Chikkaballapur Utsav: ಚಿಕ್ಕಬಳ್ಳಾಪುರಕ್ಕೆ ವಿಶ್ವ ಭೂಪಟದಲ್ಲಿ ವಿಶಿಷ್ಟ ಸ್ಥಾನ: ಸಚಿವ ಸುಧಾಕರ್‌ ಹರ್ಷ

Published : Jan 15, 2023, 03:00 AM IST
Chikkaballapur Utsav: ಚಿಕ್ಕಬಳ್ಳಾಪುರಕ್ಕೆ ವಿಶ್ವ ಭೂಪಟದಲ್ಲಿ ವಿಶಿಷ್ಟ ಸ್ಥಾನ: ಸಚಿವ ಸುಧಾಕರ್‌ ಹರ್ಷ

ಸಾರಾಂಶ

ಎಂಟು ದಿನಗಳ ಸಡಗರದ ಸಮಾರೋಪಕ್ಕೆ ಕಲಾತಂಡಗಳ ಮೆರುಗು, ದೇಶದ ಸಂಸ್ಕೃತಿ ಅನಾವರಣಗೊಳಿಸಿದ ದೇಶೀ ರಾಸುಗಳ ಪ್ರದರ್ಶನ ಮತ್ತು ಎತ್ತಿನ ಗಾಡಿಗಳ ಪ್ರದರ್ಶನ, ಮುಖ್ಯಮಂತ್ರಿಗಳಿಂದ ಆರಂಭಗೊಂಡ ಉತ್ಸವಕ್ಕೆ ತೆರೆ ಎಳೆದ ಮಾಜಿ ಮುಖ್ಯಮಂತ್ರಿಗಳು... 

ಚಿಕ್ಕಬಳ್ಳಾಪುರ (ಜ.15): ಎಂಟು ದಿನಗಳ ಸಡಗರದ ಸಮಾರೋಪಕ್ಕೆ ಕಲಾತಂಡಗಳ ಮೆರುಗು, ದೇಶದ ಸಂಸ್ಕೃತಿ ಅನಾವರಣಗೊಳಿಸಿದ ದೇಶೀ ರಾಸುಗಳ ಪ್ರದರ್ಶನ ಮತ್ತು ಎತ್ತಿನ ಗಾಡಿಗಳ ಪ್ರದರ್ಶನ, ಮುಖ್ಯಮಂತ್ರಿಗಳಿಂದ ಆರಂಭಗೊಂಡ ಉತ್ಸವಕ್ಕೆ ತೆರೆ ಎಳೆದ ಮಾಜಿ ಮುಖ್ಯಮಂತ್ರಿಗಳು... ಇವು ಚಿಕ್ಕಬಳ್ಳಾಪುರ ಉತ್ಸವದ ಸಮಾರೋಪದ ವಿಶೇಷಗಳು. ಅಡುಗೆ ಸ್ಪರ್ಧೆ, ಫಲಪುಷ್ಪ ಪ್ರದರ್ಶನ, ಮಾದರಿ ಗ್ರಾಮದ ಪ್ರದರ್ಶನ, ಜಿಲ್ಲೆಯ ಐತಿಹಾಸಿಕ, ಸಾಂಸ್ಕೃತಿಕ ವೈಭವ ಸಾರುವ ಮಾದರಿಗಳು, ಜಿಲ್ಲೆಯ ಅಭಿವೃದ್ಧಿಯ ಅನಾವರಣ ಸೇರಿದಂತೆ ಮೇಳೈಸಿದ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಎಂಟು ದಿನಗಳ ಕಾಲ ರಸದೌತಣ ನೀಡಿದ ಚಿಕ್ಕಬಳ್ಳಾಪುರ ಉತ್ಸವಕ್ಕೆ ಶನಿವಾರ ತೆರೆ ಎಳೆಯಲಾಯಿತು.

