Karnataka PSI Recruitment Scam: ಒಟ್ಟು 2, 060 ಪುಟಗಳ ಈ ಆರೋಪ ಪಟ್ಟಿಯಲ್ಲಿ ನೋಬಲ್ ಶಾಲೆ ಪರೀಕ್ಷಾ ಕೇಂದ್ರದಲ್ಲಿ ನಡೆದಂತಹ ಹಗರಣದ ಎಳೆಎಳೆಯಾದಂತಹ ಮಾಹಿತಿ ತನಿಖೆ ಮೂಲಕ ವಿವರಿಸಲಾಗಿದೆ. 7 ಆರೋಪಿಗಳು, 124 ದಾಖಲೆಗಳು, 104 ಸಾಕ್ಷಿ ಪುರಾವೆಗಳ ಸಂಗ್ರಹ ಇದಾಗಿದೆ.
ಕಲಬುರಗಿ(ಸೆ.02): ಪೊಲೀಸ್ ಇಲಾಖೆಯ 545 ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣದ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಅಧಿಕಾರಿಗಳ ತಂಡ ಈ ಹಗರಣದಲ್ಲಿ ಗುರುವಾರ ಇಲ್ಲಿನ ಒಂದನೇಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಮತ್ತೊಂದು ಆರೋಪ ಪಟ್ಟಿ ಸಲ್ಲಿಸಿದೆ. ಕಲಬುರಗಿಯ ನೋಬಲ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಾದಂತಹ ಬ್ಲೂಟೂತ್ ಬಳಸಿ ನಡೆಸಲಾಗಿರುವ ಅಕ್ರಮದ ಕುರಿತಂತೆ ಕಿಂಗ್‌ಪಿಎನ್ ಆರ್‌ಡಿ ಪಾಟೀಲ್, ಜ್ಞಾನಜ್ಯೋತಿ ಶಾಲೆಯ ಮುಖ್ಯ ಗುರು ಕಾಶೀನಾಥ ಜಿಲ್ಲೆ ಸೇರಿದಂತೆ 7 ಜನರ ವಿರುದ್ಧ ವಿವರವಾದಂತಹ ಮಾಹಿತಿ, ಸಾಕ್ಷಿಗಳು, ದಾಲೆಗಳಿರುವ ಆರೋಪ ಪಟ್ಟಿ ಇದಾಗಿದೆ.
ಸದರಿ ಹಗರಣದಲ್ಲಿ ಸಿಐಡಿ ಕಲಬುರಗಿಯಲ್ಲೇ ಈಗಾಗಲೇ ಕಳೆದ ತಿಂಗಳು 2 ಆರೋಪ ಪಟ್ಟಿಗಳನ್ನು ಸಲ್ಲಿಸಿದ್ದು ಇಂದು ಸಲ್ಲಿಕೆಯಾದ ಆರೋಪ ಪಟ್ಟಿಅಕ್ರಮದ ಕುರಿತಂತೆ 3 ನೇಯದ್ದಾಗಿದೆ. ಹಗರಣದ ಕಿಂಗ್‌ಪಿಎನ್ ಆರ್‌ಡಿ ಪಾಈಲ್, ಜ್ಞಾನಜ್ಯೋತಿ ಶಾಲೆಯ ಮುಖ್ಯಗುರು ಕಾಶೀನಾಥ ಜಿಲ್ಲೆ, ಧಾರವಾಡದಲ್ಲಿ ಪೇದೆಯಾಗಿದ್ದ ಕರಜಗಿ ಮೂಲದ ಇಸ್ಮಾಯಿಲ್ ಖಾದರ್, ಹೈದ್ರಾ ಅರ್ಚಕ ಮನೆತನದ ಮಣ್ಣೂರು ಮೂಲದ ಅಸ್ಲಂ ಭಾಷಾ, ಮುನಾಫ್, ಅಭ್ಯರ್ಥಿ ವಿಶ್ವನಾಥ ಮಾನೆ ಇವರ ವಿರುದ್ಧ ಈ ಆರೋಪ ಪಟ್ಟಿಯಲ್ಲಿ ಪ್ರಮುಖ ವಿಚಾರಗಳನ್ನು ಸಿಐಡಿ ಪ್ರಸ್ತಾಪಿಸಿದೆ.
undefined
ಇದನ್ನೂ ಓದಿ: PSI Scam: ಒಂದುವರೆ ತಿಂಗ್ಳಿಂದ ಸಿಐಡಿಯನ್ನೇ ಆಟ ಆಡಿಸಿ ಬಲೆಗೆ ಬಿದ್ದ ಫಸ್ಟ್ ರ‍್ಯಾಂಕ್ ರಚನಾ!
ಒಟ್ಟು 2, 060 ಪುಟಗಳ ಈ ಆರೋಪ ಪಟ್ಟಿಯಲ್ಲಿ ನೋಬಲ್ ಶಾಲೆ ಪರೀಕ್ಷಾ ಕೇಂದ್ರದಲ್ಲಿ ನಡೆದಂತಹ ಹಗರಣದ ಎಳೆಎಳೆಯಾದಂತಹ ಮಾಹಿತಿ ತನಿಖೆ ಮೂಲಕ ವಿವರಿಸಲಾಗಿದೆ. 7 ಆರೋಪಿಗಳು, 124 ದಾಖಲೆಗಳು, 104 ಸಾಕ್ಷಿ ಪುರಾವೆಗಳ ಸಂಗ್ರಹ ಇದಾಗಿದೆ ಎಂದು ಸಿಐಡಿ ಮೂಲಗಳು ಹೇಳಿವೆ.
