ಕುಮಾರಕೃಪ ಸರ್ಕಲ್ ಬಳಿ ಇರುವ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಕಲಾವಿದರಿಗೆ ವೇದಿಕೆ ಕಲ್ಪಿಸುವ, ಕಲಾಭಿಮಾನಿಗಳ ಬಹು ನಿರೀಕ್ಷೆಯ 20ನೇ ‘ಚಿತ್ರಸಂತೆ’ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನವಿಲು ಚಿತ್ರ ಬಿಡಿಸುವ ಮೂಲಕ ಚಾಲನೆ ನೀಡಿದರು.
ಬೆಂಗಳೂರು (ಜ.08): ಕುಮಾರಕೃಪ ಸರ್ಕಲ್ ಬಳಿ ಇರುವ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಕಲಾವಿದರಿಗೆ ವೇದಿಕೆ ಕಲ್ಪಿಸುವ, ಕಲಾಭಿಮಾನಿಗಳ ಬಹು ನಿರೀಕ್ಷೆಯ 20ನೇ ‘ಚಿತ್ರಸಂತೆ’ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನವಿಲು ಚಿತ್ರ ಬಿಡಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆ ಪ್ರೇಕ್ಷಕರು ಚಪ್ಪಳೆ ಹೊಡೆದರು. ವಿನ್ಸರ್ ಮ್ಯಾನರ್ ಕಡೆಯಿಂದ ಸಿಕೆಪಿವರೆಗೂ ತೆರೆದ ವಾಹನದಲ್ಲಿ ಕಲಾವಿದರ ಪೈಂಟಿಂಗ್ ಅನ್ನು ಸಿಎಂ ಬೊಮ್ಮಾಯಿ ವೀಕ್ಷಿಸಿದರು. ಈ ವೇಳೆ ಸಿಎಂಗೆ ಸಚಿವ ಅಶ್ವತ್ಥ್ ನಾರಾಯಣ್, ಸ್ಥಳೀಯ ಶಾಸಕ ರಿಜ್ವಾನ್ ಅರ್ಷದ್, ಸಂಸದ ಪಿ.ಸಿ ಮೋಹನ್, ಸಿಕೆಪಿ ಅಧ್ಯಕ್ಷ ಬಿಎಲ್ ಶಂಕರ್ ಸಾಥ್ ನೀಡಿದರು.
ಚಿತ್ರಸಂತೆಗೆ ಚಾಲನೆ ನೀಡಿ ನಂತರ ಮಾತನಾಡಿದ ಸಿಎಂ ಬೊಮ್ಮಾಯಿ, ಚಿತ್ರಕಲೆ ಮನಸ್ಸಿನ ಭಾವನೆಗಳನ್ನ ವ್ಯಕ್ತಪಡಿಸುವ ಒಂದು ಮಾಧ್ಯಮ, ಮನದಾಳದ ಮಾತುಗಳು ಮತ್ತು ಭಾವನೆಗಳನ್ನ ಚಿತ್ರಕಲೆ ಮೂಲಕ ವ್ಯಕ್ತಪಡಿಸಲಾಗುತ್ತೆ. ಚಿತ್ರಕಲೆ ತಿಳಿದುಕೊಳ್ಳುವ ಪ್ರಯತ್ನ ಸಾರ್ವಜನಿಕರು ಮಾಡಬೇಕು. ಚಿತ್ರಕಲಾ ಪರಿಷತ್ತು ಕೆಲಸ ಒಳ್ಳೆಯ ಕಲಾವಿದರಿಗೆ ಅವಕಾಶ ಮಾಡಿಕೊಡಬೇಕು ಹಾಗೂ ಸಾಮಾನ್ಯ ಜನರಲ್ಲಿ ಚಿತ್ರಕಲೆ ಅಭಿಪ್ರಾಯ ಮೂಡಿಸೋದು. ಚಿತ್ರಕಲಾ ಪರಿಷತ್ತ ವಿಶ್ವದಲ್ಲೇ ಮೊತ್ತೊಂದು ಇಲ್ಲ. ಚಿತ್ರಕಲಾ ಪರಿಷತ್ತ್ ಒಳ್ಳೆಯ ಕೆಲಸ ಮಾಡ್ತಿದೆ.
