ಹಂಪಿಯ ವಿರೂಪಾಕ್ಷೇಶ್ವರ ದೇವಾಲಯದ ಉತ್ತರ ಬಾಗಿಲಿನ ಕಂಬಕ್ಕೆ ಮೊಳೆ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪದ ಆರೋಪದ ಮೇರೆಗೆ ದೇಗುಲದ ಗುಮಾಸ್ತ ಬಿ.ಜಿ. ಶ್ರೀನಿವಾಸ್ ಎಂಬವರನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಗಂಗಾಧರ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಹೊಸಪೇಟೆ (ನ.21) : ಹಂಪಿಯ ವಿರೂಪಾಕ್ಷೇಶ್ವರ ದೇವಾಲಯದ ಉತ್ತರ ಬಾಗಿಲಿನ ಕಂಬಕ್ಕೆ ಮೊಳೆ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪದ ಆರೋಪದ ಮೇರೆಗೆ ದೇಗುಲದ ಗುಮಾಸ್ತ ಬಿ.ಜಿ. ಶ್ರೀನಿವಾಸ್ ಎಂಬವರನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಗಂಗಾಧರ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಪುರಾತತ್ವ ಇಲಾಖೆ ಅನುಮತಿ ಪಡೆಯದೇ ಹಂಪಿ ವಿರೂಪಾಕ್ಷೇಶ್ವರ ದೇಗುಲ ಕಂಬಕ್ಕೆ ಮೊಳೆ ಹೊಡೆದ ಧಾರ್ಮಿಕ ದತ್ತಿ ಇಲಾಖೆ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ರ‍್ಯಾಂಪ್ ಅಳವಡಿಕೆಗಾಗಿ ನ. ೧೧ರಂದು ಮೊಳೆ ಹೊಡೆಯಲಾಗಿತ್ತು. ಈ ಸಮಯದಲ್ಲಿ ಇದನ್ನು ತಡೆಯದೇ ಕರ್ತವ್ಯಲೋಪವೆಸಗಲಾಗಿದೆ ಎಂದು ಶ್ರೀನಿವಾಸ್ ಅವರನ್ನು ಅಮಾನತುಗೊಳಿಸಲಾಗಿದೆ.
undefined
ವರ್ಷಪೂರ್ತಿ ಸುವರ್ಣ ಸಂಭ್ರಮದಲ್ಲಿ ಕರ್ನಾಟಕ: ಕನ್ನಡ ಜ್ಯೋತಿ ರಥಯಾತ್ರೆಗೆ ಹಂಪಿಯಲ್ಲಿಂದು ಸಿಎಂ ಚಾಲನೆ
ವಿರೂಪಾಕ್ಷ ದೇಗುಲ ಪುರಾತತ್ವ ಇಲಾಖೆ ಸುಪರ್ದಿಗೆ ಬರುತ್ತದೆ. ಹೀಗಾಗಿ ಇಲ್ಲಿ ಏನೇ ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ಪುರಾತತ್ವ ಇಲಾಖೆಯಿಂದ ಅನುಮತಿ ಪಡೆಯಬೇಕಿತ್ತು. ಆದರೆ ಯಾವುದೇ ಅನುಮತಿ ಪಡೆಯದೇ ಸ್ಮಾರಕಗಳಿಗೆ ಡ್ರಿಲ್ ಹೊಡೆದು ಮೊಳೆ ಹೊಡೆಯಲಾಗಿತ್ತು.. ದೇಗುಲದ ಉತ್ತರ ದಿಕ್ಕಿನಲ್ಲಿ ಗೇಟ್ ಕೂರಿಸಲು ಮೊಳೆ ಹೊಡೆಯಲಾಗಿತ್ತು.. ಭಕ್ತರು ಸರತಿ ಸಾಲಿನಲ್ಲಿ ಹೋಗಲು ತಂತಿ ಬೇಲಿ ನಿರ್ಮಿಸಲು ಮುಂದಾಗಿರೋ ಧಾರ್ಮಿಕ ದತ್ತಿ ಇಲಾಖೆ. ಸ್ಮಾರಕಗಳಿಗೆ ಧಕ್ಕೆ ತಂದಿದ್ದಕ್ಕೆ ಪುರಾತತ್ವ ಇಲಾಖೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ನೋಟಿಸ್ ಜಾರಿ ಮಾಡಿತ್ತು. ಇದೀಗ ನಿರ್ಲಕ್ಷ್ಯ, ಬೇಜವಾಬ್ದಾರಿತನ ವಹಿಸಿದ್ದಕ್ಕೆ ಗುಮಾಸ್ತನ ಸಸ್ಪೆಂಡ್ ಮಾಡಲಾಗಿದೆ.
ಸ್ಮಾರಕಕ್ಕೆ ಮೊಳೆ ಹೊಡೆದಿದ್ದಾಯ್ತು,ಈಗ ಗಂಧದ ಮರ ಕಳವು:
ಐತಿಹಾಸಿಕ ಹಂಪಿ ದೇಶ, ವಿದೇಶಿಗರ ಅಚ್ಚು ಮೆಚ್ಚಿನ ತಾಣ. ನಿತ್ಯ ಸಾವಿರಾರು ಪ್ರವಾಸಿಗರು ಬಂದು ಹೋಗ್ತಾರೆ. ಈ ಐತಿಹಾಸಿಕ ತಾಣದಲ್ಲಿ ನೂರಾರು ಸಿಸಿ ಕ್ಯಾಮೆರಾಗಳಿವೆ. ಹಗಲಿರುಳು ಕಾಯಲು ಸೆಕ್ಯೂರಿಟಿ ಗಾರ್ಡ್ಗಳಿದ್ರೂ ಇಲ್ಲಿ ಒಂದಲ್ಲ ಒಂದು ಅಚಾತುರ್ಯಗಳು ನಡೆಯುತ್ತಲೇ ಇವೆ.bಕಳೆದ ವಾರವಷ್ಟೇ ಸ್ಮಾರಕಕ್ಕೆ ಮೊಳೆ ಹೊಡೆದಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಸಿಬ್ಬಂದಿ ಅಮಾನತು ಕೂಡ ಆಗಿದೆ. ಹಂಪಿ ಆವರಣದಲ್ಲಿ ಶ್ರೀಗಂಧ ಮರ ಕಳ್ಳತನವಾಗಿದೆ.