* ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪೌರ ಕಾರ್ಮಿಕರ ಪ್ರತಿಭಟನೆ
* ಮೇ.19ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟ ಪೌರ ಕಾರ್ಮಿಕರ ಸಂಘ
* ದಾವಣಗೆರೆಯಲ್ಲಿ ಜಿಲ್ಲಾಧ್ಯಕ್ಷ ಎಲ್ಲಾ.ಎಂ. ಹನುಮಂತ ಹೇಳಿಕೆ
ವರದಿ : ವರದರಾಜ್
ದಾವಣಗೆರೆ (ಮೇ.17): ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯ ಪೌರಕಾರ್ಮಿಕ ಸಂಘ ಒಂದು ದಿನದ ಸಾಂಕೇತಿಕ ಪ್ರತಿಭಟನೆಗೆ ಕರೆ ನೀಡಿದೆ.
ಕರ್ನಾಟಕ ರಾಜ್ಯ ಮಹಾನಗರಪಾಲಿಕೆ , ನಗರಸಭೆ , ಪುರಸಭೆಗಳ ಪೌರಕಾರ್ಮಿಕರ ಮಹಾಸಂಘ, ಮಹಾನಗರಪಾಲಿಕೆ ಪೌರ ಕಾರ್ಮಿಕರ ಮತ್ತು ಡಿ ಗ್ರೂಪ್ ನೌಕರರ ಸಂಘ, ಮಹಾನಗರಪಾಲಿಕೆ ಪೌರ ಕಾರ್ಮಿಕರ ಸಂಘ, ಜಿಲ್ಲಾ ಪೌರ ಹಾಗೂ ಗುತ್ತಿಗೆ ಸಫಾಯಿ ಕರ್ಮಚಾರಿಗಳ ಸಂಘಗಳ ಸಂಯುಕ್ತಾಶ್ರಯದಲ್ಲಿ ಮೇ.19 ರಂದು ಒಂದು ದಿನದ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಕಾರ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರು ಆದ ಎಲ್ಲಾ.ಎಂ. ಹನುಮಂತಪ್ಪ ದಾವಣಗೆರೆಯಲ್ಲಿ ತಿಳಿಸಿದ್ದಾರೆ.
ಪ್ರತಿ ಜಿಲ್ಲಾ ಕೇಂದ್ರದಲ್ಲೂ ಪ್ರತಿಭಟನೆ
ಕರ್ನಾಟಕ ರಾಜ್ಯ ಮಹಾನಗರಪಾಲಿಕೆ , ನಗರಸಭೆ , ಪುರಸಭೆಗಳ ಪೌರಕಾರ್ಮಿಕರ ಮಹಾಸಂಘ ಮೈಸೂರು ಇದರ ರಾಜ್ಯಾಧ್ಯಕ್ಷ ನಾರಾಯಣ್ ಅಧ್ಯಕ್ಷತೆಯಲ್ಲಿ ಹಾಗೂ ಕಾರ್ಯಾಧ್ಯಕ್ಷ ಎಲ್.ಎಂ.ಹನುಮಂತಪ್ಪ ಉಪಸ್ಥಿತಿಯಲ್ಲಿ ರಾಜ್ಯದಾದ್ಯಂತ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳವರ ಕಛೇರಿಯ ಮುಂಭಾಗ ಮೇ 19 ರಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. ದಾವಣಗೆರೆ ನಗರದಲ್ಲಿ ಜಯದೇವ ಸರ್ಕಲ್‌ನಿಂದ ಪೌರಕಾರ್ಮಿಕರು ಪೊರಕೆ ಸಹಿತ ಮೆರವಣಿಗೆ ಹೊರಟು ಗಾಂಧಿವೃತ್ತ , ಜಗಜೀವನ್‌ರಾಮ್ ಮಹಾತ್ಮಗಾಂಧಿ , ಪಿ.ಬಿ.ರಸ್ತೆ , ಮಹಾನಗರಪಾಲಿಕೆ ಮುಂಭಾಗದಲ್ಲಿ ಬಾಬು ಡಾ : ಬಿ.ಆರ್. ಅಂಬೇಡ್ಕರ್ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಮರಳು ಅಡ್ಡೆ ಕಿಂಗ್ ಪಿನ್‌ಗೆ ಮತ್ತೊಂದು ಸಂಕಷ್ಟ, ಕೋಟಿ-ಕೋಟಿ ಹಣ ಹೋಗಿದ್ದು ಎಲ್ಲಿಗೆ?