Chitra Santhe 2023: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಕಲಾಕೃತಿಗಳ ಚಿತ್ರ ಸಂತೆ
ಚಿತ್ರಸಂತೆ ಆಗಲೇ ಬೇಕಾಗಿರುವ ಸಂತೆ. ಇದು ಬೆಳೆಯಬೇಕು ಇಲ್ಲಿ ಡಿಗ್ರಿ ಆದತಕ್ಷಣ ನೌಕರಿ ತಗೆದುಕೊಳ್ಳೊದಿಲ್ಲ. ನಮ್ಮ ಸಂಸ್ಕೃತಿಯನ್ನ ಪ್ರತಿಬಿಂಬಿಸುವ ಸಂಸ್ಥೆ. ಇದು ಸರಸ್ವತಿ ವಾಹನ ಪರಮಹಂಸ.. ಈ ಸಂಸ್ಥೆ ಹಿಮಾಲಯದ ಎತ್ತರಕ್ಕೆ ಬೆಳಯಬೇಕು. ಉತ್ತರ ಕರ್ನಾಟಕ , ದಕ್ಷಿಣ ಕರ್ನಾಟಕ, ಕರಾವಳಿ ಕರ್ನಾಟಕ .ಈ ವರ್ಷ ನಾಲ್ಕೈದು ಭಾಗಗಳಲ್ಲಿ ಚಿತ್ರ ಸಂತೆ ಮಾಡಬೇಕು ಎಂದು ಸಿಎಂ ಸಲಹೆ ನೀಡಿದರು. ಇದಕ್ಕೆ ಸರ್ಕಾರ ಎಲ್ಲಾ ನೆರವು ನೀಡಲಿದೆ. ಈ ಚಿತ್ರಸಂತೆಯನ್ನ ರಾಷ್ಟ್ರೀಯ ಮಟ್ಟಕ್ಕೆ ತಗೆದುಕೊಂಡು ಹೋಗಬೇಕು. ಬ್ಯಾಂಡ್ ಬೆಂಗಳೂರನ್ನ ರಾಷ್ಟ್ರೀಯ ಮಟ್ಟಕ್ಕೆ ತಗೆದುಕೊಂಡುವದ್ರಲ್ಲಿ ಚಿತ್ರಕಲಾ ಪರಿಷತ್‌ಗೆ ತಗೆದುಕೊಂಡು ಹೋಗಬೇಕು ಎಂದರು.
ಅತ್ಯಂತ ಸಂತೋಷದಿಂದ ಚಿತ್ರಸಂತೆ ಉದ್ಘಾಟನೆ ಮಾಡ್ತಿದ್ದೇನೆ. ಮುಂದಿನ ವರ್ಷದಿಂದ ಎರಡು ದಿವಸ ಚಿತ್ರಸಂತೆ ಮಾಡಿ. ಕೇವಲ ಒಂದು ದಿನ ಅಲ್ಲ. ಶನಿವಾರ ಮತ್ತು ಭಾನುವಾರ ಎರಡು ದಿವಸ ಚಿತ್ರ ಸಂತೆ ಮಾಡಿ ಎಂದು ಪರಿಷತ್‌ಗೆ ಸಿಎಂ ಸಲಹೆ ನೀಡಿದ್ದು, ಕೇವಲ ಚಿತ್ರ ಸಂತೆ ನೋಡೋದ್ ಅಲ್ಲ, ಖರೀದಿ ಮಾಡಿ ಕಲಾವಿದರಿಗೂ ಸಹಾಯವಾಗುತ್ತೆ. ನಾನು ಕೂಡ ಚಿತ್ರಸಂತೆಯಲ್ಲಿ ಖರೀದಿ ಮಾಡ್ತೀನಿ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ದೇಶ-ವಿದೇಶದ ಕಲಾವಿದರ ಆಗಮನ: ದೇಶ-ವಿದೇಶಗಳಿಂದ ಆಗಮಿಸುವ ನೂರಾರು ಕಲಾವಿದರು ಚಿತ್ರಸಂತೆಯಲ್ಲಿ ತಮ್ಮ ಕಲಾಕೃತಿಗಳ ಪ್ರದರ್ಶನ, ಮಾರಾಟ ಮಾಡಲಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಜಾರ್ಖಂಡ್, ಒಡಿಶಾ ಸೇರಿದಂತೆ ಹಲವು ರಾಜ್ಯಗಳ ಕಲಾವಿದರು ಆಗಮಿಸಲಿದ್ದಾರೆ. ಚಿತ್ರಕಲಾ ಪರಿಷತ್‌ನ ಕಲಾ ಗ್ಯಾಲರಿಗಳಲ್ಲಿ ಪ್ರಶಸ್ತಿಗೆ ಭಾಜನರಾಗಿರುವ ಕಲಾವಿದರ ಕಲಾಕೃತಿಗಳ ಜೊತೆಗೆ ಮೈಸೂರಿನ ಸಾಂಪ್ರದಾಯಿಕ ಶೈಲಿಯ ಕಲಾಕೃತಿಗಳು, ತೊಗಲು ಬೊಂಬೆ ಮತ್ತಿತರ ಕಲಾಕೃತಿಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
8 ದಿನಗಳ ಚಿಕ್ಕಬಳ್ಳಾಪುರ ಉತ್ಸವಕ್ಕೆ ಅದ್ಧೂರಿ ಚಾಲನೆ: ದಸರಾ ಜಂಬೂ ಸವಾರಿ ಶೈಲಿಯಲ್ಲಿ ಮೆರವಣಿಗೆ
ಅಂಗವಿಕಲರು ಮತ್ತು ಹಿರಿಯ ಕಲಾವಿದರಿಗೆ ಪರಿಷತ್‌ನ ಆವರಣದಲ್ಲೇ ಕಲಾಕೃತಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಚಿತ್ರಸಂತೆ ನಡೆಯುವ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ದು, ಬಿಎಂಟಿಸಿ ಬಸ್‌ಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಲಿವೆ. ಭಾರತ ಸೇವಾ ದಳದ ಆವರಣ, ರೇಸ್‌ಕೋರ್ಸ್ ರಸ್ತೆ, ಕ್ರೆಸೆಂಟ್ ರಸ್ತೆಯಲ್ಲಿ ಸಾರ್ವಜನಿಕರ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.