನಹಳ್ಳಿ ಗ್ರಾಮದಲ್ಲಿ 30 ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ವಿತರಿಸಿದ್ದೇವೆ. ಇನ್ನು ಅಗತ್ಯಪಟ್ಟಿತಯಾರಿಸಿ ವಿತರಿಸಲು ಸೂಚಿಸಲಾಗಿದೆ. ಗ್ರಾಮದ ದೇವಸ್ಥಾನಗಳಿಗೆ 8 ಲಕ್ಷ ಅನುದಾನ, ಹೊಸ ಅಂಗನವಾಡಿ ಕೇಂದ್ರ, ಆಯುರ್ವೇದಿಕ್‌ ಆಸ್ವತ್ರೆಗೆ ಖಾಯಂ ವೈದ್ಯರು, ರಾಷ್ಟ್ರೀಯ ಹೆದ್ದಾರಿಯಿಂದ ಗ್ರಾಮದ ಸಂಪರ್ಕದ ರಸ್ತೆ ಅಭಿವೃದ್ಧಿ, ಮುಸ್ಲಿಂ ಸಮುದಾಯ ಭವನ ಹಾಗೂ ಡಿಪೋ ನಿರ್ಮಾಣದ ನಂತರ ಸರ್ಕಾರಿ ಸಾರಿಗೆ ಸೌಲಭ್ಯ ಹಂತವಾಗಿ ಅನುದಾನ ನೀಡುತ್ತೇನೆ ಎಂದು ಶಾಸಕ ಎಸ್‌.ವಿ.ರಾಮಚಂದ್ರ ಭರವಸೆ ನೀಡಿದರು.

ವೀಕೆಂಡ್‌, ನೈಟ್‍ ಕರ್ಫ್ಯೂ ಸಂಬಂಧ ಅಶ್ವತ್ಥ್ ನಾರಾಯಣ ಭೇಟಿಯಾದ ಹೋಟೆಲ್ ಮಾಲೀಕರ ಸಂಘ

ಸಚಿವ ಸ್ಥಾನ ನನಗೆ ಖಚಿತ ಎಂದ ಮುಖಂಡ: ಜಿಲ್ಲಾ ಮಂತ್ರಿ ಸ್ಥಾನ ನನ್ನನ್ನು ಬಿಟ್ಟು, ಇನ್ಯಾರಿಗೆ ಕೊಡುತ್ತಾರೆ ಹೇಳಿ ಎನ್ನುವ ಮೂಲಕ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್‌.ಎ.ರವೀಂದ್ರನಾಥ್‌ ಸಂಚಲನ ಮೂಡಿಸಿದ್ದಾರೆ.  ನಗರದಲ್ಲಿ ಸೋಮವಾರ 15ರಿಂದ 18 ವರ್ಷದ ವಯೋಮಾನದವರಿಗೆ ಕೋವಿಡ್‌ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ವಿಸ್ತರಣೆಯಾದರೆ ದಾವಣಗೆರೆಗೆ ಪ್ರಾತಿನಿಧ್ಯ ನೀಡುವುದಾದರೆ, ನನಗೇ ಮಂತ್ರಿ ಸ್ಥಾನವನ್ನು ನೀಡಬೇಕು. ನನ್ನ ಬಿಟ್ಟು ಬೇರೆ ಯಾರಿಗೂ ಸಚಿವ ಸ್ಥಾನ ನೀಡಲು ಬರುವುದಿಲ್ಲ ಎಂದು ಹೇಳಿದರು.

ನನಗೆ ಸಚಿವ ಸ್ಥಾನ ನೀಡಲಿ, ನೀಡದಿರಲಿ ಬಿಜೆಪಿ ಕಾರ್ಯಕರ್ತನಾಗಿರುತ್ತೇನೆ. ಆಕಸ್ಮಾತ್‌ ಸಚಿವ ಸಂಪುಟ ವಿಸ್ತರಣೆಯಾದಲ್ಲಿ, ದಾವಣಗೆರೆ ಜಿಲ್ಲೆಗೂ ಪ್ರಾತಿನಿಧ್ಯ ನೀಡುವು ದಾದರೆ ನನಗೇ ಸಚಿವ ಸ್ಥಾನ ನೀಡಬೇಕು. ಬೇರೆಯವರಿಗೆ ನೀಡುವುದಕ್ಕೆ ಬರುವುದಿಲ್ಲ ಎಂದು ಹೇಳಿದರು. ಅನಾರೋಗ್ಯದ ಕಾರಣದಿಂದ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಮಾಡುತ್ತಾರೆಂಬ ಚರ್ಚೆಯೇ ಇಲ್ಲಿ ಅಪ್ರಸ್ತುತ. ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ. ಬೊಮ್ಮಾಯಿ ಸಿಎಂ ಅವಧಿ ಪೂರೈಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ಮಧುಗಿರಿ - ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು