ಮುರುಘಾ ಸ್ವಾಮೀಜಿಗೆ ಬಿಗ್‌ ರಿಲೀಫ್‌: 2ನೇ ಕೇಸ್‌ನಲ್ಲಿಯೂ ಜಾಮೀನು ಮಂಜೂರು

By Sathish Kumar KH  |  First Published Nov 20, 2023, 5:47 PM IST

ಮುರುಘಾ ಮಠದ ಸ್ವಾಮೀಜಿ ಮೇಲೆ ಚಿತ್ರದುರ್ಗ ನ್ಯಾಯಾಲಯ ನೀಡಿದ್ದ ಜಾಮೀನು ರಹಿತ ಬಂಧನ ವಾರೆಂಟ್‌ ಆದೇಶಕ್ಕೆ ತಡೆ ನೀಡಿದ ಹೈಕೋರ್ಟ್‌ 2ನೇ ಪೋಕ್ಸೋ ಪ್ರಕರಣದಲ್ಲಿಯೂ ಜಾಮೀನು ಮಂಜೂರು ಮಾಡಿದೆ.


ಬೆಂಗಳೂರು (ನ.20): ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣ ಸ್ವಾಮೀಜಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ. ಚಿತ್ರದುರ್ಗ ನ್ಯಾಯಾಲಯ ನೀಡಿದ್ದ ಜಾಮೀನು ರಹಿತ ಬಂಧನ ವಾರೆಂಟ್‌ ನಿಡಿದ್ದ ಆದೇಶಕ್ಕೆ ತಡೆ ನೀಡಿದ ಹೈಕೋರ್ಟ್‌ 2ನೇ ಪೋಕ್ಸೋ ಪ್ರಕರಣದಲ್ಲಿಯೂ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ.

ಮುರುಘಾ ಮಠದ ಪೀಠಾಧ್ಯಕ್ಷ ಡಾ. ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿಯ ಮೇಲೆ ಎರಡು ಪೋಕ್ಸೋ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದ ಎ1 ಆರೋಪಿ ಮುರುಘಾ ಸ್ವಾಮೀಜಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಹೈಕೋರ್ಟ್‌ನಿಂದ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಮುರುಘಾ ಸ್ವಾಮೀಜಿಗೆ ಒಂದು ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಲಾಗಿತ್ತು. ಆದರೆ, 2ನೇ ಪ್ರಕರಣದಲ್ಲಿ ಕೇವಲ ಬಾಡಿ ವಾರೆಂಟ್‌ ಇದ್ದುದರಿಂದ ಜೈಲಿನಲ್ಲಿಟ್ಟುಕೊಳ್ಳಲಾಗದೇ 14 ತಿಂಗಳಿಂದ ಜೈಲು ಶಿಕ್ಷೆಯಲ್ಲಿದ್ದ ಸ್ವಾಮೀಜಿಗೆ ಬಿಡುಗಡೆ ಭಾಗ್ಯ ದೊರೆತಿತ್ತು.

Tap to resize

Latest Videos

ಚಿತ್ರದುರ್ಗ ಮುರುಘಾ ಮಠದ ಸ್ವಾಮೀಜಿ ಮತ್ತೆ ಅರೆಸ್ಟ್‌: 2ನೇ ಪೋಕ್ಸೋ ಕೇಸ್‌ನಲ್ಲಿ ಬಂಧನ

ಮುರುಘಾ ಸ್ವಾಮೀಜಿ 2ನೇ ಪೋಕ್ಸೋ ಕೇಸ್‌ನ ಸಾಕ್ಷ್ಯ ಮಾಡುತ್ತಾರೆಂದು ಆರೋಪಿಸಿ ಅವರನ್ನು ಜೈಲಿಗೆ ಕಳಿಸುವಂತೆ ಪುನಃ ಚಿತ್ರದುರ್ಗ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರಿಂದ ಜಾಮೀನು ರಹಿತ ವಾರೆಂಟ್‌ ಹೊರಡಿಸಿ ಬಂಧಿಸುವಂತೆ ಚಿತ್ರದುರ್ಗ ನ್ಯಾಯಾಲಯ ಆದೇಶ ಹೊರಡಿಸಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ದಾವರಣಗೆರೆಯ ವಿರಕ್ತ ಮಠದಲ್ಲಿ ವಾಸ್ತವ್ಯ ಹೂಡಿದ್ದ ಮುರುಘಾ ಸ್ವಾಮೀಜಿಯನ್ನು ಚಿತ್ರದುರ್ಗ ಪೊಲೀಸರು ಬಂಧಿಸಿ ವೈದ್ಯಕೀಯ ತಪಾಸಣೆ ಮಾಡಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಲಯದಿಂದ ಡಿಸೆಂಬರ್‌ 2ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಲಾಗಿತ್ತು.

