Coronavirus: ಖಾಸಗಿ ಆಸ್ಪತ್ರೆ ಕೋವಿಡ್‌ ಚಿಕಿತ್ಸೆ ದರ ಇಳಿಕೆ?

By Kannadaprabha News  |  First Published Mar 14, 2022, 11:06 AM IST

ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಸೋಂಕಿತರ ಚಿಕಿತ್ಸೆಗೆಂದು ನಿಗದಿಪಡಿಸಿರುವ ದರವನ್ನು ಪರಿಷ್ಕರಿಸಬೇಕು ಎಂಬ ಚಿಂತನೆ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ. 


ಬೆಂಗಳೂರು (ಮಾ.14): ರಾಜ್ಯದ (Karnataka) ಖಾಸಗಿ ಆಸ್ಪತ್ರೆಗಳಲ್ಲಿ (Private Hospitals) ಕೋವಿಡ್‌ ಸೋಂಕಿತರ ಚಿಕಿತ್ಸೆಗೆಂದು (Covid19 Treatment) ನಿಗದಿಪಡಿಸಿರುವ ದರವನ್ನು ಪರಿಷ್ಕರಿಸಬೇಕು ಎಂಬ ಚಿಂತನೆ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ. ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ಕೋವಿಡ್‌ ಸೋಂಕಿತರು ಚಿಕಿತ್ಸೆಗೆ ದುಬಾರಿ ದರ ತೆರಬೇಕಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ (Health Department) ದರ ಪರಿಷ್ಕರಣೆ ಕುರಿತು ಚಿಂತನೆ ಆರಂಭಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಖಾಸಗಿ ಆಸ್ಪತ್ರೆಗಳಿಗೆ ನೇರವಾಗಿ ತೆರಳುವ ರೋಗಿಗಳಿಗೆ ಸರ್ಕಾರಿ ಕೋಟಾದ ಶುಲ್ಕಕ್ಕಿಂತ ದುಪ್ಪಟ್ಟು ಶುಲ್ಕ ವಿಧಿಸಲಾಗುತ್ತಿದೆ. ಇದು ತುಂಬಾ ದುಬಾರಿ ಆಗಿದ್ದು, ಸರ್ಕಾರ ಮರು ಪರಿಶೀಲನೆ ನಡೆಸಬೇಕು ಎಂದು ಸಾರ್ವಜನಿಕರ ಒತ್ತಾಯಿಸುತ್ತಿದ್ದಾರೆ. ಆದರೆ ನಾಲ್ಕನೇ ಅಲೆಯ ಹೊತ್ತಿಗೆ ದರ ಪರಿಷ್ಕರಣೆ ನಡೆಸಬಹುದು ಎಂಬ ಅಭಿಪ್ರಾಯ ಮೊದಲಿದ್ದರೂ ಕೂಡ ಈಗ ಕಡಿಮೆ ಪ್ರಕರಣಗಳು ದಾಖಲಾಗುತ್ತಿರುವ ಸಂದರ್ಭದಲ್ಲಿ ದರ ಪರಿಷ್ಕರಣೆ ನಡೆಸಿದರೆ ಒಳ್ಳೆಯದು ಎಂಬ ತೀರ್ಮಾನಕ್ಕೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಬಂದಿದ್ದಾರೆ. ಆದ್ದರಿಂದ ಶೀಘ್ರವೇ ಈ ಬಗ್ಗೆ ಮಾರ್ಗಸೂಚಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

