ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಬಿಡುಗಡೆಗಾಗಿ ಬಳ್ಳಾರಿ ಆರಾಧ್ಯ ದೇವತೆ ಕನಕದುರ್ಮನ ತಲೆಮೇಲೆ ಕಾಲಿಟ್ಟು ಹಾರ ಹಾಕಿ ಪೂಜೆ ಮಾಡಿದ ದರ್ಶನ್ ಅಭಿಮಾನಿಗಳು ಇದೆಂತಾ ಭಕ್ತಿ? ಅಭಿಮಾನಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿ (ಆ.30): ಬೆಂಗಳೂರಿನಲ್ಲಿ ಜೈಲಿನಲ್ಲಿ ರಾಜಾತಿಥ್ಯ ಪಡೆದ ಹಿನ್ನೆಲೆ ಕೊಲೆ ಆರೋಪಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿರುವುದರಿಂದ ದರ್ಶನ್ ಫ್ಯಾನ್ಸ್ ಮತ್ತೆ ಮತ್ತೆ ಪುಂಡಾಟ ಶುರು ಮಾಡಿದ್ದಾರೆ.
ದರ್ಶನ್ ಜೈಲಿಗೆ ಬಂದ ಮರುದಿನವೇ ಬಳ್ಳಾರಿಯಲ್ಲಿ ಅಭಿಮಾನಿಗಳು ಮತ್ತೆ ಹುಚ್ಚಾಟ ಮಾಡಿದ್ದಾರೆ. ಬಳ್ಳಾರಿಯ ಆರಾಧ್ಯ ದೇವತೆಯಾಗಿರುವ ಕನಕದುರ್ಗಮ್ಮ ದೇವತೆ ಮೇಲೆ ಕಾಲಿಟ್ಟು ಹಾರ ಹಾಕಿರುವ ಅಂಧಾಭಿಮಾನಿಗಳು. ಕನಕ ದುರ್ಗಮ್ಮ ತಲೆ ಮೇಲೆ ಕಾಲಿಟ್ಟು ಹಾರ ಹಾಕಿರುವ ದರ್ಶನ್ ಫ್ಯಾನ್ಸ್ ನಗರದ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕೊಲೆ ಆರೋಪಿ ದರ್ಶನ್ ಬಿಡುಗಡೆಯಾಗಲಿ ಎಂದು ಕನಕ ದುರ್ಗಮ್ಮ ತಲೆಮೇಲೆ ಕಾಲಿಟ್ಟು ಅವಮಾನ ಮಾಡಿದ್ರೆ ದರ್ಶನ್‌ಗೆ ಒಳ್ಳೆಯದಾಗುತ್ತಾ? ದರ್ಶನ್ ಫ್ಯಾನ್ಸ್ ಎಂತಹ ಅನಾಗರಿಕರು, ಸೂಕ್ಷ್ಮ ಸಂವೇದನೆ ಕಳೆದುಕೊಂಡವರು ಇಂತಹರ ಪೂಜೆಯಿಂದ ದರ್ಶನ್‌ಗೆ ನಿಜಕ್ಕೂ ಒಳಿತಾಗುತ್ತಾ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದರ್ಶನ್ ಗೆ ಬಳ್ಳಾರಿ ಜೈಲಿನಲ್ಲಿಂದು ಸಿಗಲಿದೆ ಮಟನ್ ಊಟ! ಹೇಗಿದೆ ಊಟದ ಮೇನು?
ಕನಕ ದುರ್ಗಮ್ಮ ದೇವಿಗೆ ಹಾರ ಹಾಕಿ ಪೂಜೆ ಮಾಡಲು ಏಣಿ ಬಳಸಿದ್ರೂ ಸರಿಯಾಗಿ ಮೇಲೆ ಏರಲು ಆಗದ್ದಕ್ಕೆ ದೇವಿಯ ತಲೆಯೇ ಮೇಲೆಯೇ ಕಾಲಿಟ್ಟು ಹಾರ ಹಾಕಿರುವ ಕಿಡಿಗೇಡಿ ಅಭಿಮಾನಿಗಳು.
ಬಳ್ಳಾರಿಯಲ್ಲಿ ಶಾಸ್ತ್ರಿ ಸಿನಿಮಾ ರೀ-ರಿಲೀಸ್!
ಬೆಂಗಳೂರು ಜೈಲಿನಿಂದ ಬಳ್ಳಾರಿ ಜೈಲಿಗೆ ಕೊಲೆ ಆರೋಪಿ ನಟ ದರ್ಶನ್ ಶಿಫ್ಟ್ ಆಗುತ್ತಿದ್ದಂತೆ ಬಳ್ಳಾರಿ ಭಾಗದ ದರ್ಶನ್ ಅಭಿಮಾನಿಗಳ ಹವಾ ಜೋರಾಗಿದ್ದು, ಇದೆಲ್ಲ ಗಮನಿಸಿ ದರ್ಶನ್ ನಟನೆ 'ಶಾಸ್ತ್ರಿ' ಮಾಡಲಾಗಿದೆ.
ನಗರದ ರಾಘವೇಂದ್ರ ಥಿಯೇಟರ್‌ನಲ್ಲಿ ಶಾಸ್ತ್ರಿ ಸಿನಿಮಾ ಮರುಬಿಡುಗಡೆಯಾಗಿದೆ. 2005ರಲ್ಲಿ ತೆರೆಕಂಡಿದ್ದ ಶಾಸ್ತ್ರಿ ಸಿನಿಮಾ ರಾಜ್ಯಾದ್ಯಂತ ಹವಾ ಎಬ್ಬಿಸಿತ್ತು. ಇದೀಗ ದರ್ಶನ್ ಬಳ್ಳಾರಿ ಜೈಲು ಸೇರಿದ ಬೆನ್ನಲ್ಲೇ ಅಭಿಮಾನಿಗಳ ಒತ್ತಾಯಕ್ಕೆ ರೀರಿಲೀಸ್ ಮಾಡಲಾಗಿದೆ.
ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ: 7 ಜನ ಸಿಬ್ಬಂದಿ ಅಮಾನತು
'ನಾವು ಜೈಲು ಬಳಿ ಹೋಗಿದ್ದೆವು. ದರ್ಶನ್‌ರನ್ನ ನೋಡಲಾಗಲಿಲ್ಲ. ಆದರೆ ಸಿನಿಮಾದಲ್ಲಾದ್ರೂ ನೋಡ್ತೇವೆ. ಬಾಸ್ ತಪ್ಪು ಮಾಡಿಲ್ಲ ಪ್ರಾಣಿ ಪ್ರಿಯನಾದ ಬಾಸ್ ಮನುಷ್ಯನನ್ನು ಹೇಗೆ ಸಾಯಿಸುತ್ತಾನೆ.. ಎಲ್ಲೋ ಏನೋ ತಪ್ಪು ನಡೆದಿದೆ ಎಂದ ಫ್ಯಾನ್ಸ್. ರಾಘವೇಂದ್ರ ಚಿತ್ರಮಂದಿರದ ಮುಂದೆ ಸಿನಿಮಾ ನೋಡಲು ಬಂದ ನೂರಾರು ಅಭಿಮಾನಿಗಳು.