* ಮಾಂಸ ಪ್ರಿಯರಿಗೆ ಬೆಲೆ ಏರಿಕೆ ಶಾಕ್
* ಕೋಳಿ ಮಾಂಸದ ಬೆಲೆಯಲ್ಲಿ ಭಾರಿ ಏರಿಕೆ
* 200ರ ಗಡಿ ದಾಟಿ 300 ರೂಪಾಯಿಯ ಆಸುಪಾಸಿಗೆ ಬಂದ ಚಿಕನ್
ಬೆಂಗಳೂರು, (ಮಾ.14): ಬೇಸಿಗೆ ಕಾಲದಲ್ಲಿ ಕೋಳಿ ಮಾಂಸದ (Chicken) ಬೆಲೆ ಸಾಮಾನಾಗ್ಯವಾಗಿರುತ್ತದೆ. ಆದ್ರೆ, ಈ ಬಾರಿ ಚಿಕನ್ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.
ಹೌದು...ಕೆಲವು ದಿನಗಳ ಹಿಂದೆ 200 ರೂಪಾಯಿ ಒಳಗಿದ್ದ ಚಿಕನ್ ಬೆಲೆ ಇದೀಗ 200ರ ಗಡಿ ದಾಟಿ 300 ರೂಪಾಯಿಯ ಆಸುಪಾಸಿಗೆ ಬಂದಿದೆ. ಇದರಿಂದ ಚಿಕನ್ ಪ್ರಿಯರಿಗೆ ಹೊರೆಯಾಗಿ ಪರಿಣಮಿಸಿದೆ.
Cover Story: ಆರೋಗ್ಯಕ್ಕೆ ಡೇಂಜರ್ ಚಿಕನ್ ಕಬಾಬ್, ಹೇಗೆ ತಯಾರಿಸ್ತಾರೆ ನೋಡಿ.!
ಬೆಲೆ ಏರಿಕೆಗೆ ಕಾರಣ ಏನೆಂದು ನೋಡಿದರೆ, ಪ್ರಮುಖವಾಗಿ ಕೋಳಿಗಳ ಕೊರತೆ. ಕೋಳಿ ಫಾರ್ಮ್ಗಳ ಸಂಖ್ಯೆ ತುಂಬಾ ವಿರಳವಾಗಿರುವುದರಿಂದ ಕೋಳಿಗಳ ಉತ್ಪಾದನೆ ಕೊರತೆಯಾಗಿದೆ.
ಬೇಸಿಗೆಯಲ್ಲಿ ಕೋಳಿ ಉತ್ಪಾದನೆ ಕಡಿಮೆಯಿರುತ್ತದೆ. ಇದೇ ವೇಳೆ ಕೋಳಿ ಆಹಾರ ವಸ್ತುಗಳ ಬೆಲೆಯಲ್ಲೂ ಶೇ.25 ರಿಂದ 35ರಷ್ಟು ಏರಿಕೆಯಾಗಿದೆ. ಜತೆಗೆ ಇಂಧನ ಬೆಲೆ ಏರಿಕೆಯಿಂದಾಗಿ ಸಾಗಾಟ ದರವೂ ಹೆಚ್ಚಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಕೋಳಿ ಮಾಂಸದ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದೆ.
ಕೋಳಿಗೆ ಆಹಾರವಾಗಿ ಬಳಕೆಯಾಗುವ ಬೀಜ ಉತ್ಪನ್ನ, ಅಕ್ಕಿ ಹೊಟ್ಟು, ಮೆಕ್ಕೆ ಜೋಳ, ಸೋಯಾ ಉತ್ಪನ್ನದ ಬೆಲೆ ಏರುಗತಿಯಲ್ಲೇ ಸಾಗುತ್ತಿದೆ. ಈ ಕಾರಣಕ್ಕೆ ಚಿಕನ್ ಬೆಲೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಕಳೆದ ಎರಡು ವರ್ಷಗಳಿಂದ ಕೋವಿಡ್‌ನಿಂದಾಗಿ ಜಾತ್ರೆಗಳು ನಡೆದಿಲ್ಲ. ಈಗ ಕೊರೋನಾ ನಾಶವಾಗಿದ್ದರಿಂದ ರಾಜ್ಯದ ಹಲವೆಡೆ ಊರ ಜಾತ್ರೆ, ಊರ ಹಬ್ಬಗಳು ನಡೆಯುತ್ತಿವೆ. ಈ ಜಾತ್ರೆಗಳಲ್ಲಿ ನಾನ್‌ವೆಜ್ ಮಾಡುವುದು ಹೆಚ್ಚು. ಅಲ್ಲದೇ, . ಇದೀಗ ಹಬ್ಬ, ಜಾತ್ರೆಗಳು ನಡೆಯುತ್ತಿರುವುದರಿಂದ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ.
ಬೇಸಿಗೆಯಲ್ಲಿ ಕೋಳಿ ಉತ್ಪಾದನೆ ಕಡಿಮೆಯಿರುತ್ತದೆ. ಇದೇ ವೇಳೆ ಕೋಳಿ ಆಹಾರ ವಸ್ತುಗಳ ಬೆಲೆಯಲ್ಲೂ ಶೇ.25 ರಿಂದ 35ರಷ್ಟು ಏರಿಕೆಯಾಗಿದೆ. ಜತೆಗೆ ಇಂಧನ ಬೆಲೆ ಏರಿಕೆಯಿಂದಾಗಿ ಸಾಗಾಟ ದರವೂ ಹೆಚ್ಚಾಗಿದೆ. ಇದರಿಂದ ಕೋಳಿ ಮಾಂಸದ ಬೆಲೆಯಲ್ಲಿ ಭಾರಿ ಹೆಚ್ಚಳಕ್ಕೆ ಕಾರಣವಾಗಿದೆ.
ಒಂದು ಕೆಜಿ ರೆಡಿ ಚಿಕನ್ 150 ರಿಂದ 180 ರೂ.ಗೆ ಸಿಗುತ್ತಿದ್ದುದು, ಇದೀಗ 250 ರಿಂದ 280 ರೂ.ವರೆಗೆ ಬಂದು ತಲುಪಿದೆ. ಮಟನ್ ಬೆಲೆ ಕೆಜಿಗೆ 600 ರಿಂದ 650 ರೂ.ವರೆಗೂ ಇದೆ. ಬೆಲೆ ದಿಢೀರ್ ಏರಿಕೆಯಾಗಿದ್ದರಿಂದ. 2 -3 ಕೆಜಿ ಖರೀದಿ ಮಾಡುವ ಕಡೆ 1 -1.5 ಕೇಜಿ ಖರೀದಿಸುತ್ತಿದ್ದಾರೆ.