
ಬೆಂಗಳೂರು(ಡಿ.29): ಆ್ಯಪ್‌ಗಳ ಮೂಲಕ ಅಧಿಕ ಬಡ್ಡಿಗೆ ಸಣ್ಣ ಮೊತ್ತದ (ಮೈಕ್ರೋ ಫೈನಾನ್ಸ್ ) ಸಾಲ ನೀಡಿ ಗ್ರಾಹಕರಿಗೆ ಕಿರುಕುಳ ನೀಡುತ್ತಿದ್ದ ಚೀನಾ ಮೂಲದ ಕಂಪನಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೋರಮಂಗಲದಲ್ಲಿರುವ ಆ್ಯಸ್ಪೆರಲ್ ಸವೀರ್‍ಸ್ ಪ್ರೈ.ಲಿ ಕಂಪನಿ ಮೇಲೆ ದಾಳಿ ನಡೆಸಿ ಹೊಸಗುಡ್ಡದಹಳ್ಳಿ ನಿವಾಸಿ ಸೈಯದ್ ಅಹಮದ್, ಸೈಯದ್ ಇರ್ಫಾನ್ ಮತ್ತು ರಾಮಗೊಂಡನಹಳ್ಳಿಯ ಆದಿತ್ಯಾ ಸೇನಾಪತಿ ಎಂಬುವರನ್ನು ಬಂಧಿಸಲಾಗಿದೆ.
ಮದುವೆ ಆಗುವುದಾಗಿ ನಂಬಿಸಿ ವಂಚಿಸಿದ್ದು ಒಂದೆರಡು ಲಕ್ಷವಲ್ಲ, ಭರ್ತಿ 98 ಲಕ್ಷ
ಆರೋಪಿಗಳಿಂದ 35 ಲ್ಯಾಪ್‌ಟಾಪ್, 200 ಬೇಸಿಕ್ ಮೊಬೈಲ್, ವಿವಿಧ ಬ್ಯಾಂಕ್‌ಗಳ ಎಂಟು ಚೆಕ್ ಪುಸ್ತಕ, 30ಕ್ಕೂ ಹೆಚ್ಚು ಸಿಮ್ ಹಾಗೂ ವಿವಿಧ ಕಂಪನಿಗೆ ಸೇರಿದ 9 ವಿವಿಧ ಸೀಲುಗಳನ್ನು ಜಪ್ತಿ ಮಾಡಲಾಗಿದೆ. ಆ್ಯಸ್ಪೆರಲ್ ಸವೀರ್‍ಸ್ ಪ್ರೈ.ಲಿ ಕಂಪನಿ ಮೇಲೆ ದಾಳಿ ನಡೆಸಿದ ವೇಳೆ ಕಚೇರಿಯಲ್ಲಿ ಇನ್ನಿತರ ಆರು ಕಂಪನಿಗಳು ಇದೇ ರೀತಿ ಅಕ್ರಮವಾಗಿ ಸಾಲ ನೀಡಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವುದು ಕಂಡು ಬಂದಿದೆ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.
ವಾಟ್ಸಾಪ್ ಗ್ರೂಪಲ್ಲಿ ಮಾನ ಹರಾಜು:
ಚೀನಾ ಕಂಪನಿಗಳು ತಮ್ಮದೇ ಲೋನ್ ಆ್ಯಪ್‌ಗಳಾದ ಮನಿ ಡೇ, ಪೈಸಾ ಪೇ, ಲೋನ್ ಟೈಮ್, ರುಪಿ ಡೇ, ರುಪಿ ಕಾರ್ಟ್, ಇನ್ ಕ್ಯಾಶ್ ಆ್ಯಪ್‌ಗಳನ್ನು ಹೊಂದಿವೆ. ಸಾಲ ಪಡೆಯುವಾಗ ಗ್ರಾಹಕರು ಪ್ಲೇ ಸ್ಟೋರ್‌ಗಳ ಮೂಲಕ ಆ್ಯಪ್‌ಡೌನ್‌ಲೋಡ್ ಮಾಡಿಕೊಳ್ಳಬೇಕು. ಈ ಸಮಯದಲ್ಲಿ ಆ್ಯಪ್ ಕೇಳುವ ವೈಯಕ್ತಿಕ ವಿವರವನ್ನು ನೀಡಬೇಕು. ಸಾಲ ನಿಗದಿತ ಸಮಯಕ್ಕೆ ಹಿಂದಿರುಗಿಸದಿದ್ದಾಗ ಕಂಪನಿಯ ಏಜೆಂಟ್‌ಗಳು ಸಾಲಗಾರನಿಗೆ ಕರೆ ಮಾಡಿ ಅಶ್ಲೀಲವಾಗಿ ನಿಂದಿಸಿ, ಬೆದರಿಕೆ ಹಾಕುತ್ತಿದ್ದರು.
ಬ್ರಿಟನ್‌ನಿಂದ ಬೆಂಗಳೂರಿಗೆ ಬಂದಿದ್ದ ಮತ್ತೊಬ್ಬರಿಗೆ ಕೊರೋನಾ ದೃಢ
ಸಾಲಗಾರರ ಮೊಬೈಲ್ ದತ್ತಾಂಶಗಳನ್ನು ಹ್ಯಾಕ್ ಮಾಡಿ ಅವುಗಳನ್ನು ಬಳಸಿಕೊಂಡು ಸಾಲ ಪಡೆದವರ ಕಾಂಟಾಕ್ಟ್ನಲ್ಲಿರುವ ಎಲ್ಲ ವ್ಯಕ್ತಿಗಳನ್ನು ಒಳಗೊಂಡಂತೆ ವಾಟ್ಸಾಪ್ ಗ್ರೂಪ್ ಮಾಡಿ ಸಾಲ ಪಡೆದವರ ವೈಯಕ್ತಿಕ ಫೋಟೋಗಳೊಂದಿಗೆ ‘ಚೋರ್, ಫ್ರಾಡ್, ಡಿಫಾಲ್ಟರ್’ ಎಂಬಿತ್ಯಾದಿ ತಲೆ ಬರಹಗಳೊಂದಿಗೆ ಅಶ್ಲೀಲವಾಗಿ ಬರೆದು ನಿಂದಿಸುತ್ತಿದ್ದರು. ಈ ಸಂಬಂಧ ಸೈಬರ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ವಿವರಿಸಿದ್ದಾರೆ.
ಖಾಸಗಿ ವ್ಯಕ್ತಿಗಳಿಗೆ ಗುತ್ತಿಗೆ
ಹಣ ವಸೂಲಿಗೆ ಚೀನಾ ಕಂಪನಿಗಳು ಸ್ಥಳೀಯ ಖಾಸಗಿ ವ್ಯಕ್ತಿಗಳಿಗೆ ಗುತ್ತಿಗೆ ನೀಡಿರುವುದು ಬೆಳಕಿಗೆ ಬಂದಿದೆ. ಸ್ಥಳೀಯ ಕಚೇರಿಗೆ ಆರೋಪಿಗಳನ್ನು ನಿರ್ದೇಶಕರಾಗಿ ನೇಮಕ ಮಾಡಲಾಗಿತ್ತು. ಚೀನಾ ಮೂಲದ ವ್ಯಕ್ತಿಗಳ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಶೀಘ್ರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