Tap to resize

Latest Videos

undefined

ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು (Covid19 Cases) ಏರುತ್ತಿದ್ದಂತೆ (2020ರ ಜೂನ್‌ನಲ್ಲಿ) ಸರ್ಕಾರದಿಂದ ಶಿಫಾರಸು ಆಗುವ ಮತ್ತು ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳಿಗೆ ಚಿಕಿತ್ಸಾ ದರವನ್ನು ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ 2020ರ ಜೂನ್‌ನಲ್ಲಿದ್ದ ವೈದ್ಯಕೀಯ ಸ್ಥಿತಿಗತಿಗಳಿಗೂ ಈಗಿನ ಪರಿಸ್ಥಿತಿಗೂ ಅಜಗಜಾಂತರ ವ್ಯತ್ಯಾಸ ಇದ್ದರೂ ಸರ್ಕಾರ ಹಳೆಯ ದರ ಮುಂದುವರಿಸಿರುವುದು ಸರಿಯಲ್ಲ ಎಂಬುದು ಬಹುತೇಕ ತಜ್ಞರ ಅಭಿಪ್ರಾಯ.

Karnataka GDP: ಕೊರೋನಾ ವೇಳೆ ಕರ್ನಾಟಕದ ಜಿಡಿಪಿ ದಾಖಲೆ: ದೇಶದಲ್ಲೇ ನಂ.1 ಸ್ಥಾನ

2020ರಲ್ಲಿ ಕೋವಿಡ್‌ ಹೊಸದಾಗಿತ್ತು. ಈ ರೋಗ ಜನರಿಗೆ ಹೇಗೆ ಅಪರಿಚಿತವಾಗಿತ್ತೋ ವೈದ್ಯಕೀಯ ಲೋಕಕ್ಕೂ ಸವಾಲಾಗಿತ್ತು. ಆಗ ಲಸಿಕೆ ಇನ್ನೂ ಬಂದಿಲ್ಲದಿದ್ದರಿಂದ ವೈದ್ಯಕೀಯ ಸಿಬ್ಬಂದಿ ಸೋಂಕಿನ ಅಪಾಯವನ್ನು ಎದುರಿಸುತ್ತಲೇ ಕೆಲಸ ನಿರ್ವಹಿಸಬೇಕಿತ್ತು. ಆದರ ಜೊತೆಗೆ ತುರ್ತಾಗಿ ಪಿಪಿಇ ಕಿಟ್‌ ಭಾರಿ ಪ್ರಮಾಣದಲ್ಲಿ ಅಗತ್ಯವಾಗಿತ್ತು. ಲಭ್ಯ ವೈದ್ಯಕೀಯ ಸಂಪನ್ಮೂಲಗಳನ್ನು ಬಳಸಿಕೊಂಡೇ ಪ್ರತಿದಿನ ವರದಿ ಆಗುತ್ತಿದ್ದ ಸಾವಿರಾರು ಪ್ರಕರಣಗಳನ್ನು ನಿಭಾಯಿಸಬೇಕಿತ್ತು.

ಇದನ್ನು ಮನಗಂಡ ಸರ್ಕಾರ ಜನರಲ್‌ ವಾರ್ಡ್‌ ರೋಗಿಗಳಿಗೆ ದಿನಕ್ಕೆ 10,000 ರು., ಆಮ್ಲಜನಕಯುಕ್ತ ಬೆಡ್‌ಗಳಿಗೆ 12,000 ರು., ವೆಂಟಿಲೇಟರ್‌ ರಹಿತ ತೀವ್ರ ನಿಗಾ ವಿಭಾಗದ ಬೆಡ್‌ಗಳಿಗೆ 15,000 ರು., ಮತ್ತು ವೆಂಟಿಲೇಟರ್‌ ಸಹಿತ ತೀವ್ರ ನಿಗಾ ವಿಭಾಗದ ಬೆಡ್‌ಗಳಿಗೆ 25,000 ರು. ನಿಗದಿ ಮಾಡಿತ್ತು.

