ಮೆಗಾಸ್ಟಾರ್ ಚಿರಂಜೀವಿ ನಟನೆ ಮುಂಬರುವ ಸಿನಿಮಾವೊಂದರಲ್ಲಿ ನಟಿಸುವುದಕ್ಕೆ ಶಾಸಕ ಪ್ರದೀಪ್ ಈಶ್ವರ್‌ಗೆ ಆ ಸಿನಿಮಾದ ನಿರ್ದೇಶಕರೇ ಆಫರ್ ಕೊಟ್ಟಿದ್ದಾರೆ. ಹೀಗಾಗಿ ನಟಿಸುವುದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸ್ವತಃ ಪ್ರದೀಪ್ ಈಶ್ವರ್ ಹಂಚಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ (ಆ.30): ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಬಿಜೆಪಿಯ ಡಾ ಕೆ ಸುಧಾಕರ್ ಸ್ಪರ್ಧಿಸಿದಾಗ, ರಾಜಕೀಯ ಗಾಂಭೀರ್ಯ ಇಲ್ಲದ ಈ ಮನುಷ್ಯ ಗೆಲ್ಲುವುದು ಅಸಾಧ್ಯವೆಂದೇ ಹೇಳಲಾಗಿತ್ತು. ಆದರೆ ತಮ್ಮ ಮಾತು, ಡೈಲಾಗ್, ಹೇರ್ ಸ್ಟೈಲ್ ವಿಶಿಷ್ಟ ನಡೆನುಡಿಗಳಿಂದ ಕ್ಷೇತ್ರದ ಜನರನ್ನ ಆಕರ್ಷಿಸಿ ಎಲ್ಲರ ಲೆಕ್ಕಾಚಾರ ತಲೆಕೆಳಗು ಮಾಡಿ ಮೊದಲಬಾರಿಗೆ ಭರ್ಜರಿಯಾಗಿ ಗೆದ್ದು ಬೀಗಿದವರು ಶಾಸಕ ಪ್ರದೀಪ್ ಈಶ್ವರ್.
ಚುನಾವಣೆ ಪ್ರಚಾರದ ವೇಳೆ ಅವರು ಆಡಿದ ಮಾತುಗಳು ಕೊಟ್ಟ ಭರವಸೆಗಳು ವಿರೋಧಿಗಳಿಗೆ ಹಾಕಿದ ಸವಾಲುಗಳು ಜನರನ್ನು ಆಕರ್ಷಿಸಿಬಿಟ್ಟವು ಎಷ್ಟೆಂದರೆ ಪ್ರದೀಪ್ ಈಶ್ವರಗೆ ರಾಜ್ಯಾದ್ಯಂತ ಅಭಿಮಾನಿಗಳ ಸಂಘ ಹುಟ್ಟಿಕೊಂಡವು. ಅತ್ತ ತೆಲುಗು ಸಮುದಾಯದ ನಾಯಕರಂತಾದರು. ವಿಧಾನಸಭಾ ಚುನಾವಣೆಗೆ ಮೊದಲು ಸಾಮಾನ್ಯನಂತೆ ಇದ್ದವರು ಯಾರೂ ಗುರುತಿಸಿದಿದ್ದವರು, ಇಂದು ಪ್ರದೀಪ್ ಈಶ್ವರ್ ಎಂದರೆ ಫೇಮಸ್ ಶಾಸಕರಾಗಿದ್ದಾರೆ. ಅವರ ಒಂದೊಂದು ಮಾತು ವೈರಲ್ ಆಗಿಬಿಡುತ್ತವೆ. ಈ ರೀತಿ ವಿಚಿತ್ರ ಮ್ಯಾನರಿಸಂ ಡೈಲಾಗ್‌ನಿಂದಲೇ ಬಿಗ್‌ಬಾಸ್ ಗೆ ಹೋಗಿಬಂದರು. ಇದೀಗ ಹೊಸದೊಂದು ಅಪ್ಡೇಟ್ ಬಂದಿದೆ.
ಸಿಎಂ ಸಿದ್ದರಾಮಯ್ಯರನ್ನ ಕಂಡ್ರೆ ಬಿಜೆಪಿಯವರಿಗೆ ಭಯ : ಶಾಸಕ ಪ್ರದೀಪ್ ಈಶ್ವರ್
ಬಿಗ್ ಆಯ್ತು ಇದೀಗ ಟಾಲಿವುಡ್‌ನಿಂದ ಆಫರ್ ಬಂದಿದೆ!
ಹೌದು. ಮೆಗಾಸ್ಟಾರ್ ಚಿರಂಜೀವಿ ನಟನೆ ಮುಂಬರುವ ಸಿನಿಮಾವೊಂದರಲ್ಲಿ ನಟಿಸುವುದಕ್ಕೆ ಶಾಸಕ ಪ್ರದೀಪ್ ಈಶ್ವರ್‌ಗೆ ಆ ಸಿನಿಮಾದ ನಿರ್ದೇಶಕರೇ ಆಫರ್ ಕೊಟ್ಟಿದ್ದಾರೆ. ಹೀಗಾಗಿ ನಟಿಸುವುದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸ್ವತಃ ಪ್ರದೀಪ್ ಈಶ್ವರ್ ಹಂಚಿಕೊಂಡಿದ್ದಾರೆ.
'ನಾನು ಮೆಗಸ್ಟಾರ್ ಚಿರಂಜೀವಿ ಅವರ ಅಪ್ಪಟ ಅಭಿಮಾನಿ. ಅವರ ಸಮುದಾಯದ ಏಕೈಕ ಶಾಸಕ ಕೂಡ ಆಗಿದ್ದೇನೆ. ಹೀಗಾಗಿ ನನ್ನ ಮೇಲೆ ಮೆಗಾಸ್ಟಾರ್ ಅವರಿಗೆ ವಿಶೇಷ ಪ್ರೀತಿಯಿದೆ. ನನಗೂ ಸಿನಿಮಾ ಇಂಡಸ್ಟ್ರಿಯವರು ಕ್ಲೋಸ್ ಆಗಿದ್ದಾರೆ. ಚಿರಂಜೀವಿ ಅವರೊಂದಿಗೆ ನಟಿಸಲು ಸಾಧ್ಯವಾದರೆ ಅದು ನನ್ನ ಭಾಗ್ಯ. ಅದನ್ನು ಸಿನಿಮಾ ತಂಡವೇ ಅನೌನ್ಸ್ ಮಾಡಲಿ ಎಂದು ಕಾಯುತ್ತಿದ್ದೇನೆ ಎಂದಿರುವ ಶಾಸಕ ಪ್ರದೀಪ್ ಈಶ್ವರ್.