ಬೆಸ್ಕಾಂ ನಿರ್ಲಕ್ಷ್ಯಕ್ಕೆ ಕರೆಂಟ್‌ ತಗುಲಿ ಮೃತಪಟ್ಟ ತಾಯಿ-ಮಗುವಿನ ಅಂತ್ಯಕ್ರಿಯೆಗೂ ಮೊದಲೇ ಆರೋಪಿಗಳ ಬಿಡುಗಡೆ!

ಚಿತ್ರದುರ್ಗ ನ್ಯಾಯಾಲಯ ಆದೇಶದ ವಿರುದ್ಧ ಹೈಕೋರ್ಟ್‌ ಮೊರೆ ಹೋದ ಮುರುಘಾ ಸ್ವಾಮೀಜಿ ಪರ ವಕೀಲರು, ಹೈಕೋರ್ಟ್‌ ಆದೇಶವನ್ನು ಸರಿಯಾಗಿ ಅರ್ಥೈಸಿಕೊಳ್ಳದೇ ಚಿತ್ರದುರ್ಗ ನ್ಯಾಯಾಲಯದಲ್ಲಿ ಮುರುಘಾ ಸ್ವಾಮೀಜಿಗೆ 2ನೇ ಪ್ರಕರಣದಲ್ಲಿ ಜೈಲು ಬಂಧನ ವಾರೆಂಟ್‌ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಕಿಡಿಕಾರಿದ ಹೈಕೋರ್ಟ್‌ ಚಿತ್ರದುರ್ಗ ನ್ಯಾಯಾಲಯದ ಜಾಮೀನು ರಹಿತ ಬಂಧನದ ವಾರೆಂಟ್‌ ರದ್ದುಗೊಳಿಸಿದೆ. ಜೊತೆಗೆ, ಮುರುಘಾ ಸ್ವಾಮೀಜಿ ಮೇಲಿದ್ದ ಎರಡನೇ ಪೋಕ್ಸೋ ಪ್ರಕರಣದಲ್ಲಿಯೂ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

 ಕಾಂಗ್ರೆಸ್‌ ಮುಖಂಡನಿಂದ ಅತ್ಯಾಚಾರ: ಒಬ್ಬಳನ್ನು ಒಬ್ಬನೇ ವ್ಯಕ್ತಿ ರೇಪ್‌ ಮಾಡೋಕೆ ಅಸಾಧ್ಯವೆಂದ ಮಾಜಿ ಶಾಸಕ ಬಯ್ಯಾಪುರ

ಇಮೇಲ್‌ ಮೂಲಕ ಮುರುಘಾಶ್ರೀ ಬಿಡುಗಡೆಗೆ ಆದೇಶ: ಹೈಕೋರ್ಟ್‌ ಆದೇಶದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ವಕೀಲ ಸಂದೀಪ್ ಪಾಟೀಲ್ ಅವರು, ಹೈಕೋರ್ಟ್ ಮುರುಘಾಶ್ರೀ ಪ್ರಕರಣದಲ್ಲಿ ಬಂಧಿಸುವುದಕ್ಕೆ ತಡೆ ಇದ್ದರೂ ಚಿತ್ರದುರ್ಗ ಕೋರ್ಟ್ ಜಾಮೀನು ರಹಿತ ಬಂಧನದ ವಾರೆಂಟ್‌ ನೀಡಿ ನ್ಯಾಯಾಂಗ ನಿಂದನೆ ಮಾಡಿದೆ. ಚಿತ್ರದುರ್ಗ ಪೊಲೀಸರು ಅರೆಸ್ಟ್ ಮಾಡಿ ಕೋರ್ಟ್ ಗೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ‌ ನೀಡಲಾಗಿತ್ತು. ಇದು ತುಂಬಾ ಶಾಕಿಂಗ್ ಬೆಳವಣಿಗೆ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತು. ಎಸ್ಪಿಪಿ ಅರ್ಜಿ ಸಲ್ಲಿಸಿದ್ದರಿಂದ ಈ ಆದೇಶ ಮಾಡಿಲಾಗಿದೆ. ಹೀಗಾಗಿ ಮುರುಘಾಶ್ರೀ ಸ್ವಾಮೀಜಿ ಅವರನ್ನ ತಕ್ಷಣ ಬಿಡುಗಡೆ ಮಾಡುವಂತೆ ಮನವಿ ಮಾಡಿದೆ. ಹೀಗಾಗಿ ತಕ್ಷಣ ರಿಲೀಸ್‌ ಆದೇಶವನ್ನ ಹೈಕೋರ್ಟ್ ರಿಜಿಸ್ಟ್ರಾರ್ ಅವರು ಜೈಲು ಅಧಿಕಾರಿಗಳಿಗೆ ಈ ಮೇಲ್‌ ಮೂಲಕ ತಿಳಿಸಬೇಕು ಎಂದು ಆದೇಶ ಹೊರಡಿಸಲಾಗಿದೆ ಎಂದು ಮಾಹಿತಿ ನೀಡಿದರು.

click me!