ಚಿತ್ರದುರ್ಗ: ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆ: ಎಲ್ಲ ದಿಕ್ಕುಗಳಿಂದಲೂ ಜೈ ಶ್ರೀರಾಮ್, ಜೈಭಜರಂಗಿ ಘೊಷಣೆ!

By Ravi Janekal  |  First Published Oct 8, 2023, 6:15 PM IST

ಏಷ್ಯಾದಲ್ಲಿಯೇ ಎರಡನೇ ಅತಿದೊಡ್ಡ ಗಣೇಶನ ಶೋಭಾಯಾತ್ರೆ ನಡೆಯೋದು ಕೋಟೆನಾಡು ಚಿತ್ರದುರ್ಗದಲ್ಲಿ. ಇಂದು ನಡೆದ ಅದ್ದೂರಿ ಶೋಭಾಯಾತ್ರೆಯಲ್ಲಿ ಎಲ್ಲಿ ನೋಡಿದ್ರು ಜನಸಾಗರ. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಜನರು ಬೃಹತ್ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು, ಡಿಜೆ ಸದ್ದಿಗೆ ಭರ್ಜರಿ ಸ್ಟೆಪ್ ಹಾಕಿದರು. ಈ ಕುರಿತಾದ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ


ಚಿತ್ರದುರ್ಗ (ಅ.8): ಏಷ್ಯಾದಲ್ಲಿಯೇ ಎರಡನೇ ಅತಿದೊಡ್ಡ ಗಣೇಶನ ಶೋಭಾಯಾತ್ರೆ ನಡೆಯೋದು ಕೋಟೆನಾಡು ಚಿತ್ರದುರ್ಗದಲ್ಲಿ. ಇಂದು ನಡೆದ ಅದ್ದೂರಿ ಶೋಭಾಯಾತ್ರೆಯಲ್ಲಿ ಎಲ್ಲಿ ನೋಡಿದ್ರು ಜನಸಾಗರ. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಜನರು ಬೃಹತ್ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು, ಡಿಜೆ ಸದ್ದಿಗೆ ಭರ್ಜರಿ ಸ್ಟೆಪ್ ಹಾಕಿದರು. ಈ ಕುರಿತಾದ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ

ಹೀಗೆ ಕೇಸರಿಮಯವಾಗಿರುವ ನಗರದ ಪ್ರಮುಖ ರಸ್ತೆಗಳು, ಎತ್ತ ಕಡೆ ಕಣ್ಣಾಯಿಸಿದ್ರು ಜನಸಾಗರ. ಪೋಲೀಸರ ಸರ್ಪಗಾವಲಿನಲ್ಲಿ ಪುರುಷರಗಿಂತ  ನಾವು ಯಾವುದ್ರಲ್ಲೂ ಕಮ್ಮಿ ಇಲ್ಲ ಎಂಬಂತೆ ಡಿ ಜೆ ಸೌಂಡಿಗೆ ಟಪ್ಪಾಂಗುಚ್ಚಿ ಹೆಜ್ಜೆ ಹಾಕ್ತಿರೋ ಮಹಿಳೆಯರು. ಈ ದೃಶ್ಯಗಳು ಕಂಡು ಬಂದಿದ್ದು ಕಲ್ಲಿನ ಕೋಟೆ ಖ್ಯಾತಿಯ ಚಿತ್ರದುರ್ಗದಲ್ಲಿ. ಹೌದು, ಇಂದು ಏಷ್ಯಾದಲ್ಲಿಯೇ ಪ್ರಸಿದ್ಧಿಯನ್ನು ಪಡೆದಿರುವ ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆ ಅದ್ಧೂರಿಯಾಗಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಜರುಗಿತು. ಬೆಳಗ್ಗೆ 11 ಗಂಟೆಗೆ ನಗರದ ಶಿವಶಕ್ತಿ ಮಂಟಪದಲ್ಲಿ ಮಹಾರಾಷ್ಟ್ರದ ಕನ್ನೇರಿಮಠದ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ಚಾಲನೆ ನೀಡಿದರು. 

