ಬೆಳಗಾವಿಯಲ್ಲಿ ವಿಧಾನ ಮಂಡಲ ಚಳಿಗಾಲ ಅಧಿವೇಶನ ನಡೆಯುವುದಕ್ಕೂ ಮುನ್ನ, ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ನಡೆಸುವ ಬಗ್ಗೆ ಸೇರಿದಂತೆ ವಿವಿಧ ವಿಚಾರಗಳ ಚರ್ಚೆಗೆ ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಂಪುಟ ಸಭೆ ನಡೆದಿದ್ದು, ಡಿಸೆಂಬರ್ 19 ರಿಂದ ಚಳಿಗಾಲ ಅಧಿವೇಶನ ಆರಂಭವಾಗಲಿದೆ.
ಬೆಂಗಳೂರು (ನ.17): ಬೆಳಗಾವಿಯಲ್ಲಿ ವಿಧಾನ ಮಂಡಲ ಚಳಿಗಾಲ ಅಧಿವೇಶನ ಡಿಸೆಂಬರ್ 19ರಿಂದ ಡಿಸೆಂಬರ್ 30 ವರೆಗೆ ನಡೆಯಲಿದೆ. ಈ ಬಗ್ಗೆ ಇಂದು ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದರ ಜೊತೆಗೆ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರ ಕೈಗೊಳಗ್ಳಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗುವ ವಿಷಯಗಳ ವಿವರ ಇಲ್ಲಿದೆ.
ಎನ್ ಹೆಚ್ ಎಂ ಫಂಡ್ ನಲ್ಲಿ ಆಸ್ಪತ್ರೆಗಳ ಮೇಲ್ದರ್ಜೆಗೇರಿಸಲು ಸಂಪುಟ ಸಭೆಯಲ್ಲಿ ತಿರ್ಮಾನ ತೆಗೆದುಕೊಳ್ಳಲಾಗಿದೆ. ಏಳು ಆಸ್ಪತ್ರೆಗಳಿಗೆ 158 ಕೋಟಿ ಅನುದಾನಕ್ಕೆ ಒಪ್ಪಿಗೆ ನೀಡಲಾಗಿದೆ. ತಾಯಿ ಮತ್ತು ಮಗು ಆಸ್ಪತ್ರೆ ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದ್ದು, ತರಿಕೆರೆಯಲ್ಲಿ 100 ಹಾಸಿಗೆ ತಾಯಿ ಮಗು ಆಸ್ಪತ್ರೆ, ಲಿಂಗಸುಗೂರಿನಲ್ಲಿ 59 ಹಾಸಿಗೆ ತಾಯಿ ಮಗು ಆಸ್ಪತ್ರೆ, ಹರಿಹರದಲ್ಲಿ50 ಹಾಸಿಗೆ ತಾಯಿ ಮಗು ಆಸ್ಪತ್ರೆ, ಗೋಕಾಕ್ ನಲ್ಲಿ 200 ಬೆಡ್ ತಾಯಿ ಮಗು ಆಸ್ಪತ್ರೆ ಮೇಲ್ದರ್ಜೆಗೆ ಅನುಮತಿ ನೀಡಲಾಗಿದೆ.
ಇನ್ನು ಶ್ರೀಕಂಠೇಶ್ವರ ದೇಗುಲ ವಿಐಪಿ ಕೊಠಡಿ ನಿರ್ಮಾಣಕ್ಕೆ 16 ಕೋಟಿ, ಇಎಸ್ ಐ ಆಸ್ಪತ್ರೆ ಉಪಕರಣ ಖರೀದಿಗೆ ಸಂಪುಟ ಒಪ್ಪಿಗೆ ನೀಡಿದೆ. ಸುಮಾರು 44 ಕೋಟಿ ವೆಚ್ಷಕ್ಕೆ ಅನುಮೋದನೆ ಸಿಕ್ಕಿದೆ. ಬಳ್ಳಾರಿ ತಾಲೂಕಿನ 6 ಜನವಸತಿ ಪ್ರದೇಶಕ್ಕೆ ನೀರು. ಕುಡಿಯುವ ನೀರು ಪೂರೈಕೆಗೆ 11 ಕೋಟಿ, ಅಂಜನಾಪುರದಲ್ಲಿ ಸಾರಿಗೆ ಕಟ್ಟಡ ನಿರ್ಮಾಣ.ಇದಕ್ಕಾಗಿ 25 ಕೋಟಿ ಅನುದಾನ ನೀಡಲು ಸಂಪುಟ ಒಪ್ಪಿಗೆ ಸೂಚಿಸಿದೆ.
