Coronavirus ಪೊಲೀಸ್ರು ಬುದ್ಧಿ ಹೇಳಿದಕ್ಕೆ ಕೊರೋನಾದಿಂದ ಮೃತಪಟ್ಟಿದ್ದ ಹೆತ್ತ ತಾಯಿ ಅಂತ್ಯ ಸಂಸ್ಕಾರಕ್ಕೆ ಬಂದ ಪುತ್ರಿ

Published : Jan 18, 2022, 11:44 PM IST
Coronavirus ಪೊಲೀಸ್ರು ಬುದ್ಧಿ ಹೇಳಿದಕ್ಕೆ ಕೊರೋನಾದಿಂದ ಮೃತಪಟ್ಟಿದ್ದ ಹೆತ್ತ ತಾಯಿ ಅಂತ್ಯ ಸಂಸ್ಕಾರಕ್ಕೆ ಬಂದ ಪುತ್ರಿ

ಸಾರಾಂಶ

* ಮಾನವೀಯ ಸಂಬಂಧ ಕಿತ್ತುಕೊಂಡ ಕೊರೊನಾ * ಕೊವೀಡ್ ನಿಂದ ಮೃತಪಟ್ಟ ತಾಯಿಯನ್ನ ನೋಡಲು ಬಾರದ ಮಗಳು * ಒಂದೂವರೆ ದಿನ ಕಳೆದ್ರು ತಾಯಿಯನ್ನ ನೋಡಲು ಬಾರದ ಮಗಳು * ಭಾಗ್ಯಲಕ್ಷ್ಮೀ (52) ಕೋವಿಡ್ ನಿಂದ ಮೃತಪಟ್ಟ ಮಹಿಳೆ

ಬೆಂಗಳೂರು, (ಜ.18)  ಈ ಮಹಾಮಾರಿ ಕೊರೊನಾ ಜನರಲ್ಲಿ ಮಾನವೀಯ ಸಂಬಂಧ ಕಿತ್ತುಕೊಂಡಿದೆ.  ಕೊರೋನಾದಿಂದ ಮೃತಪಟ್ಟ ಪೋಷಕರನ್ನು ನೋಡಲು ಮಕ್ಕಳು ಬರುತ್ತಿಲ್ಲ. 

ಪೋಷಕರಿಗೆ ಕೊರ)ನಾ ತಗುಲಿದೆ ಎಂದು ತಿಳಿಯುತ್ತಿದ್ದಂತೆ ಅವರಿಂದ ದೂರ ಉಳಿಯುತ್ತಿದ್ದಾರೆ. ಇದರಂತೆ ತ್ತಮ್ಮ ಕೊರೊನಾದಿಂದ ಮೃತಪಟ್ಟ ಸುದ್ದಿ ತಿಳಿಸಿದರೂ ಮಗಳು ಬರಲಿಲ್ಲ. ಕೊನೆಗೆ ಪೊಲೀಸರು ಬುದ್ಧಿ ಹೇಳಿದಕ್ಕೆ ತಾಯಿಯ ಕೊನೆ ಮುಖ ನೋಡಿದ್ದಾಳೆ ಮಗಳು.

ಹೌದು...ಮೂಲತಃ ಮಂಡ್ಯದವರಾಗಿದ್ದ ಭಾಗ್ಯಲಕ್ಷ್ಮೀ (52) ಸಂಜಯ್ ನಗರ ಗೆದ್ದಲಹಳ್ಳಿಯಲ್ಲಿ ವಾಸವಾಗಿದ್ದರು. ಆದ್ರೆ, ಕೋವಿಡ್ ನಿಂದ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ತಾಯಿ ಮೃತಪಟ್ಟಿರುವ ವಿಷಯವನ್ನು ಅಧಿಕಾರಿಗಳು ಫೋನ್ ಮೂಲಕ ತಿಳಿಸಿದ್ದಾರೆ. 

ಬಳ್ಳಾರಿ : ಮಾನಸಿಕ ಅಸ್ವಸ್ಥನ ಅಂತ್ಯಕ್ರಿಯೆಗೆ ಸಾವಿರಾರು ಜನ!

ಶುಕ್ರವಾರ ಆರೋಗ್ಯ ಸರಿಯಿಲ್ಲ ಅಂತ ಭಾಗ್ಯಲಕ್ಷ್ಮೀ ಪರಿಚವಾಗಿದ್ದ ಸಂಶೀರ್ ಎನ್ನುವಾತನಿಗೆ ಕರೆ ಮಾಡಿ ತಿಳಿಸಿದ್ದಾಳೆ.  ವಿಷಯ ತಿಳಿದ ಸಂಶೀರ್, ಭಾಗ್ಯಲಕ್ಷ್ಮೀಯನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಈ ವಿಚಾರವನ್ನು ಸಂಜಯ್ ನಗರ ಎಎಸ್ಐ ಶ್ರೀನಿವಾಸ್ ಗೆ ತಿಳಿಸಿದ್ದಾರೆ.