Tap to resize

Latest Videos

undefined

ಕೋಟೆನಾಡು ಹಿಂದೂ ಮಹಾಗಣಪತಿ ಶೋಭಾಯಾತ್ರೆ ಮೆರವಣಿಗೆಯಲ್ಲಿ ಗೂಡ್ಸೆ ಚಿತ್ರ ಪ್ರದರ್ಶನ

ಬಳಿಕ ಶುರುವಾದ ಬೃಹತ್ ಶೋಭಾಯಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಜನಸಾಗರವೇ ಹರಿದು ಬಂದಿತು. ಅದ್ರಲ್ಲಂತೂ ಡಿಜೆ ಸದ್ದಿಗೆ ಹೆಜ್ಜೆ ಹಾಕಿದ ಯುವಕರು ರಸ್ತೆಯುದ್ದಕ್ಕೂ ಜೈ ಶ್ರೀರಾಮ್, ಜೈ ಭಜರಂಗಿ ಎಂದು ಘೋಷ ವಾಕ್ಯ ಕೂಗುವ ಮೂಲಕ ಭರ್ಜರಿ ಸ್ಟೆಪ್ ಹಾಕಿದರು. ಅದೇ ರೀತಿ ಯುವಕರಿಗಿಂತ ನಾವೇನು ಕಮ್ಮಿ ಇಲ್ಲ ಎಂಬಂತೆ ಯುವತಿಯರು ಕೂಡ ಡಿಜೆ ಸದ್ದಿಗೆ ಸಖತ್ ಸ್ಟೆಪ್ ಹಾಕುವ ಮೂಲಕ ತಮ್ಮ ಸ್ನೇಹಿತೆಯರೊಂದಿಗೆ ಆಗಮಿಸಿ ಭರ್ಜರಿ ಎಂಜಾಯ್ ಮಾಡಿದರು. 

ಪ್ರತೀ ವರ್ಷದಂತೆಯೇ ಈ ವರ್ಷವೂ ಅದ್ದೂರಿ ಶೋಭಾಯಾತ್ರೆ ನಡೆಯುತ್ತಿದೆ. ನಮ್ಮ ಜಿಲ್ಲೆಯಲ್ಲಿ ಐತಿಹಾಸಿಕ ಉತ್ಸವ ನಡೆಯುತ್ತಿರೋದು ನಮಗೆ ಹೆಮ್ಮೆ ಅಂತಾರೆ ಸ್ಥಳೀಯರು.

ಚಳ್ಳಕೆರೆ ಗೇಟ್ ಬಳಿಯಿಂದ ಹೊರಟ ಬೃಹತ್ ಮೆರವಣಿಗೆ ಮದಕರಿ ವೃತ್ತ, ಗಾಂಧಿ ಸರ್ಕಲ್, ಕನಕ ಸರ್ಕಲ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಇನ್ನೂ ಮೊಟ್ಟ ಮೊದಲ ಬಾರಿಗೆ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಹೊನ್ನಾಳಿ ಹುಲಿ ರೇಣುಕಾಚಾರ್ಯ ಮೆರವಣಿಗೆಯಲ್ಲಿ ಭಾಗಿಯಾಗಿ ಸಂಭ್ರಮಿಸಿದರು. ರೇಣುಕಾಚಾರ್ಯ ಕಂಡ ಕೂಡಲೇ ಅಭಿಮಾನಿಗಳು ಸೆಲ್ಪಿಗಾಗಿ ಮುಗಿಬಿದ್ದರು. 

ಪ್ರತೀ ಬಾರಿ ಮೆರವಣಿಗೆ ಕುರಿತು ಕೇಳ್ತಿದ್ದೆವು, ಆದ್ರೆ ಈ ಬಾರಿ ಬೃಹತ್ ಶೋಭಾಯಾತ್ರೆ‌ ಭಾಗಿಯಾಗಲು ಬಂದಿದ್ದೀನಿ. ದೇಶದಲ್ಲಿಯೇ ಕೋಟೆನಾಡಿನ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಪ್ರಸಿದ್ದಿಯನ್ನು ಪಡೆದಿದೆ. ಸುಮಾರು ೧೦ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ರಾಜ್ಯದ ನಾನಾ ಭಾಗಗಳಿಂದ ಆಗಮಿಸಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಈ ಬಾರಿ ಶೋಭಾಯಾತ್ರೆಗೆ ಬಂದಿರೋದು ನನಗೆ ಖುಷಿ ತಂದಿದೆ ಎಂದರು.

ಧರ್ಮ ಜಾಗೃತಿ: ನಾಳೆ ಮಂಗಳೂರಲ್ಲಿ ಶೌರ್ಯ ಜಾಗರಣಾ ಸಮಾವೇಶ

ಒಟ್ಟಾರೆ ಪ್ರತಿ ವರ್ಷಕ್ಕಿಂತ ಈ ವರ್ಷ ಶೋಭಾಯಾತ್ರೆಗೆ ವಿಶೇಷವಾಗಿ ತರಿಸಿದ್ದ ಆಕರ್ಷಕವಾದ ಮುಂಬೈ ಡಿಜೆಗಳ ಬಾರಿ ಸದ್ದಿಗೆ ಯುವಕ ಯುವತಿಯರು ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಮೆರವಣಿಗೆ ಆರಂಭ ಆಗ್ತಿದ್ದಂತೆ, ವಿವಿಧ ಜಿಲ್ಲೆಗಳಿಂದ ಬಂದಿದ್ದ ಲಕ್ಷಾಂತರ ಯುವ ಮನಸುಗಳು ಡಿಜೆ ಸದ್ದಿಗೆ ಹೆಜ್ಜೆ ಹಾಕಿ ಎಂಜಾಯ್ ಮಾಡಿದರು.

ಕ್ಯಾಮರಾಮ್ಯಾನ್ ಶ್ರೀನಿವಾಸ್ ಜೊತೆ ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

click me!