
ಗದಗ (ಆ.30): ಕಾಣೆಯಾಗಿದ್ದ ಮಹಿಳೆ ಮೂರು ದಿನದ ಬಳಿಕ ಜಮೀನೊಂದರ ನೀರಿಲ್ಲ ಬಾವಿಯಲ್ಲಿ ಜೀವಂತ ಪತ್ತೆಯಾದ ವಿಚಿತ್ರ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ತೋಟಗುಂಟಿ ಗ್ರಾಮದಲ್ಲಿ ನಡೆದಿದೆ.
ಘಟನೆ ಬಳಿಕ ಬೆಚ್ಚಿಬಿದ್ದ ಗ್ರಾಮಸ್ಥರು. ಮೂರು ದಿನ ನೀರಿಲ್ಲದ ಬಾವಿಯಲ್ಲಿದ್ದು ಅನ್ನಾಹಾರ ಇಲ್ಲದೆ ಬದುಕಿದ್ದೇ ಪವಾಡ. ಘಟನೆ ಕೇಳಿ ಊರಿಗೆ ಊರೇ ಬೆಚ್ಚಿಬಿದ್ದಿದೆ. ಎಳೆದುಕೊಂಡು ಹೋದ ಮಹಿಳೆ ಯಾರು? ಕಳ್ಳರೋ, ಶಕ್ತಿಯೋ ಎದ್ದಿದೆ ಗ್ರಾಮದಲ್ಲಿ ಗುಸು ಗುಸು ಸುದ್ದಿ. ಗ್ರಾಮದಲ್ಲಿ ಮಹಿಳೆ ವೇಷ ಕಳ್ಳತನಕ್ಕಿಳಿದಿದೆಯಾ ಖತರ್ನಾಕ್ ಗ್ಯಾಂಗ್. ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಎದ್ದು ನಸುಕಿನ ಜಾವದಲ್ಲಿ ಅಂಗಳ ಕಸ ಬಳಿಯುವುದು ಗ್ರಾಮಸ್ಥರಲ್ಲಿ ಪದ್ಧತಿ. ಅದೇ ಸಮಯ ಹೊಂಚು ಹಾಕಿ ಬಂಗಾರ ಸರ ದೋಚುವ ಪ್ಲಾನ್ ಮಾಡಿದೆಯಾ ಗ್ಯಾಂಗ್?
ಭಾರತದ ಮಾಟಗಾರರ ರಾಜಧಾನಿ ಈ ಊರು, ಇಲ್ಲಿಗೆ ಹೋಗೋರು ಹುಷಾರು!
ಮಹಿಳೆ ಹೇಳೋದೇನು?
ಆ.20ರಂದು ನಸುಕಿನ ಜಾವ ಮನೆ ಅಂಗಳದಲ್ಲಿ ಕೆಲಸ ಮಾಡುವಾಗ ಅಲ್ಲಿಗೆ ಅಪರಿಚಿತರೊಬ್ಬರು ಸೀರೆಯುಟ್ಟು ಬಂದ್ರು. ಯಾರೆಂದು ಗೊತ್ತಾಗ್ಲಿಲ್ಲ. ನನ್ನ ಹತ್ರ ಬಂದು ಕುತ್ತಿಗೆ ಭಾಗ ಹಿಡಿದು ಮನೆ ಬಿಟ್ಟು ಬರುವಂತೆ ಬಲವಂತ ಮಾಡಿದ್ಳು. ಕೈಬಳೆ, ಕಾಲುಂಗುರ ನೀಡುವಂತೆ ಒತ್ತಾಯ ಮಾಡಿದ್ಳು. ಆಮೇಲೆ ಕಣ್ಣು ಕಾಣದಂತೆ ಮರೆಮಾಡಿ ಕುತ್ತಿಗೆ ಹಿಡಿದು ಗೊವಿನ ಜೋಳದ ಹೊಲದ ಎಳೆದುಕೊಂಡು ಬಂದ್ಳು. ಅಲ್ಲಿ ತಾಳಿ ಕೇಳಿ ನನ್ನನ್ನು ಬಾವಿಗೆ ತಳ್ಳಿದಳು. ನನಗೆ ಬಾವಿಗೆ ಬಿದ್ದ ಮೇಲೆ ಪ್ರಜ್ಞೆ ತಪ್ಪಿತು ಮಾರನೇ ದಿನ ನನಗೆ ಎಚ್ಚರವಾದಾಗ ಬಾವಿಯಲ್ಲಿ ಬಿದ್ದಿರುವುದು ಗೊತ್ತಾಯ್ತು. ಆಗ ಕಿರುಚಿಕೊಂಡರು ಯಾರೂ ಸಹಾಯಕ್ಕೆ ಬರಲಿಲ್ಲ. ಆ.22 ರಂದು ಧ್ವನಿ ಕೇಳಿದ ಜನರು ನನ್ನ ಕಾಪಾಡಿದ್ರು ಎನ್ನುತ್ತಿದ್ದಾಳೆ ಮಹಿಳೆ. ಹಾಗಾದರೆ ನಸುಕಿನ ಜಾವ ಮನೆ ಅಂಗಳದಲ್ಲಿದ್ದ ಮಹಿಳೆಯನ್ನು ಎಳೆದುಕೊಂಡು ಹೋಗಿದ್ದು ಯಾರು? ಎಂಬ ಪ್ರಶ್ನೆ ತೀವ್ರ ಕುತೂಹಲ ಆತಂಕ ಹುಟ್ಟಿಸಿದೆ. ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿರುವ ಮಹಿಳೆ. ಹೀಗಾಗಿ ಮೈಮೇಲೆ ತಾಳಿ ಉಂಗುರು ಚಿನ್ನದ ಸರ ಎಲ್ಲವೂ ತೊಟ್ಟಿದ್ದಾಳೆ. ಇದೆಲ್ಲ ಗಮನಿಸಿ ಪರಿಚಿತರೇ ಎಳೆದುಕೊಂಡು ಹೋದ್ರ? ಇದೊಂದು ವಿಚಿತ್ರ ರೀತಿಯ ಘಟನೆಯಾಗಿದ್ದು ಗ್ರಾಮಸ್ಥರು ಬೆಚ್ಚಿಬಿಳುವಂತಾಗಿದೆ. ಸದ್ಯ ಮಹಿಳೆಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