BSY ಮಾರ್ಗದರ್ಶನದಲ್ಲೇ ಮುಂದಿನ ಚುನಾವಣೆ: ಸಿಎಂ ಬೊಮ್ಮಾಯಿ

By Kannadaprabha NewsFirst Published Feb 28, 2022, 1:35 AM IST
Highlights

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾರ್ಗದರ್ಶನದಲ್ಲಿಯೇ ನಾವು ಮುಂದುವರಿಯುವುದರ ಜತೆಗೆ ಮುಂದಿನ ಚುನಾವಣೆಯನ್ನು ಎದುರಿಸಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
 

ಬೆಂಗಳೂರು (ಫೆ.28): ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ (BS Yediyurappa) ಮಾರ್ಗದರ್ಶನದಲ್ಲಿಯೇ ನಾವು ಮುಂದುವರಿಯುವುದರ ಜತೆಗೆ ಮುಂದಿನ ಚುನಾವಣೆಯನ್ನು (Election) ಎದುರಿಸಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.

ಭಾನುವಾರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ ಅವರಿಗೆ ಹುಟ್ಟುಹಬ್ಬದ ಶುಭಾಶಯ (Birthday Wishes) ಕೋರಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ನಾಯಕರಾದ ಯಡಿಯೂರಪ್ಪ ಅವರು ಹೋರಾಟದಿಂದ ಮೇಲೆ ಬಂದವರು. ರೈತರು, ಬಡವರ ಪರ ಇರುವವರು ಮತ್ತು ಅವರೊಂದಿಗೆ ಇಡೀ ನಾಡಿನ ಜನತೆ ಇದ್ದಾರೆ. ಏಕಾಂಗಿಯಾಗಿ ಹೋರಾಟ ಆರಂಭಿಸಿ ಇಡೀ ಕರ್ನಾಟಕಕ್ಕೆ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಮಾತಿಗೆ ತಪ್ಪದ ವ್ಯಕ್ತಿ ಎಂದು ಯಾರಾದರೂ ಇದ್ದರೆ ಅದು ಯಡಿಯೂರಪ್ಪ ಅವರಾಗಿದ್ದಾರೆ ಎಂದು ತಿಳಿಸಿದರು.

Latest Videos

ಮುಖ್ಯಮಂತ್ರಿಯಾಗಿದ್ದ ವೇಳೆ ಹಲವು ಜನಪರ ಕೆಲಸ ಮಾಡಿದ್ದಾರೆ. ಸೈಕಲ್‌ ವಿತರಣೆ, ಭಾಗ್ಯಲಕ್ಷ್ಮೇ ಯೋಜನೆ, ರೈತರಿಗೆ ಉಚಿತ ವಿದ್ಯುತ್‌ ನೀಡಿ ರೈತಪರ ಕೆಲಸ ಮಾಡಿದ್ದಾರೆ. ನೀರಾವರಿ ಯೋಜನೆಗಳು, ಸಂಧ್ಯಾ ಸುರಕ್ಷಾ ಯೋಜನೆ ಕೊಟ್ಟಿದ್ದಾರೆ. ಅವರ ಆಶೀರ್ವಾದದಿಂದ ನಾವೆಲ್ಲ ಮುನ್ನಡೆಯುತ್ತೇವೆ ಎಂದರು.

Karnataka Politics: ಕಾಂಗ್ರೆಸ್‌ಗೆ ಭವಿಷ್ಯವೇ ಇಲ್ಲ: ಸಿಎಂ ಬೊಮ್ಮಾಯಿ

ಮಾಜಿ ಸಿಎಂ ಯಡಿಯೂರಪ್ಪಗೆ ಹುಟ್ಟುಹಬ್ಬದ ಸಂಭ್ರಮ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರಿಗೆ ಭಾನುವಾರ ಹುಟ್ಟುಹಬ್ಬದ (Birthday) ಸಂಭ್ರಮ. 79 ನೇ ಜನ್ಮ ದಿನಾಚರಣೆ ಪ್ರಯುಕ್ತ ಹಿತೈಶಿಗಳೊಂದಿಗೆ ದೇವಸ್ಥಾನಕ್ಕೆ (Temple) ತೆರಳಿ ವಿಶೇಷ ಪೂಜೆ ಮಾಡಿಸುವ ದೇವರ ಆಶೀರ್ವಾದವನ್ನ ಪಡೆದಿದ್ದಾರೆ. 

ರೈತ ನಾಯಕ, ಸಂಘಟನೆಗೆ ಶಕ್ತಿ ತುಂಬಿದ ನಾಯಕ ಯಡಿಯೂರಪ್ಪನವರಿಗೆ 79 ನೇ ಜನ್ಮ ದಿನದ ಸಂಭ್ರಮವಾಗಿದೆ. ಆರೋಗ್ಯ ಹಾಗೂ ನಾಡು ನಡೆಸುವ ಶಕ್ತಿ ದೇವರು ಕೊಡಬೇಕು. 4 ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಹೋರಾಟ, ರೈತರ ಏಳಿಗೆಗೆ ಕೆಲಸ ಮಾಡಿದವರು ಹೀಗಾಗಿ ಜನರು ಬಂದು  ಹರಸುತ್ತಿದ್ದಾರೆ ಅಂತ ಸಂಸದ ರಾಘವೇಂದ್ರ (Raghavendra) ಹೇಳಿದ್ದಾರೆ. 