ಅತಿ ಸಣ್ಣ ಕುಶಲಕರ್ಮಿಗಳಿಗೆ ಸಾಲ ಯೋಜನೆ. 15 ರಿಂದ 35 ಸಾವಿರದವರೆಗೆ ಸಾಲ ಸೌಲಭ್ಯ. ಸಾಲ ಸೌಲಭ್ಯ ಯೋಜನೆಗೆ ಸಂಪುಟ ಒಪ್ಪಿಗೆ ಸಾಧ್ಯತೆ. ಇದರ ಜೊತೆಗೆ ಸಿವಿಲ್ ಸೇವೆಗಳ ತಿದ್ದುಪಡಿ ನಿಯಮಕ್ಕೆ ಒಪ್ಪಿಗೆ ಸಾಧ್ಯತೆ. ಶ್ರೀಗಂಧ ಬೆಳೆಗಾರರಿಗೆ ಅನುಕೂಲ ಕಲ್ಪಿಸುವ ಬಗ್ಗೆ ಚರ್ಚೆ ನಡೆಯಲಿದ್ದು, ನೂತನ ಶ್ರೀಗಂಧ ನೀತಿ-2022ಕ್ಕೆ ಒಪ್ಪಿಗೆ ಸಾಧ್ಯತೆ ಇದೆ. ನೂತನ ವನ್ಯಜೀವಿಧಾಮ ಪ್ರಸ್ತಾವನೆಗೆ ಒಪ್ಪಿಗೆ ಸಾಧ್ಯತೆ. ತುಮಕೂರು ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸಲು ಒಪ್ಪಿಗೆ. 56 ಕೋಟಿ ವೆಚ್ಚ ನೀಡಲು ಅನುಮತಿ ಸಾಧ್ಯತೆ.
ಇನ್ನು ಉಪಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಉಪಕರಣ. ರೋಗಪತ್ತೆ ಕಿಟ್ ಖರೀದಿಗೆ 154 ಕೋಟಿ ವೆಚ್ಚಕ್ಕೆ ಒಪ್ಪಿಗೆ ಸಾಧ್ಯತೆ. ಚಾಮರಾಜನಗರ ವೈದ್ಯಕೀಯ ವಿಜ್ಙಾನ ಸಂಸ್ಥೆಗೆ ಹೊಸ ಘಟಕ. 49 ಕೋಟಿ ರೂ ವೆಚ್ಚದಲ್ಲಿ ತೀರ್ವ ನಿಗಾ ಘಟಕಕ್ಕೆ ಒಪ್ಪಿಗೆ ಸಾಧ್ಯತೆ. ಜಿಲ್ಲೆಗಳ ಮಹಿಳಾ ಮಕ್ಕಳ ಆಸ್ಪತ್ರೆ ಮೇಲ್ದರ್ಜೆಗೆ. ಚಿಕ್ಕಬಳ್ಳಾಪುರ, ದಾವಣಗೆರೆ, ಚಿಕ್ಕಮಗಳೂರು, ರಾಯಚೂರು, ಬಾಗಲಕೋಟೆ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು 158 ಕೋಟಿ ಅನುದಾನ ಸಾಧ್ಯತೆ. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಟ್ರಾಮಾಕೇರ್ ಸೆಂಟರ್ ಸ್ಥಾಪನೆ? ತುಮಕೂರು ನರ್ಸಿಂಗ್ ಕಾಲೇಜು ನಿರ್ಮಾಣಕ್ಕೆ 20 ಕೋಟಿ?
ಬಳ್ಳಾರಿಗೆ ವಿಮಾನ ನಿಲ್ದಾಣ, ಎರಡು ಹೊಸ ಕ್ರಿಕೆಟ್ ಕ್ರೀಡಾಂಗಣ: ಕ್ಯಾಬಿನೆಟ್ ಸಭೆಯ ಮುಖ್ಯಾಂಶ
ಧಾರವಾಡ ಹಳಿಯಾಳ ಬಳಿ ಲೆವೆಲ್ ಕ್ರಾಸಿಂಗ್ ನಿರ್ಮಾಣ. ಸುಮಾರು 41 ಕೋಟಿ ವೆಚ್ಚಕ್ಕೆ ಒಪ್ಪಿಗೆ ಸಾಧ್ಯತೆ. ಗಡಿ ಪ್ರದೇಶ ಅಭಿವೃದ್ಧಿ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ ಸಾಧ್ಯತೆ. ಬಳ್ಳಾರಿ ತಾಲೂಕಿನ 6 ಜನವಸತಿ ಪ್ರದೇಶಕ್ಕೆ ಕುಡಿಯುವ ನೀರು ಪೂರೈಕೆಗೆ 11ಕೋಟಿ. ಅಂಜನಾಪುರದಲ್ಲಿ ಸಾರಿಗೆ ಕಟ್ಟಡ ನಿರ್ಮಾಣ. ಇದಕ್ಕಾಗಿ 25 ಕೋಟಿ ಅನುದಾನ ನೀಡಲು ಒಪ್ಪಿಗೆ ಸಾಧ್ಯತೆ. ಬೆಳಗಾವಿ ಚಳಿಗಾಲದ ಅಧಿವೇಶನ ದಿನಾಂಕ ನಿಗದಿ ಸಾಧ್ಯತೆ.