ಕಲಾತಂಡಗಳ ಮೆರುಗು: ಕಳೆದ ಶನಿವಾರ ಇದೇ ಕಲಾತಂಡಗಳ ಸಾಕ್ಷ್ಯದೊಂದಿಗೆ ಉದ್ಘಾಟನೆಗೊಂಡಿದ್ದ ಉತ್ಸವಕ್ಕೆ ಈ ಶನಿವಾರ ಅದೇ ಕಲಾತಂಡಗಳ ಮೆರವಣಿಗೆಯೊಂದಿಗೆ ಸಮಾರೋಪ ಮಾಡಿದ್ದು, ವಿಶೇಷವಾಗಿತ್ತು. ಉತ್ಸವಕ್ಕಾಗಿ ದುಡಿದ ಅಧಿಕಾರಿಗಳು, ಸ್ಥಳೀಯ ಮುಖಂಡರು, ನಗರಸಭೆ, ವೇದಿಕೆಯಲ್ಲಿ ರಂಜಿಸಿದ ಕಲಾವಿದರು ಸೇರಿದಂತೆ ಎಲ್ಲರಿಗೂ ಸಚಿವ ಸುಧಾಕರ್‌ ಅಭಿನಂದನೆ ಸಲ್ಲಿಸಿದರು. ಉತ್ಸವದ ಪ್ರಯುಕ್ತ ಆಯೋಜಿಸಿದ್ದ ವಿವಿಧ ಕ್ರೀಡಾಕೂಟಗಳಲ್ಲಿ 15 ಸಾವಿರಕ್ಕೂ ಹೆಚ್ಚು ಯುವಕರು ಭಾಗವಹಿಸಿ ಕ್ರೀಡೋತ್ಸವವನ್ನು ಯಶಸ್ವಿಗೊಳಿಸಿ ದಾಖಲೆ ನಿರ್ಮಿಸಿದರೆ, ಕ್ರೀಡೆ ಸೇರಿದಂತೆ ಅಡುಗೆ ಸ್ಪರ್ಧೆ, ರಂಗೋಲಿ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಮಹಿಳೆಯರು ಉತ್ಸವದಲ್ಲಿ ಪಾಲು ಹಂಚಿಕೊಂಡರು.

Chikkaballapur Utsav: ಸುಧಾಕರ್‌ ದೇಶದ ಆಸ್ತಿ ಆಗಬೇಕು: ಸಚಿವ ಶಿವರಾಮ್‌ ಹೆಬ್ಬಾರ್‌

ಫ್ಯಾಷನ್‌ ಶೋ ಸೇರಿದಂತೆ ಹಲವು ಕಾರ್ಯಕ್ರಮಗಳು ಯಶಸ್ವಿಯಾಗಿ ಪೂರೈಸಿದರೆ, ಖ್ಯಾತ ಕಲಾವಿದರು ವೇದಿಕೆಗೆ ಆಗಮಿಸಿ ಉತ್ಸವದ ಮೆರುಗನ್ನು ಹೆಚ್ಚಿಸುವಲ್ಲಿ ಯಶಸ್ವಿಯಾ ದರು. ಸಂಪುಟದ ಅನೇಕ ಸಚಿವರು ಆಗಮಿಸಿ ಉತ್ಸವದಲ್ಲಿ ಅನಾವರಣವಾಗಿರುವ ಚಿಕ್ಕಬಳ್ಳಾಪುರದ ಅಭಿವೃದ್ಧಿಯನ್ನು ಕಂಡು ಮೂಕವಿಸ್ಮಿತರಾಗಿದ್ದು, ಉತ್ಸವದ ವಿಶೇಷಗಳಲ್ಲಿ ಒಂದಾಗಿತ್ತು. ಈ ವೇಳೆ ಮಾತನಾಡಿದ ಆರೋಗ್ಯ ಸಚಿವರು, ಕಳೆದ 15 ವರ್ಷಗಳಿಂದ ರಂಗೋಲಿ ಸ್ಪರ್ಧೆ ಮಾಡಲಾಗುತ್ತಿದೆ. ಆದರೆ ಕಳೆದ 2 ವರ್ಷ ಕೋವಿಡ್‌ ಕಾರಣಕ್ಕೆ ಸ್ಪರ್ಧೆ ಮಾಡಿರ ಲಿಲ್ಲ. ಪ್ರತಿ ಗ್ರಾಮದಿಂದ ಸಹಸ್ರ ಸಂಖ್ಯೆಯಲ್ಲಿ ಮಹಿಳೆಯರು ರಂಗೋಲಿ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 60 ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗಿಯಾಗಿ ದಾಖಲೆ ಮಾಡಿರುವುದಾಗಿ ಸಚಿವರು ಪ್ರಶಂಸಿಸಿದರು.

ಚಿಕ್ಕಬಳ್ಳಾಪುರವನ್ನು ಬೆಂಗಳೂರಿಗೆ ಸಮನಾಗಿ ಬೆಳೆಸಲು ವಿಫುಲ ಅವಕಾಶಗಳಿದ್ದು, ಜಿಲ್ಲೆಯಲ್ಲಿ ಪ್ರಗತಿಪರ ರೈತರು, ವಿವೇಚನೆ ಇರುವ ಯುವಕರಿದ್ದಾರೆ. ಪ್ರವಾಸೋದ್ಯಮ ತಾಣವಾಗಿ ಖ್ಯಾತಿ ಪಡೆಯುತ್ತಿದೆ. ಐತಿಹಾಸಿಕ, ಧಾರ್ಮಿಕವಾಗಿ ವಿಶ್ವ ಭೂಪಟದಲ್ಲಿ ವೈಶಿಷ್ಟಪೂರ್ಣ ಸ್ಥಾನ ಗಳಿಸುವ ಎಲ್ಲ ಪ್ರಯತ್ನ ಮಾಡುವುದಾಗಿ ಸಚಿವ ಸುಧಾಕರ್‌ ಈ ಸಂದರ್ಭದಲ್ಲಿ ಘೋಷಣೆ ಮಾಡಿದರು.