ಹಸುವಿಗೆ ಧಾನ್ಯ, ಬಾಳೆಹಣ್ಣು ನೀಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ. ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎಸ್‌.ಆರ್‌. ವಿಶ್ವನಾಥ್‌ ಉಪಸ್ಥಿತರಿದ್ದರು. 79 ನೇ ವಸಂತಕ್ಕೆ ಕಾಲಿಡುತ್ತಿರುವ ರೈತ ನಾಯಕ, ಸಂಘಟನೆಗೆ ಶಕ್ತಿ ತುಂಬಿದ ನಾಯಕ ಯಡಿಯೂರಪ್ಪನವರಿಗೆ ಆರತಿ ಮಾಡುವ  ಮಾಡುವ ಮೂಲಕ ಶುಭಾಶಯ ತಿಳಿಸಿದ ಕುಟುಂಬಸ್ಥರು. ಮಾಜಿ ಸಿಎಂ ಯಡಿಯೂರಪ್ಪಗೆ 79 ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಬಿಎಸ್‌ವೈ 79 ಕೆಜಿ ತೂಕದ ಕೇಕ್ ಕತ್ತಿರಿಸಿದ್ದಾರೆ. 

'ಜನರ ಪ್ರೀತಿ ವಿಶ್ವಾಸಕ್ಕೆ ನಾನು ಋಣಿಯಾಗಿದ್ದೇನೆ. ವಿಧಾನ ಮಂಡಲ ಅಧಿವೇಶನದ ಬಳಿಕ ರಾಜ್ಯಾದ್ಯಂತ ಪ್ರವಾಸ ಮಾಡಿ, ಪಕ್ಷದ ಪರ ಕೆಲಸ ಮಾಡುತ್ತೇನೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು ಎನ್ನುವುದು ನಮ್ಮ ಸಂಕಲ್ಪ. ಆ ನಿಟ್ಟಿನಲ್ಲಿ ನಾವೆಲ್ಲಾ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ' ಎಂದು ಯಡಿಯೂರಪ್ಪ ಹೇಳಿದರು. 

ಹಿಂದೂ ಕಾರ್ಯಕರ್ತನನ್ನು ರಕ್ಷಿಸಿಕೊಳ್ಳುವ ಶಕ್ತಿ ಬೊಮ್ಮಾಯಿ ಸರ್ಕಾರಕ್ಕೆ ಇಲ್ಲವೇ?: ಸ್ವಾಮೀಜಿ ಪ್ರಶ್ನೆ

ಮೇಕೆದಾಟು ಹೋರಾಟ ಅದು ರಾಜಕೀಯ ಪಾದಯಾತ್ರೆ: ಮಾರ್ಚ್ 4 ರಿಂದ ರಾಜ್ಯ ಬಜೆಟ್ ಅಧಿವೇಶನ (Budget Session) ನಡೆಯಲಿದೆ. ಬಜೆಟ್‌ನಲ್ಲಿ ಯಾವ ಜಿಲ್ಲೆಗೆ ಏನು ಸಿಗುತ್ತೆ ಅಂತ ಈಗಲೇ ಹೇಳಲು ಬರಲ್ಲ. ಬಜೆಟ್‌ನಲ್ಲಿ ಏನಿದೆ ಅನ್ನೋದನ್ನ ಈಗ ಹೇಳಿದ್ರೆ ತಪ್ಪಾಗುತ್ತೆ. ಅದರ ಬಗ್ಗೆ ಮಾರ್ಚ್ 4 ರಂದೇ ನೋಡಿ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಎಸ್‌ಡಿಪಿಐ, ಪಿಎಎಫ್‌ಐ ಬ್ಯಾನ್ ವಿಚಾರಕ್ಕೆ ಸಂಬಂಧಿಸಿದಂತೆ ಶನಿವಾರ ನಗರದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಎಲ್ಲ ಘಟನೆಗಳ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಬಹಳ ಕೂಲಂಕುಷವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ನಡೆದ ಹಲವಾರು ಘಟನೆಗಳು ಸೇರಿ ವಿಶೇಷವಾಗಿ ಕರಾವಳಿ ಪ್ರದೇಶದಲ್ಲಿ ಶಾಂತಿ ಕದಡುವುದು. ಮತೀಯ ದ್ವೇಷ ಬಿತ್ತುವಂತದ್ದನ್ನ ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ಸಂಗ್ರಹ ಮಾಡುತ್ತಾರೆ. ಅದರ ಆಧಾರದ ಮೇಲೆ  ಬರುವಂತಹ ದಿನದಲ್ಲಿ ಸರ್ಕಾರ ಕ್ರಮಕೈಗೊಳ್ಳಲಿದೆ ಅಂತ ಸ್ಪಷ್ಟಪಡಿಸಿದ್ದಾರೆ. 

click me!