ದಿವ್ಯಾ ಹಾಗರಗಿ ಒಡೆತನದ ಜ್ಞಾನ ಜ್ಯೋತಿ ಹೈಸ್ಕೂಲ್ ಪರೀಕ್ಷಾ ಕೇಂದ್ರ ಹಾಗೂ ಹೈಕಶಿ ಸಂಸ್ಥೆಯ ಎಂಎಸ್‌ಐ ಕಾಲೇಜು ಪರೀಕ್ಷಾ ಕೇಂದ್ರದಲ್ಲಿನ ಹಗರಣಗಳ ಕುರಿತಂತೆ ಈಗಾಗಲೇ ಸಿಐಡಿ ಕ್ರಮವಾಗಿ 1, 960 ಹಾಗೂ 1, 000 ಪುಟಗಳ ಗಾತ್ರದ 2 ಆರೋಪ ಪಟ್ಟಿಗಳನ್ನು 1 ನೇ ಜೆಎಂಎಎಪ್‌ಸಿ ನ್ಯಾಯಾಲಯಕ್ಕೆ ಅದಾಗಲೇ ಸಲ್ಲಿಸಿ ಗಮನ ಸೆಳೆದಿತ್ತು. ಇದೀಗ 3 ನೇ ಆರೋಪ ಪಟ್ಟಿಇವೆರನ್ನು ಗಾತ್ರದಲ್ಲಿ ಹಾಗೂ ಸಾಕ್ಷಿಗಳು ಮತ್ತು ದಾಖಲೆಗಳ ಸಂಗ್ರಹದಲ್ಲಿ ಮೀರಿಸಿದೆ.
ಈ ಪ್ರಕರಣದಲ್ಲಿ ಆರೋಪ ಪಟ್ಟಿಸಲ್ಲಿಸಲು ಸಿಐಡಿಗೆ ಸೆಪ್ಟೆಂಬರ್ 2 ನೇ ವಾರದವವರೆಗೂ ಅವಕಾಶವಿತ್ತಾದೂರ ಸಿಐಡಿ ತಂಡ ಅವಧಿಗೂ ಮುನ್ನವೇ ಚಾಕಚಕ್ಯತೆ ಪ್ರದರ್ಶಿಸುವ ಮೂಲಕ ಆರೋಪ ಪಟ್ಟಿಸಿದ್ಧಪಡಿಸಿ ನ್ಯಾಯಾಲಯಕ್ಕೆ ಲ್ಲಿಸಿದೆ.
ಇದನ್ನೂ ಓದಿ: PSI Recruitment Scam: ನಡೆಯದ ಪಿಎಸ್‌ಐ ನೇಮಕ ಪರೀಕ್ಷೆಯಲ್ಲೂ ಅಕ್ರಮ!
ಸಿಐಡಿ ತನಿಖಾಧಿಕಾರಿ, ಡಿವೈಎಸ್ಪಿ ಶಂಕರಗೌಡ ಪಾಟೀಲ್, ಪ್ರಕಾಶ ರಾಠೋಡ, ಇನ್ವೆಸ್ಟಿಗೇಷನ್ ಇನ್ಸಪೆಕ್ಟರ್‌ಗಳಾದ ಆನಂದ ಹಾಗೂ ಯ್ವಶ್ವಂತ, ಸಿಬ್ಬಂದಿಗಳಾದ ಬಡೆಪ್ಪ, ಭೀಮಾಶಂಕರ, ಕುಮಾರವ್ಯಾಸ ಸೇರಿದಂತೆ ಹಲವು ಸಿಬ್ಬಂದಿಗಳನ್ನೊಳಗೊಂಡಿರುವ ಸಿಐಡಿ ತಂಡ ಈ ಪ್ರಕರಣದತನಿಖೆ ನಡೆಸಿ ಆರೋಪ ಪಟ್ಟಿಸಿದ್ಧಪಡಿಸಿದೆ.
ಗಮನಾರ್ಹ ಸಂಗತಿ ಎಂದರೆ ಸಿಐಡಿ ಇದುವರೆಗೂ ಪಿಎಸ್‌ಐ ಹಗರಣ ಕುರಿತಂತೆ ಸಲ್ಲಿಸಿರುವ ಮೂರು ಆರೋಪ ಪಟ್ಟಿಗಳಲ್ಲಿ ಕಿಂಗ್‌ಪಿಎನ್ ಆರ್‌ಡಿ ಪಾಟೀಲ್ ಒಳಗೊಂಡಿದ್ದಾನೆ. ಇದಲ್ಲದೆ ದಿವ್ಯಾ ಹಾಗರಗಿ ಮತ್ತು ತಂಡದ ಹಗರಣವಿರುವ ಜ್ಞಾನಜ್ಯೋತಿ ಶಾಲೆ ಅಕ್ರಮ, ಎಂಎಸ್‌ಐ ಕಾಲೇಜಿನ ಬ್ಲೂಟೂತ್ ಅಕ್ರಮದಲ್ಲಿಯೂ ಆರ್‌ಡಿ ಪಾಟೀಲ್ ಪಾತ್ರ ಸ್ಪಷ್ಟವಾಗಿರೋದು ಸಿಐಡಿ ಇದುವರೆಗೂ ನಡೆಸಿರುವ ತನಿಖೆಯಲ್ಲಿ ಬಹಿರಂಗವಾಗಿದೆ.