ಆದರೆ ಇಂದು ಕೋವಿಡ್‌ ಮೂರು ಅಲೆಗಳ ಮೂಲಕ ಸಾಂಕ್ರಾಮಿಕವಾಗಿ ಹಬ್ಬಿದ್ದು, 40 ಲಕ್ಷ ಪ್ರಕರಣಗಳು ಅಧಿಕೃತವಾಗಿ ದೃಢಪಟ್ಟಿದೆ. ಕೋವಿಡ್‌ನ ಅಪಾಯವನ್ನು ತಗ್ಗಿಸುವ ಲಸಿಕೆ ಬಂದಿದ್ದು, ವೈದ್ಯಕೀಯ ಸಿಬ್ಬಂದಿ ಒಟ್ಟು ಮೂರು ಡೋಸ್‌ ಲಸಿಕೆ (Corona Vaccine) ಪಡೆಯಬಹುದಾಗಿದೆ. ಅದರ ಜೊತೆಗೆ ಕೋವಿಡ್‌ ಚಿಕಿತ್ಸೆಗೆ ಅಗತ್ಯವಾದ ಔಷಧಿ, ಉಪಕರಣಗಳು ಸಾಕಷ್ಟುಪ್ರಮಾಣದಲ್ಲಿ ಲಭ್ಯವಿದೆ. ರೋಗಿಗಳ ಚಿಕಿತ್ಸಾ ಪ್ರಕ್ರಿಯೆಯ ಬಗ್ಗೆ ಖಚಿತತೆ ಬಂದಿದ್ದು, ಮೊದಲಿದ್ದ ಭಯ ಮಾಯವಾಗಿದೆ. ಆದರೂ ಕೋವಿಡ್‌ ಚಿಕಿತ್ಸೆ ಇಷ್ಟೊಂದು ದುಬಾರಿ ಯಾಕೆ ಎಂದು ಪ್ರಶ್ನಿಸುತ್ತಾರೆ.

Covid Crisis: ಏಷ್ಯಾ ದೇಶಗಳಲ್ಲಿ ಮತ್ತೆ ಸೋಂಕು ಹೆಚ್ಚಳ, ಕಳವಳ

ಈ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯ ಇಲಾಖೆಯ ಆಯುಕ್ತ ಡಿ. ರಂದೀಪ್‌, ದರ ಕಡಿತ ಮಾಡಬೇಕು ಎಂದು ಸಾರ್ವಜನಿಕರಿಂದ ಒತ್ತಡ ಬರುತ್ತಿದೆ. ಖಾಸಗಿ ಆಸ್ಪತ್ರೆಗಳಿಗೆ ನಿಗದಿ ಪಡಿಸಿರುವ ದರ ಹೆಚ್ಚಿದೆ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ. ಆದ್ದರಿಂದ ದರ ಕಡಿತ ಆದರೆ ಕೆಲವು ಸೋಂಕಿತರು ಸರ್ಕಾರಿ ಕೋಟಾದ ಬದಲು ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಬಹುದು ಇದರಿಂದ ಸರ್ಕಾರದ ಮೇಲಿನ ಹೊರೆಯೂ ಕಡಿಮೆ ಆಗಲಿದೆ ಎಂದು ಹೇಳಿದರು.

ದರ ಕಡಿತ ಮಾಡಬೇಕು ಎಂದು ಸಾರ್ವಜನಿಕರಿಂದ ಒತ್ತಡ ಬರುತ್ತಿದೆ. ಖಾಸಗಿ ಆಸ್ಪತ್ರೆಗಳಿಗೆ ನಿಗದಿ ಪಡಿಸಿರುವ ದರ ಹೆಚ್ಚಿದೆ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ. ಆದ್ದರಿಂದ ದರ ಕಡಿತ ಆದರೆ ಕೆಲವು ಸೋಂಕಿತರು ಸರ್ಕಾರಿ ಕೋಟಾದ ಬದಲು ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಬಹುದು ಇದರಿಂದ ಸರ್ಕಾರದ ಮೇಲಿನ ಹೊರೆಯೂ ಕಡಿಮೆ ಆಗಲಿದೆ.
-ಡಿ. ರಂದೀಪ್‌, ಆರೋಗ್ಯ ಇಲಾಖೆಯ ಆಯುಕ್ತ

click me!