ಪ್ರತಿಭಟನಾ ಮೆರವಣಿಗೆಯಲ್ಲಿ ಪೌರ ಕಾರ್ಮಿಕರು , ನೇರಪಾವತಿ ಪೌರಕಾರ್ಮಿಕರು , ಒಳಚರಂಡಿ ಸಹಾಯಕರು , ವಾಲ್ಮನ್‌ಗಳು , ವಾಹನ ಚಾಲಕರು , ಲೋಡರ್ , ಕ್ಲೀನರ್ , ಹೆಲ್ಪರ್ಸ್ ಗಳು , ಸ್ಮಶಾನ ಕಾವಲುಗಾರರ ಪಾಲ್ಗೊಂಡು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಲಿದ್ದಾರೆ. ಪ್ರತಿಭಟನೆ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.
ನಮ್ಮ ಬೇಡಿಕೆಗಳಾದ ಗೃಹಭಾಗ್ಯ ಯೋಜನೆಯ ಹಕ್ಕುಪತ್ರಗಳನ್ನು ಕೂಡಲೇ ಪೌರ ಕಾರ್ಮಿಕರಿಗೆ ಕೊಡಬೇಕು . ನೇರಪಾವತಿ ಪೌರ ಕಾರ್ಮಿಕರನ್ನು ಏಕ ಕಾಲದಲ್ಲಿ ಖಾಯಂಗೊಳಿಸಬೇಕು, ಒಳಚರಂಡಿ ಸಹಾಯಕರ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ , ಖಾಯಂಗೊಳಿಸಬೇಕು, ಶಾಖೆ ವಾಲ್ ಮನ್ ಗಳ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ , ಖಾಯಂಗೊಳಿಸುವುದು , ಘನತ್ಯಾಜ್ಯ ವಾಹನ ಚಾಲಕರ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ , ಖಾಯಂಗೊಳಿಸಲು ಪೌರ ಕಾರ್ಮಿಕ ಆಗ್ರಹಿಸಲಿದೆ.
ಲೋಡರ್ , ಕ್ಲೀನರ್ , ಹೆಲ್ಪರ್ ಗಳ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ , ಖಾಯಂಗೊಳಿಸಬೇಕು, ಸ್ಮಶಾನ ಕಾವಲುಗಾರರ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ , ಖಾಯಂಗೊಳಿಸುವುದು . ಮರಣ ಹೊಂದಿದ ನೇರ ಪಾವತಿ ಕಾರ್ಮಿಕರ ಮಕ್ಕಳನ್ನು ಕೂಡಲೇ ಕೆಲಸಕ್ಕೆ ತೆಗೆದುಕೊಳ್ಳಬೇಕು ಹಾಗೂ ಆರು ತಿಂಗಳುಗಳ ಕಾಲ ಸಂಬಳ ಇಲ್ಲದೆ ಕೆಲಸ ಮಾಡಿರುವ 89 ಜನ ಪೌರ ಕಾರ್ಮಿಕರನ್ನು ಕೂಡಲೇ ಕೆಲಸಕ್ಕೆ ತೆಗೆದುಕೊಳ್ಳುವ ಬಗ್ಗೆ ಒತ್ತಾಯ ಹೇರಿ. ಪ್ರತಿಭಟನೆ ನಡೆಸಲಾಗುವುದು. ನಮ್ಮ ಬೇಡಿಕೆಗಳು ಈಡೇರದಿದ್ದರೆ, ರಾಜ್ಯದ ಎಲ್ಲ ಪೌರ ಕಾರ್ಮಿಕರು ಮೇ.30 ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಒಟ್ಟಾಗಿ, ಅಲ್ಲಿಂದ ವಿಧಾನಸೌಧ ಚಲೋ ನಡೆಸಲಾಗುವುದು ಎಂದು ಬಿ.ಹೆಚ್. ವೀರಭದ್ರಪ್ಪ ತಿಳಿಸಿದರು.