ಉತ್ಸವಕ್ಕೆ ಮೆರಗು ಕೊಟ್ಟರಂಗೋಲಿಗಳ ಚಿತ್ತಾರ: ಚಿಕ್ಕಬಳ್ಳಾಪುರ ಉತ್ಸವದ ಕೊನೆ ದಿನ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮಹಿಳೆಯರಿಗೆ ಆಯೋಜಿಸಲಾಗಿದ್ದ ರಂಗೋಲಿ ಸ್ಪರ್ಧೆಯಲ್ಲಿ ನಗರದ ಹಾಗೂ ಗ್ರಾಮಾಂತರ ಪ್ರದೇಶದ ನಾರಿಯರು ಪೈಪೋಟಿಗೆ ಇಳಿದು ರಂಗೋಲಿಗಳ ಚಿತ್ತಾರ ಬಿಡಿಸಿ ಗಮನ ಸೆಳೆದರು. ನಗರದ ಪ್ರತಿ ವಾರ್ಡ್‌ ಹಾಗೂ ಗ್ರಾಮೀಣ ಭಾಗದ ಪ್ರತಿ ಹಳ್ಳಿಯಲ್ಲಿ ಕೂಡ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಸಂಕ್ರಾಂತಿ ಹಬ್ಬದ ಮುನ್ನಾ ದಿನವಾದ ಶನಿವಾರ ಮಹಿಳೆಯರು ಬೆಳ್ಳಂ ಬೆಳಗ್ಗೆಯೆ ಎದ್ದು ತಮಗೆ ಸೂಚಿಸಿದ ಜಾಗದಲ್ಲಿ ಬಣ್ಣ ಬಣ್ಣದ ರಂಗೋಲಿ ಚಿತ್ರಿಸಿ ತಮ್ಮ ಕೈ ಚಳಕ ತೋರಿಸುವ ಮೂಲಕ ಉತ್ಸವಕ್ಕೆ ಮೆರುಗು ತಂದುಕೊಟ್ಟರು.

ಮಂತ್ರಿ ಸ್ಥಾನಕ್ಕಿಂತ ಎತ್ತರದ ಸ್ಥಾನ ಸುಧಾಕರ್‌ಗೆ ಸಿಗಲಿ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಾರೈಕೆ

ವಿಜೇತರಿಗೆ ಬಹುಮಾನ ಘೋಷಣೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ ಆವರಣ, ಬಿಬಿ ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜ್‌ ಆವರಣ, ರೇಷ್ಮೆ ಮಾರುಕಟ್ಟೆಬಳಿ, ವಾಪಸಂದ್ರ, ರಂಗಸ್ಥಳ, ಎಪಿಎಂಸಿ ಮಾರುಕಟ್ಟೆ, ಅನುಕೂರು, ಅಂಕಣಗೊಂದಿ, ಬಾಪೂಜಿ ನಗರ, ಭಗತ್‌ಸಿಂಗ್‌ ನಗರ, ಚಾಮರಾಜಪೇಟೆ, ಕಂದವಾರ, ನಂದಿ ಗ್ರಾಮದಲ್ಲಿ ವಿಶೇಷವಾಗಿ ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡು ರಂಗೋಲಿಗಳನ್ನು ಬಿಡಿಸಿದರು. ಭಾಗವಹಿಸಿದವರಿಗೆಲ್ಲಾ ವಾರ್ಡ್‌, ಗ್ರಾಮವಾದು ಪ್ರಥಮ, ದ್ವಿತೀಯ, ತೃತೀಯ ಸ್ಥಾನದ ಜೊತೆಗೆ ಬಹುಮಾನ ನೀಡುವುದಾಗಿ ಸಚಿವ ಸುಧಾಕರ್‌ ಘೊಷಿಸಿರುವ ಹಿನ್ನೆಲೆಯಲ್ಲಿ ರಂಗೋಲಿ ಸ್ಪರ್ಧೆಗಳಿಗೆ ಭಾರೀ ಸ್ಪಂದನೆ ಸಿಕ್ಕಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಗೊಂದಲಕ್ಕೆ ಮತ್ತೆ ಬೆಂಕಿ: ಸಿದ್ದರಾಮಯ್ಯ 5 ವರ್ಷ ಸಿಎಂ, ಬದಲಾದರೆ ಡಿಕೆಶಿ ಒಬ್ರೇ ರೇಸ್‌ನಲ್ಲಿಲ್ಲ..; - ಕೆಎನ್ ರಾಜಣ್ಣ
ಗಡೀಪಾರು ಸಂಕಷ್ಟದಲ್ಲಿ Mahesh Shetty Timarodi: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ ದೇಗುಲದಲ್ಲಿ ಪ್ರಾರ್ಥನೆ