ಮೂರು ದಿನಗಳಿಂದ ಮಗಳು ಮತ್ತು ಅಳಿಯನಿಗೆ ಕಾಲ್ ಮಾಡಿ ವಿಚಾರ ತಿಳಿಸಿದ್ರೆ ಅವರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಅಂತ ಕಾಲ್ ಕಟ್ ಮಾಡಿದ್ದಾರೆ.ಆಸ್ಪತ್ರೆಯ ಎಲ್ಲಾ ವೆಚ್ಚವನ್ನು ಸಂಶೀರ್ ನೋಡಿಕೊಂಡಿದ್ದಾನೆ. ಆದ್ರೆ,  ಆಸ್ಪತ್ರೆಯಲ್ಲಿ ಕೋವಿಡ್ ಪಾಸಿಟಿವ್ ಆಗಿದೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ(ಜ.17)  ಭಾಗ್ಯಲಕ್ಷ್ಮೀ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದಾಳೆ.  ನಂತರ ಎಎಸ್ಐ ಶ್ರೀನಿವಾಸ್ ಮತ್ತು ಸಂಶೀರ್ ಕಾಲ್ ಅಳಿಯನಿಗೆ ಕರೆ ಮಾಡಿ ಮಾಡಿದ್ರೆ  ನೀವೆ ಏನಾದರೂ ಮಾಡಿಕೊಳ್ಳಿ ಅಂತ ಕಾಲ್ ಮಾಡಿದ್ದಾರೆ.  ರಾತ್ರಿಯಿಡೀ ಹೆಬ್ಬಾಳ ಶಾಂತಿಧಾಮದಲ್ಲೇ ಶವವಿಟ್ಟು ಕಾದಿದ್ದಾರೆ. ಆದರೂ ಅಳಿಯ, ಮಗಳ ಬಂದಿರಲಿಲ್ಲ.

ಕೊನೆಗೆ ಸಂಜಯ್ ಪೊಲೀಸ್ ಸ್ಟೇಷನ್ ಗೆ ಕರೆಸಿಕೊಂಡು ಬುದ್ದಿ ಹೇಳಿದ್ದಾರೆ. ಬಳಿಕ ಮನಪರಿವರ್ತನೆಯಾಗಿದ್ದು, ಸದ್ಯ ಅಂತ್ಯ ಸಂಸ್ಕಾರ ಮಾಡಲು ಮಗಳು ಅಳಿಯ ಒಪ್ಪಿಕೊಂಡಿದ್ದಾರೆ.  ನಂತರ  ಮಗಳು ಮಧುಶ್ರೀ ಅವರಿಗೆ  ಸಂಜಯನಗರ ಪೊಲೀಸರು ‌ಮೃತದೇಹವನ್ನು ಹಸ್ತಾಂತರ ಮಾಡಿದರು. ಬಳಿಕ ಬಳಿಕ ಮಧುಶ್ರೀ ಹೆಬ್ಬಾಳ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು.

ಏರ್ಪೋರ್ಸ್ ನಲ್ಲಿ ಕೆಲಸ ಮಾಡ್ತಿದ್ದ ಭಾಗ್ಯಲಕ್ಷ್ಮೀ ಪತಿ. ಆತ ತೀರಿಕೊಂಡ ಮೇಲೆ ಆತನ ಕೆಲಸವನ್ನು ಏರ್ಪೋರ್ಸ್ ಪತ್ನಿ ಭಾಗ್ಯಲಕ್ಷ್ಮೀ ಗೆ ನೀಡಿತ್ತು. 

ಇನ್ನು ಮಗಳು ಅಳಿಯ ಆರ್ ಆರ್ ನಗರದಲ್ಲಿ ವಾಸವಾಗಿದ್ದಾರೆ.  ಹತ್ತು ವರ್ಷಗಳ ಹಿಂದೆ ಸಣ್ಣಪುಟ್ಟ ವಿಚಾರಕ್ಕೆ ಭಾಗ್ಯಲಕ್ಷ್ಮೀ ಮತ್ತು ಮಗಳಿಗೆ ಜಗಳವಾಗಿತ್ತಂತೆ. ಇಲ್ಲಿಯವರೆಗೆ ಮಾತುಕತೆ ಬಿಟ್ಟಿದ್ದರಂತೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