ಪ್ರಧಾನಿ ನರೇಂದ್ರ ಮೋದಿ ಅವರು 20 ಗಂಟೆಗಳ ಕರ್ನಾಟಕ ಪ್ರವಾಸ ಮುಗಿಸಿ ದೆಹಲಿಗೆ ವಾಪಸ್ ಆಗಿದ್ದಾರೆ. ಆದ್ರೆ, ಕೇರಳದ ತಿರುವನಂತಪುರಕ್ಕೆ ಹೋಗಬೇಕಿದ್ದ ಮೋದಿ ದಿಢೀರ್ ದಿಲ್ಲಿಗೆ ತೆರಳಿರುವುದು ಕುತೂಹಲ ಮೂಡಿಸಿದೆ.
ಮೈಸೂರು, (ಜೂನ್.21): ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಕರ್ನಾಟಕಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ಮಂಗಳವಾರ) ದೆಹಲಿಗೆ ವಾಪಸ್ ಆದರು. ಮೈಸೂರಿನಿಂದ ಕೇರಳದ ತಿರುವಂತನಪುರಕ್ಕೆ ಹೋಗಬೇಕಿದ್ದ ಮೋದಿ ದಿಢೀರ್ ದೆಹಲಿಎ ತೆರಳಿರುವುದು ಕುತೂಹಲ ಮೂಡಿಸಿದೆ.
ನಿನ್ನೆ(ಸೋಮವಾರ) ಬೆಂಗಳೂರಿಗೆ ಬಂದಿದ್ದ ಮೋದಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಜೆ ಮೈಸೂರಿಗೆ ಭೇಟಿ ನೀಡಿದ್ರು. ಮೈಸೂರಿನಲ್ಲೂ ಸಹ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಬಹುಸಾವಿರ ಕೋಟಿ ರೂ.ಗಳ ಮೊತ್ತದ ಯೋಜನೆಗಳಿಗೆ ಅಡಿಗಲ್ಲು ಮತ್ತು ಉದ್ಘಾಟನೆಗಳನ್ನು ಮಾಡಿದ್ರು. ಅಲ್ಲದೇ ಇಂದು ಯೋಗದಲ್ಲಿ ಭಾಗವಹಿಸಿ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದರು.
ಮೈಸೂರಲ್ಲಿ ವಿಶ್ವ ಯೋಗ ದಿನಾಚರಣೆ: ಪ್ರಧಾನಿ ಮೋದಿ ಯಾವೆಲ್ಲ ಯೋಗಾಸನ ಮಾಡಿದ್ರು?
ಸಾಂಸ್ಕೃತಿನ ನಗರಿ ಮೈಸೂರಿನಲ್ಲಿ ನಡೆಯಲಿರುವ ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗವಹಿಸುವುದು ಪ್ರಧಾನಿ ಮೋದಿ ಅವರ ಭೇಟಿಯ ಮುಖ್ಯ ಉದ್ದೇಶವಾಗಿದ್ದು, ಅದರೊಂದಿಗೆ ಅಭಿವೃದ್ಧಿ ಪಥವನ್ನು ಜೋಡಿಸಿ ಬೆಂಗಳೂರು ಬ್ರಾಂಡ್ಗೆ ಹೊಸ ಹೊಳಪು ನೀಡಲು ರಾಜ್ಯ ನಾಯಕತ್ವ ಮುಂದಾಗಿದೆ.
ಯೋಗಾಭ್ಯಾಸದ ಬಳಿಕ ಮೈಸೂರು ರಾಜಮನೆತನದ ಜೊತೆ ಅರಮನೆಯಲ್ಲಿ ಉಪಹಾರ ಸೇವನೆ ಮಾಡಿ ಕೈ ಮುಗಿದು ಮೈಸೂರು ಅರಮನೆಯಿಂದ ನಿರ್ಗಮಿಸಿದ ಮೋದಿ, ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ತೆರಳುವಾಗಲೂ ಕೈ ಮುಗಿದರು. ಈ ಮೂಲಕ ಸಾಂಸ್ಕೃತಿಕ ನಗರಿ ಜನತೆಗೆ ಧನ್ಯವಾದ ತಿಳಿಸಿದರು.
ಇನ್ನು ವಿಮಾನ ನಿಲ್ದಾಣಕ್ಕೆ ಮೋದಿ ತೆರಳುತ್ತಿದ್ದ ರಸ್ತೆಯುದ್ದಕ್ಕೂ ಜಮಾವಣೆಯಾಗಿದ್ದ ಮೋದಿ.. ಮೋದಿ.. ಎಂದು ಜೈಕಾರ ಕೂಗುತ್ತಿದ್ದರು. ನಂಜನಗೂಡು ರಸ್ತೆಯ JSS ಕಾಲೇಜು ಬಳಿ ಬಿಜೆಪಿ ಬಾವುಟ, ಮೋದಿ ಭಾವಚಿತ್ರ ಹಿಡಿದು ಸಹಸ್ರಾರು ಜನ ಸೇರಿದ್ರು.
ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 20 ಗಂಟೆಗಳ ಕರ್ನಾಟಕ ಪ್ರವಾಸ ಮುಗಿಸಿ ದೆಹಲಿಗೆ ವಾಪಸ್ ಆಗಿದ್ದಾರೆ